The Rural Mirror ವಾರದ ವಿಶೇಷ

ಅಡಿಕೆ ಧಾರಣೆ ಕುಸಿತದ ಭೀತಿಯಲ್ಲಿರುವ ಬೆಳೆಗಾರರಿಗೆ ಹೊಸ ನಿರೀಕ್ಷೆ | ಕಾರ್ಬನ್ ಸೀಕ್ವೆಸ್ಟ್ರೇಶನ್‌ | ಚಿನ್ನದ ಬೆಲೆ ಬರಬಹುದು…! |

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಅಡಿಕೆ ಧಾರಣೆ ಕುಸಿತದ ಭೀತಿಯಲ್ಲಿರುವ ಅಡಿಕೆ ಬೆಳೆಗಾರರಿಗೆ ಈಗ ಹೊಸ ಸಂಗತಿಯೊಂದು ತೆರೆದುಕೊಂಡಿದೆ.ಈ ಬಗ್ಗೆ ವಿಜ್ಞಾನಿಗಳು ಅಧ್ಯಯನ ನಡೆಸಲಿದ್ದಾರೆ. ಅಡಿಕೆ, ತೆಂಗು ಮರದಲ್ಲಿ ಸಂಗ್ರಹವಾಗುವ ಕಾರ್ಬನ್‌ ಮಾರಾಟದಿಂದ ಆದಾಯ ಪಡೆಯುವ ಬಗ್ಗೆ ಚಿಂತನೆ ನಡೆಯುತ್ತಿದೆ.

Advertisement

ಕಾರ್ಬನ್ ಸೀಕ್ವೆಸ್ಟ್ರೇಶನ್ ಬಗ್ಗೆ ಸಿಪಿಸಿಆರ್‌ಐ ನಿರ್ದೇಶಕ ಡಾ.ಕೆ.ಬಾಲಚಂದ್ರ ಹೆಬ್ಬಾರ್ ಅವರು ಮಾಹಿತಿ ನೀಡಿದ್ದಾರೆ. ವಿಟ್ಲದ ಸಿಪಿಸಿಆರ್‌ಐ ವಠಾರದಲ್ಲಿ ನಡೆದ ರೈತ ಮಾಹಿತಿ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಅಡಿಕೆ ಧಾರಣೆ ಕುಸಿತ, ಅಸ್ಥಿರತೆಯ ಬಗ್ಗೆ ಚರ್ಚೆ ಆಗುತ್ತಿದೆ. ಅಡಿಕೆಯ ಪರ್ಯಾಯದ ಬಗ್ಗೆಯೂ ಸಾಕಷ್ಟು ಚಿಂತನೆ ನಡೆಯುತ್ತಿದೆ. ಈ ನಡುವೆಯೇ ಇದೀಗ ಕಾರ್ಬನ್ ಸೀಕ್ವೆಸ್ಟ್ರೇಶನ್ ಬಗ್ಗೆ ಹೆಚ್ಚು ಚರ್ಚೆ ಆಗುತ್ತಿದೆ. ಅಡಿಕೆ ಹಾಗೂ ತೆಂಗು ಬೆಳೆಗಾರರಿಗೆ ಇದು ವರವಾಗಬಹುದು. ಈ ಬಗ್ಗೆ ಅಧ್ಯಯನ ನಡೆಯುತ್ತಿದೆ ಎಂದು ಅವರು ಹೇಳಿದರು.

ಇಂದು ಇಡೀ ಪ್ರಪಂಚದಲ್ಲಿ ಹವಾಮಾನದ ಬದಲಾವಣೆಯ ಬಗ್ಗೆ ಭಾರೀ ಚರ್ಚೆ ಆಗುತ್ತಿದೆ. ಇದಕ್ಕೆ ಪ್ರಮುಖ ಕಾರಣ ಕಾರ್ಬನ್‌ ಡೈ ಆಕ್ಸೈಡ್‌. ಬೇರೆ ಬೇರೆ ಕಂಪನಿಗಳಿಂದ ಹೊರಸೂಸುವ ಕಾರ್ಬನ್‌ ಡೈ ಆಕ್ಸೈಡ್‌ ವಾತಾವರಣದಿಂದ ತೆಗೆಯುವ ಕೆಲಸ ಆಗಬೇಕಿದೆ. ಅದಕ್ಕಾಗಿ ಗಿಡ, ಮರಗಳೇ ಮುಖ್ಯವಾಗುತ್ತದೆ. ಅಡಿಕೆ ಹಾಗೂ ತೆಂಗು ಹೆಚ್ಚಾಗಿ ಬೆಳೆಯುವ ಪ್ರದೇಶದಲ್ಲಿ ಈ ಬಗ್ಗೆ ಅಧ್ಯಯನ ಆಗುತ್ತಿದೆ. ಅಡಿಕೆ-ತೆಂಗು ಸುಮಾರು 50 ವರ್ಷ ಬದುಕುತ್ತವೆ. ಈ ಸಂದರ್ಭದಲ್ಲಿ ಗಿಡಗಳು ಕಾಂಡದಲ್ಲಿ ಸಂಗ್ರಹಿಸುವ ಕಾರ್ಬನ್‌ ಬಗ್ಗೆ ಅಧ್ಯಯನ ಆಗುತ್ತಿದೆ.  ಈ ಕಾರ್ಬನ್‌ ಹಣ ಕೊಟ್ಟು ಖರೀದಿ ಮಾಡುವ ದಿನಗಳು ಬರಲಿವೆ. ಅಂದರೆ ಕಾರ್ಬನ್‌ ಕ್ರೆಡಿಟ್‌ ಅಗತ್ಯವಾಗಿ ಬೇಕಾಗಲಿದೆ. ಇದಕ್ಕಾಗಿ ಅಡಿಕೆ , ತೆಂಗು ಎಷ್ಟು ಕಾರ್ಬನ್‌ ಸಂಗ್ರಹ ಮಾಡುತ್ತದೆ ಹಾಗೂ ಕೃಷಿಕರಿಗೆ ಯಾವ ರೀತಿಯಲ್ಲಿ ಪ್ರಯೋಜನವಾಗಬಹುದು, ಯಾವ ರೀತಿ ಮಾರಾಟ ಮಾಡಬಹುದು ಎಂಬುದರ ಬಗ್ಗೆ ಅಧ್ಯಯನ ನಡೆಯುತ್ತಿದೆ, ಒಂದು ವೇಳೆ ಎಲ್ಲವೂ ಸರಿಯಾಗಿ ನಡೆದರೆ ಚಿನ್ನಕ್ಕಿಂತಲೂ ಅಧಿಕ ಧಾರಣೆ ಸಿಗಬಹುದು ಎಂದು ಡಾ.ಬಾಲಚಂದ್ರ ಹೆಬ್ಬಾರ್ ಹೇಳಿದರು.

ಕಾರ್ಬನ್ ಸೀಕ್ವೆಸ್ಟ್ರೇಶನ್ ಎನ್ನುವುದು ವಾತಾವರಣದಿಂದ ಇಂಗಾಲದ ಡೈಆಕ್ಸೈಡ್  ತೆಗೆದುಹಾಕುವ ಪ್ರಕ್ರಿಯೆ ಮತ್ತು ಅದನ್ನು ಸಂಗ್ರಹಿಸುವುದು. ಹವಾಮಾನ ಬದಲಾವಣೆಯ ವಿರುದ್ಧದ ಹೋರಾಟಕ್ಕೆ ಕಾರ್ಬನ್ ಸೀಕ್ವೆಸ್ಟ್ರೇಶನ್ ಅತ್ಯಗತ್ಯ ಎಂದು ಗುರುತಿಸಲ್ಪಟ್ಟಿದೆ. ಹವಾಮಾನ ಬದಲಾವಣೆಯ ವಿರುದ್ಧ ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.ಇಂಗಾಲದ ಡೈಆಕ್ಸೈಡ್ ಮಟ್ಟಗಳು ಮತ್ತು ಪರಿಣಾಮವಾಗಿ ಉಂಟಾಗುವ ಪರಿಸರ ಪರಿಣಾಮಗಳ ವಿರುದ್ಧದ  ಹೋರಾಟದಲ್ಲಿ ಕಾರ್ಬನ್ ಸೀಕ್ವೆಸ್ಟ್ರೇಶನ್  ಬಹುಮುಖ್ಯವಾಗಿ ಈಗ ಕಾಣಿಸಿಕೊಂಡಿದೆ.  ನೈಸರ್ಗಿಕ  ವ್ಯವಸ್ಥೆಗಳಿಗೆ ಇಲ್ಲಿ ಹೆಚ್ಚಿನ ಆದ್ಯತೆ ಇದೆ.

Carbon sequestration is the process of capturing and storing atmospheric carbon dioxide. It is one method of reducing the amount of carbon dioxide in the atmosphere with the goal of reducing global climate change.

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹೊಸರುಚಿ | ಉಪ್ಪಿನಲ್ಲಿ ಹಾಕಿದ ಹಲಸಿನ ಕಾಯಿ ಚಟ್ಟಂಬಡೆ

ಉಪ್ಪಿನಲ್ಲಿ ಹಾಕಿದ ಹಲಸಿನ ಕಾಯಿ ಚಟ್ಟಂಬಡೆ..

6 hours ago

ಭಾರತದಿಂದ ‘ಆಪರೇಷನ್ ಸಿಂಧೂರ್’ | ಭಯೋತ್ಪಾದಕ ಮೂಲಸೌಕರ್ಯಗಳ ನೆಲೆಗಳ ನಾಶ | 9 ಭಯೋತ್ಪಾದಕ ಶಿಬಿರಗಳ ಮೇಲೆ ದಾಳಿ |

ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದಲ್ಲಿನ ಭಯೋತ್ಪಾದಕ ಮೂಲಸೌಕರ್ಯಗಳ ನೆಲೆಗಳ…

7 hours ago

ಯುದ್ಧ ಆದರೆ ಕೃಷಿ ಉತ್ಪನ್ನಗಳ ಧಾರಣೆ ಏನಾಗಬಹುದು?

ಯುದ್ಧ ಆದರೆ ಅಥವಾ ಬಿಗುವಿನ ವಾತಾವರಣ ನಿರ್ಮಾಣವಾದರೆ ತಾತ್ಕಾಲಿಕವಾಗಿ ಎಲ್ಲಾ ಉತ್ಪನ್ನಗಳ ಮಾರುಕಟ್ಟೆಗಳು…

1 day ago

ಪ್ರೀತಿಯ ಹಂಬಲ ಇರುವ, ವಯಸ್ಸಾದ, ಅನುಭವ ಹೊಂದಿದ ವ್ಯಕ್ತಿಗಳನ್ನು ಗೌರವಿಸುವ 5 ರಾಶಿಯ ಹುಡುಗಿಯರು |

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರಾದ ಜ್ಯೋತಿಷ್ಗಳನ್ನು ಸಂಪರ್ಕಿಸಿ 9535156490

1 day ago

ಮಂಗಳೂರು | ರಾಷ್ಟ್ರೀಯ ಚೆಸ್ ಪಂದ್ಯಾಟ ಇಂದು ಸಮಾರೋಪ

ಮಂಗಳೂರು ಟೌನ್ ಹಾಲ್ ನಲ್ಲಿ ಶನಿವಾರದಿಂದ ನಡೆಯುತ್ತಿದ್ದ ರಾಷ್ಟ್ರೀಯ ಓಪನ್ ಕ್ಲಾಸಿಕಲ್ ರೇಟೆಡ್…

1 day ago