ಬೇಕಾಬಿಟ್ಟಿ ಸಿಮ್‌ ಕಾರ್ಡ್‌ ಖರೀದಿಸಿದರೆ ಜೈಲು ಶಿಕ್ಷೆ ಪಕ್ಕಾ | ಡಿ.1ರಿಂದ ಕಠಿಣ ನಿಯಮಗಳು ಜಾರಿ | ಹಾಗಾದರೆ ಏನು ಮಾಡಬೇಕು..?

November 30, 2023
1:33 PM
ನಕಲಿ ದಾಖಲೆ ಮೂಲಕ ಸಿಮ್‌ ಕಾರ್ಡ್‌ ಪಡೆಯುವುದಕ್ಕೆ ಕಡಿವಾಣ ಹಾಕಲು ಸರ್ಕಾರ ನಿರ್ಧರಿಸಿದೆ. ಇದಕ್ಕಾಗಿ ಕಟ್ಟುನಿಟ್ಟಿನ ನಿಯಮ ಜಾರಿಗೆ ಬರುತ್ತಿದೆ.

ಇನ್ನು ಮುಂದೆ ಯಾರೂ ಬೇಕಾಬಿಟ್ಟಿ ಸಿಮ್‌ ಕಾರ್ಡ್‌(Sim Card) ಖರೀದಿಸುವಂತಿಲ್ಲ. ಒಂದು ವೇಳೆ ಸೂಕ್ತ ದಾಖಲೆ ಇಲ್ಲದೆ ಖರೀದಿಸಿದವರಿಗೂ ಮಾತ್ರವಲ್ಲ ಸಿಮ್‌ ವಿತರಿಸುವ ಡೀಲರ್‌ಗಳಿಗೂ(dealers) ಇಬ್ಬರಿಗೂ ಜೈಲು ಗ್ಯಾರಂಟಿ.  ಯಾಕೆಂದರೆ ಡಿ.1 ರಿಂದ ಕೆಲ ಕಠಿಣ ನಿಯಮಗಳು ಜಾರಿಗೆ ಬರಲಿದೆ.  ನಿಯಮ ಪಾಲಿಸದೇ ಉಲ್ಲಂಘನೆ ಮಾಡಿದರೆ 10 ಲಕ್ಷ ರೂ. ದಂಡ ವಿಧಿಸಲಾಗುತ್ತದೆ. ಗಂಭೀರ ಪ್ರಕರಣವಾದಲ್ಲಿ ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ. ಬಹುತೇಕ ಸೈಬರ್ ಅಪರಾಧಗಳು ಮತ್ತು ದೇಶವಿರೋಧಿ ಕೃತ್ಯಗಳನ್ನು ಸುಳ್ಳು ದಾಖಲೆಗಳೊಂದಿಗೆ ಜೋಡಿಸಲಾದ ಮೊಬೈಲ್ ಸಂಖ್ಯೆಗಳನ್ನು (Mobile Sim) ಬಳಸುತ್ತಿರುವ ಹಿನ್ನೆಲೆಯಲ್ಲಿ ಇವುಗಳಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ(Central govt) ಈಗ ಕಠಿಣ ಕ್ರಮ ಕೈಗೊಂಡಿದೆ.

