Advertisement
Rural Mirror - ಅತಿಥಿ

ಆಯುರ್ವೇದ ಪಂಚಗವ್ಯ ಚಿಕಿತ್ಸೆ ಇದ್ದರೆ ಕ್ಯಾನ್ಸರ್‌ ಭಯ ಬೇಡ |

Share

ಜಗತ್ತಿನಾದ್ಯಂತ ಇಂದು ಭಯಪಡುವ ಕಾಯಿಲೆ ಕ್ಯಾನ್ಸರ್.‌ ಕ್ಯಾನ್ಸರ್‌ ರೋಗದ ಲಕ್ಷಣ ಎಂದರೇ ಸಾಕು ಬಹುಪಾಲು ಮಂದಿ ಭಯದಿಂದಲೇ ಬದುಕಿನ ಅರ್ಧ ಭರವಸೆ ಕಳೆದುಕೊಳ್ಳುತ್ತಿದ್ದಾರೆ. ಇನ್ನೊಂದಿಷ್ಟು ಮಂದಿ ಕ್ಯಾನ್ಸರ್‌ ಚಿಕಿತ್ಸೆಗೆ ಹೋಗುತ್ತಲೇ ಭಯಪಡುತ್ತಾ ಇನ್ನರ್ಧ ಬದುಕಿನ ಭರವಸೆ ಕಳೆದುಕೊಳ್ಳುತ್ತಾರೆ. ಆದರೆ, ಕ್ಯಾನ್ಸರ್‌ಗೆ ಭಯ ಪಡುವ ಬದಲಾಗಿ ಭರವಸೆಯ ಬದುಕು ಸಾಗಿಸಬೇಕಿದೆ, ಚಿಕಿತ್ಸೆಯ ಧನಾತ್ಮಕ ಹೋರಾಟಗಳ ಮೂಲಕ ಉತ್ತಮ ಫಲಿತಾಂಶಗಳೂ ಲಭ್ಯವಾದ ಅನೇಕ ಉದಾಹರಣೆಗಳು ಇವೆ. ಕ್ಯಾನ್ಸರ್‌ಗೆ ಬದುಕೇ ಸೋಲುವುದಿಲ್ಲ, ಸೋಲದಂತೆ ತಡೆಯುವ ಚಿಕಿತ್ಸೆಯೂ ಇದೆ. ಆಯುರ್ವೇದದಲ್ಲಿ ಅಂತಹ ಚಿಕಿತ್ಸೆಗಳಲ್ಲಿ ಪಂಚಗವ್ಯ ಚಿಕಿತ್ಸೆ ಕೂಡಾ ಒಂದು. ರೋಗಿಯ ಮಾನಸಿಕ ಸ್ಥೈರ್ಯವನ್ನು ಹೆಚ್ಚಿಸುತ್ತಾ ಚಿಕಿತ್ಸೆ ನೀಡುತ್ತಿದ್ದಾರೆ  ಬಿಎಎಂಎಸ್‌ ವೈದ್ಯ ಡಾ.‌ ಡಿ ಪಿ ರಮೇಶ್. ಅವರ ಜೊತೆಗಿನ ವಿಶೇಷ ಸಂದರ್ಶನ ಇಲ್ಲಿದೆ… …..ಮುಂದೆ ಓದಿ….

