ಕೇಶದಾನ ಶಿಬಿರ ಮತ್ತು ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮ

November 11, 2022
2:23 PM
ಎನ್‌.ಎಸ್‌.ಎಸ್ ಮತ್ತು ವೈ.ಆರ್‌.ಸಿ, ಐ.ಎಸ್‌.ಟಿ.ಇ ಅಧ್ಯಕ್ಷರು ಕೆ.ಎಂ.ಸಿ ಆಸ್ಪತ್ರೆ ಮಂಗಳೂರು ಮತ್ತು ಸೀಡ್ಸ್ ಆಫ್ ಹೋಪ್ ಸಹಯೋಗದಲ್ಲಿ  ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಏಂಡ್ ಟೆಕ್ನಾಲಜಿಯಲ್ಲಿ ಕೇಶದಾನ ಶಿಬಿರ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಕನ್ಸಲ್ಟೆಂಟ್  ಸರ್ಜಿಕಲ್ ಒಂಕಾಲೊಜಿಸ್ಟ್ ಡಾ.ಕಾರ್ತಿಕ್ ಕೆ. ಎಸ್ ಇವರು ಕ್ಯಾನ್ಸರ್ ಜಾಗೃತಿಯ ಮಹತ್ವದ ಕುರಿತು ಸಂಕ್ಷಿಪ್ತ ಮಾಹಿತಿಯನ್ನು ನೀಡಿದರು. ಡಾ.ಸುರೇಶ್ ಪುತ್ತೂರಾಯ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಇಶಾ ಮತ್ತು ಕನ್ಯಾ ಮುಖ್ಯ ಅತಿಥಿಗಳಾಗಿ ಸೀಡ್ಸ್ ಆಫ್ ಹೋಪ್ ತಂಡವನ್ನು ಪ್ರತಿನಿಧಿಸಿದರು.
ಕೇಶವ ಪ್ರಸಾದ್ ಮುಳಿಯ  ಉಪಸ್ಥಿತರಿದ್ದು ತಮ್ಮ ಬೆಂಬಲವನ್ನು ನೀಡಿದರು. MLBA, ಪುತ್ತೂರಿನ ಸಂಯೋಜಕರಾದ  ನಿಶ್ಚಲ ಆಳ್ವ ಉಪಸ್ಥಿತರಿದ್ದರು. ಇವರು ದಾನಿಗಳ ಕೂದಲನ್ನು ಕತ್ತರಿಸುವ ಮೂಲಕ ಕಾರ್ಯಕ್ರಮಕ್ಕೆ ವಿಶೇಷವಾದ ಚಾಲನೆ ನೀಡಿದರು. ಸಂಸ್ಥೆಯು ಇವರಿಗೆ  ವಿಶೇಷ ಧನ್ಯವಾದಗಳನ್ನು ಅರ್ಪಿಸಿತು.
ವಿ.ಸಿ.ಇ.ಟಿ. ಸಂಯೋಜಕರು ಕಾರ್ಯಕ್ರಮವನ್ನು ಉತ್ತಮವಾಗಿ ನಡೆಸಿಕೊಟ್ಟರು. ಶಿಕ್ಷಕರು, ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 16 ದಾನಿಗಳು ಪಾಲ್ಗೊಂಡಿದ್ದರು. ಕೇಶದಾನ ಶಿಬಿರವನ್ನು ‘ಸೀಡ್ಸ್ ಆಫ್ ಹೋಪ್’ ತಂಡ ವು ಬಹಳ ಯಶಸ್ವಿಯಾಗಿ ಆಯೋಜಿಸಿದ್ದು, ದಾನಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಮಕ್ಕಳ ಪುಟ | ನಿಮ್ಮ ಚಿತ್ರ-ನಮ್ಮ ಬೆಳಕು | ಕುಶಾಲಿ ಗೌಡ, ಬೆಂಗಳೂರು
July 16, 2025
10:47 PM
by: ದ ರೂರಲ್ ಮಿರರ್.ಕಾಂ
ಮಕ್ಕಳ ಪುಟ | ನಿಮ್ಮ ಚಿತ್ರ-ನಮ್ಮ ಬೆಳಕು | ಅನ್ವಿತಾ ಸಿ
July 16, 2025
10:39 PM
by: ದ ರೂರಲ್ ಮಿರರ್.ಕಾಂ
ಕರಾವಳಿ ಕರ್ನಾಟಕ, ಕೇರಳ ಭಾರೀ ಮಳೆ ಸಾಧ್ಯತೆ
July 16, 2025
10:18 PM
by: The Rural Mirror ಸುದ್ದಿಜಾಲ
ಕರಾವಳಿ-ಕೊಡಗು ಜಿಲ್ಲೆಗಳಲ್ಲಿ ಭಾರೀ ಮಳೆ | ಶಾಲೆಗಳಿಗೆ ಜು.17 ರಂದು ರಜೆ
July 16, 2025
10:07 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group