ನಮ್ಮ ಪ್ರಧಾನಿಯವರು ಹೇಳಿದಂತೆ ಅಟಕ್ ನಾ, ಲಟ್ ಕಾನಾ, ಬಟ್ ಕಾನಾ….. ಅಂದರೆ, ಒಂದು ಕೆಲಸವನ್ನು ತಡೆಹಿಡಿಯುವುದು, ತ್ರಿಶಂಕುವಿನಲ್ಲಿ ನೇತಾಡಿಸುವುದು, ಫಲಾನುಭವಿಯನ್ನು ಅಲೆದಾಡಿಸುವುದು ಇದು ಸರಕಾರಿ ಕೆಲಸದ ಪೂರೈಕೆಯಲ್ಲಿ ಇರುವ ಅಡೆತಡೆಗಳು. ಅನೇಕ ದಶಕಗಳಿಂದ ಈ ಪದ್ಧತಿ ನಡೆದುಕೊಂಡು ಬಂದಿದೆ.
ಆದರೆ 2016- 2017 ರಿಂದ ಆರಂಭಗೊಂಡ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ ರೀತಿಯ ಅನೇಕ ಯೋಜನೆಗಳು ಯಾವುದೇ ಅಡೆ-ತಡೆಗಳು ಇಲ್ಲದೆ ಫಲಾನುಭವಿ ಗೆ ಸುಲಭವಾಗಿ ಲಭ್ಯ ಆಗಿದ್ದವು. ಫಲಾನುಭವಿಯ ಖಾತೆಗೆ ನೇರವಾಗಿ ಹಣದ ವರ್ಗಾವಣೆ ನಡೆಯುತ್ತಿತ್ತು. ಈಗ ಮತ್ತೆ ಹಳೆಯ ಚಾಳಿ ಮರುಕಳಿಸುವ ಲಕ್ಷಣಗಳು ಗೋಚರಿಸುತ್ತಿವೆ. ಕಳೆದ ವರ್ಷವೇ ಬೆಳೆ ದಾಖಲೀಕರಣದ ಹೆಸರಿನಲ್ಲಿ ವಿಮೆ ಸೌಲಭ್ಯವನ್ನು ಕಠಿಣಗೊಳಿಸುವ ಕೆಲಸ ನಡೆದಿತ್ತು. ಈ ವರ್ಷ ಒಂದು ಹೆಜ್ಜೆ ಮುಂದೆ ಹೋಗಿ, ವಿಮೆ ಕಂತು ಕಟ್ಟುವ ಸಂದರ್ಭದಲ್ಲೇ ಅದು ಸ್ವೀಕಾರ ಆಗದೆ ಅನೇಕ ರೈತರಿಗೆ ತಲೆ ನೋವಾಗಿ ಪರಿಣಮಿಸಿದೆ.
ಇಲಾಖೆಯ ಅಧಿಕಾರಿಗಳನ್ನು ಈ ಬಗ್ಗೆ ವಿಚಾರಿಸಿದಾಗ, ಅವರು ಅದರಿಂದ ತಪ್ಪಿಸಿಕೊಂಡು, ಬೇರೆ ಇಲಾಖೆ ಅಥವಾ ಸರಕಾರದ ಮೇಲೆ ಗೂಬೆ ಕೂರಿಸುವ ಮೂಲಕ ತಾವು ತಮ್ಮ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ.
ರೈತರು ಇದನ್ನು ಪ್ರಶ್ನಿಸದೆ, ಸಂಬಂಧಪಟ್ಟ ಇಲಾಖೆಯನ್ನು ಸಂಪರ್ಕಿಸಿ ದೂರು ದಾಖಲಿಸಿ, ಸಮಸ್ಯೆಯನ್ನು ಪರಿಹರಿಸಿಕೊಳ್ಳುವ ಶಿಕ್ಷಣವನ್ನು ಪಡೆಯಬೇಕಿದೆ. ಈ ಎಲ್ಲದರ ಮಧ್ಯೆ ಕಾನೂನು ತಜ್ಞರಿಗೆ ಕೆಲವು ಪ್ರಶ್ನೆಗಳು.
ಮೂಲ : social network
ದಿಶಾಂತ್ ಕೆ ಎಸ್, 4 ನೇ ತರಗತಿ, ಸೈಂಟ್ ಆನ್ಸ್ ಇಂಗ್ಲಿಷ್ ಮೀಡಿಯಂ…
ಪ್ರಣಮ್ಯ ಡಿ, 5 ನೇ ತರಗತಿ, ಕೊಡಿಯಾಲಬೈಲು, ಬೆಳ್ತಂಗಡಿ |- ದ ರೂರಲ್…
ರಾಜ್ಯದಲ್ಲಿನ ಮಳೆ ಮಾಪನ ಯಂತ್ರಗಳ ನಿರ್ವಹಣೆಯಲ್ಲಿನ ಅವ್ಯವಸ್ಥೆಯನ್ನು ಸರಿಪಡಿಸಲು ರಾಜ್ಯ ಸರ್ಕಾರಕ್ಕೆ ಸೂಕ್ತ…
ರಾಜ್ಯದ ಎಲ್ಲಾ ಅರಣ್ಯ ಪ್ರದೇಶದೊಳಗೆ ದನ-ಕರು, ಮೇಕೆ, ಕುರಿ ಮೇಯಿಸುವುದನ್ನು ನಿಷೇಧಿಸಲು ನಿಯಮಾನುಸಾರ…
ಕೇಂದ್ರ ಪುರಸ್ಕೃತ ಪ್ರಮುಖ ಯೋಜನೆಗಳಲ್ಲಿ ಒಂದಾದ, ರಾಷ್ಟ್ರೀಯ ತೋಟಗಾರಿಕಾ ಮಿಷನ್, ಬರ ಪೀಡಿತ…
ದಾವಣಗೆರೆ ಜಿಲ್ಲೆಯ 216 ಗ್ರಾಮ ಪಂಚಾಯತಿಗಳಲ್ಲಿ ಕೇಂದ್ರ ಸರ್ಕಾರದ ಮಹತ್ವದ ಯೋಜನೆ ಡಿಜಿಟಲ್…