Advertisement
Advertisement
Advertisement
ಪಂಚಗವ್ಯ ಚಿಕಿತ್ಸೆ ಎಂದರೆ ಹೊಸದಾದ ಚಿಕಿತ್ಸೆ ಏನೂ ಅಲ್ಲ. ಬಹಳ ಹಿಂದಿನಿಂದಲೂ ಈ ಚಿಕಿತ್ಸಾ ಪದ್ದತಿ, ಔಷಧಿ  ಇದೆ. ಆಯುರ್ವೇದ ವೈದ್ಯಕೀಯ ಶಾಸ್ತ್ರದಲ್ಲಿ ಈ ಬಗ್ಗೆ ಉಲ್ಲೇಖವಿದೆ.ಆಯುರ್ವೇದ ಶಾಸ್ತ್ರವು ಪಂಗಚವ್ಯ ಆಧಾರದಲ್ಲಿ ನಿಂತಿದೆ. ಎಲ್ಲಾ ಔಷಧಿಗಳ ಸಂಸ್ಕಾರವು ಗೋಮೂತ್ರ, ಗೋಮಯದಿಂದ ಮಾಡಲಾಗುತ್ತದೆ. ಎಲ್ಲಾ ಆಯುರ್ವೇದ ಔಷಧಿಯು ಒಂದಿಲ್ಲೊಂದು ಗೋವಿನ ಉತ್ಪನ್ನ ಬಳಕೆಯಾಗುತ್ತದೆ. ಇಲ್ಲಿ  ತ್ರಿದೋಷಗಳನ್ನು ಗಮನಿಸಿ ಅವುಗಳ ಏರುಪೇರುಗಳ ನೋಡಿ ಚಿಕಿತ್ಸೆ ನೀಡಲಾಗುತ್ತದೆ. ಪುರಾತನ ವೈದ್ಯ ಪದ್ದತಿಯ ವಿಧಾನ ಅಷ್ಟೇ. ಅದರಲ್ಲಿ ಪಂಚಗವ್ಯ ಚಿಕಿತ್ಸೆ ಇದೆ.
ಪಂಚಗವ್ಯ ಚಿಕಿತ್ಸೆಯು ಕ್ಯಾನ್ಸರ್‌ ರೋಗ ಅಂತಲ್ಲ, ಎಲ್ಲಾ ರೋಗಗಳಿಗೂ ಔಷಧವಾಗಿ ಬಳಕೆ ಮಾಡಲಾಗುತ್ತದೆ. ಇಂದು ಕ್ಯಾನ್ಸರ್‌ ಒಂದು ಸಾಮಾನ್ಯ ರೋಗವಾಗಿ ಜಗತ್ತನೆಲ್ಲೆಡೆ ಇದೆ. ಯಾವುದೇ ಸಮಸ್ಯೆ ಆಗಿ ಆಸ್ಪತ್ರೆಗೆ ತಪಾಸಣೆಗೆ ಹೋದಾಗ ಕ್ಯಾನ್ಸರ್‌ ಎನ್ನುವ ವರದಿ ಬರುತ್ತದೆ. ಇದಕ್ಕೆ ಪ್ರಮುಖ ಕಾರಣ ನಮ್ಮ ಪ್ರಕೃತಿ. ಪ್ರಕೃತಿಯ ಏರುಪೇರಿನ ಕಾರಣದಿಂದ ಆಹಾರ ಪದ್ದತಿ, ಜೀವನ ಪದ್ದತಿಯೇ ವ್ಯತ್ಯಾಸ ಆಗಿದೆ. ಅದೇ ಕ್ಯಾನ್ಸರ್‌ಗೆ ಕಾರಣ. ಈ ಮಾರಾಣಾಂತಿಕ ಕಾಯಿಲೆಗೆ ಕಾಣಲು ನಾವು ಸೇವಿಸುವ ಗಾಳಿ, ಆಹಾರ, ನೀರು ವಿಷವಾಗಿದೆ. ಒಂದಿಲ್ಲೊಂದು ರೂಪದಲ್ಲಿ ದೇಹಕ್ಕೆ ಹೋಗುತ್ತದೆ. ಹೀಗಾಗಿ  ಇಂದು ಎಲ್ಲಾ ವ್ಯಕ್ತಿಗಳಲ್ಲೂ ಕ್ಯಾನ್ಸರ್‌ ಕಣಗಳು ಇವೆ. ದೇಹದ ಆಯಾ ಭಾಗಕ್ಕೆ ಹೊಂದಿಕೊಂಡು ಕ್ಯಾನ್ಸರ್‌ ಮಾರ್ಕರ್‌ ನಿಗದಿ ಮಾಡಲಾಗಿದೆ. ಈಗ ಪರಿಸರವೇ ವಿಷವಾದ ಕಾರಣದಿಂದ ಮಾರ್ಕರ್‌ ಬದಲಾಗುತ್ತಿದೆ. ಆಹಾರ ಸೇವನೆಯಲ್ಲಿ ಚಿಕ್ಕಮಕ್ಕಳಿಗೆ ನೀಡುವುದು, ಕಾಲೇಜು ಹೋಗುವಾಗ, ವಯಸ್ಸಾದ ಮೇಲೆ ಕೊಡುವ ಆಹಾರವು ವಿಷವಾಗುತ್ತಿದೆ.
ಕ್ಯಾನ್ಸರ್‌ಗೆ ಹಲವು ಔಷಧಿಗಳು ಇವೆ. ಈ ಮಾರಣಾಂತಿಕ ಕಾಯಿಲೆಗೆ ಮಾನ್ಯತೆ ಪಡೆದ ಚಿಕಿತ್ಸಾ ಪದ್ಧತಿಯಲ್ಲಿ ಚಿಕಿತ್ಸೆ ನೀಡಬೇಕು ಎಂದು WHO ಹೇಳಿದೆ. ಆದರೆ ಈಗ ಹಾಗಾಗುತ್ತಿಲ್ಲ. ಆಯುರ್ವೇದ ಪದ್ದತಿಯ ಮೂಲಕ ತ್ರಿದೋಷಗಳನ್ನು ನೋಡಿ ಚಿಕಿತ್ಸೆ, ವ್ಯಕ್ತಿಗೆ ಚಿಕಿತ್ಸೆಯನ್ನು ನೀಡಲಾಗುತ್ತದೆ. ಈ ಚಿಕಿತ್ಸೆಯು ಯಾವುದೇ ಅಡ್ಡ ಪರಿಣಾಮ ಇಲ್ಲದೆಯೇ ಪಂಚಗವ್ಯ ಚಿಕಿತ್ಸೆಯಿಂದ ಪರಿಹಾರ ನೀಡಬಹುದಾಗಿದೆ. ಹಾಲು, ಮೊಸರು, ಮಜ್ಜಿಗೆ, ಬೆಣ್ಣೆ, ತುಪ್ಪ ಇದೆಲ್ಲಾ ಪಂಚಗವ್ಯ ಹೌದು. ಆದರೆ ಯಾವುದೇ ಔಷಧಿ ಪಡೆಯುವಾಗ ಅದಕ್ಕೆ ಮಿತಿ ಇದೆ. ಅದರ ಆಧಾರದಲ್ಲಿಯೇ ಪಡೆಯಬೇಕು. ಯಾವುದೇ ಔಷಧಿಯನ್ನು ಆಯುರ್ವೇದಲ್ಲಿ ತೆಗೆದುಕೊಳ್ಳುವಾಗಲೂ ಇದೇ ಪಂಚಗವ್ಯದಿಂದಲೇ ತೆಗೆಯುವುದು.  ಯಾವುದೇ ದೇಸೀ ತಳಿಯ ಹಾಲಿನಲ್ಲಿ ಔಷಧಿ ಇದೆ ಎನ್ನುವುದು ಈಗಾಗಲೇ ದೃಢಪಟ್ಟಿದೆ. ದೇಸೀ ತಳಿಯ ಹಾಲು ಕುಡಿದರೆ  ಕ್ಯಾಲ್ಸಿಯಂ ಮಾತ್ರವಲ್ಲ ಎಲ್ಲವೂ ಲಭ್ಯವಾಗುತ್ತದೆ. ಆದರೆ ಸಮಾಜ ಇದಕ್ಕೆ ಮಾನ್ಯತೆ ನೀಡುತ್ತಿಲ್ಲ. ಇಂದು ಕ್ಯಾನ್ಸರ್‌ ಗೆ ಕೂಡಾ ಪಂಚಗವ್ಯದಿಂದ ಪರಿಹಾರ ಇದೆ. ಈ ಮಾರ್ಗದಲ್ಲಿ ಹೋಗಿ ಚಿಕಿತ್ಸೆ ಪಡೆಯಲು ಸಮಾಜದಲ್ಲಿ ಆ ಮಾನಸಿಕ ಸ್ಥಿತಿ ಇಲ್ಲ.
ಗೋಮೂತ್ರ ಕೂಡಾ ಕೀಮೋಥೆರಪಿಯಷ್ಟೇ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಅಂದರೆ ಗೋಅರ್ಕವು ಶೋಧನ-ತೀಕ್ಣ- ಉಷ್ಣ-ಬೇಧನದ ಅಂಶಗಳು ಇದರಲ್ಲಿದೆ. ಆದರೆ ರೋಗ ನೋಡಿ ಚಿಕಿತ್ಸೆ ನೀಡಬೇಕು. ಅದು ದೇಹದಲ್ಲಿನ ಕಲ್ಮಶ ಹೊರಹಾಕುತ್ತದೆ.ಹೀಗಾಗಿ ಅರ್ಬುದವನ್ನೂ ನಿಯಂತ್ರಣ ಮಾಡುತ್ತದೆ.
ಕೀಮೋಥೆರಪಿಯಷ್ಟೇ ಪರಿಣಾಮಕಾರಿಯಾಗಿ ಪಂಚಗವ್ಯ ಚಿಕಿತ್ಸೆಯಿಂದ ರೋಗಿಗಳು ಕ್ಯಾನ್ಸರ್‌ನಿಂದ ನಿಯಂತ್ರಣವಾಗಿರುವ ಹಲವಾರು ಉದಾಹರಣೆಗಳು ಇವೆ. ಉಪ್ಪಿನಂಗಡಿಯ ಭಟ್‌ ನರ್ಸಿಂಗ್‌ ಹೋಮ್‌ ಹಾಗೂ ಹಲವು ಕಡೆಯ ಚಿಕಿತ್ಸಾ ಕೇಂದ್ರಗಳಿಗೆ ಬರುವ ರೋಗಿಗಳನ್ನೇ ಗಮನಿಸಿದರೆ  ನಿಯಂತ್ರಣದಲ್ಲಿರುವುದು ಹಾಗೂ ಆರೋಗ್ಯವಾಗಿ ಓಡಾಟ ನಡೆಸುವುದು ಕಂಡುಬಂದಿದೆ.ಅಂತಿಮ ಹಂತದಲ್ಲಿ ಇರುವ ರೋಗಿಗಳೂ ಕೂಡಾ ಇಂದು ಪಂಚಗವ್ಯ ಚಿಕಿತ್ಸೆಯ ಮೂಲಕ ಸಾಮಾನ್ಯ ಜೀವನ ಮಾಡಿರುವ ಉದಾಹರಣೆ ಇದೆ.
ಕ್ಯಾನ್ಸರ್‌ ರೋಗಿ ಇದ್ದರೆ ಇಡೀ ಕುಟುಂಬವೇ ಚಿಕಿತ್ಸೆಯ ನೆಪದಲ್ಲಿ ಬೀದಿಗೆ ಬರುವ ಸಾಧ್ಯತೆಯೇ ಹೆಚ್ಚಾಗಿರುತ್ತದೆ, ಅಂತಹ ಉದಾಹರಣೆಗಳೇ ಹೆಚ್ಚಾಗಿರುತ್ತದೆ. ಆದರೆ ಆಯುರ್ವೇದ ಚಿಕಿತ್ಸೆಯಲ್ಲಿ ಅಂತಹ ಯಾವುದೇ ಸಮಸ್ಯೆ ಇಲ್ಲದೆ ರೋಗಿಗಳು ಹಾಗೂ ಅವರ ಕುಟುಂಬವು ಬದುವುದಕ್ಕೆ ಸಾಧ್ಯವಿದೆ. ಇಲ್ಲಿ ಕ್ಯಾನ್ಸರ್‌ ರೋಗಿಗೆ ಇಮ್ಯುನಿಟಿ ಹೆಚ್ಚು ಮಾಡುವುದರ ಜೊತೆಗೆ ವಿಲ್‌ ಪವರ್‌ ಜಾಸ್ತಿ ಮಾಡುವುದು ಹಾಗೂ ಟಾರ್ಗೆಟೆಂಡ್‌ ಆಗಿ ಪ್ರಕೃತಿಗೆ ಅನುಗುಣವಾಗಿ ಆಯುರ್ವೇದ ದ ಮೂಲಕ ಚಿಕಿತ್ಸೆ ನೀಡುವುದು ಇಲ್ಲಿನ ಪದ್ಧತಿ.
ಕ್ಯಾನ್ಸರ್‌ ಬಗ್ಗೆ ಜನರಿಗೆ ಜಾಗೃತಿಯಾಗಬೇಕು ಎನ್ನುವ ಕಾರಣದಿಂದ ಗೋಸೇವಾ ಗತಿವಿಧಿಯ ನೆರವಿನಿಂದ ಹಲವು ಕಡೆ ಜಾಗೃತಿ ಶಿಬಿರ, ಕ್ಯಾಂಪ್‌ಗಳನ್ನು ಮಾಡಲಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸದ್ಯ ಉಪ್ಪಿನಂಗಡಿಯ ಭಟ್‌ ನರ್ಸಿಂಗ್‌ ಹೋಂ, ಮಂಗಳೂರಿನ ಶಾರದಾ ಆಯುರ್ವೇದ ಮೆಡಿಕಲ್ ಕಾಲೇಜು, ಪುತ್ತೂರಿನ ಸುಶ್ರುತ ಆಯುರ್ವೇದ ಆಸ್ಪತ್ರೆಯಲ್ಲಿ ಚಿಕಿತ್ಸೆ ಇರುತ್ತದೆ. ಉಳಿದಂತೆ ರಾಜ್ಯದ  ಗದಗ, ಹುಬ್ಬಳ್ಳಿ, ಬೆಂಗಳೂರು ಮೊದಲಾದ ಕಡೆ ಚಿಕಿತ್ಸೆ ಇರುತ್ತದೆ. ದೇಶದ  ಒರಿಸ್ಸಾ, ಆಂಧ್ರಪ್ರದೇಶ, ಮಹಾರಾಷ್ಟ್ರದಲ್ಲೂ ಚಿಕಿತ್ಸೆ ನೀಡಲಾಗುತ್ತಿದೆ.

ಇದಿಷ್ಟು ಡಾ.ಡಿ ಪಿ ರಮೇಶ್‌ ಅವರು ದ ರೂರಲ್‌ ಮಿರರ್.ಕಾಂ ಜೊತೆ ಮಾತನಾಡಿರುವ ಸಾರಾಂಶ. ಅವರು ಮಾತನಾಡಿರುವ ವಿಡಿಯೋ ಇಲ್ಲಿದೆ……..ಮುಂದೆ ಓದಿ….

Advertisement

Advertisement
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗೋಸೇವಾ ಗತಿವಿಧಿಯ ನೆರವಿನಿಂದ ಕ್ಯಾನ್ಸರ್‌ ರೋಗ ಹಾಗೂ ಇತರ ರೋಗಗಳಿಗೆ ಪಂಚಗವ್ಯ ಚಿಕಿತ್ಸಾ ಶಿಬಿರವನ್ನು ನಡೆಸಲಾಗುತ್ತಿದೆ. ವಿಶೇಷವಾಗಿ ಚರ್ಮರೋಗಗಳಿಗೆ ಉಪ್ಪಿನಂಗಡಿಯ ಭಟ್‌ ನರ್ಸಿಂಗ್‌ ಹೋಂನಲ್ಲಿ ನಾವು ಪಂಚಗವ್ಯ ಚಿಕಿತ್ಸೆ ನೀಡುತ್ತಿದ್ದೇವೆ. ಈಗ ಕ್ಯಾನ್ಸರ್‌ ರೋಗಿಗಳು ಆಗಮಿಸುತ್ತಿದ್ದಾರೆ. ಚಿಕಿತ್ಸೆಗಳು ನಡೆಯುತ್ತಿದೆ. ಡಾ.ಸುಪ್ರೀತ್‌ ಜೆ ಲೋಬೋ,  ಎಂ ಎಸ್(ಆಯು), ಪಿಎಚ್‌ ಡಿ

The benefits of panchagavya treatment for cancer patients from Dr. DP Ramesh, a highly esteemed BAMS doctor. Discover how Ayurveda can enhance mental well-being and promote overall health throughout cancer treatment.

