ಭಾರತಕ್ಕೆ ಹುರಿದ ಅಡಿಕೆ ಆಮದು | ತಕ್ಷಣವೇ ಕ್ರಮ ಕೈಗೊಳ್ಳಲು ಕ್ಯಾಂಪ್ಕೊ ಒತ್ತಾಯ|

January 25, 2025
10:39 AM
ಆಮದು ಸುಂಕವನ್ನು ತಪ್ಪಿಸಲು ಹುರಿದ ಅಡಿಕೆಯನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಹುರಿದ ಅಡಿಕೆಯ ಆಮದು ಮಾಡುವ ವೇಳೆ  HSN ಕೋಡ್ ಮೌಲ್ಯವರ್ಧಿತ ಉತ್ಪನ್ನದ ರೂಪದಲ್ಲಿ ಆಮದು ಮಾಡಲಾಗುತ್ತಿದೆ.

ಭಾರತಕ್ಕೆ ಹುರಿದ ಅಡಿಕೆಯ ಆಮದಿನಿಂದ ದೇಶೀಯ ಅಡಿಕೆ ಬೆಳೆಗಾರರು ಭಾರಿ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಕ್ಯಾಂಪ್ಕೋ ಕಳವಳ ವ್ಯಕ್ತಪಡಿಸಿದೆ. ಈ ಕುರಿತು ಕೇಂದ್ರ ವಾಣಿಜ್ಯ ಮತ್ತು ಉದ್ಯಮ ಸಚಿವರಿಗೆ ತಕ್ಷಣ ಕ್ರಮ ಕೈಗೊಳ್ಳಲು ಒತ್ತಾಯಿಸಿದೆ. ಅಡಿಕೆ ಬೆಳೆಗಾರರ ಹಿತ ಕಾಪಾಡಬೇಕು ಎಂದು ಮನವಿ ಮಾಡಿದೆ.…..ಮುಂದೆ ಓದಿ….

Advertisement
Advertisement
Advertisement
Advertisement

ಆಮದು ಸುಂಕವನ್ನು ತಪ್ಪಿಸಲು ಹುರಿದ ಅಡಿಕೆಯನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಹುರಿದ ಅಡಿಕೆಯ ಆಮದು ಮಾಡುವ ವೇಳೆ  HSN ಕೋಡ್ ಮೌಲ್ಯವರ್ಧಿತ ಉತ್ಪನ್ನದ ರೂಪದಲ್ಲಿ ಆಮದು ಮಾಡಲಾಗುತ್ತಿದೆ. ಈ ಮೂಲಕ ಕಸ್ಟಮ್ಸ್ ಡ್ಯೂಟಿ ತಪ್ಪಿಸಲು ತಪ್ಪು ವರ್ಗೀಕರಣದ ಮೂಲಕ ಮಾರುಕಟ್ಟೆಗೆ ಪ್ರವೇಶಿಸುತ್ತಿದೆ. ಈ ರೀತಿಯ ಅಕ್ರಮಗಳು ಮಾರುಕಟ್ಟೆಯ ಸಮತೋಲನವನ್ನು ಹಾಳುಮಾಡುವುದಲ್ಲದೇ ಸರಬರಾಜು ಕೊರತೆಯಿದ್ದರೂ ಬೆಲೆ ಏರಿಕೆಗೆ ಅವಕಾಶ ನೀಡದೆ ದೇಶೀಯ ಬೆಳೆಗಾರರ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವಲ್ಲಿ ತಡೆಯಾಗಿದೆ ಎಂದು ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್‌ ಕುಮಾರ್‌ ಕೊಡ್ಗಿ ಮನವಿಯಲ್ಲಿ ತಿಳಿಸಿದ್ದಾರೆ.

Advertisement

ಕ್ಯಾಂಪ್ಕೊಗೆ ಲಭ್ಯ ಮಾಹಿತಿಯ ಪ್ರಕಾರ, ಈ ಆಮದು ಅಡ್ವಾನ್ಸ್ ರೂಲಿಂಗ್ ಲೈಸೆನ್ಸ್‌ಗಳ ಮೂಲಕ ಕೇವಲ ಶೇ.12 ಜಿಎಸ್‌ಟಿ ನಿಗದಿಯಾಗಿದ್ದು, ಈ ಅಡಿಕೆಯನ್ನು ಸ್ಥಳೀಯ ಅಡಿಕೆಯೊಂದಿಗೆ ಮಿಶ್ರಣ ಮಾಡಿ ಮಾರಾಟ ಮಾಡಲಾಗುತ್ತಿದೆ. ಇದರಿಂದ ಉತ್ಪನ್ನದ ಗುಣಮಟ್ಟ ಹಾಳಾಗುತ್ತಿದೆ ಮತ್ತು ಖರೀದಿದಾರರಿಂದ ಸಗಟಾಗಿ ತಿರಸ್ಕಾರವಾಗುವ ಸಾಧ್ಯತೆ ಇದೆ.

ಇದಲ್ಲದೇ, ಸ್ಥಳೀಯ ಖರೀದಿದಾರರು ಕೂಡಾ ಈ ಮಿಶ್ರಿತ ಅಡಿಕೆಯನ್ನು ಸ್ಥಳೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದು, ಈ ಅಡಿಕೆ ಉತ್ತರ ಭಾರತಕ್ಕೆ ಸಗಟು ಮಾಡಿದ ನಂತರ ತಿರಸ್ಕಾರಗೊಳ್ಳುತ್ತದೆ. ಇದರಿಂದ ಚಾಲಿ ಅಡಿಕೆಯ ಬೆಲೆ ಕುಸಿದು, ಅಡಿಕೆಯ ಮಾರುಕಟ್ಟೆ ಮೇಲೆ ಪರಿಣಾಮ ಬೀರಿ, ಬೆಳೆಗಾರರ ಆದಾಯಕ್ಕೆ ತೀವ್ರ ಹಾನಿಯುಂಟಾಗುವ ಸಾಧ್ಯತೆಗಳಿವೆ ಎಂದು ಕ್ಯಾಂಪ್ಕೊ ಹೇಳಿದೆ.

Advertisement

ಇದಕ್ಕಾಗಿ ತಕ್ಷಣವೇ ಸರ್ಕಾರವು, ಯಾವುದೇ ರೂಪದ ಅಡಿಕೆಯ ಆಮದಿಗೆ ಕನಿಷ್ಠ ಆಮದು ದರವನ್ನು ನಿಗದಿ ಮಾಡಬೇಕು, ಕೋಡ್‌ಗಳ ತಪ್ಪು ವರ್ಗೀಕರಣವನ್ನು ತಡೆಯಲು ಎಲ್ಲಾ ರೀತಿಯ ಅಡಿಕೆಗೆ ಏಕ ರೂಪ  ಕೋಡ್‌ ನಿಗದಿ ಪಡಿಸುವುದು ಮತ್ತು ನಿಯಂತ್ರಣ ಕ್ರಮಗಳನ್ನು ಬಲಪಡಿಸುವುದು ಹಾಗೂ ದೇಶಿಯ ಬೆಳೆಗಾರರಿಗೆ ನ್ಯಾಯಸಮ್ಮತ ದರ ದೊರಕುವಂತೆ ನೀತಿಗಳನ್ನು ರೂಪಿಸುವಂತೆ ಕ್ರಮವಾಗಬೇಕು ಎಂದು ಕ್ಯಾಂಪ್ಕೊ ಮನವಿಯಲ್ಲಿ ಒತ್ತಾಯಿಸಿದೆ.

The Central Arecanut and Cocoa Marketing and Processing Co-operative Limited (CAMPCO) has raised alarm over the import of roasted Arecanut, which is severely impacting domestic growers. A letter has been submitted to the Union Minister of Commerce & Industry, seeking immediate intervention to safeguard farmers’ livelihoods.

Advertisement

Roasted Arecanut is being imported under HSN Code 20081920 as a value-added product, bypassing customs duty and entering the market under misclassified categories. This malpractice distorts market dynamics, keeps prices stagnant despite supply shortages, and undermines the efforts of Indian growers.

CAMPCO highlights that such imports, subject only to 12% GST through Advance Ruling Licenses, are being mixed with local varieties, compromising quality and leading to rejection by buyers. This directly affects farmers, pulling down prices of the Chali variety and threatening their earnings.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಚಾರ್ಮಾಡಿ ಘಾಟ್ ಅರಣ್ಯ ಪ್ರದೇಶದಲ್ಲಿ ಭಾರೀ ಕಾಡ್ಗಿಚ್ಚು | ನೂರಾರು ಎಕರೆ ಅರಣ್ಯ ನಾಶ | ಬೆಂಕಿ ನಂದಿಸಲು ಅರಣ್ಯ ಇಲಾಖೆ ಪ್ರಯತ್ನ |
January 26, 2025
7:35 AM
by: The Rural Mirror ಸುದ್ದಿಜಾಲ
ವಿದೇಶದಿಂದ ಅಡಿಕೆ ಕಳ್ಳಸಾಗಾಣಿಕೆ ಪ್ರಕರಣ | ಡಿಎಂಕೆ ಕೌನ್ಸಿಲರ್ ವಶಕ್ಕೆ ಪಡೆದ ಡಿಆರ್‌ಐ
January 26, 2025
7:14 AM
by: The Rural Mirror ಸುದ್ದಿಜಾಲ
ಜ.26 | ಸಾರಡ್ಕದಲ್ಲಿ ಕೃಷಿ ಹಬ್ಬ | ವಿವಿಧ ಗೋಷ್ಠಿಗಳು |
January 25, 2025
5:01 PM
by: ದ ರೂರಲ್ ಮಿರರ್.ಕಾಂ
ಪ್ಲಾಸ್ಟಿಕ್‌ನಿಂದ ಪೇಪರ್‌ ಕಡೆಗೆ ಬದಲಾಯಿಸುವುದು ಪರಿಸರಕ್ಕೆ ಉತ್ತಮವೇ..?
January 25, 2025
7:54 AM
by: ವಿಶೇಷ ಪ್ರತಿನಿಧಿ

You cannot copy content of this page - Copyright -The Rural Mirror