Advertisement
MIRROR FOCUS

ಅಡಿಕೆ ಮಾರುಕಟ್ಟೆ ಸ್ಥಿರತೆಗೆ ಕ್ಯಾಂಪ್ಕೊ ಪ್ರಯತ್ನ | ಧಾರಣೆ ಸ್ಥಿರತೆಗೆ ಬೆಳೆಗಾರರ ಸಹಕಾರವೂ ಅಗತ್ಯ | ಕ್ಯಾಂಪ್ಕೊ ಮಹಾಸಭೆಯಲ್ಲಿ ಕಿಶೋರ್‌ ಕುಮಾರ್‌ ಕೊಡ್ಗಿ |

Share

ಅಡಿಕೆ ಮಾರುಕಟ್ಟೆಗೆ ಸ್ಥಿರತೆಗೆ ಕ್ಯಾಂಪ್ಕೊ ಸತತ ಪ್ರಯತ್ನ ಮಾಡಿದೆ. ಈ ಬಾರಿ ವಿದೇಶಿ ಅಡಿಕೆಯ ಅಕ್ರಮ ಆಮದಿನಿಂದ ದೇಶಿ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಮೇಲೆ ಪ್ರಭಾವ ಬೀರಿದರೂ, ಕ್ಯಾಂಪ್ಕೊ ಕೈಗೊಂಡ ನಿರ್ಧಾರಗಳಿಂದ ಅಡಿಕೆ ಧಾರಣೆ ಸ್ಥಿರತೆಗೆ ಸಾಧ್ಯವಾಗಿದೆ, ಸಂಸ್ಥೆ ಲಾಭದತ್ತಲೂ ಸಾಗಿದೆ. ಅಡಿಕೆ ಮಾರುಕಟ್ಟೆ ಸ್ಥಿರತೆಗೆ ಬೆಳೆಗಾರರ ಸಹಕಾರವೂ ಅಗತ್ಯ ಎಂದು ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್‌ ಕುಮಾರ್‌ ಕೊಡ್ಗಿ ಹೇಳಿದ್ದಾರೆ.…..ಮುಂದೆ ಓದಿ….

ಮಂಗಳೂರಿನ ಅಡ್ಯಾರ್‌ನಲ್ಲಿ ಶನಿವಾರ ನಡೆದ ಸಂಸ್ಥೆಯ 50ನೇ ವಾರ್ಷಿಕ ಮಹಾಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಅಡಿಕೆ ಮಾರುಕಟ್ಟೆ ಸ್ಥಿರತೆಗೆ ಅಡಿಕೆ ಬೆಳೆಗಾರರು ಬಿಳಿ ಚೀಟಿ ವ್ಯಾಪಾರದ ಬದಲಾಗಿ ಬಿಲ್‌ ಸಹಿತ ಅಡಿಕೆ ಮಾರಾಟಕ್ಕೆ ಆದ್ಯತೆ ನೀಡಬೇಕು. ಆಗ ಅಡಿಕೆ ಧಾರಣೆ ಹಾಗೂ ಮಾರುಕಟ್ಟೆ ಮೇಲೂ ಪರಿಣಾಮ ಬೀರುತ್ತದೆ ಎಂದರು. ಅಡಿಕೆಯ ಜೊತೆಗೆ ವೈವಿಧ್ಯಮಯ ಕೃಷಿಗೆ ಬೆಳೆಗಾರರ ಆದ್ಯತೆ ನೀಡಬೇಕು ಎಂದರು.…..ಮುಂದೆ ಓದಿ….

ಅಡಿಕೆ ಹಾನಿಕಾರಕ ಪಟ್ಟಿಯಿಂದ ಹೊರಬರಲು ಸತತ ಪ್ರಯತ್ನ ನಡೆಯುತ್ತಿದೆ. ಅಡಿಕೆಯ ಉತ್ತಮ ಅಂಶಗಳ ಬಗ್ಗೆ WHO ಗೆ ವೈಜ್ಞಾನಿಕ ಸಂಶೋಧನಾ ವರದಿ ಸಲ್ಲಿಸಿಕೆ ಮಾಡಿ ಅಡಿಕೆಯ ಬಗ್ಗೆ ಮನವರಿಕೆ ಮಾಡುವ ಪ್ರಯತ್ನ ಕ್ಯಾಂಪ್ಕೊ ಮಾಡಲಿದೆ ಎಂದು ಕಿಶೋರ್‌ ಕುಮಾರ್‌ ಕೊಡ್ಗಿ ಹೇಳಿದರು.