Advertisement

Cow urine is just as effective as chemotherapy in treating cancer. This is because Goarka contains elements of Shodhana-Tikna-Thermal-Bedhana. However, it is important to seek proper treatment for the disease. Cow urine helps remove impurities from the body and can help control inflammation.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

Published by
ಮಹೇಶ್ ಪುಚ್ಚಪ್ಪಾಡಿ

Recent Posts

ಕ್ಯಾಂಪ್ಕೋ ತಯಾರಿಕೆಯ ಕೊಬ್ಬರಿ ಎಣ್ಣೆ “ಕಲ್ಪ” 5 ಲೀಟರ್ ಕ್ಯಾನ್ ಬಿಡುಗಡೆ

ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…

2 days ago

ಮುಂಜಾನೆ ಏಳಬೇಕು, ಬೇಗನೇ ಏಳಬೇಕು

ಮುಂಜಾನೆಯ ಸಮಯದಲ್ಲಿ ಸ್ಥಬ್ಧವೆನ್ನಿಸುವ ವಾತಾವರಣದಲ್ಲೂ ಸಾಕಷ್ಟು ಹಕ್ಕಿಗಳ ಚಿಲಿಪಿಲಿ ಶಬ್ದ ಕೇಳುತ್ತಿರುತ್ತದೆ. ಆದರೆ…

2 days ago

ಹವಾಮಾನ ವರದಿ | 15-01-2025 | ಕೆಲವು ಕಡೆ ಇಂದೂ ತುಂತುರು ಮಳೆ ಸಾಧ್ಯತೆ |

ದಕ್ಷಿಣ ಬಂಗಾಳಕೊಲ್ಲಿಯಲ್ಲಿ ಸಣ್ಣ ಪ್ರಮಾಣದ ತಿರುಗುವಿಕೆ ಉಂಟಾಗುವ ಸಾಧ್ಯತೆಗಳಿದ್ದು, ಜನವರಿ 18 ರಂದು…

3 days ago

ರಾಜ್ಯದಿಂದ 3.5 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಖರೀದಿಗೆ ಕೇಂದ್ರ ಸರ್ಕಾರ ಸಮ್ಮತಿ

ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆಗೆ ರಾಜ್ಯದಿಂದ 3.5 ಲಕ್ಷ ಮೆಟ್ರಿಕ್ ಟನ್ ಹೆಚ್ಚುವರಿ…

3 days ago

ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮಕ್ಕೆ  ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಚಾಲನೆ

ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ದೇವಲಾಪುರ ಗ್ರಾಮದಲ್ಲಿ ಸಂಕ್ರಾಂತಿ ಸಂಭ್ರಮ ವಿಶೇಷ ಕಾರ್ಯಕ್ರಮ…

3 days ago

ಪ್ರಶ್ನೆಗಳಿಗೆ ಉತ್ತರ ಕೊಡಬೇಕಾದವರು ಕೊಡದಿದ್ದರೆ ಏನು ಮಾಡುವುದು..?

ನಾಗರಿಕತೆ ಬೆಳವಣಿಗೆ, ಅಭಿವೃದ್ಧಿ ಅಂದರೆ ವ್ಯಕ್ತಿತ್ವಗಳೂ ಬೆಳೆಯಬೇಕು. ಅಭಿವೃದ್ಧಿಯ ಸೂಚ್ಯಂಕವೇ ವ್ಯಕ್ತಿತ್ವದ ಬೆಳವಣಿಗೆ…

3 days ago