ಐಸಿಎಆರ್ – ಐ ಐ ಹೆಚ್ ಆರ್ ವತಿಯಿಂದ ಬೆಂಗಳೂರಿನಲ್ಲಿ ರೈತರಿಗೆ ಸಾಮರ್ಥ್ಯ ವೃದ್ಧಿ ಕಾರ್ಯಕ್ರಮ

October 7, 2025
10:53 AM

ಅಡಿಕೆ ಬೆಳೆಯ ಜೊತೆಗೆ ಪರ್ಯಾಯ ಬೆಳೆಗಳ ಬಗ್ಗೆ ರೈತರಿಗೆ ಜಾಗೃತಿ ಮೂಡಿಸುವ ಉದ್ದೇಶದಿಂದ, ಐಸಿಎಆರ್ – ಐ ಐ ಹೆಚ್ ಆರ್ ಸಂಸ್ಥೆಯು ಐಸಿಎಆರ್ – ಕೆವಿಕೆ, ದಕ್ಷಿಣ ಕನ್ನಡ ಸಹಯೋಗದಲ್ಲಿ ಸುಳ್ಯ ತಾಲೂಕಿನ ಆದಿವಾಸಿ ರೈತರಿಗೆ ಹೈ-ಟೆಕ್ ತೋಟಗಾರಿಕೆ ಕುರಿತ ಎರಡು ದಿನಗಳ ಸಾಮರ್ಥ್ಯ ವೃದ್ಧಿ ಕಾರ್ಯಕ್ರಮ ಬೆಂಗಳೂರಿನಲ್ಲಿ TSP (Tribal Sub Plan) ಯೋಜನೆಯ ಅನುದಾನದಡಿ ಆಯೋಜಿಸಿತು.

ಡಾ. ಪ್ರಕಾಶ್ ಪಾಟೀಲ್ ನಿರ್ದೇಶಕರು (ಪ್ರಭಾರ), ಐಸಿಎಆರ್ – ಐ ಐ ಹೆಚ್ ಆರ್ ವತಿಯಿಂದ ಕಾರ್ಯಕ್ರಮವನ್ನು ಉದ್ಘಾಟಿಸಿ, ರೈತರು ಉತ್ಪಾದನೆ ಮತ್ತು ಆದಾಯ ಹೆಚ್ಚಿಸಲು ಸಂಸ್ಥೆ ಅಭಿವೃದ್ಧಿಪಡಿಸಿರುವ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವಂತೆ ಕರೆ ನೀಡಿದರು.

ಕಾರ್ಯಕ್ರಮವನ್ನು ಡಾ. ಟಿ. ಎಚ್. ಸಿಂಗ್ ಪ್ರಧಾನ ವಿಜ್ಞಾನಿ (ತರಕಾರಿ ಬೆಳೆಗಳು) ಮತ್ತು TSP ಯೋಜನೆ ಸಂಯೋಜಕರ ಸಹಕಾರದೊಂದಿಗೆ ಆಯೋಜಿಸಲಾಗಿದ್ದು, ಡಾ. ವಿ. ಶಂಕರ್, ಪ್ರಧಾನ ವಿಜ್ಞಾನಿ(ತರಕಾರಿ ಬೆಳೆಗಳು), ಸಾಮಾಜಿಕ ವಿಜ್ಞಾನ ಮತ್ತು ತರಬೇತಿ ವಿಭಾಗ ಇವರ ಸಂಯೋಜನೆಯಲ್ಲಿ ನಡೆಯಿತು.

ಡಾ. ಸೆಂತಿಲ್ ಕುಮಾರ್, ಮುಖ್ಯಸ್ಥರು, ಸಾಮಾಜಿಕ ವಿಜ್ಞಾನ ಮತ್ತು ತರಬೇತಿ ವಿಭಾಗ, ತರಕಾರಿ ಬೆಳೆಗಳಲ್ಲಿ ಅರ್ಕ ಮೈಕ್ರೋಬಿಯಲ್ ಕಾಂಸಾರ್ಟಿಯಾ (AMC) ಬಳಕೆಯ ವಿಧಾನವನ್ನು ಪ್ರದರ್ಶಿಸಿದರು.

Advertisement

ಡಾ. ವಿ.ಕೆ.ಜೆ. ರಾವ್, ನಿವೃತ್ತ ಪ್ರಧಾನ ವಿಜ್ಞಾನಿ (ವಿಸ್ತರಣೆ), ಸಾಮಾಜಿಕ ವಿಜ್ಞಾನ ಮತ್ತು ತರಬೇತಿ ವಿಭಾಗ, ಕೃಷಿ ಉದ್ಯಮ ಕುರಿತು ಉಪನ್ಯಾಸ ನೀಡಿದರು.  ಡಾ. ಜಿ. ನಾರಾಯಣ ನಿವೃತ್ತ ಪ್ರಧಾನ ವಿಜ್ಞಾನಿ (ವಿಸ್ತರಣೆ), ಉತ್ಪಾದನೆ ಹಾಗೂ ಉತ್ಪಾದಕತೆ ಸುಧಾರಣೆಗೆ ವೈಜ್ಞಾನಿಕ ನಿರ್ವಹಣಾ ಪದ್ಧತಿಗಳನ್ನು ಅಳವಡಿಸಿಕೊಳ್ಳುವಂತೆ ರೈತರಿಗೆ ಸಲಹೆ ನೀಡಿದರು.

ಡಾ. ಚೇತನ್ ಕುಮಾರ್, ಹಿರಿಯ ವಿಜ್ಞಾನಿ (ಮಣ್ಣಿನ ವಿಜ್ಞಾನ), ಮಣ್ಣಿನ ಮಾದರಿ ಸಂಗ್ರಹಣೆ ಬಗ್ಗೆ ಮಾಹಿತಿ ನೀಡಿ, ಮಣ್ಣಿನ ಪರೀಕ್ಷೆ ಆಧಾರಿತ ರಸಗೊಬ್ಬರ ಬಳಕೆ ಮಾಡುವಂತೆ ತಿಳಿಸಿದರು.

ಡಾ. ವಿ. ಶಂಕರ್ ಕರಾವಳಿ ಕರ್ನಾಟಕಕ್ಕೆ ಸೂಕ್ತ ತರಕಾರಿ ಬೆಳೆಯ ಕುರಿತು ಮಾಹಿತಿ ನೀಡಿ, ರೈತರನ್ನು ATIC ಕೇಂದ್ರಕ್ಕೆ ಕರೆದೊಯ್ದು ಲಭ್ಯವಿರುವ ತಂತ್ರಜ್ಞಾನಗಳು ಹಾಗೂ ಉತ್ಪನ್ನಗಳ ಬಗ್ಗೆ ತಿಳುವಳಿಕೆ ನೀಡಿದರು.

ಡಾ. ರೀನಾ ರೋಸಿ ಥಾಮಸ್, ಪ್ರಧಾನ ವಿಜ್ಞಾನಿ (ಮಾಹಿತಿ ತಂತ್ರಜ್ಞಾನ), ತಂತ್ರಜ್ಞಾನ, ಬೆಳೆಗಳು ಹಾಗೂ ಸುಧಾರಿತ ಪದ್ಧತಿಗಳ ಮಾಹಿತಿಗಾಗಿ ಸಂಸ್ಥೆ ಅಭಿವೃದ್ಧಿಪಡಿಸಿರುವ ಮೊಬೈಲ್ ಅಪ್ಲಿಕೇಶನ್ ಅನ್ನು ಪ್ರದರ್ಶಿಸಿದರು.

Advertisement

ಕಾರ್ಯಕ್ರಮದ ಅಂಗವಾಗಿ ರೈತರು ATIC ಕೇಂದ್ರ , ಹಣ್ಣು-ತರಕಾರಿ ಸಂಸ್ಕರಣೆ ಘಟಕ, ಅಣಬೆ ಉತ್ಪಾದನಾ ಘಟಕ, ನರ್ಸರಿ, ತರಕಾರಿ, ಹಣ್ಣು, ಹೂವಿನ ಪ್ರದರ್ಶನ ತೋಟಗಳು, ಕೊಯರ್ ಪಿತ್ ಉತ್ಪಾದನಾ ಘಟಕ, BESST ತೋಟಗಾರಿಕಾ  ಘಟಕಗಳಿಗೆ ಕ್ಷೇತ್ರ ಸಂದರ್ಶನ ಮಾಡಿದರು:

ಸುಳ್ಯ ತಾಲೂಕಿನ ಆರು ಗ್ರಾಮ ಪಂಚಾಯತ್ ಗಳಿಂದ ಆಯ್ಕೆಯಾದ ಬುಡಕಟ್ಟು ರೈತರು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಅವರಿಗೆ ಪ್ರಮಾಣಪತ್ರ, ಬೀಜ ಕಿಟ್, ಜೈವಿಕ ಗೊಬ್ಬರ, ಜೈವಿಕ ಕೀಟನಾಶಕ, ಸೂಕ್ಷ್ಮ ಪೋಷಕಾಂಶ ಮಿಶ್ರಣ, ತರಕಾರಿ ಸ್ಪೆಷಲ್ ಹಾಗೂ ತಾಂತ್ರಿಕ ಕೈಪಿಡಿ ವಿತರಿಸಲಾಯಿತು.

ಸುಳ್ಯ ತಾಲೂಕಿನ ಕೃಷಿ ಸಖಿ ಮೋಹಿನಿ ವಿಶ್ವನಾಥ್ (ನಿಶಾ)ಸಂಪಾಜೆ, ಕುಮಾರಿ ಲೋಚನಾ ಆಲೆಟ್ಟಿ, ರೈತರನ್ನು ಪ್ರೇರೇಪಿಸುವಲ್ಲಿ ಹಾಗೂ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುವಲ್ಲಿ ಸಹಕಾರ ನೀಡಿದರು.

ಡಾ. ಟಿ. ಜೆ. ರಮೇಶ, ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರು, ಐಸಿಎಆರ್ – ಕೆವಿಕೆ, ದಕ್ಷಿಣ ಕನ್ನಡ, ಬುಡಕಟ್ಟು ರೈತರ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿ, ಅವರ ಜೀವನೋಪಾಯ ಸುಧಾರಣೆಗೆ ಐಸಿಎಆರ್ – ಕೆ ವಿ ಕೆಯ ನಿರಂತರ ಸಹಕಾರವನ್ನು ಕೋರಿದರು.

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ರೈತರ ಹಿತರಕ್ಷಣೆಗೆ ಕೇಂದ್ರ ಸರ್ಕಾರ ಬದ್ಧ ; ಕಬ್ಬು ಬೆಳೆಗಾರರ ಹಿತರಕ್ಷಣೆಗೆ ಆದ್ಯತೆ
November 10, 2025
7:32 AM
by: ದ ರೂರಲ್ ಮಿರರ್.ಕಾಂ
ಇಲಿಗಳ ಕಾಟಕ್ಕೆ ಇಲ್ಲಿದೆ ಸುಲಭ ಪರಿಹಾರ…!
November 10, 2025
7:26 AM
by: ರೂರಲ್‌ ಮಿರರ್ ಸುದ್ದಿಜಾಲ
ಅಡಿಕೆ ಕ್ಯಾನ್ಸರ್ ಕಾರಕ ಅಲ್ಲ, ಕ್ಯಾನ್ಸರ್ ಪ್ರತಿಬಂಧಕ – ಅಧ್ಯಯನ ವರದಿ
November 10, 2025
7:16 AM
by: ರೂರಲ್‌ ಮಿರರ್ ಸುದ್ದಿಜಾಲ
ಪಶ್ಚಿಮಘಟ್ಟಗಳಲ್ಲಿ ಹೊಸ ಸಸ್ಯ ಪ್ರಭೇದಗಳು ಪತ್ತೆ | ಸೊನೆರೆಲಾ ಜಾತಿಯ   ಮೂರು  ಪ್ರಭೇದಗಳು
November 10, 2025
7:07 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror