ಅಡಿಕೆ ಬೆಳೆಗಾರರ ಸಹಕಾರಿ ಸಂಸ್ಥೆ ಕ್ಯಾಂಪ್ಕೋ ರೂ.1848 ಕೋಟಿಗಳ ಬೃಹತ್ ವಹಿವಾಟನ್ನು ದಾಖಲಿಸಿ ಈ ವರೆಗೆ ಒಟ್ಟು 32.10 ಕೋಟಿ ರೂ ಲಾಭ ಗಳಿಸಿದೆ ಎಂದು ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್ ಸತೀಶ್ಚದ್ರ ತಿಳಿಸಿದರು.
ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಹಕಾರಿ ಸಂಸ್ಥೆಯು 1,430.43 ಕೋಟಿ ರೂಪಾಯಿ ಮೌಲ್ಯದ 48,294.93 ಮೆ.ಟನ್ ಅಡಿಕೆಯನ್ನು ಖರೀದಿಸಿದೆ. ಇದರಲ್ಲಿ 793.56 ಕೋಟಿ ರೂಪಾಯಿ ಮೌಲ್ಯದ 23,427.93 ಮೆ.ಟನ್ ಕೆಂಪಡಿಕೆ ಮತ್ತು 636.87 ಕೋಟಿ ರೂಪಾಯಿ ಮೌಲ್ಯದ 24,867.00 ಮೆ.ಟನ್ ಬಿಳಿ ಅಡಿಕೆ ಒಳಗೊಂಡಿರುತ್ತದೆ. 1,535.38 ಕೋಟಿ ರೂಪಾಯಿಗಳ ಮೌಲ್ಯದ 51,335.51 ಮೆ.ಟನ್ ಅಡಿಕೆಯನ್ನು ಮಾರಾಟ ಮಾಡಿದೆ. ಇವುಗಳಲ್ಲಿ 844.35 ಲಕ್ಷ ರೂಪಾಯಿ ಮೌಲ್ಯದ 25,163.66 ಮೆ.ಟನ್ ಕೆಂಪಡಿಕೆ ಮತ್ತು 691.03 ಕೋಟಿ ರೂಪಾಯಿ ಮೌಲ್ಯದ 26,171.85 ಮೆ.ಟನ್ ಬಿಳಿ ಅಡಿಕೆ ಒಳಗೊಂಡಿರುತ್ತದೆ. ಒಟ್ಟು ರೂ.1848 ಕೋಟಿಗಳ ಬೃಹತ್ ವಹಿವಾಟನ್ನು ಸಂಸ್ಥೆಯು ದಾಖಲಿಸಿದೆ ಎಂದರು.
ಈಗ ಕ್ಯಾಂಪ್ಕೋದ ಉತ್ಪನ್ನಗಳು ಈಗ ಇ-ಕಾಮರ್ಸ್ ತಾಣ ಅಮೆಜಾನ್ ನಲ್ಲೂ ಲಭ್ಯವಾಗುತ್ತಿವೆ. ವಿಶೇಷವಾಗಿ ಕ್ಯಾಂಪ್ಕೋದ ಚಾಕಲೇಟ್ ಪೇಯ ವಿನ್ನರ್‌ಗೆ ಅಲ್ಲಿ ಬಹಳಷ್ಟು ಬೇಡಿಕೆ ಬರುತ್ತಿದೆ. ತಿಂಗಳಿಗೆ 150 ಟನ್‌ಗಳಷ್ಟು ‘ವಿನ್ನರ್’ ಪೇಯ ವಿದೇಶಗಳಿಗೆ ರಫ್ತಾಗುತ್ತಿದೆ ಎಂದು ಅವರು ತಿಳಿಸಿದರು. ಶೀಘ್ರವೇ ಉತ್ಕೃಷ್ಟ ಗುಣಮಟ್ಟದ ಅಡಿಕೆ ಮತ್ತು ಕಾಳು ಮೆಣಸು ಕೂಡ ಕ್ಯಾಂಪ್ಕೋ ವತಿಯಿಂದ ಅಮೆಜಾನ್‌ನಲ್ಲಿ ಲಭ್ಯವಾಗಲಿದೆ ಎಂದು ಸತೀಶ್ಚಂದ್ರ ಹೇಳಿದರು.
ಅಡಕೆ ಬೆಳೆಗಾರರ ನೆರವಿಗೆ ಕ್ಯಾಂಪ್ಕೋ ಸದಾ ಧಾವಿಸುತ್ತಿದ್ದು, ಸಾಂಕ್ರಾಮಿಕದ ಅವಧಿಯಲ್ಲೂ ಅಡಿಕೆ ಮಾರುಕಟ್ಟೆ ಕುಸಿಯದಂತೆ ನೋಡಿಕೊಂಡಿದೆ. ಅಲ್ಲದೆ ಅಡಿಕೆ ಬೆಳೆಗಾರರಿಗೆ ಅತಿ ಹೆಚ್ಚಿನ ಪ್ರತಿಫಲವನ್ನು ನೀಡುತ್ತಿದೆ. ಪ್ರಸ್ತುತ ಅಡಿಕೆಯ ಬೆಲೆ ಕೆ.ಜಿಗೆ 400 ರೂ ಗಡಿ ದಾಟಿದೆ. ಅಲ್ಲದೆ ಕೃಷಿಕರ ಮನೆ ಬಾಗಿಲಲ್ಲೇ ಅಡಿಕೆ ಖರೀದಿಗಾಗಿ ‘ಕ್ಯಾಂಪ್ಕೋ ಆನ್ ವೀಲ್’ ಸೌಲಭ್ಯ ಜಾರಿಗೊಳಿಸಲಾಗುತ್ತಿದೆ. ಈಗಾಗಲೇ ಪುತ್ತೂರು ತಾಲೂಕಿನಲ್ಲಿ ಪ್ರಾಯೋಗಿಕವಾಗಿ ಚಾಲ್ತಿಯಲ್ಲಿದ್ದು, 5,000 ಕ್ವಿಂಟಾಲ್ ಅಡಿಕೆಯನ್ನು ಈ ಮೂಲಕ ಖರೀದಿಸಲಾಗಿದೆ. ಈ ವ್ಯವಸ್ಥೆಯನ್ನು ಜನವರಿ-ಫೆಬ್ರವರಿ ವೇಳೆಗೆ ಜಿಲ್ಲೆಯ ಉಳಿದ ಕಡೆಗಳಿಗೂ ವಿಸ್ತರಿಸಲಾಗುತ್ತದೆ ಎಂದು ಕ್ಯಾಂಪ್ಕೋ ಅಧ್ಯಕ್ಷರು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಕ್ಯಾಂಪ್ಕೋ ಉಪಾಧ್ಯಕ್ಷ ಶಂಕರನಾರಾಯಣ ಭಟ್ ಖಂಡಿಗೆ, ಪ್ರಭಾರ ವ್ಯವಸ್ಥಾಪಕ ನಿರ್ದೇಶಕ ಎಚ್.ಎಂ. ಕೃಷ್ಣ ಕುಮಾರ್ ಉಪಸ್ಥಿತರಿದ್ದರು.
ಸಂಸ್ಥೆಯು 19.70 ಕೋಟಿ ರೂ. ಮೌಲ್ಯದ 3,534.59 ಮೆ.ಟನ್ ಕೊಕ್ಕೋ ಹಸಿಬೀಜವನ್ನು ಮತ್ತು 71.69 ಕೋಟಿ ರೂ. ಮೌಲ್ಯದ 3,441.36 ಮೆ.ಟನ್ ಒಣಬೀಜವನ್ನು ಖರೀದಿಸಿದೆ. ಈ ಒಣಬೀಜ ಖರೀದಿಯಲ್ಲಿ, ಕಾರ್ಖಾನೆಯಲ್ಲಿ ನೇರವಾಗಿ ಖರೀದಿಸಿದ ರೂ.46.14 ಕೋಟಿ ಮೌಲ್ಯದ 1,995.84 ಮೆ.ಟನ್ ಒಣಬೀಜ ಸಹ ಸೇರಿರುತ್ತದೆ. ಒಟ್ಟು 3,512.42 ಮೆ.ಟನ್ ಒಣಬೀಜವನ್ನು ಕಾರ್ಖಾನೆಯಲ್ಲಿ ಬಳಸಲಾಗಿದೆ. ಚಾಕಲೇಟ್ ಕಾರ್ಖಾನೆಯ ಒಟ್ಟು ಉತ್ಪಾದನೆ 15,956.06 ಮೆ.ಟನ್‍ಗೆ ಮುಟ್ಟಿರುತ್ತದೆ ಮತ್ತು ಅದರಲ್ಲಿ 11,652.91 ಮೆ.ಟನ್ ಕ್ಯಾಂಪ್ಕೋ ಬ್ರಾಂಡಿನದ್ದೇ ಚಾಕಲೇಟ್ ಉತ್ಪಾದನೆಯಾಗಿರುತ್ತದೆ. ಉಳಿದ 4,303.15 ಮೆ.ಟನ್ ಚಾಕಲೇಟ್ ಜಾಬ್ ವರ್ಕ್ ವ್ಯವಸ್ಥೆಯಲ್ಲಿ ಉತ್ಪಾದಿಸಲಾಗಿದೆ. ನಮ್ಮ ಚಾಕಲೇಟ್ ಮಾರಾಟ ಮತ್ತು ಇತರ ಉತ್ಪನ್ನಗಳ ಮಾರಾಟ ರೂ.220.59 ಕೋಟಿ. ಇದರಲ್ಲಿ ರೂ.44.43 ಕೋಟಿ ಮೌಲ್ಯದ ಚಾಕಲೇಟ್ ಸಿದ್ಧ ಉತ್ಪನ್ನಗಳು ಮತ್ತು ರೂ.152.20 ಕೋಟಿ ಮೌಲ್ಯದ ಕೊಕ್ಕೋ ಕೈಗಾರಿಕ ಉತ್ಪನ್ನಗಳು, ರೂ.22.81 ಕೋಟಿ ಮೌಲ್ಯದ ರಫ್ತು ಮಾರಾಟ ಮತ್ತು ರೂ.1.15 ಕೋಟಿ ಮೌಲ್ಯದ ಇತರ ಉತ್ಪನ್ನಗಳು ಒಳಗೊಂಡಿರುತ್ತದೆ. 10.30 ಕೋಟಿ ರೂ.ಗಳ ಸಂಸ್ಕರಣ ಮೊತ್ತವನ್ನು ಜಾಬ್ ವರ್ಕ್ ಮೂಲಕ ಗಳಿಸುವಲ್ಲಿ ಯಶಸ್ವಿಯಾಗಿದೆ ಎಂದರು.
ಪ್ರಸಕ್ತ ಸಾಲಿನಲ್ಲಿ ತಮ್ಮ ಸಹಕಾರಿ ಸಂಸ್ಥೆಯು 23.37 ಕೋಟಿ ರೂ. ಮೌಲ್ಯದ 1822.95 ಮೆ.ಟನ್ ರಬ್ಬರನ್ನು ಖರೀದಿಸಿರುತ್ತದೆ ಮತ್ತು 22 ಕೋಟಿ ರೂ ಮೌಲ್ಯದ 1,674.42 ಮೆ.ಟನ್ ರಬ್ಬರನ್ನು ಮಾರಾಟ ಮಾಡಿರುತ್ತದೆ.
ಪ್ರಸಕ್ತ ಸಾಲಿನಲ್ಲಿ ತಮ್ಮ ಸಹಕಾರಿ ಸಂಸ್ಥೆಯು 37.77 ಕೋಟಿ ರೂ. ಮೌಲ್ಯದ 1164.46 ಮೆ.ಟನ್ ಕಾಳುಮೆಣಸನ್ನು ಖರೀದಿಸಿರುತ್ತದೆ ಮತ್ತು 28.07 ಕೋಟಿ ರೂ. ಮೌಲ್ಯದ 836.41 ಮೆ.ಟನ್ ಕಾಳುಮೆಣಸನ್ನು ಮಾರಾಟ ಮಾಡಿರುತ್ತದೆ.
