ಅಡಿಕೆ ಬೆಳೆಯ ಸಂಶೋಧನೆಗೆ ಪ್ರಯೋಗಾಲಯ..? | ಕ್ಯಾಂಪ್ಕೋ ವತಿಯಿಂದ ಇಸ್ರೋ ಘಟಕ ಸ್ಥಾಪನೆಗೆ ಪ್ರಧಾನಿ ಮೋದಿ ಅವರಿಗೆ ಮನವಿ |

August 31, 2023
9:56 AM
ಉಡುಪಿ ಜಿಲ್ಲೆಯಲ್ಲಿ ಇಸ್ರೋ ಪ್ರಯೋಗಾಲಯ ಘಟಕವನ್ನು ಸ್ಥಾಪಿಸಬೇಕು ಎಂದು ಅಡಿಕೆ ಬೆಳೆಗಾರರ ಸಂಸ್ಥೆ ಕ್ಯಾಂಪ್ಕೋ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯುವ ಮೂಲಕ ಅಡಿಕೆ ಬೆಳೆಗಾರರ ಪರವಾಗಿ ಹೆಜ್ಜೆ ಇರಿಸಿದೆ.

ಅಡಿಕೆ ಹಳದಿ ಎಲೆರೋಗ, ಎಲೆಚುಕ್ಕಿ ರೋಗ ಸೇರಿದಂತೆ ವಿವಿಧ ಸಮಸ್ಯೆಗಳು ಅಡಿಕೆಯನ್ನು ಕಾಡುತ್ತಿದೆ.  ಈ ಎಲ್ಲದರ ನಡುವೆ ಇದೀಗ ಅಡಿಕೆ ಬೆಳೆಗಾರರ ಸಂಸ್ಥೆಯಾಗಿರುವ ಕ್ಯಾಂಪ್ಕೋ,  ಇಸ್ರೋ ಪ್ರಯೋಗಾಲಯ ಘಟಕವನ್ನು ಉಡುಪಿಯಲ್ಲಿ ಸ್ಥಾಪಿಸಲು  ಪ್ರಧಾನ ಮಂತ್ರಿಯನ್ನು ಒತ್ತಾಯಿಸಿದೆ. ಈ ಮೂಲಕ ಕ್ಯಾಂಪ್ಕೋ ಮಹತ್ವದ ಹೆಜ್ಜೆಯನ್ನು ಇರಿಸುವ ನಿರೀಕ್ಷೆ ಇದೆ.

Advertisement

ಚಂದ್ರಯಾನ ಯಶಸ್ಸಿನ ಹಿನ್ನೆಲೆಯಲ್ಲಿ ಅಡಿಕೆ ಬೆಳೆಗಾರರ ಸಂಸ್ಥೆ ಕ್ಯಾಂಪ್ಕೋ , ಇಸ್ರೋ ಪ್ರಯತ್ನವನ್ನು ಶ್ಲಾಫಿಸಿದೆ. ಇಸ್ರೋದ ಆರಂಭಿಕ ದಿನಗಳಲ್ಲಿ ಅದರ ಆಧಾರಸ್ತಂಭವಾಗಿ, ಭವಿಷ್ಯದ ಸಾಧನೆಗೆ ಹಗಲಿರುಳು ದುಡಿದು ಭದ್ರ ಬುನಾದಿ ಹಾಕಿದ ಗಣ್ಯ ವ್ಯಕ್ತಿಗಳಲ್ಲಿ ಪೊ.ಯು.ಆರ್‌. ರಾವ್‌ ಅವರು ಉಡುಪಿ ಜಿಲ್ಲೆಯವರು. ಚಂದ್ರಯಾನ-3ರ ಯಶಸ್ಸಿಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಹಲವಾರು ವಿಜ್ಞಾನಿಗಳು ಗಣನೀಯ ಕೊಡುಗೆ ನೀಡಿದ್ದಾರೆ. ಅವರೆಲ್ಲರ ಕೊಡುಗೆಗೆ ಗೌರವ ನೀಡಿ ಪೋತ್ಸಾಹಿಸುವ ಸಲುವಾಗಿ, ಪ್ರೊ.ಯು.ಆರ್‌. ರಾವ್‌ ಹೆಸರಿನಲ್ಲಿ ಉಡುಪಿ ಜಿಲ್ಲೆಯಲ್ಲಿ ಇಸ್ರೋ ಪ್ರಯೋಗಾಲಯ ಘಟಕವನ್ನು ಸ್ಥಾಪಿಸಬೇಕು. ಈ ಮೂಲಕ ವಿದ್ಯಾರ್ಥಿಗಳು ಮತ್ತು ಎಂಜಿನಿಯರ್‌ಗಳಿಗೆ ಸ್ಫೂರ್ತಿ ನೀಡುವುದರ ಜತೆಗೆ ದೇಶಕ್ಕೆ ಇನ್ನಷ್ಟುಕೊಡುಗೆ ನೀಡಲು ಉತ್ತೇಜನ ನೀಡಲಿದೆ. ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಗಣನೀಯವಾಗಿ ಉತ್ತೇಜಿಸಬಹುದು .  ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳು ಹೆಸರಾಂತ ಶಿಕ್ಷಣ ಕೇಂದ್ರಗಳಾಗಿವೆ. ಇಸ್ರೋ ಅಭಿವೃದ್ಧಿಗೆ ಮೀಸಲಿರಿಸಲಾದ 15000 ಕೋಟಿ ರು. ಅನುದಾನದ ಒಂದು ಭಾಗವನ್ನು ಉಡುಪಿ ಜಿಲ್ಲೆಯಲ್ಲಿ ಪ್ರಯೋಗಾಲಯದ ಸ್ಥಾಪನೆಗೆ ಮರುಹಂಚಿಕೆ ಮಾಡುವಂತೆ ಪ್ರಧಾನಿಗಳಿಗೆ ಬರೆದ ಪತ್ರದಲ್ಲಿ ಕಿಶೋರ್‌ ಕಮಾರ್‌ ಕೊಡ್ಗಿ ವಿನಂತಿಸಿದ್ದಾರೆ.

ಈಗಾಗಲೇ ದೇಶದಲ್ಲಿ ಕೃಷಿ ಬೆಳವಣಿಗೆ ಹಾಗೂ ಸಂಶೋಧನೆ ಹಿನ್ನೆಲೆಯಲ್ಲಿ ಸಿಪಿಸಿಆರ್‌ಐಯಂತಹ ಕೇಂದ್ರ ಸರ್ಕಾರದ ಸಂಸ್ಥೆ ಕೆಲಸ ಮಾಡುತ್ತಿದೆ.ಈಚೆಗ ಯುವ ವಿಜ್ಞಾನಿಗಳು ಇಲ್ಲಿ ನಿರಂತರವಾಗಿ ಅಧ್ಯಯನ ಮಾಡುತ್ತಿದ್ದಾರೆ. ಆದರೆ ಅಡಿಕೆ, ತೆಂಗು ಸೇರಿದಂತೆ ಹಲವು ಕೃಷಿ ಬೆಳೆಗಳ ರೋಗ ತಡೆಗೆ ಅಧ್ಯಯನ ನಡೆಸಲು ಸೂಕ್ತ ಪ್ರಯೋಗಾಲಯದ ಕೊರತೆ ಇದೆ. ಅಡಿಕೆ ಹಳದಿ ಎಲೆರೋಗದಂತಹ ಸಮಸ್ಯೆಗಳಲ್ಲಿ ಇಂದಿಗೂ ಸಿಪಿಸಿಆರ್‌ಐ ಸಂಸ್ಥೆಯು ಕೇರಳ-ತಮಿಳುನಾಡು ಪ್ರದೇಶದಲ್ಲಿರುವ ಪ್ರಯೋಗಾಲಯಕ್ಕೆ ತೆರಳಿ ಸಂಶೋಧಿಸುವುದು ಕಂಡುಬಂದಿದೆ. ದಕ್ಷಿಣ ಕನ್ನಡದಂತಹ ಅಡಿಕೆ ಬೆಳೆಯುವ ಪ್ರದೇಶದಲ್ಲಿರುವ ಸಿಪಿಸಿಆರ್‌ ಐ ಸಂಸ್ಥೆಯಲ್ಲಿ ಇಂದಿಗೂ ಸುಸ್ಥಿತಿಯಲ್ಲಿರುವ ಮಣ್ಣು ಪರೀಕ್ಷಾ ಕೇಂದ್ರವೂ ಇಲ್ಲದೇ ಇರುವುದು  ಕೃಷಿ ಬೆಳವಣಿಗೆ ಮೇಲೆ ಪರಿಣಾಮ ಬೀರಿದೆ. ಅಡಿಕೆ ಬೆಳೆಯ ರೋಗ ಹತೋಟಿಯ ಕ್ರಮಗಳಿಗೂ ಅಧ್ಯಯನ ಕಷ್ಟವಾಗುತ್ತಿದೆ.

ಈ ಎಲ್ಲದರ ನಡುವೆ ಅಡಿಕೆ ಬೆಳೆಗಾರರ ಸಂಸ್ಥೆಯು ಸೂಕ್ತ ಪ್ರಯೋಗಾಲಯವು ಇಸ್ರೋ ಮೂಲಕ ಸ್ಥಾಪಿಸಲು ಒತ್ತಾಯ ಮಾಡಿರುವುದು ಅಡಿಕೆ ಬೆಳೆಗಾರರ ಹಿತಕ್ಕೆ ಹಾಗೂ ಸಾಮಾಜಿಕ ಕಾಳಜಿಗೆ ಹಿಡಿದ ಕೈಗನ್ನಡಿಯಾಗಿದೆ. ಕ್ಯಾಂಪ್ಕೋ ಅಡಿಕೆ ಮಾರುಕಟ್ಟೆ ಸ್ಥಿರೀಕರಣ ಮಾತ್ರವಲ್ಲ ಸಾಮಾಜಿಕ ಕಾಳಜಿಯನ್ನೂ ಹೊಂದಿದೆ ಎನ್ನುವುದಕ್ಕೆ ಇದು ಸಾಕ್ಷಿಯಾಗಿದೆ.

Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕಬ್ಬಿಗೆ ದರ ನಿಗದಿ ಮಾಡುವಂತೆ ಭಾಕಿಸಂ ಒತ್ತಾಯ
July 21, 2025
7:11 AM
by: The Rural Mirror ಸುದ್ದಿಜಾಲ
ಹರಳು ರೂಪದ ಯೂರಿಯ ಬದಲಾಗಿ ನ್ಯಾನೋ ಯೂರಿಯಾ ಬಳಕೆಗೆ ರೈತರಿಗೆ ಸಲಹೆ
July 21, 2025
6:58 AM
by: The Rural Mirror ಸುದ್ದಿಜಾಲ
ಲಕ್ ಪತಿ ದೀದಿ ಯೋಜನೆ | ಮಹಿಳೆಯರ ಸ್ವಾವಲಂಬಿ ಬದುಕಿಗೆ ದಾರಿ
July 21, 2025
6:52 AM
by: The Rural Mirror ಸುದ್ದಿಜಾಲ
ಭಾರೀ ಮಳೆ ಮುನ್ಸೂಚನೆ ಹಿನ್ನೆಲೆ | ರಾಜ್ಯದ ಕರಾವಳಿಯಲ್ಲಿ ರೆಡ್ ಅಲರ್ಟ್
July 20, 2025
11:02 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group