ರೈತ ಫಲಾನುಭವಿಗಳನ್ನು ಅಲೆದಾಡಿಸದೇ ಸವಲತ್ತು ನೀಡಬಹುದೇ…? | ರೈತರು ಇಂತಹ ಕಡೆ ಪ್ರಶ್ನಿಸುವಂತಾಗಲು ಸಾಧ್ಯವೇ…?

July 26, 2024
11:35 PM
ಅನೇಕ ರೈತ ಪರವಾದ ಯೋಜನೆಗಳಲ್ಲಿ ರೈತರನ್ನು ಅಲೆದಾಡಿಸದೇ ನೆರವು ಸಿಗುತ್ತಿಲ್ಲ. ಹಾಗಿದ್ದರೆ, ಈ ಬಗ್ಗೆ ಮಾತನಾಡುವವರು ಯಾರು..? ಈ ಬಗ್ಗೆ ಕೆಲವು ಪ್ರಶ್ನೆಗಳೂ ಇವೆ. ಇದಕ್ಕೆ ಸಂಬಂಧಿಸಿ ವಾಸ್ತವದ ನೆಲೆಯಲ್ಲಿ ರೈತರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಈ ಅಭಿಪ್ರಾಯವನ್ನು ಇಲ್ಲಿ ಪ್ರಕಟಿಸಲಾಗಿದೆ.

ನಮ್ಮ ಪ್ರಧಾನಿಯವರು ಹೇಳಿದಂತೆ ಅಟಕ್ ನಾ, ಲಟ್ ಕಾನಾ, ಬಟ್ ಕಾನಾ….. ಅಂದರೆ, ಒಂದು ಕೆಲಸವನ್ನು ತಡೆಹಿಡಿಯುವುದು, ತ್ರಿಶಂಕುವಿನಲ್ಲಿ ನೇತಾಡಿಸುವುದು, ಫಲಾನುಭವಿಯನ್ನು ಅಲೆದಾಡಿಸುವುದು ಇದು ಸರಕಾರಿ ಕೆಲಸದ ಪೂರೈಕೆಯಲ್ಲಿ ಇರುವ ಅಡೆತಡೆಗಳು. ಅನೇಕ ದಶಕಗಳಿಂದ ಈ ಪದ್ಧತಿ  ನಡೆದುಕೊಂಡು ಬಂದಿದೆ.

Advertisement
Advertisement

ಆದರೆ 2016- 2017 ರಿಂದ ಆರಂಭಗೊಂಡ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ ರೀತಿಯ ಅನೇಕ ಯೋಜನೆಗಳು ಯಾವುದೇ ಅಡೆ-ತಡೆಗಳು ಇಲ್ಲದೆ ಫಲಾನುಭವಿ ಗೆ ಸುಲಭವಾಗಿ ಲಭ್ಯ ಆಗಿದ್ದವು. ಫಲಾನುಭವಿಯ ಖಾತೆಗೆ ನೇರವಾಗಿ ಹಣದ ವರ್ಗಾವಣೆ ನಡೆಯುತ್ತಿತ್ತು. ಈಗ ಮತ್ತೆ ಹಳೆಯ ಚಾಳಿ ಮರುಕಳಿಸುವ ಲಕ್ಷಣಗಳು ಗೋಚರಿಸುತ್ತಿವೆ. ಕಳೆದ ವರ್ಷವೇ ಬೆಳೆ ದಾಖಲೀಕರಣದ ಹೆಸರಿನಲ್ಲಿ ವಿಮೆ ಸೌಲಭ್ಯವನ್ನು ಕಠಿಣಗೊಳಿಸುವ ಕೆಲಸ ನಡೆದಿತ್ತು. ಈ ವರ್ಷ ಒಂದು ಹೆಜ್ಜೆ ಮುಂದೆ ಹೋಗಿ, ವಿಮೆ ಕಂತು ಕಟ್ಟುವ ಸಂದರ್ಭದಲ್ಲೇ ಅದು ಸ್ವೀಕಾರ ಆಗದೆ ಅನೇಕ ರೈತರಿಗೆ ತಲೆ ನೋವಾಗಿ ಪರಿಣಮಿಸಿದೆ.
ಇಲಾಖೆಯ ಅಧಿಕಾರಿಗಳನ್ನು ಈ ಬಗ್ಗೆ ವಿಚಾರಿಸಿದಾಗ, ಅವರು ಅದರಿಂದ ತಪ್ಪಿಸಿಕೊಂಡು, ಬೇರೆ ಇಲಾಖೆ ಅಥವಾ ಸರಕಾರದ ಮೇಲೆ ಗೂಬೆ ಕೂರಿಸುವ ಮೂಲಕ ತಾವು ತಮ್ಮ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ.

Advertisement

ರೈತರು ಇದನ್ನು ಪ್ರಶ್ನಿಸದೆ, ಸಂಬಂಧಪಟ್ಟ ಇಲಾಖೆಯನ್ನು ಸಂಪರ್ಕಿಸಿ ದೂರು ದಾಖಲಿಸಿ, ಸಮಸ್ಯೆಯನ್ನು ಪರಿಹರಿಸಿಕೊಳ್ಳುವ ಶಿಕ್ಷಣವನ್ನು ಪಡೆಯಬೇಕಿದೆ. ಈ ಎಲ್ಲದರ ಮಧ್ಯೆ ಕಾನೂನು ತಜ್ಞರಿಗೆ  ಕೆಲವು ಪ್ರಶ್ನೆಗಳು.

  1. ಅಡಿಕೆ ಒಂದು ತೋಟಗಾರಿಕಾ ಬಹು ವಾರ್ಷಿಕ ಬೆಳೆ, ಹಾಗಾಗಿ ಹಿಂದಿನ ವರ್ಷಗಳಲ್ಲಿ ವಿಮೆ ನೀಡಿದ ದಾಖಲೆ ಇದ್ದಾಗ ಈ ವರ್ಷ ನಿರಾಕರಿಸಿದರೆ, ಗ್ರಾಹಕ ನ್ಯಾಯಾಲಯದಲ್ಲಿ ಹೋರಾಟ ನಡೆಸಿ ಗೆಲುವು ಪಡೆಯಬಹುದೇ?.
  2. ಈ ವರ್ಷ ಅನೇಕ ರೈತರು ವಿಮೆ ಪಾವತಿಸಲಾಗದೆ ಸೌಲಭ್ಯದಿಂದ ಹೊರಗೆ ಉಳಿಯುತ್ತಿದ್ದು, ಅದರ ಕುರಿತು ವಿಮಾ ಕಂಪನಿಯವಿರುದ್ಧ ಕಾನೂನಾತ್ಮಕ ಹೋರಾಟ ನಡೆಸಲು ಅವಕಾಶ ಇದೆಯೇ?.
  3. ವಿಮೆ ಅರ್ಜಿಯಲ್ಲಿ ಬೆಳೆಯ ದೃಢೀಕರಣ ಕಡ್ಡಾಯ ಎಂದು ಸಹಿ ಹಾಕಿಸಿಕೊಳ್ಳುವುದು ಅಪರಾಧ ಅಲ್ಲವೇ?.
  4. ಪ್ರತ್ಯಕ್ಷ ಜಮೀನಿನಲ್ಲಿ ಬೆಳೆ ಇರುವಾಗ, ಅದನ್ನು ನಂಬದೆ ತಂತ್ರಾಂಶದಲ್ಲಿ ಇರುವ ಮಾಹಿತಿಯನ್ನು ನಂಬುವುದು ರೈತನಿಗೆ ಮಾಡುವ ಅಪಮಾನ ಹಾಗೂ ರೈತನ ಮೂಲಭೂತ ಹಕ್ಕಿನ ಉಲ್ಲಂಘನೆ ಅಲ್ಲವೇ?.
  5. ನ್ಯಾಯಯುತವಾಗಿ ವಿಮೆ ಕಟ್ಟಲು ಮುಂದಾದ ರೈತನಿಗೆ ವಿಮಾ ಸೌಲಭ್ಯವನ್ನು ನಿರಾಕರಿಸುವುದು ದಂಡಾರ್ಹ ಅಪರಾಧ ಅಲ್ಲವೇ?.
  6. ರೈತರು ಈ ಬಗ್ಗೆ ಸ್ವಾಭಿಮಾನದ ಹೋರಾಟ ನಡೆಸಿ, ಈ ರೀತಿಯ ತಾಂತ್ರಿಕ ತೊಂದರೆಗಳನ್ನು ಉಂಟು ಮಾಡಿರುವವರ ವಿರುದ್ಧ ವಿಜಯ ಗಳಿಸುವುದು ಅಪೇಕ್ಷಣೀಯ ಅಲ್ಲವೇ?.
  7. ಈ ವಿಮಾ ಸೌಲಭ್ಯವನ್ನು ಪಡೆಯುವಲ್ಲಿ ಉಂಟಾದ ಸಮಯ, ನೆಮ್ಮದಿ, ಆರ್ಥಿಕ ನಷ್ಟಗಳಿಗೆ ಪರಿಹಾರ ಸಿಗಬೇಕಲ್ಲವೇ?.

ಮೂಲ : social network

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಗ್ರಾಮಗಳಲ್ಲಿ ನೀರಿನ ಹೊಂಡ | ಚಿತ್ರದುರ್ಗ ಜಿಲ್ಲೆಯ 7 ಹಳ್ಳಿಗಳಲ್ಲಿ ವಿಶ್ವಬ್ಯಾಂಕ್ ನೆರವಿನ ಯೋಜನೆ ಅನುಷ್ಟಾನ |
September 19, 2024
10:42 PM
by: ದ ರೂರಲ್ ಮಿರರ್.ಕಾಂ
ಕಿಸಾನ್‌ ಸಮ್ಮಾನ್‌ ನಿಧಿಯ ಮೂಲಕ ರೈತರಿಗೆ 21,000 ಕೋಟಿ ರೂಪಾಯಿ |
September 19, 2024
9:17 PM
by: ದ ರೂರಲ್ ಮಿರರ್.ಕಾಂ
ತುಮಕೂರು ಜಿಲ್ಲೆಯಲ್ಲಿ ದಾಖಲೆಯ ಹಾಲು ಉತ್ಪಾದನೆ
September 19, 2024
9:00 PM
by: ದ ರೂರಲ್ ಮಿರರ್.ಕಾಂ
ಕೋಲಾರದಲ್ಲಿ ಸಾವಿರಕ್ಕೂ ಅಧಿಕ ನಕಲಿ ವೈದ್ಯರ ವಿರುದ್ಧ ಪ್ರಕರಣ |
September 19, 2024
8:53 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror