ರೈತರಿಗೆ ಶಾಕಿಂಗ್ ನ್ಯೂಸ್ | ಕೃಷಿ ಪಂಪ್‌ಸೆಟ್‌ಗಳಿಗೆ ಟ್ರಾನ್ಸ್‌ಫಾರ್ಮರ್ ಸಹಿತ ಉಚಿತ ಮೂಲಸೌಕರ್ಯ ಯೋಜನೆ ರದ್ದು |

November 3, 2023
1:53 PM
ರೈತರ ಪಂಪ್‌ಸೆಟ್‌ಗಳಿಗೆ ಟಿಸಿ ಮತ್ತಿತರ ಮೂಲ ಸೌಕರ್ಯಗಳನ್ನು ಉಚಿತವಾಗಿ ಅಳವಡಿಸುವ ಯೋಜನೆಯನ್ನು ಸರ್ಕಾರ ರದ್ದುಗೊಳಿಸಲು ನಿರ್ಧರಿಸಿದೆ.

ಸೆಪ್ಟೆಂಬರ್ 22, 2023 ರ ಬಳಿಕ ಕೊರೆದ ಅಥವಾ ನೋಂದಣಿಯಾದ ಹೊಸ ಕೊಳವೆ ಬಾವಿಗಳ(Bore well) ರೈತರಿಗೆ(Farmer) ತಾವೇ ಖರ್ಚು ಮಾಡಿ ವಿದ್ಯುತ್ ಸಂಪರ್ಕ ಪಡೆಯಬೇಕಾಗಿದೆ. ಇದರಿಂದ ಕನಿಷ್ಠವೆಂದರೂ ರೈತರಿಗೆ 2 ಲಕ್ಷದಷ್ಟು ಹೊರೆಯಾಗಲಿದೆ. ಕೃಷಿ ಪಂಪ್‌ಸೆಟ್‌ಗಳಿಗೆ ಉಚಿತ ಟ್ರಾನ್ಸ್‌ಫಾರ್ಮ್ ಗಳ ಮೂಲಕ ವಿದ್ಯುತ್ ನೀಡುತ್ತಿದ್ದದ್ದು, ಸರ್ಕಾರದ ಬೊಕ್ಕಸಕ್ಕೆ ಹೊರೆಯಾದ ಕಾರಣ ಈ ನಿರ್ಧಾರಕ್ಕೆ ಬಂದಿದೆ. ಹೀಗಾಗಿ ಸರಕಾರ ಅಕ್ರಮ ಸಕ್ರಮ ಮತ್ತು ಶೀಘ್ರ ವಿದ್ಯುತ್ ಯೋಜನೆ ಸವಲತ್ತು ಸ್ಥಗಿತಗೊಳಿಸಿದೆ.

Advertisement
Advertisement

ರಾಜ್ಯ ಸರ್ಕಾರ ಈ ಹಿಂದೆ ಕೃಷಿ ಪಂಪ್ ಸೆಟ್ ಗಳಿಗೆ ಟ್ರಾನ್ಸ್ ಫಾರ್ಮರ್ ಸಮೇತ ಉಚಿತವಾಗಿ ಮೂಲ ಸೌಕರ್ಯವನ್ನು ಒದಗಿಸುವ ಯೋಜನೆಯನ್ನು ಜಾರಿಗೊಳಿಸುವುದಾಗಿ ರಾಜ್ಯ ಸರ್ಕಾರ ಘೋಷಿಸಿತ್ತು. ಆದರೆ ಸದ್ಯ ಸರ್ಕಾರ ಈ ಯೋಜನೆಯ ಕುರಿತು ರೈತರಿಗೆ ಶಾಕ್ ನೀಡಿದೆ. ಅಕ್ರಮ ಸಕ್ರಮ(Illegal is legal) ಯೋಜನೆಯಡಿ ಕೃಷಿ ಪಂಪ್ ಸೆಟ್ ಗಳಿಗೆ ಉಚಿತ ಟ್ರಾನ್ಸ್ ಫಾರ್ಮರ್(Transformer) ಸಹಿತ ಮೂಲ ಸೌಕರ್ಯ ನೀಡುವುದನ್ನು ಸರ್ಕಾರ ಕಡಿತಗೊಳಿಸಿದೆ, ಕೃಷಿ ಪಂಪ್ ಸೆಟ್(Agricultural pump set) ಗಳಿಗೆ ವಿದ್ಯುತ್ ಸಂಪರ್ಕ ಸಹಿತ ಟ್ರಾನ್ಸ್ ಫಾರ್ಮರ್ (TC) ಅನ್ನು ಸ್ವಂತ ಖರ್ಚಿನಲ್ಲೇ ಪಡೆಯಬೇಕಿದೆ. ಈ ಮೊದಲು ಅಕ್ರಮ ಸಕ್ರಮ ವಿದ್ಯುತ್ ಯೋಜನೆಯಡಿ ರೈತರಿಂದ ಪ್ರತಿ ಕೊಳವೆ ಬಾವಿಗೆ ಶುಲ್ಕದ ರೂಪದಲ್ಲಿ 24000 ರೂ. ಮಾತ್ರ ಕಟ್ಟಿಸಿಕೊಳ್ಳುತ್ತಿತ್ತು. ಸದ್ಯ ರಾಜ್ಯ ಸರ್ಕಾರ ಈ ಯೋಜನೆಯನ್ನು ರದ್ದು ಮಾಡಿದೆ. ಇಂಧನ ಇಲಾಖೆ ಆದೇಶ ಪ್ರಕಾರ 2023ರ ಸೆ.22ಕ್ಕೂ ಮುನ್ನ ವಿದ್ಯುತ್‌ ಸಂಪರ್ಕಕ್ಕಾಗಿ ನೋಂದಣಿ ಮಾಡಿಸಿರುವ ರೈತರಿಗೆ ಯಾವುದೇ ರೀತಿಯ ಸಮಸ್ಯೆ ಆಗಲ್ಲ. ಸೆ.22ರ ನಂತರ ನೋಂದಣಿಯಾದ ರೈತರಿಗೆ ವಿದ್ಯುತ್‌ ಸಂಪರ್ಕವು ದುಬಾರಿಯಾಗಲಿದೆ.

ಇದಕ್ಕೂ ಮೊದಲು ರಾಜ್ಯ ಸರ್ಕಾರದ ಶೀಘ್ರ ವಿದ್ಯುತ್ ಮತ್ತು ಅಕ್ರಮ ಸಕ್ರಮ ಯೋಜನೆ ರೂಪಿಸಿತ್ತು. ಕೃಷಿ ಪಂಪ್‌ಸೆಟ್‌ಗಳಿಗೆ ಫ್ರೀ ಟ್ರಾನ್ಸ್‌ಫಾರ್ಮರ್‌ ಜೊತೆಗೆ ಮೂಲಸೌಕರ್ಯ ಒದಗಿಸುವುದು ಸರಕಾರದ ಖಜಾನೆಗೆ ದೊಡ್ಡ ಆರ್ಥಿಕ ಹೊರೆಯಾಗಿತ್ತು. ಟ್ರಾನ್ಸ್‌ಫಾರ್ಮರ್‌ಗಳ ಖರೀದಿ, ದುರಸ್ತಿ, ನಿರ್ವಹಣೆ ಮತ್ತು ಬದಲಾವಣೆಗೆ ಇಂಧನ ಇಲಾಖೆಯು ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿದೆ. ಈ ಆರ್ಥಿಕ ಹೊರೆ ತಪ್ಪಿಸಲು ಸರಕಾರ, ಅಕ್ರಮ ಸಕ್ರಮ ಮತ್ತು ಶೀಘ್ರ ವಿದ್ಯುತ್‌ ಯೋಜನೆಯ ಸೌಕರ್ಯ ನಿಲ್ಲಿಸಲು ಮುಂದಾಗಿದೆ. ರಾಜ್ಯ ಸರ್ಕಾರ ಉಚಿತ ಟಿಸಿ‌ ನೀಡುವ ಯೋಜನೆಯನ್ನು ರದ್ದುಗೊಳಿಸಿದೆ. ರೈತರು ಹೊಸದಾಗಿ ಕೊಳವೆ ಬಾವಿ ಕೊರೆದ್ರೆ, ಸ್ವಂತ ಖರ್ಚಿನಲ್ಲಿಯೇ ಟಿಸಿ ವ್ಯವಸ್ಥೆ ಮಾಡಿಕೊಳ್ಳಬೇಕಿದೆ. ಈಗ ಇದ್ದಕ್ಕಿದ್ದಂತೆ ಈ ಎರಡೂ ಯೋಜನೆಗಳನ್ನು ನಿಲ್ಲಿಸಲು ಹೊರಟಿರುವ ಸರಕಾರ ರೈತರನ್ನು ಆರ್ಥಿಕ ಇಕ್ಕಟ್ಟಿಗೆ ದೂಡಿದೆ.

– ಅಂತರ್ಜಾಲ ಮಾಹಿತಿ

Farmers of new bore wells drilled or registered after September 22, 2023 need to get electricity connection at their own expense. This will burden the farmers at least 2 lakhs. This decision has been taken because the government was burdened by providing power to agricultural pumpsets through free transformers. Therefore, the government has suspended the privilege of illegal, regular and fast electricity projects.

Advertisement
Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಲಡಾಖ್‌ನ ದ್ರಾಸುದಲ್ಲಿ ಕಾರ್ಗಿಲ್ ವಿಜಯ್ ದಿವಸ್ ಆಚರಣೆ| ವೀರಯೋಧರಿಗೆ ಪಾದಯಾತ್ರೆ ಮೂಲಕ ಗೌರವ
July 26, 2025
3:16 PM
by: The Rural Mirror ಸುದ್ದಿಜಾಲ
ಬದುಕಿಗೆ ಧರ್ಮದ ತಳಹದಿ ಅಗತ್ಯ : ರಾಘವೇಶ್ವರ ಶ್ರೀ
July 26, 2025
2:08 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 26-07-2025 | ಜುಲೈ ಅಂತ್ಯದವರೆಗೂ ಸಾಮಾನ್ಯ ಮಳೆ | ಕಾರಣ ಏನು ?
July 26, 2025
11:18 AM
by: ಸಾಯಿಶೇಖರ್ ಕರಿಕಳ
ಹವಾಮಾನ ಸಂಕಷ್ಟ | ಆಹಾರ ಬೆಲೆಗಳ ಏರಿಳಿತಕ್ಕೆ ಕಾರಣ ಏನು ? – ಅಧ್ಯಯನ ವರದಿ
July 26, 2025
8:18 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group