ಭಾರತೀಯ ಆಹಾರ ಸುರಕ್ಷೆ ಮತ್ತು ಗುಣಮಟ್ಟ ಪ್ರಾಧಿಕಾರವು (ಎಫ್.ಎಸ್.ಎಸ್.ಎ.ಐ.) ಕೆಂಪಡಿಕೆಯ ತೇವಾಂಶದ ಮಟ್ಟವನ್ನು ಗರಿಷ್ಠ 7% ಆಗಿ ನಿಗದಿಪಡಿಸಿದ್ದು, ಸಾಮಾನ್ಯವಾಗಿ 40-45 ದಿನಗಳ ಬಿಸಿಲಿನಲ್ಲಿ ಒಣಗಿದ ಅಡಿಕೆಯ ತೇವಾಂಶವು 7% ಗಿಂತ ಹೆಚ್ಚಿರುತ್ತದೆ. ಈ ಬಗ್ಗೆ ಆಹಾರ ಸುರಕ್ಷೆ ಮತ್ತು ಗುಣಮಟ್ಟ ಮಾನದಂಡಗಳ ತಿದ್ದುಪಡಿಗಾಗಿ ಪ್ರಸ್ತಾಪವೊಂದನ್ನು ಪ್ರಾಧಿಕಾರಕ್ಕೆ ಸಲ್ಲಿಸುವ ಪ್ರಕ್ರಿಯೆಯಲ್ಲಿ ಸಂಸ್ಥೆಯು ಈಗಾಗಲೇ ತೊಡಗಿಕೊಂಡಿದೆ. ಈ ಹಿನ್ನೆಲೆಯಲ್ಲಿ ಸಿ.ಪಿ.ಸಿ.ಆರ್.ಐ., ಡಿ.ಎ.ಎಸ್.ಡಿ., ಎಫ್.ಎ.ಓ. ಸಲಹೆಗಾರರು, ವಿಶ್ವವಿದ್ಯಾಲಯಗಳ ಸಂಶೋಧಕರುಗಳು, ಅಡಿಕೆಗೆ ಸಂಬಂಧಪಟ್ಟ ಸಹಕಾರ ಸಂಸ್ಥೆಗಳ ಪ್ರತಿನಿಧಿಗಳು ಮತ್ತು ಅಡಿಕೆ ಬೆಳೆಗಾರರ ಸಭೆ ನಡೆಸಲಾಗಿದ್ದು, ಸಿ.ಪಿ.ಸಿ.ಆರ್.ಐ.ನಲ್ಲಿ ಅಡಿಕೆಯ ತೇವಾಂಶದ ಮಟ್ಟ ಮತ್ತು ವಾಟರ್ ಆಕ್ಟಿವಿಟಿಗಳ ಬಗ್ಗೆ ವಿಶ್ಲೇಷಣೆ ನಡೆಸಿದ ನಂತರ ಸೂಕ್ತ ತಿದ್ದುಪಡಿಗಳನ್ನು ಪ್ರಾಧಿಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ಸತೀಶ್ಚಂದ್ರ ವಿವರಿಸಿದರು.
26.11.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…
ಗದಗ ತಾಲೂಕಿನ ಲಕ್ಕುಂಡಿ ಗ್ರಾಮದ ಹಾಲಗುಂಡಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಲಕ್ಕುಂಡಿ ಪಾರಂಪರಿಕ…
ಬೆಂಗಳೂರಿನ ಬಸವನ ಗುಡಿಯಲ್ಲಿ ಐತಿಹಾಸಿಕ ಕಡಲೆಕಾಯಿ ಪರಿಷೆ ಸೊಬಗು ಕಳೆಗಟ್ಟಿದೆ. ಇಂದು ಕಡಲೆಕಾಯಿ…
ಚಿಕ್ಕಮಗಳೂರು ಜಿಲ್ಲೆಯಲ್ಲಿ ಆನೆಗಳ ಹಾವಳಿ ತಡೆಯಲು ಸರ್ಕಾರದ ಸಚಿವರು ಹಾಗೂ ಅರಣ್ಯ ಇಲಾಖೆ…
ಅಡಿಕೆ ಹಳದಿ ಎಲೆರೋಗ ಬಾಧಿಸಿದ ತೋಟದ ಕೃಷಿಕ ಶಂಕರಪ್ರಸಾದ್ ರೈ ಅವರು ಕೃಷಿ…
ಅಡಿಕೆ ಕೃಷಿಯ ಜೊತೆಗೆ ಮಿಶ್ರ ಕೃಷಿಯನ್ನು ಏಕೆ ಮಾಡಬೇಕು..? ಯಾವ ಕೃಷಿಯನ್ನು ಮಾಡಬಹುದು..?…