ಈಚೆಗೆ ಅಡಿಕೆ ಗುಣಮಟ್ಟದ ಬಗ್ಗೆ ದೂರುಗಳು ಬರುತ್ತಿವೆ. ಅದರ ಜೊತೆಗೆ ಉತ್ತರ ಭಾರತದಲ್ಲಿ ಅಡಿಕೆ ಜೊತೆಗೆ ಕಲಬೆರಕೆಯ ಕೆಂಪಡಿಕೆಯನ್ನು ಮಿಶ್ರಣ ಮಾಡಿ ಗುಣಮಟ್ಟರಹಿತ ಅಡಿಕೆ ಮಾರಾಟವಾಗುತ್ತಿದೆ. ಇದನ್ನು ತಡೆಯುವುದಲ್ಲದೆ, ಇಂತಹ ಅಡಿಕೆ ಕಂಡುಬಂದರೆ ಅದನ್ನು ನಾಶಪಡಿಸುವಂತೆ ಸಂಬಂಧಿತ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ ಎಂದರು.

ಅಡಿಕೆಯ ಗುಣಮಟ್ಟಕ್ಕೆ ತೇವಾಂಶವೂ ಕಾರಣವಾಗುತ್ತದೆ. ಈಗ  ಅಡಿಕೆಗೆ ಗರಿಷ್ಠ ಗುಣಮಟ್ಟದ ತೇವಾಂಶ ಮಟ್ಟವನ್ನು 7% ರಿಂದ 11% ಕ್ಕೆ ಏರಿಕೆ ಮಾಡಬೇಕಾದ ಅಗತ್ಯ ಇದೆ ಎಂದು ಅಭಿಪ್ರಾಯಪಟ್ಟ ಕಿಶೋರ್‌ ಕುಮಾರ್‌ ಕೊಡ್ಗಿ,ಎರಡು ವರ್ಷಗಳ ಹಿಂದೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರಕ್ಕೆ (ಎಫ್‌ಎಸ್‌ಎಸ್‌ಎಐ) ಗುಣಮಟ್ಟವನ್ನು ಮರುಪರಿಶೀಲಿಸುವಂತೆ ಮನವಿ ಮಾಡಿತ್ತು. ಇನ್ನೊಮ್ಮೆ ಅಧಿಕಾರಿಗಳೊಂದಿಗೆ  ಸಭೆ ನಡೆಸಲಿದ್ದು, ಗುಣಮಟ್ಟದ ಆಧಾರದ ಮೇಲೆ ಉತ್ತರ ಭಾರತದ ಮಾರುಕಟ್ಟೆಯಲ್ಲಿ ಅಡಿಕೆಯ ಕೆಲವು ಬಾರಿ ಅಡಿಕೆ ತಿರಸ್ಕೃತವಾಗುತ್ತಿರುವುದರಿಂದ ಗುಣಮಟ್ಟವನ್ನು ಮರು-ಫಿಕ್ಸ್ ಮಾಡುವ ಅಗತ್ಯತೆಯ ಕುರಿತು ಅವರಿಗೆ ಮನವರಿಕೆ ಮಾಡಿಕೊಡಲಾಗುವುದು ಎಂದರು.

ಕ್ಯಾಂಪ್ಕೊ ಸದಸ್ಯ ಗ್ರಾಹಕರ ಅನುಕೂಲಕ್ಕೆ ಕೃಷಿ ಮಾರುಕಟ್ಟೆಯ ಆಗುಹೋಗುಗಳನ್ನು ಹಾಗೂ ಮಾರುಕಟ್ಟೆ ಬಗ್ಗೆ ತಿಳಿಸಲು ಈಗಾಗಲೇ ವ್ಯಾಟ್ಸಪ್‌ ಗುಂಪುಗಳು ಇವೆ, ಮುಂದೆ  ಪ್ರತ್ಯೇಕ ಆ್ಯಪ್ ರೂಪಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.ಮುಂದಿನ ದಿನಗಳಲ್ಲಿ ರೈತರಿಂದ ಗೋಡಂಬಿ ಖರೀದಿಗೆ ಚಿಂತನೆ ನಡೆಸಿದೆ, ಅಡಿಕೆ ಮೌಲ್ಯವರ್ಧನೆ ಬಗ್ಗೆಯೂ ಚಿಂತನೆ ನಡೆಸಿದೆ ಎಂದರು.

