ಕೆನರಾ ಬ್ಯಾಂಕ್‌ ಸೇವಾ ಅವ್ಯವಸ್ಥೆ | ಗುತ್ತಿಗಾರು ಕೆನರಾ ಬ್ಯಾಂಕ್‌ ಸೇವೆ ವಿರುದ್ಧ ಸಾರ್ವಜನಿಕರ ಅಸಮಾಧಾನ | ಹೋರಾಟಕ್ಕೆ ವರ್ತಕ ಸಂಘ ನಿರ್ಧಾರ |

October 10, 2021
11:40 AM

ಸಿಂಡಿಕೇಟ್‌ ಬ್ಯಾಂಕ್‌ ಹಾಗೂ ಕೆನರಾ ಬ್ಯಾಂಕ್‌ ವಿಲೀನದ ಬಳಿಕವೂ ಮೂಲತ: ಸಿಂಡಿಕೇಟ್‌ ಬ್ಯಾಂಕ್‌ನ ಸೇವಾ ಅವ್ಯವಸ್ಥೆ ಕಡಿಮೆಯಾಗಿಲ್ಲ. ಸುಳ್ಯ ತಾಲೂಕಿನ 7 ಎಟಿಎಂ ಗಳು ಆಗಾಗ ಕೈಕೊಡುವುದು ಒಂದಾದರೆ ಬ್ಯಾಂಕ್‌ ನಲ್ಲಿ ಸೇವೆಯೂ ಅಸಮರ್ಪಕವಾಗಿದೆ. ಇದೀಗ ಸುಳ್ಯ ತಾಲೂಕಿನ ಗುತ್ತಿಗಾರಿನಲ್ಲಿ ಅಸಮಾಧಾನಗಳು ಹೆಚ್ಚಾಗಿದ್ದು ಇಲ್ಲಿನ ವರ್ತಕ ಸಂಘ ಹೋರಾಟಕ್ಕೆ ಸಿದ್ಧವಾಗಿದೆ. ನಾಗರಿಕರಿಂದ ಉತ್ತಮ ಸ್ಪಂದನೆ ಲಭ್ಯವಾಗುತ್ತಿದೆ.

Advertisement
Advertisement
Advertisement

ಸಿಂಡಿಕೇಟ್‌ ಬ್ಯಾಂಕ್‌ ಆರಂಭದಿಂದಲೂ ಅಸಮರ್ಪಕ ಸೇವೆಯನ್ನು ಅಲ್ಲಿನ ಸಿಬಂದಿಗಳು ನೀಡುತ್ತಿರುವ ಬಗ್ಗೆ ದೂರುಗಳು ಕೇಳಿಬಂದಿದ್ದವು. ಹಲವು ಬಾರಿ ವಿಭಾಗೀಯ ಮೆನೇಜರ್‌ ಅವರಿಗೂ ದೂರುಗಳನ್ನು ಸಾಕಷ್ಟು ಜನರು ನೀಡಿದ್ದರು. ಹಾಗಿದ್ದರೂ ಸೇವೇಯಲ್ಲಿ ಗುಣಮಟ್ಟ ಕಂಡುಬಂದಿರಲಿಲ್ಲ. ಅದಾದ ಬಳಿಕ ಕೆನರಾ ಬ್ಯಾಂಕ್‌ ಜೊತೆ ವಿಲೀನವಾದ ಬಳಿಕ ಇದೀಗ ಎರಡೂ ಬ್ಯಾಂಕ್‌ ಗಳ ಸೇವೆಯ ಮೇಲೂ ಅಸಮಾಧಾನಗಳು ಕೇಳಿಬಂದಿದೆ. ಅನೇಕ ಗ್ರಾಹಕರು ದೂರು ನೀಡುತ್ತಿದ್ದರೂ ಸರಿಯಾದ ಸ್ಪಂದನೆ ಲಭ್ಯವಾಗುತ್ತಿಲ್ಲ ಎಂದು ಗ್ರಾಹಕರು ದೂರುತ್ತಾರೆ. ಇದೀಗ ಈ ಅಸಮಾಧಾನ ಹೋರಾಟದ ಹಾದಿಯನ್ನು ತಲುಪಿದೆ. ಗುತ್ತಿಗಾರಿನಲ್ಲಿ ವರ್ತಕ ಸಂಘವು ಇದರ ನೇತೃತ್ವ ವಹಿಸಿಕೊಂಡಿದೆ.

Advertisement

ಸುಳ್ಯ ತಾಲೂಕಿನ ಗುತ್ತಿಗಾರಿನಲ್ಲಿ ಇರುವ ಕೆನರಾ ಬ್ಯಾಂಕ್‌ ಶಾಖೆಯಲ್ಲಿ ಅವ್ಯವಸ್ಥೆಯ ತಾಂಡವವಾಡುತ್ತಿದೆ ಎಂದು ಗ್ರಾಹಕರು ದೂರುತ್ತಿದ್ದಾರೆ. ಇಲ್ಲಿನ ಸಿಬಂದಿಗಳ ಬಗ್ಗೆಯೇ ಮೊದಲ ಆರೋಪ ಇದ್ದು ಗ್ರಾಹಕರೊಂದಿಗೆ ಉದ್ದಟತನದಿಂದ ವರ್ತಿಸುತ್ತಾರೆ ಎಂಬುದು ದೂರು. ಪಾಸ್‌ ಎಂಟ್ರಿಗೆ ಹೋದರೆ ಈಗಾಗದು ಎನ್ನುವುದು ಸಿಬಂದಿಗಳ ನಿತ್ಯದ ಉತ್ತರವಾದರೆ , ನೆಟ್ವರ್ಕ್‌ ಇಲ್ಲ ಎನ್ನುವುದು ಇನ್ನೊಂದು ನಿತ್ಯದ ಉತ್ತರ. ಹೆಚ್ಚು ವಿಚಾರಿಸಿದರೆ ಉದ್ದಟತನದ ಉತ್ತರ ಇಲ್ಲಿನ ಸಿಬಂದಿಗಳಿಂದ  ಸದಾ ಸ್ವಾಗತವಿದೆ ಎಂಬುದು ಗ್ರಾಹಕರ ನೇರ ಆರೋಪ.

ಇನ್ನು ಬ್ಯಾಂಕ್‌ ನಲ್ಲಿ ಸಾಲಕ್ಕೆ ಹೋದರೆ ಅಲೆದಾಟ ತಪ್ಪಿದ್ದಲ್ಲ, ಇದಕ್ಕಾಗಿ ಒಂದು ಬೇಕಾದ ದಾಖಲೆಗಳ ಪಟ್ಟಿ ಇಲ್ಲವೇ ಇಲ್ಲ. ನಗದಿಗಾಗಿ ಕ್ಯೂ ರಸ್ತೆ ಬದಿಯವರೆಗೆ ತಲುಪಿದರೂ ತಕ್ಷಣದ ಸ್ಪಂದನೆ ಇಲ್ಲ, ಭಾಷಾ ಸಮಸ್ಯೆ ತೀವ್ರವಾಗಿ ಕಾಡುತ್ತದೆ. ಕನ್ನಡ ಬಲ್ಲವರು ಇಲ್ಲಿಲ್ಲ, ಕನ್ನಡ ಬಲ್ಲವರು ಮಾತನಾಡುವುದೂ ಇಲ್ಲ, ಯಾವ ಮಾಹಿತಿಯೂ ಸರಿಯಾಗಿ ಸಿಗುತ್ತಿಲ್ಲ ಎನ್ನುವುದು  ಆರೋಪ. ಒಂದು ವೇಳೆ ದೂರು ನೀಡಿದ ಗಣ್ಯ ವ್ಯಕ್ತಿಗಳಿಗೆ ಉತ್ತಮ ಸೇವೆ ನೀಡುವುದು  ಅಥವಾ ಖಾತೆ ವರ್ಗಾವಣೆ ಮಾಡಿಸಿ ಬೇರೆ ಶಾಖೆಗಳಿಗೆ ತೆರಳುವಂತೆ ಮಾಡುವುದು  ಕೂಡಾ ಈ ಹಿಂದೆ ನಡೆದಿದೆ.

