ಅಪರೂಪದ ಗರಗಸ ಮೀನು ಮಲ್ಪೆ ಬಂದರಿನಲ್ಲಿ ಮೀನುಗಾರರ ಬಲೆಗೆ ಬಿದ್ದಿದೆ. ಇದನ್ನು ಇಂಗ್ಲಿಷ್ ನಲ್ಲಿ ಕಾರ್ಪೆಂಟರ್ ಶಾರ್ಕ್ ಎಂದು ಕರೆಯುತ್ತಾರೆ.
ಮೀನಿನ ಮುಖದ ಭಾಗದಲ್ಲಿ ಗರಗಸದಂತೆ ಹೋಲುವ ಉದ್ದದ ಅಲಗು ಇದ್ದು, ಬಲೆಗೆ ಬಿದ್ದ ಸುಮಾರು 250 ಕೆ.ಜಿಯ ಈ ಮೀನನ್ನು ಬೋಟಿನಲ್ಲಿ ಬಂದರಿಗೆ ತರಲಾಗಿತ್ತು. ನಂತರ ಅಲ್ಲಿಂದ ಕ್ರೇನ್ ಮೂಲಕ ಎತ್ತಲಾಯಿತು. ಬಳಿಕ ಲಾರಿ ಮೂಲಕ ಮಂಗಳೂರಿಗೆ ಸಾಗಿಸಲಾಯಿತು.
ಇದರ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದು, ಇದೀಗ ಅವುಗಳು ವೈರಲ್ ಆಗಿವೆ. ಈ ಅಪರೂಪದ ಮೀನುಗಳು ಆಳಸಮುದ್ರದಲ್ಲಿ ಮಾತ್ರ ಇರುತ್ತವೆ. ಈ ಮೀನುಗಳ ಸಂಖ್ಯೆ ಇಳಿಮುಖವಾಗುತ್ತಿದ್ದು, ಅಳಿವಿನಂಚಿನಲ್ಲಿರುವ ಸಂತತಿ ಎಂದು ಹೇಳಲಾಗುತ್ತಿದೆ.
An extremely rare & endangered species of carpenter shark (sawfish) was caught in fishnets at Malpe on Thursday. 🦈
AdvertisementThe huge carpenter shark weighed around 250 kgs, was accidentally trapped in the nets of a boat named 'Sea Captain' that had left Malpe port to fish in deep waters pic.twitter.com/3AimndOv1I
— Mangalore City (@MangaloreCity) March 12, 2022
Advertisement