ಮಹಾಸಭೆಯಲ್ಲಿ ಉಪಾಧ್ಯಕ್ಷ ಶಂಕರನಾರಾಯಣ ಭಟ್ ಖಂಡಿಗೆ, ನಿರ್ದೇಶಕರು ಹಾಗೂ  ವ್ಯವಸ್ಥಾಪಕ ನಿರ್ದೇಶಕ ಡಾ.ಬಿ.ವಿ.ಸತ್ಯನಾರಾಯಣ ಉಪಸ್ಥಿತರಿದ್ದರು.

Campco has consistently worked towards stabilizing the Arecanut market. Despite the impact of illegal imports of foreign nuts on domestic stock levels, Campco’s strategic decisions have successfully stabilized the market and led the company towards profitability. Campco President Kishore Kumar Kodgi emphasized the importance of Arecanut grower cooperation in maintaining market stability.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಭಾರತದ ಕಾಫಿಗೆ ಜಾಗತಿಕ ಬೇಡಿಕೆ ಹೆಚ್ಚಳ : ‘ಇಂಡಿ ಕಾಫಿ’ಗೆ ಹೊಸ ಬ್ರ್ಯಾಂಡ್‌ ಒತ್ತು

ಭಾರತದ ಕಾಫಿ ರಫ್ತು ಗಳಿಕೆ 2021-22ರ ಸುಮಾರು 1 ಶತಕೋಟಿ ಡಾಲರ್‌ನಿಂದ 2025-26ರಲ್ಲಿ…

29 minutes ago

ಕಸವೆಂದು ಎಸೆಯುವ ಮೀನಿನ ಮುಳ್ಳು–ಹುರುಪೆಯಲ್ಲಿ ‘ಸಂಜೀವಿನಿ’!

ಮೀನಿನ ಮುಳ್ಳು ಮತ್ತು ಹುರುಪೆಯನ್ನು ವೈಜ್ಞಾನಿಕವಾಗಿ ಸಂಸ್ಕರಿಸಿ ಹಲ್ಲುಗಳ ಪುನರ್ ನಿರ್ಮಾಣ ಹಾಗೂ…

45 minutes ago

ಕರ್ನಾಟಕ–ತಮಿಳುನಾಡು ಗಡಿಯಲ್ಲಿ ಆನೆಗಳಿಗಾಗಿ 3 ಹೊಸ ಕಾರಿಡಾರ್‌

ಕರ್ನಾಟಕ–ತಮಿಳುನಾಡು ಗಡಿಯಲ್ಲಿ ಆನೆಗಳ ಸುರಕ್ಷಿತ ಸಂಚಾರಕ್ಕೆ ಅನುಕೂಲವಾಗುವಂತೆ ತಮಿಳುನಾಡು ಮೂರು ಹೊಸ ಆನೆ…

12 hours ago

ಹವಾಮಾನ ವರದಿ | 29-08-2026 | ಕರ್ನಾಟಕದಲ್ಲಿ ಸೆಪ್ಟೆಂಬರ್‌ ಆರಂಭದಲ್ಲಿ ಮಳೆ ಚುರುಕಾಗುವ ಲಕ್ಷಣ…?

ಬಂಗಾಳಕೊಲ್ಲಿಯ ಬಾಂಗ್ಲಾದೇಶ ಕರಾವಳಿ ಭಾಗದಲ್ಲಿ ಮಧ್ಯಮ ಸ್ತರದ ತಿರುವಿಕೆ ಉಂಟಾಗಿದ್ದು, ಇದರ ಪ್ರಭಾವದಿಂದ…

12 hours ago

ಕಸ್ತೂರಿ ರಂಗನ್ ವರದಿ ಜಾರಿಗೆ ಅವಕಾಶವಿಲ್ಲ: ಪಶ್ಚಿಮಘಟ್ಟದ 1,449 ಗ್ರಾಮಗಳ ಬಗ್ಗೆ ಆತಂಕ ಬೇಡ ಎಂದ ಪರಮೇಶ್ವರ್

ಕಸ್ತೂರಿ ರಂಗನ್ ವರದಿಯನ್ನು ಯಾವುದೇ ಕಾರಣಕ್ಕೂ ಜಾರಿಗೆ ಅವಕಾಶ ನೀಡುವುದಿಲ್ಲ ಎಂದು ಉಪಮುಖ್ಯಮಂತ್ರಿ…

1 day ago

ಕರ್ನಾಟಕದ 101 ತಾಲ್ಲೂಕುಗಳು ಬರಪೀಡಿತ : ಇನ್ನೂ 3 ತಾಲ್ಲೂಕುಗಳ ಮೇಲೂ ಬರದ ಛಾಯೆ

ರಾಜ್ಯದ 101 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದ್ದು, 89 ತೀವ್ರ ಹಾಗೂ 12…

1 day ago