Advertisement

ಗುತ್ತಿಗಾರು ಎನ್ನುವುದು  ಗ್ರಾಮೀಣ ಭಾಗ. ಗ್ರಾಮೀಣ ಭಾಗದ ಎಲ್ಲಾ ಜನರಿಗೆ ಇಂಗ್ಲಿಷ್‌ ಜ್ಞಾನ ಅಥವಾ ಫಾರಂ ತುಂಬಿಸುವ ಜ್ಞಾನ ಇದೆ ಎನ್ನಲು ಆಗುವುದಿಲ್ಲ ಇದಕ್ಕೆ ಸಿಬಂದಿಗಳು ಸೂಕ್ತ ರೀತಿಯಲ್ಲಿ ಸ್ಪಂದಿಸಬೇಕು, ಗ್ರಾಹಕರೇ ದೇವರು ಎನ್ನುವ ಈ ಕಾಲದಲ್ಲಿ ಸರಕಾರಿ ಸ್ವಾಮ್ಯದ ಬ್ಯಾಂಕ್‌ಗಳಲ್ಲಿ ಉದ್ದಟತನದ ಸೇವೆ ನಿರೀಕ್ಷೆ ಮಾಡುವುದಿಲ್ಲ ಎಂದು ಗ್ರಾಹಕರು ಹೇಳುತ್ತಾರೆ. ಈ ಎಲ್ಲಾ ಕಾರಣದಿಂದ ಗುತ್ತಿಗಾರು ವರ್ತಕ ಸಂಘದ ನೇತೃತ್ವದಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ಈ ಬ್ಯಾಂಕ್ ಗ್ರಾಹಕರಿಗೆ ಸರಿಯಾದ ಸೇವೆ ನೀಡುವಲ್ಲಿ ವಿಫಲವಾದ್ದರಿಂದ,‌ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ  ಬ್ಯಾಂಜ್ ಮೇಲಾಧಿಕಾರಿಗಳಿಗೆ ಆರಂಭದಲ್ಲಿ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ. ಅದಾದ ಬಳಿಕವೂ ಗ್ರಾಮೀಣ ಜನರಿಗೆ ಉತ್ತಮ ಸೇವೆ ನೀಡದೇ ಇದ್ದರೆ  ಪ್ರತಿಭಟನೆಯನ್ನು ನಡೆಸುವುದಾಗಿ ತೀರ್ಮಾನಿಸಲಾಗಿದೆ.

Advertisement

ಗುತ್ತಿಗಾರು ಕೆನರಾ ಬ್ಯಾಂಕ್‌ ಸೇವೆಯ ಬಗ್ಗೆ ಗ್ರಾಮೀಣ ಭಾಗದ ಜನರಿಂದ ತೀರ ಅಸಮಾಧಾನವಿದೆ. ಈ ಬಗ್ಗೆ ಹಲವು ಬಾರಿ ಅನೇಕ ಗ್ರಾಹಕರು ದೂರಿದ್ದಾರೆ. ಇದೀಗ ವರ್ತಕ ಸಂಘದ ನೇತೃತ್ವದಲ್ಲಿ ಮೇಲಾಧಿಕಾರಿಗಳಿಗೆ ಮನವಿ ನೀಡಲಾಗುತ್ತದೆ. ನಂತರೂ ಸೇವೆ ಸರಿಯಾಗದೇ ಇದ್ದರೆ, ಸಿಬಂದಿಗಳ ವರ್ತನೆಯಲ್ಲಿ ಬದಲಾವಣೆ ಕಾಣದೇ ಇದ್ದರೆ ಪ್ರತಿಭಟನೆ ನಡೆಸಲಾಗುವುದು
   – ಶಿವರಾಮ ಕರುವಜೆ, ಅಧ್ಯಕ್ಷರು ವರ್ತಕ ಸಂಘ, ಗುತ್ತಿಗಾರು

Advertisement
ಎಟಿಎಂ ಅವ್ಯವಸ್ಥೆ

ಕೆನರಾ ಬ್ಯಾಂಕ್‌ ಎಟಿಎಂ ಶಾಖೆಗಳು ತಾಲೂಕಿನಲ್ಲಿ   7 ಕಡೆಗಳಲ್ಲಿ ಇವೆ. ಅದರಲ್ಲಿ ಸಂಪಾಜೆ, ಗುತ್ತಿಗಾರು, ನಿಂತಿಕಲ್ಲು , ಪಂಜ ಈ ಶಾಖೆಗಳು ಬಹುತೇಕ ದಿನಗಳಲ್ಲಿ  ಹಣ ಖಾಲಿಯಾಗಿರುತ್ತದೆ. ಈಗಿನ ನಿಯಮದ ಪ್ರಕಾರ ಇತರ ಎಟಿಎಂ ಮೂಲಕ ಕೆಲವೇ ಕೆಲವು ಬಾರಿ ಮಾತ್ರಾ ಹಣ ಪಡೆಯಲು ಅವಕಾಶ ಇದೆ. ಆ ನಂತರ ಪ್ರತೀ ಬಾರಿಯೂ ಖಾತೆಯಿಂದ ಸೇವಾ ಶುಲ್ಕ ಕಡಿತವಾಗುತ್ತದೆ. ಬ್ಯಾಂಕ್‌ ಅವ್ಯವಸ್ಥೆಯಿಂದ ಈಗ ಗ್ರಾಹಕರ ಜೇಬಿಗೆ ಕತ್ತರಿ ಬೀಳುತ್ತಿದೆ ಎನ್ನುವ ಆರೋಪ ಇದೆ. ಈ ಬಗ್ಗೆಯೂ ಬ್ಯಾಂಕ್‌ ಮೌನ ವಹಿಸಿದೆ.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 19.01.2025 | ಇಂದು ಕೆಲವು ಕಡೆ ತುಂತುರು ಮಳೆ ಸಾಧ್ಯತೆ | ಕೃಷಿಕರೇ ಇರಲಿ ಎಚ್ಚರ |
January 19, 2025
11:01 AM
by: ಸಾಯಿಶೇಖರ್ ಕರಿಕಳ
ಸರ್ಕಾರದ ಯೋಜನೆಗಳನ್ನು ರೈತರು ಸದುಪಯೋಗಪಡಿಸಿಕೊಳ್ಳುವಂತೆ ಸಚಿವ ಈಶ್ವರ್ ಖಂಡ್ರೆ ಕರೆ
January 19, 2025
7:22 AM
by: The Rural Mirror ಸುದ್ದಿಜಾಲ
ಅಡಿಕೆ ಬೆಳೆಗಾರರಿಗೆ ಆತಂಕ ಬೇಡ | ಅಡಿಕೆ ಬೆಳೆಗಾರರ ಸಮಸ್ಯೆ ಬಗಹೆರಿಸಲು ಸಿದ್ದ | ಕೇಂದ್ರ ಸಚಿವ ಶಿವರಾಜ್ ಸಿಂಗ್  ಚಾವ್ಙಾಣ್ ಭರವಸೆ |
January 19, 2025
7:03 AM
by: The Rural Mirror ಸುದ್ದಿಜಾಲ
ಕ್ಯಾಂಪ್ಕೋ ತಯಾರಿಕೆಯ ಕೊಬ್ಬರಿ ಎಣ್ಣೆ “ಕಲ್ಪ” 5 ಲೀಟರ್ ಕ್ಯಾನ್ ಬಿಡುಗಡೆ
January 16, 2025
3:11 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror