ಕಾಡಿನೊಳಗೆ ಕಾರಿನ ಮನೆ | 18 ವರ್ಷಗಳಿಂದ ಕಾರಿನ ಮನೆಯಲ್ಲಿ ವಾಸ…..! |

October 3, 2021
11:05 PM

ಸುತ್ತಲೂ ಕಾಡು. ಆ ಕಾಡಿನೊಳಗೆ ಕಾರು. ಆ ಕಾರಿನಲ್ಲಿ  ಮನೆ..!, ಆ ಮನೆಯಲ್ಲಿ  ಒಂಟಿ ಬದುಕು….!. ಇಂತಹದ್ದೊಂದು ಅಚ್ಚರಿಯ ಬದುಕು ಕಳೆದ 18  ವರ್ಷಗಳಿಂದ ನಡೆಸುತ್ತಿದ್ದಾರೆ ಚಂದ್ರಶೇಖರ್.‌

Advertisement

ಸುಳ್ಯ ತಾಲೂಕಿನ ಅರಂತೋಡು ಬಳಿಯ ಅಡ್ತಲೆಯ ಬೆದ್ರಪಣೆ ಎಂಬ ಪ್ರದೇಶದಲ್ಲಿ ಕಾಡು ದಾರಿಯ ಪಕ್ಕದಲ್ಲಿ  ಕಾರಿನ ಮನೆಯಲ್ಲಿ  ವಾಸ ಮಾಡುತ್ತಿದ್ದಾರೆ ಚಂದ್ರಶೇಖರ್.‌ ವೃತ್ತಿಯಲ್ಲಿ ಚಾಲಕನಾಗಿದ್ದು ಕೃಷಿಕನೂ ಆಗಿದ್ದ ಚಂದ್ರಶೇಖರ್‌ ಅರಂತೋಡಿನ ಪಕ್ಕದ ಗ್ರಾಮದ ನೆಲ್ಲೂರು ಕೆಮ್ರಾಜೆಯವರು. ಅಲ್ಲಿ ಕೃಷಿ ಭೂಮಿಯನ್ನೂ ಹೊಂದಿದ್ದರು. ಸುಮಾರು  18 ವರ್ಷಗಳ ಹಿಂದೆ ಕೃಷಿ ಭೂಮಿ ಏಲಂ ಆದ ಬಳಿಕ ಈ ಸ್ಥಿತಿಗೆ ಬಂದಿದ್ದಾರೆ.

Advertisement

ನೆಲ್ಲೂರು ಕೆಮ್ರಾಜೆಯಲ್ಲಿ ಕೃಷಿ ಭೂಮಿ ಹೊಂದಿದ್ದ ಚಂದ್ರಶೇಖರ್‌ ಅವರು ಕೃಷಿ ಸಾಲ ಪಡೆದು ಸಾಲ ಮರುಪಾವತಿ ಮಾಡಲಾಗದೆ ಎಂದು ಕೃಷಿ ಭೂಮಿ ಹರಾಜು ನಡೆದಿತ್ತು. ಅದಾದ ಬಳಿಕ ಕಾರೊಂದು ಖರೀದಿ ಮಾಡಿ ಬಾಡಿಗೆ ಮಾಡಿ ಬದುಕು ಸಾಗಿಸುತ್ತಿದ್ದರು. ಕ್ರಮೇಣ ಕಾರು ಹಳೆಯದಾದ್ದರಿಂದ ಆಗಾ ಕೈಕೊಡುತ್ತಿತ್ತು. ಒಂದು ಸಂದರ್ಭ ತನ್ನ ಸಹೋದರಿ ಮನೆ ಇರುವ ಅಡ್ತಲೆ ಬಳಿಯ ಬೆದ್ರಪಣೆಗೆ ಹೋದಾಗ ಕಾರು ಬಾಕಿಯಾಯಿತು. ದುರಸ್ತಿಗೆ ಪ್ರಯತ್ನಿಸಿ ಆಗಿರಲಿಲ್ಲ. ಅದಾದ ಬಳಿಕ ಅದೇ ಕಾರಿನಲ್ಲಿ ವಾಸ ಮಾಡಿದರು. ಕಾರಿನ ಮೇಲೆ ಛಾವಣಿ ಮಾಡಿ ರಸ್ತೆ ಬದಿಯೇ ಕಾರಿನಲ್ಲಿಯೇ ಮಲಗಿ ಅದನ್ನೇ ಮನೆಯಾಗಿಸಿದರು. 18 ವರ್ಷಗಳಿಂದ ಈ ರೀತಿ ಬದುಕು ಸಾಗಿಸುತ್ತಿದ್ದಾರೆ.

Advertisement

ಜೀವನೋಪಾಯಕ್ಕಾಗಿ ಸಮೀಪದ ಕಾಡಿನಿಂದ ಬಳ್ಳಿಗಳನ್ನು ತಂದು ಬುಟ್ಟಿ ಹೆಣೆದು ಸಮೀಪದ ಪೇಟೆಗೆ ಅಥವಾ ಸುಳ್ಯದ ಅಂಗಡಿಗೆ ಸೈಕಲ್‌ ಮೂಲಕ ತೆರಳಿ ಬುಟ್ಟಿ ಮಾರಾಟ ಮಾಡುತ್ತಾರೆ. ಈ ಮೂಲಕ ದಿನಸಿ ಸಾಮಾಗ್ರಿ ತಂದು ತಾವೇ ಅಡುಗೆ ಮಾಡಿ ಬದುಕು ಸಾಗಿಸುತ್ತಿದ್ದಾರೆ. ಇದುವರೆಗೆ ಯಾವ ಸಮಸ್ಯೆ ಆಗಿಲ್ಲ, ತನಗೆ ನ್ಯಾಯ ಸಿಗಬೇಕು ಎಂದು ಆಗಾಗ ಮಾತಿನ ನಡುವೆ ಹೇಳುತ್ತಾರೆ. ಕಡಿಮೆ ದರದಲ್ಲಿ ಕಾರು ಸಿಗಬಹುದೇ ಎಂದು ಪ್ರಶ್ನೆ ಮಾಡುವ ಚಂದ್ರಶೇಖರ್‌ , ಭೂಮಿ, ಕಾರು ಬಗ್ಗೆ ಆಗಾಗ ಮಾತನಾಡುತ್ತಾ, ಭೂಮಿ ನನಗೆ ಖರೀದಿ ಮಾಡಬಹುದು, ನನಗೆ ಸರಿಯಾದ ಮೊತ್ತ ಸಿಗಲಿ ಎಂದು ಹೇಳುತ್ತಾರೆ.

 

 

Advertisement

 

Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

ಇದನ್ನೂ ಓದಿ

ಪ್ಲಾಸ್ಟಿಕ್‌ ತ್ಯಾಜ್ಯ ಕಡಿಮೆ ಮಾಡಲು ಏನು ಕ್ರಮ ? ಅಧ್ಯಯನ ವರದಿ ನಿಯಮ ಗ್ರಾಮಗಳಲ್ಲೂ ಜಾರಿಯಾಗಲಿ
August 5, 2025
7:02 AM
by: The Rural Mirror ಸುದ್ದಿಜಾಲ
ಕೃಷಿಯಲ್ಲಿ ಮೀಥೇನ್ ಕಡಿತದ ಗುರಿ | ವಿಯೆಟ್ನಾಂನಲ್ಲಿ ವಿಶೇಷ ಮಾರ್ಗಸೂಚಿ
August 4, 2025
9:42 PM
by: The Rural Mirror ಸುದ್ದಿಜಾಲ
ಅರ್ಜುನ ಆನೆ ಹೆಸರಿನಲ್ಲಿ ಪ್ರಶಸ್ತಿ
August 4, 2025
9:15 PM
by: The Rural Mirror ಸುದ್ದಿಜಾಲ
ಅರಣ್ಯ ಇಲಾಖೆ ಕಾರ್ಯಾಚರಣೆ ಕಾಡಾನೆ ಸೆರೆ
August 4, 2025
9:07 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group