ಭಾರತಕ್ಕೆ ಹುರಿದ ಅಡಿಕೆಯ ಆಮದಿನಿಂದ ದೇಶೀಯ ಅಡಿಕೆ ಬೆಳೆಗಾರರು ಭಾರಿ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಕ್ಯಾಂಪ್ಕೋ ಕಳವಳ ವ್ಯಕ್ತಪಡಿಸಿದೆ. ಈ ಕುರಿತು ಕೇಂದ್ರ ವಾಣಿಜ್ಯ ಮತ್ತು ಉದ್ಯಮ ಸಚಿವರಿಗೆ ತಕ್ಷಣ ಕ್ರಮ ಕೈಗೊಳ್ಳಲು ಒತ್ತಾಯಿಸಿದೆ. ಅಡಿಕೆ ಬೆಳೆಗಾರರ ಹಿತ ಕಾಪಾಡಬೇಕು ಎಂದು ಮನವಿ ಮಾಡಿದೆ.…..ಮುಂದೆ ಓದಿ….
ಆಮದು ಸುಂಕವನ್ನು ತಪ್ಪಿಸಲು ಹುರಿದ ಅಡಿಕೆಯನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಹುರಿದ ಅಡಿಕೆಯ ಆಮದು ಮಾಡುವ ವೇಳೆ HSN ಕೋಡ್ ಮೌಲ್ಯವರ್ಧಿತ ಉತ್ಪನ್ನದ ರೂಪದಲ್ಲಿ ಆಮದು ಮಾಡಲಾಗುತ್ತಿದೆ. ಈ ಮೂಲಕ ಕಸ್ಟಮ್ಸ್ ಡ್ಯೂಟಿ ತಪ್ಪಿಸಲು ತಪ್ಪು ವರ್ಗೀಕರಣದ ಮೂಲಕ ಮಾರುಕಟ್ಟೆಗೆ ಪ್ರವೇಶಿಸುತ್ತಿದೆ. ಈ ರೀತಿಯ ಅಕ್ರಮಗಳು ಮಾರುಕಟ್ಟೆಯ ಸಮತೋಲನವನ್ನು ಹಾಳುಮಾಡುವುದಲ್ಲದೇ ಸರಬರಾಜು ಕೊರತೆಯಿದ್ದರೂ ಬೆಲೆ ಏರಿಕೆಗೆ ಅವಕಾಶ ನೀಡದೆ ದೇಶೀಯ ಬೆಳೆಗಾರರ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವಲ್ಲಿ ತಡೆಯಾಗಿದೆ ಎಂದು ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಮನವಿಯಲ್ಲಿ ತಿಳಿಸಿದ್ದಾರೆ.
ಕ್ಯಾಂಪ್ಕೊಗೆ ಲಭ್ಯ ಮಾಹಿತಿಯ ಪ್ರಕಾರ, ಈ ಆಮದು ಅಡ್ವಾನ್ಸ್ ರೂಲಿಂಗ್ ಲೈಸೆನ್ಸ್‌ಗಳ ಮೂಲಕ ಕೇವಲ ಶೇ.12 ಜಿಎಸ್‌ಟಿ ನಿಗದಿಯಾಗಿದ್ದು, ಈ ಅಡಿಕೆಯನ್ನು ಸ್ಥಳೀಯ ಅಡಿಕೆಯೊಂದಿಗೆ ಮಿಶ್ರಣ ಮಾಡಿ ಮಾರಾಟ ಮಾಡಲಾಗುತ್ತಿದೆ. ಇದರಿಂದ ಉತ್ಪನ್ನದ ಗುಣಮಟ್ಟ ಹಾಳಾಗುತ್ತಿದೆ ಮತ್ತು ಖರೀದಿದಾರರಿಂದ ಸಗಟಾಗಿ ತಿರಸ್ಕಾರವಾಗುವ ಸಾಧ್ಯತೆ ಇದೆ.
ಇದಲ್ಲದೇ, ಸ್ಥಳೀಯ ಖರೀದಿದಾರರು ಕೂಡಾ ಈ ಮಿಶ್ರಿತ ಅಡಿಕೆಯನ್ನು ಸ್ಥಳೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದು, ಈ ಅಡಿಕೆ ಉತ್ತರ ಭಾರತಕ್ಕೆ ಸಗಟು ಮಾಡಿದ ನಂತರ ತಿರಸ್ಕಾರಗೊಳ್ಳುತ್ತದೆ. ಇದರಿಂದ ಚಾಲಿ ಅಡಿಕೆಯ ಬೆಲೆ ಕುಸಿದು, ಅಡಿಕೆಯ ಮಾರುಕಟ್ಟೆ ಮೇಲೆ ಪರಿಣಾಮ ಬೀರಿ, ಬೆಳೆಗಾರರ ಆದಾಯಕ್ಕೆ ತೀವ್ರ ಹಾನಿಯುಂಟಾಗುವ ಸಾಧ್ಯತೆಗಳಿವೆ ಎಂದು ಕ್ಯಾಂಪ್ಕೊ ಹೇಳಿದೆ.
ಇದಕ್ಕಾಗಿ ತಕ್ಷಣವೇ ಸರ್ಕಾರವು, ಯಾವುದೇ ರೂಪದ ಅಡಿಕೆಯ ಆಮದಿಗೆ ಕನಿಷ್ಠ ಆಮದು ದರವನ್ನು ನಿಗದಿ ಮಾಡಬೇಕು, ಕೋಡ್‌ಗಳ ತಪ್ಪು ವರ್ಗೀಕರಣವನ್ನು ತಡೆಯಲು ಎಲ್ಲಾ ರೀತಿಯ ಅಡಿಕೆಗೆ ಏಕ ರೂಪ ಕೋಡ್ ನಿಗದಿ ಪಡಿಸುವುದು ಮತ್ತು ನಿಯಂತ್ರಣ ಕ್ರಮಗಳನ್ನು ಬಲಪಡಿಸುವುದು ಹಾಗೂ ದೇಶಿಯ ಬೆಳೆಗಾರರಿಗೆ ನ್ಯಾಯಸಮ್ಮತ ದರ ದೊರಕುವಂತೆ ನೀತಿಗಳನ್ನು ರೂಪಿಸುವಂತೆ ಕ್ರಮವಾಗಬೇಕು ಎಂದು ಕ್ಯಾಂಪ್ಕೊ ಮನವಿಯಲ್ಲಿ ಒತ್ತಾಯಿಸಿದೆ.
The Central Arecanut and Cocoa Marketing and Processing Co-operative Limited (CAMPCO) has raised alarm over the import of roasted Arecanut, which is severely impacting domestic growers. A letter has been submitted to the Union Minister of Commerce & Industry, seeking immediate intervention to safeguard farmers’ livelihoods.
Roasted Arecanut is being imported under HSN Code 20081920 as a value-added product, bypassing customs duty and entering the market under misclassified categories. This malpractice distorts market dynamics, keeps prices stagnant despite supply shortages, and undermines the efforts of Indian growers.
CAMPCO highlights that such imports, subject only to 12% GST through Advance Ruling Licenses, are being mixed with local varieties, compromising quality and leading to rejection by buyers. This directly affects farmers, pulling down prices of the Chali variety and threatening their earnings.
ಕಳೆದ ಒಂದು ವಾರದಲ್ಲಿ ಚಾರ್ಮಾಡಿ ಘಾಟ್ನಲ್ಲಿ ಉಂಟಾದ ಎರಡನೇ ಕಾಡ್ಗಿಚ್ಚು ಪ್ರಕರಣ ಇದಾಗಿದೆ.…
ಅಡಿಕೆ ಆಮದು ವ್ಯವಹಾರದಲ್ಲಿ ತಪ್ಪು ಮಾಹಿತಿ ನೀಡಿ ವಿದೇಶದಿಂದ ಕಳ್ಳಸಾಗಾಣಿಕೆ ಮಾಡುತ್ತಿದ್ದ ಪ್ರಕರಣದಲ್ಲಿ ತೂತುಕುಡಿಯ…
ಸಾರಡ್ಕದ ಆರಾಧನಾ ಕಲಾಭವನದಲ್ಲಿ ಜ.26 ರಂದು ಕೃಷಿ ಹಬ್ಬ ನಡೆಯಲಿದೆ.ಬೆಳಗ್ಗೆ ಉದ್ಘಾಟನೆಗೊಳ್ಳುವ ಕೃಷಿ…
ಇತ್ತೀಚಿನ ಅಧ್ಯಯನಗಳ ಪ್ರಕಾರ, ಭಾರತವು ಜಾಗತಿಕವಾಗಿ ಪ್ಲಾಸ್ಟಿಕ್ ತ್ಯಾಜ್ಯದ ಅಗ್ರ ಉತ್ಪಾದಕ ಎಂದು…
115 ವರ್ಷಗಳ ಇತಿಹಾಸ ಇರುವ ಹಾಗೂ ರಾಜ್ಯದಲ್ಲಿ ನಿರ್ಮಾಣವಾದ ಮೊದಲ ಜಲಾಶಯ ವಾಣಿವಿಲಾಸ…
ಮಂಗನಕಾಯಿಲೆ ಬಗ್ಗೆ ಜನರು ಆತಂಕ ಪಡುವ ಅಗತ್ಯವಿಲ್ಲ. ಸೂಕ್ತ ಮುಂಜಾಗ್ರತೆ ತೆಗೆದುಕೊಳ್ಳಬೇಕು. ಕಾಡಿನಲ್ಲಿ…