ಗುತ್ತಿಗಾರು ಕೆನರಾ ಬ್ಯಾಂಕ್‌ ಅವ್ಯವಸ್ಥೆ | ದೂರುಗಳ ನಡುವೆಯೂ 10.30 ರವರೆಗೆ ಬ್ಯಾಂಕ್‌ ಮುಂದೆ ಕಾದ ಗ್ರಾಹಕರು…! |

October 12, 2021
2:26 PM

ಸುಳ್ಯ ತಾಲೂಕಿನ ಗುತ್ತಿಗಾರಿನ ಕೆನರಾ ಬ್ಯಾಂಕ್‌ ಸಿಬಂದಿಗಳಿಂದ ಅಸಮರ್ಪಕ ಸೇವೆಯ ಬಗ್ಗೆ ಗ್ರಾಹಕರಿಂದ ವ್ಯಾಪಕ ದೂರುಗಳು ಬರುತ್ತಿರುವ ಬಗ್ಗೆ ಗುತ್ತಿಗಾರು ವರ್ತಕ ಸಂಘವು ಸಂಬಂಧಿತ ಅಧಿಕಾರಿಗಳನ್ನು ಎಚ್ಚರಿಸಿತ್ತು. ಅದಾದ ಬಳಿಕವೂ ಇಲ್ಲಿನ ವ್ಯವಸ್ಥೆ ಸುಧಾರಣೆಯಾಗಿಲ್ಲ ಎಂದು ಗ್ರಾಹಕರು ದೂರಿದ್ದಾರೆ. ಮಂಗಳವಾರ ಬೆಳಗ್ಗೆ 10.30  ರ ವರೆಗೆ ಬ್ಯಾಂಕ್‌ ಮುಂದೆ ಜನರು ಸರದಿ ಸಾಲಿನಲ್ಲಿ ನಿಲ್ಲಬೇಕಾಯಿತು, ಕಾರಣ, ಬ್ಯಾಂಕ್‌ ಬಾಗಿಲು ತೆರೆಯಲು ವಿಳಂಬ…!. 

ಗುತ್ತಿಗಾರಿನಲ್ಲಿ ಕೆನರಾ ಬ್ಯಾಂಕ್‌ ಅಸಮರ್ಪಕ ಸೇವೆಯ ಬಗ್ಗೆ  ಗ್ರಾಹಕರು ದೂರು ನೀಡುತ್ತಿದ್ದರೂ ಸರಿಯಾದ ಸ್ಪಂದನೆ ಲಭ್ಯವಾಗುತ್ತಿಲ್ಲ. ಇದೀಗ ಈ ಅಸಮಾಧಾನ ಹೋರಾಟದ ಹಾದಿ ತಲುಪಿದೆ. ಗುತ್ತಿಗಾರಿನಲ್ಲಿ ವರ್ತಕ ಸಂಘವು ಇದರ ನೇತೃತ್ವ ವಹಿಸಿಕೊಂಡಿದೆ. ಎರಡು ದಿನಗಳ ಹಿಂದೆ ಸಭೆಯಲ್ಲಿ ಕೂಡಾ ನಿರ್ಧಾರ ಮಾಡಿ ಬ್ಯಾಂಕ್‌ ಅವ್ಯವಸ್ಥೆ ಬಗ್ಗೆ ದೂರು ನೀಡಲು ನಿರ್ಧಾರ ಮಾಡಲಾಗಿತ್ತು. ಅದಾದ ಬಳಿಕವೂ ಇಲ್ಲಿನ ವ್ಯವಸ್ಥೆ ಸುಧಾರಣೆಯಾಗಿಲ್ಲ. ಮಂಗಳವಾರ ಬ್ಯಾಂಕ್‌ ಬಾಗಿಲು ತೆರೆದು ಸೇವೆ ಆರಂಭಕ್ಕೆ 10.30  ಆದರೂ ಆಗಿಲ್ಲ ಎಂದು ಗ್ರಾಹಕರು ದೂರಿದ್ದಾರೆ.

ಗುತ್ತಿಗಾರಿನ ಕೆನರಾ ಬ್ಯಾಂಕ್‌ ಬೆಳಗ್ಗೆ 10.30  ಸಮಯದ ಹೊತ್ತಿನಲ್ಲೂ ಬಾಗಿಲು ತೆರೆಯದೆ , ಸಿಬಂದಿಗಳು ಆಗಮಿಸದೇ ಇರುವ ಕಾರಣದಿಂದ ಗ್ರಾಹಕರು ಬ್ಯಾಂಕ್‌ ಮುಂದೆ ನಿಂತಿರುವ ಬಗ್ಗೆ ಬ್ಯಾಂಕ್‌ ಗೆ ತೆರಳಿದ ಗ್ರಾಹಕರು ತಿಳಿಸಿದ್ದಾರೆ. ಹೀಗಾಗಿ ಮನವಿ ನೀಡಿದ ಬಳಿಕ ಹೋರಾಟದ ರೂಪುರೇಷೆ ತಯಾರಿಸಲಾಗುವುದು
. – ಶಿವರಾಮ ಕರುವಜೆ, ಅಧ್ಯಕ್ಷರು, ವರ್ತಕ ಸಂಘ ಗುತ್ತಿಗಾರು

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 02-10-2026 | ಸುಳ್ಯದಲ್ಲಿ 100 ಮಿ.ಮೀ.ವರೆಗೆ ಮಳೆ – ಕರಾವಳಿ–ಮಲೆನಾಡಿನಲ್ಲಿ ಮುಂದಿನ 10 ದಿನವೂ ಮಳೆಯ ಸಾಧ್ಯತೆ
October 2, 2026
12:46 PM
by: ಸಾಯಿಶೇಖರ್ ಕರಿಕಳ
ಕಬ್ಬು ಬೆಳೆಗಾರರ ಹಿತರಕ್ಷಣೆಗೆ ಕೇಂದ್ರ ಸರ್ಕಾರ ಬದ್ಧ: ಎಥೆನಾಲ್ ಖರೀದಿ 1,200 ಕೋಟಿ ಲೀಟರ್‌ಗೆ ಏರಿಕೆ
October 2, 2026
7:41 AM
by: ದ ರೂರಲ್ ಮಿರರ್.ಕಾಂ
ಅಂತಾರಾಷ್ಟ್ರೀಯ ಕಾಫಿ ದಿನಾಚರಣೆ – ಕಾಫಿ ಬಗ್ಗೆ ಜಾಗೃತಿಗೆ ಚಿಕ್ಕಮಗಳೂರಿನಲ್ಲಿ ಸೈಕಲ್ ಜಾಥಾ
October 2, 2026
7:28 AM
by: ದ ರೂರಲ್ ಮಿರರ್.ಕಾಂ
ಏಷ್ಯನ್ ಗೇಮ್ಸ್‌ ಕ್ರಿಕೆಟ್‌ : ಚಿನ್ನದ ಪದಕಕ್ಕಾಗಿ ಭಾರತ–ಪಾಕಿಸ್ತಾನ ಫೈನಲ್‌
October 2, 2026
7:03 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror