ಕ್ಯಾನ್ಸರ್ ಚಿಕಿತ್ಸೆಯಲ್ಲೊಂದು ಆಶಾಕಿರಣ

July 6, 2021
10:51 PM
ಕ್ಯಾನ್ಸರ್ ಎಂಬ ಪದ ಕಿವಿಗೆ ಬೀಳುತ್ತಲೇ ಭಯ ಬೀಳುವುದು  ಸಹಜ.  ದೇಹದ ಪ್ರತಿಕಣವನ್ನೂ ಹೀರಿ ಹಿಪ್ಪೆ‌ಮಾಡುವ ಕ್ಯಾನ್ಸರ್ ನ್ನು ಗೆಲ್ಲುವುದಕ್ಕೆ , ಹೋರಾಡುವುದಕ್ಕೆ ವೈದ್ಯಕೀಯ ನೆರವಿನೊಂದಿಗೆ ಮಾನಸಿಕ ಸ್ಥೈರ್ಯವೂ ಅತ್ಯಗತ್ಯ.
ಜಗತ್ತಿನಲ್ಲಿ ದಿನನಿತ್ಯ ಎಷ್ಟೋ ಸಂಶೋಧನೆಗಳು  ಆಗುತ್ತಿರುತ್ತವೆ.  ಅವುಗಳಲ್ಲಿ ಕೆಲವು ಜೀವರಕ್ಷಕಗಳು.  ಇತ್ತೀಚೆಗೆ ನಡೆದ ಸಂಶೋಧನೆ  ನಮ್ಮನ್ನೆಲ್ಲಾ ಅಚ್ಚರಿಗೊಳಿಸಿತು ಮಾತ್ರವಲ್ಲ ಕರುನಾಡಿನ ಜನತೆ ಹೆಮ್ಮೆ ಪಡುವಂತಹ ಸಂಗತಿ ಇದಾಗಿದೆ.  ಈ ಸಂಶೋಧನೆಯ ರುವಾರಿ ನಮ್ಮ  ಊರಿನ ಡಾ. ಶಾಮ ಮಾಯಿಲಂಕೋಡಿ.

Advertisement
Advertisement

ಕ್ಯಾನ್ಸರ್  ಬಗ್ಗೆ  ಅಧ್ಯಯನ ಮಾಡಿಯೇ ಸಿದ್ಧ ಎಂಬುದು  ಶಾಮ ಅವರು ತನ್ನ ಪದವಿ ಪೂರ್ವ ಶಿಕ್ಷಣ ಕಾಲದಲ್ಲೇ ಕಂಡ  ಕನಸಾಗಿತ್ತು . ಇದು ನನಸಾದ ಬಗ್ಗೆ ಅಮ್ಮ ಶ್ಯಾಮಲಾ  ಮಾಯಿಲಂಕೋಡಿ ಹಾಗೂ ತಂದೆ ನಾರಾಯಣ  ಭಟ್ ಮಾಯಿಲಂಕೋಡಿಯವರು   ಹೆಮ್ಮೆಯಿಂದ   ಹೇಳುತ್ತಾರೆ.  ನಾರಾಯಣ ಭಟ್ ರವರು ಕರ್ನಾಟಕ ಬ್ಯಾಂಕ್ ನ ವಿವಿಧ ಹುದ್ದೆಗಳನ್ನು ನಿಭಾಯಿಸಿದವರು. ಸದ್ಯ ಮಂಗಳೂರಿನಲ್ಲಿ ನೆಲೆಸಿದ್ದಾರೆ.

ಈ ಹೊಸ ಸಂಶೋಧನೆ ಕುಗ್ಗುವ ಮನಸಿಗೊಂದು ಆಶಾಕಿರಣವಾಗಿದೆ.  ಒಮ್ಮೆ ಕ್ಯಾನ್ಸರ್ ಬಂದರೆ ಗುಣಮುಖರಾಗುವುದು ಎಲ್ಲೋ ಕೆಲವರು ಎಂಬ ಅಭಿಪ್ರಾಯ ನಮ್ಮಂತಹ ಜನಸಾಮಾನ್ಯರದ್ದು.. ಅದರಲ್ಲೂ ಹಲವು ವಿಧ. ಪಾಪದ್ದು ಜೋರಿಂದು, ಶೀಘ್ರ ಹರಡುವಂತಹುದು, ಒಂದೆಡೆ ಸಣ್ಣಕೆ ಕಂಡು ಇನ್ನೆಲ್ಲೋ ಶರೀರದ ಭಾಗವನ್ನು ಪೂರ್ಣ ಆಪೋಷಣ ತೆಗೆದುಕೊಳ್ಳುವಂತಹುದು. ಇನ್ನೂ ಕೆಲವು ಇವೆ  ಆ ನಮೂನೆಯವು ಪತ್ತೆಯಾಗುವಾಗಲೇ ಕೊನೆಯ ಹಂತವನ್ನು  ರೋಗಿ ತಲುಪಿಯಾಗಿರುತ್ತದೆ. ಈ ನಿಟ್ಟಿನಲ್ಲಿ ಒಂದು ಮಹತ್ವದ  ಸಂಶೋಧನೆ ಹೊಸ ಭರವಸೆಯನ್ನು ನಮ್ಮಲ್ಲಿ ಮೂಡಿಸಿದೆ.
ಅಮೇರಿಕಾದ ಮೆಮೋರಿಯಲ್ ಸ್ಲೋನ್ ಕೆಟ್ಟರಿಂಗ್ ಕ್ಯಾನ್ಸರ್ ಸೆಂಟರ್(MSKCC)   ಟಿ ಸೆಲ್ ಥೆರಪಿ  ಚಿಕಿತ್ಸೆಯನ್ನು ಅಭಿವೃದ್ಧಿ ಪಡಿಸಿದೆ.   ಶೀಫ್ರವಾಗಿ  ಕ್ಯಾನ್ಸರ್ ಮುಕ್ತರಾಗಲು ಈ ಕೋಶ ಥೆರಪಿ ಸಹಾಯ ಮಾಡುತ್ತದೆ. ಮಲ್ಟಿಪಲ್ ಮೈಲೋಮ ಅಂದರೆ ಬಿಳಿ ರಕ್ತಕಣಗಳ  ಕ್ಯಾನ್ಸರ್ ಈವರೆಗೂ ಗುಣಪಡಿಸುವುದು ಅಸಾಧ್ಯವೆಂದೇ ನಂಬಲಾಗಿತ್ತುಈ  ಚಿಕಿತ್ಸೆ ಮಲ್ಟಿಪಲ್ ಮೈಲೋಮವನ್ನು ಗುಣಪಡಿಸುವ ನಿಟ್ಟಿನಲ್ಲಿ ಅಭಿವೃದ್ಧಿ ಪಡಿಸಲಾಗಿತ್ತು.    ಹಾಗೂ  ಮುಂದಿನ ಅಧ್ಯಯನ ಈ ವಿಷಯದಲ್ಲಿ ನಡೆಸಲಾಗುತ್ತಿದೆ. ಈ  ಸಂಶೋಧನಾ ಕಾರ್ಯದ ಪ್ರಮುಖ ವ್ಯಕ್ತಿ  ಯುವ ವೈದ್ಯ ಡಾ ಶಾಮ ನಮ್ಮೂರಿನವೆರೆಂಬುದು  ಖುಷಿಯ ಸಂಗತಿ.
ತಮ್ಮ ಬಾಲ್ಯದ ವಿದ್ಯಾಭ್ಯಾಸವನ್ನು ಮಂಗಳೂರಿನಲ್ಲಿ ಪಡೆದಿದ್ದಾರೆ. ಕೆ. ಎಸ್ ಹೆಗ್ಡೆ ಮೆಡಿಕಲ್ ಕಾಲೇಜಿನಲ್ಲಿ ಓದಿ ಹೆಚ್ಚಿನ  ವಿಧ್ಯಾಭ್ಯಾಸವನ್ನು   ಅಮೇರಿಕಾದ ಪ್ರತಿಷ್ಠಿತ ವಿದ್ಯಾ ಸಂಸ್ಥೆಯಲ್ಲಿ ಪಡೆದರು. ಸಧ್ಯ ನ್ಯೂಯಾರ್ಕ್ ನಗರದಲ್ಲಿ  ಪತ್ನಿ ಶುಭ, ಮಕ್ಕಳಾದ ಗಂಗಾ, ವಿಧಾಂತರಾಮರೊಂದಿಗೆ  ವೃತ್ತಿ ನಿರತರಾಗಿದ್ದಾರೆ.
ಡಾ.ಶಾಮ ಅವರ ಮಹತ್ವಾಕಾಂಕ್ಷೆಯ  ಅಧ್ಯಯನದ ಕನಸುಗಳು  ಸಮಾಜಕ್ಕೆ ಇನ್ನಷ್ಟು  ಉಪಯುಕ್ತ ಕೊಡುಗೆಯನ್ನು ಕೊಡುವಂತಾಗಲಿ  ಎಂಬ ಹಾರೈಕೆ  ನಮ್ಮೆಲ್ಲರದ್ದು.
# ಅಶ್ವಿನಿ ಮೂರ್ತಿ ಅಯ್ಯನಕಟ್ಟೆ.

Advertisement
Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

ಇದನ್ನೂ ಓದಿ

ಅಡಿಕೆ ನಿಷೇಧ ಇಲ್ಲ – ಈಗ ಅಡಿಕೆ ಬಳಕೆಯ ನಿಯಂತ್ರಣದತ್ತ ಫೋಕಸ್
January 30, 2026
10:42 PM
by: ಮಹೇಶ್ ಪುಚ್ಚಪ್ಪಾಡಿ
ಅರೆಕಾನಟ್ ಚಾಲೆಂಜ್ : ಅಡಿಕೆ ನಿಯಂತ್ರಣ ಕುರಿತು WHO ಉತ್ಸುಕತೆ – ಕ್ಲಿನಿಕಲ್ ಪರೀಕ್ಷೆಗಳ ಅಗತ್ಯಕ್ಕೆ ತಜ್ಞರ ಒತ್ತಾಯ
January 30, 2026
6:04 PM
by: ದ ರೂರಲ್ ಮಿರರ್.ಕಾಂ
“ಕ್ಯಾನ್ಸರ್ ಮ್ಯಾಪಿಂಗ್” – ರೋಗ ತಡೆಯುವ ಮೊದಲ ಹೆಜ್ಜೆ
January 30, 2026
8:05 AM
by: ಮಿರರ್‌ ಡೆಸ್ಕ್
ರಾಜ್ಯದಲ್ಲಿ 3 ವರ್ಷದಲ್ಲಿ 432 ಮಂದಿ ಅಕ್ರಮ ವಿದೇಶಿ ವಲಸಿಗರು ಪತ್ತೆ | ಬೆಂಗಳೂರು ನಗರದಲ್ಲೇ 328 ಪ್ರಕರಣ
January 30, 2026
7:57 AM
by: ಮಿರರ್‌ ಡೆಸ್ಕ್

You cannot copy content of this page - Copyright -The Rural Mirror