Advertisement
Advertisement
Advertisement

ಹೊಸ ನಿಯಮಗಳು ಏನು? : ವ್ಯಾಪಾರಸ್ಥರು/ ಕಂಪನಿಗಳಿಗೆ ಮಾತ್ರ ಸಿಮ್ ಕಾರ್ಡ್‌ಗಳನ್ನು ದೊಡ್ಡ ಪ್ರಮಾಣದಲ್ಲಿ ಖರೀದಿಸಲು ಅನುಮತಿ ನೀಡಲಾಗಿದೆ. ಸಾಮಾನ್ಯ ಬಳಕೆದಾರರು ಒಂದು ಗುರುತಿನಿಂದ ಗರಿಷ್ಠ 9 ಸಿಮ್‌ಗಳನ್ನು ಮಾತ್ರ ಪಡೆಯಬಹುದು. – ಸಿಮ್‌ ಕಾರ್ಡ್‌ ರದ್ದು/ ನಿಷ್ಕ್ರಿಯಗೊಳಿಸಿದ 90 ದಿನಗಳ ನಂತರ ಆ ಸಂಖ್ಯೆಯನ್ನು ಬೇರೆ ಗ್ರಾಹಕರಿಗೆ ನೀಡಲಾಗುತ್ತದೆ. – ಸಿಮ್ ಕಾರ್ಡ್‌ಗಳನ್ನು ಖರೀದಿಸುವ ಗ್ರಾಹಕರು ತಮ್ಮ ಆಧಾರ್ (Aadhar Card) ಮತ್ತು ಜನಸಂಖ್ಯಾ ಡೇಟಾವನ್ನು (Demographic Data Collection) ಸಲ್ಲಿಸಬೇಕಾಗುತ್ತದೆ. – ನೋಂದಾಯಿಸದ ಡೀಲರ್‌ಗಳ ಮೂಲಕ ಸಿಮ್ ಕಾರ್ಡ್‌ಗಳನ್ನು ಮಾರಾಟ ಮಾಡಿದರೆ ಹೊಸ ನಿಯಮಗಳ ಪ್ರಕಾರ ಟೆಲಿಕಾಂ ಆಪರೇಟರ್‌ಗಳಿಗೆ 10 ಲಕ್ಷ ರೂ. ದಂಡ ವಿಧಿಸಲಾಗುತ್ತದೆ.

Advertisement

ಎಲ್ಲಾ ಸಿಮ್‌ ಕಾರ್ಡ್‌ ಡೀಲರ್‌ಗಳು ಕಡ್ಡಾಯವಾಗಿ ನವೆಂಬರ್ ಅಂತ್ಯದೊಳಗೆ ದಾಖಲೆಗಳನ್ನು ಸಲ್ಲಿಸಬೇಕು ಮತ್ತು ನೋಂದಾಯಿಸಿಕೊಳ್ಳಬೇಕು. ಸಿಮ್‌ ಕಾರ್ಡ್‌ ಡೀಲರ್‌ಗಳು ಅಥವಾ ಚಿಲ್ಲರೆ ವ್ಯಾಪಾರಿಯು ನೋಂದಣಿಗಾಗಿ ಕಾರ್ಪೊರೇಟ್ ಗುರುತಿನ ಸಂಖ್ಯೆ (CIN), ಸೀಮಿತ ಹೊಣೆಗಾರಿಕೆ ಪಾಲುದಾರಿಕೆ ಗುರುತಿನ ಸಂಖ್ಯೆ (LLPIN) ಅಥವಾ ವ್ಯಾಪಾರ ಪರವಾನಗಿ, ಆಧಾರ್ ಅಥವಾ ಪಾಸ್‌ಪೋರ್ಟ್, ಪಾನ್‌, ಸರಕು ಮತ್ತು ಸೇವಾ ತೆರಿಗೆ ನೋಂದಣಿ ಪ್ರಮಾಣಪತ್ರ ಇತ್ಯಾದಿಗಳನ್ನು ಒದಗಿಸಬೇಕಾಗುತ್ತದೆ.

ಸಿಮ್‌ ಡೀಲರ್‌ಗಳು ನಕಲಿ ದಾಖಲೆಗಳನ್ನು ಸಲ್ಲಿಸಿದರೆ, ಟೆಲಿಕಾಂ ಆಪರೇಟರ್‌ಗಳು ಅವರ ಐಡಿಯನ್ನು ನಿರ್ಬಂಧಿಸಬೇಕು. ಅಷ್ಟೇ ಅಲ್ಲದೇ ಸಿಮ್‌ ಡೀಲರ್‌ನಿಂದ ಯಾರಿಗೆಲ್ಲ ಸಿಮ್‌ ಕಾರ್ಡ್‌ ವಿತರಣೆಯಾಗಿದೆಯೋ ಆ ಎಲ್ಲಾ ಗ್ರಾಹಕರು ಸಿಮ್‌ ಪಡೆಯಲು ನೀಡಿದ ದಾಖಲೆಗಳನ್ನು ಮರು ಪರಿಶೀಲಿಸಬೇಕಾಗುತ್ತದೆ.  ನವೆಂಬರ್ 30 ರೊಳಗೆ ನೋಂದಾಯಿಸದೇ ಉಳಿಯುವ ಸಿಮ್ ಕಾರ್ಡ್ ಮಾರಾಟಗಾರರು 10 ಲಕ್ಷ ರೂ.ವರೆಗೆ ದಂಡ ಪಾವತಿಸಬೇಕಾಗುತ್ತದೆ ಮತ್ತು ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ.

Advertisement

ಸಚಿವ ಅಶ್ವಿನಿ ವೈಷ್ಣವ್‌ ಹೇಳಿದ್ದೇನು? : ಹಿಂದೆ ಸಿಮ್‌ ಕಾರ್ಡ್‌ ಬಲ್ಕ್‌ ಆಗಿ ಖರೀದಿಸಲು ಅವಕಾಶವಿತ್ತು. ಇನ್ನು ಮುಂದೆ ಇದನ್ನು ಕೊನೆಗೊಳಿಸಿ ಸರಿಯಾದ ವ್ಯಾಪಾರ ಸಂಪರ್ಕದ ನಿಬಂಧನೆಯನ್ನು ತರುತ್ತೇವೆ. ಇದರಿಂದಾಗಿ ಮೋಸದ ಕರೆಗಳನ್ನು ನಿಲ್ಲಿಸಲು ಸಹಾಯವಾಗಲಿದೆ. ದೇಶದಲ್ಲಿ 10 ಲಕ್ಷ ಸಿಮ್ ಡೀಲರ್‌ಗಳಿದ್ದು, ಅವರಿಗೆ ಪೊಲೀಸ್ ಪರಿಶೀಲನೆಗೆ ಸಾಕಷ್ಟು ಸಮಯ ನೀಡಲಾಗುವುದು ಎಂದು ಐಟಿ ಸಚಿವ ಅಶ್ವಿನಿ ವೈಷ್ಣವ್‌ ಆಗಸ್ಟ್‌ನಲ್ಲಿ ತಿಳಿಸಿದ್ದರು. ಈ ವರ್ಷದ ಮೇ ತಿಂಗಳಲ್ಲಿ, ಪಂಜಾಬ್ ಪೊಲೀಸರು (Punjab Police) ನಕಲಿ ಗುರುತಿನ ಮೂಲಕ ಸಕ್ರಿಯಗೊಂಡ 1.8 ಲಕ್ಷ ಸಿಮ್ ಕಾರ್ಡ್‌ಗಳನ್ನು ನಿರ್ಬಂಧಿಸಿದ್ದರು. ಈ ಸಿಮ್ ಕಾರ್ಡ್‌ಗಳನ್ನು ನೀಡಿದ್ದಕ್ಕಾಗಿ 17 ಜನರನ್ನು ಬಂಧಿಸಿದ್ದರು.

No one can buy a SIM card from the attic anymore. In case, jail time is guaranteed not only for those who bought without proper documents but also for the dealers who distribute the SIM. Because some strict rules will come into effect from December 1. 10 lakhs for violation of rules. Penalty is imposed. Jail is imposed in serious cases.

Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಪ್ರಯಾಗ್ ರಾಜ್ ನಲ್ಲಿ  ಮಹಾ ಕುಂಭಮೇಳ | 150ಕ್ಕೂ ಹೆಚ್ಚು ವಿಶೇಷ ರೈಲು
January 23, 2025
10:59 AM
by: The Rural Mirror ಸುದ್ದಿಜಾಲ
ಆಧುನಿಕತೆಯಿಂದಾಗಿ ಕೃಷಿ ವ್ಯವಸ್ಥೆ ಸಂಪೂರ್ಣ ಹಾಳಾಗಿದೆ
January 23, 2025
10:50 AM
by: The Rural Mirror ಸುದ್ದಿಜಾಲ
ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ವಿಶೇಷ ಫಿಲ್ಟರ್ ಕಾಫಿ ಕೆಫೆ – ಸರ್ಕಾರ ಒಪ್ಪಂದ | ಕಾಫಿ ಉದ್ಯಮ ಉತ್ತೇಜಿಸಲು ಮಹತ್ವದ ಹೆಜ್ಜೆ |
January 23, 2025
10:46 AM
by: The Rural Mirror ಸುದ್ದಿಜಾಲ
ಕೃಷಿ ಸದೃಢವಾಗಿದ್ದರೆ ದೇಶ ಸದೃಢವಾಗಿರುತ್ತದೆ |  ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್
January 23, 2025
10:41 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror