ಎರಡು ಪ್ಯಾಕೆಟ್ ಅಡಿಕೆ‌ ಹುಡಿ ಸಾಗಾಟ | ಟರ್ಕಿಯಲ್ಲಿ ಬಂಧನವಾಗಿದ್ದ ಪಾಕಿಸ್ತಾನಿ ಪ್ರಜೆ ಬಿಡುಗಡೆ | ಟರ್ಕಿಗೆ ಅಡಿಕೆ-ಸುಪಾರಿ ಸಾಗಾಟ ಶಾಶ್ವತವಾಗಿ ನಿಷೇಧ…! |

November 30, 2022
10:37 AM

ತನ್ನ ಪ್ರವಾಸದ ಸಂದರ್ಭ ಮಿತ್ರರಿಗೆ ಉಡುಗೊರೆಯಾಗಿ ಅಡಿಕೆ ಪ್ಯಾಕೆಟ್‌ ಸಾಗಾಟ ಮಾಡಿದ ಆರೋಪದ ಮೇಲೆ ಟರ್ಕಿಯಲ್ಲಿ ಬಂಧಿಸಲ್ಪಟ್ಟಿದ್ದ ಪಾಕಿಸ್ತಾನದ ಲಾಹೋರ್‌ನ 26 ವರ್ಷದ ನಿವಾಸಿ ಮುಹಮ್ಮದ್ ಅವೈಸ್ ಬಿಡುಗಡೆಯ ಜೊತೆಗೆ ಟರ್ಕಿಗೆ ಅಡಿಕೆಯನ್ನು ಶಾಶ್ವತವಾಗಿ ಸಾಗಾಟ ಮಾಡುವುದಕ್ಕೆ ನಿಷೇಧ ಹೇರಲಾಗಿದೆ.

ಪಾಕಿಸ್ತಾನದ ಮುಹಮ್ಮದ್ ಅವೈಸ್ ತನ್ನ ಪ್ರವಾಸದ ವೇಳೆ ಮಿತ್ರರಿಗೆ ಎರಡು ಅಡಿಕೆ ಪ್ಯಾಕೆಟ್‌ ಸಾಗಾಟ ಮಾಡುತ್ತಿದ್ದ. ಈ ಸಂದರ್ಭ ಟರ್ಕಿಯಲ್ಲಿ ವಿಮಾನ ಇಳಿಯುತ್ತಿದ್ದಂತೆ ನಾಗರಿಕ ವಿಮಾನಯಾನ ಪ್ರಾಧಿಕಾರದ ತಪಾಸಣೆಯ ವೇಳೆ ಸಿಕ್ಕಿಹಾಕಿಕೊಂಡು ಬಂಧಿಸಲ್ಪಟ್ಟಿದ್ದ. ಪಾಕಿಸ್ತಾನದಲ್ಲಿ ಅಡಿಕೆ ನಿಷೇಧ ಇಲ್ಲ, ಆದರೆ ಟರ್ಕಿಯಲ್ಲಿ ಅಡಿಕೆಯು ಮಾದಕವಸ್ತು/ಡ್ರಗ್ಸ್ ವರ್ಗದ ಅಡಿಯಲ್ಲಿ ಬರುತ್ತದೆ. ಹೀಗಾಗಿ ಅಡಿಕೆ ಸಾಗಾಟ,ಬಳಕೆ ನಿಷೇಧವಾಗಿತ್ತು. ಈ ಬಗ್ಗೆ ಅರಿವು ಇರದ ಪಾಕಿಸ್ತಾನದ ಪ್ರಜೆ ಅಡಿಕೆ ಸಾಗಾಟ ಮಾಡಿದ್ದ. ದೇಶದ ಕಾನೂನು ಪ್ರಕಾರ ಟರ್ಕಿಯಲ್ಲಿ ಪಾಕಿಸ್ತಾನಿ ಪ್ರಜೆಯನ್ನು ಬಂಧಿಸಿದ್ದರು.

ಬಳಿಕ ಇಸ್ತಾನ್‌ಬುಲ್‌ನಲ್ಲಿರುವ ಪಾಕಿಸ್ತಾನಿ ದೂತಾವಾಸದ ಸತತ ಪ್ರಯತ್ನಗಳ ನಂತರ, ಇಸ್ತಾನ್‌ಬುಲ್‌ನ ಸ್ಥಳೀಯ ನ್ಯಾಯಾಲಯವು  ಬಂಧನದಲ್ಲಿರುವ ಪಾಕಿಸ್ತಾನಿ ಪ್ರಜೆಯನ್ನು ಬಿಡುಗಡೆ ಮಾಡಿದೆ. ಇದರ ಜೊತೆಗೇ ಮುಂದೆ ಟರ್ಕಿಯಲ್ಲಿ ಅಡಿಕೆ ಸಾಗಾಟ, ಬಳಕೆ ಮಾಡದಂತೆ ಪಾಕಿಸ್ತಾನಿ ಪ್ರಜೆಗೆ ಎಚ್ಚರಿಕೆ ನೀಡಿ ಶಾಶ್ವತವಾಗಿ ಅಡಿಕೆ ಸಾಗಾಟವನ್ನು ನಿಷೇಧ ಮಾಡಿದೆ.

ಕೆಲವು ದೇಶಗಳಲ್ಲಿ ಅಡಿಕೆ ಬಳಕೆ ಹಾಗೂ ಸಾಗಾಟಕ್ಕೆ ನಿರ್ಬಂಧ ಇದೆ. ದೇಶದ ಕಾನೂನು ಪ್ರಕಾರ ವಿಮಾನ ನಿಲ್ದಾಣದಲ್ಲಿ ತಪಾಸಣೆ ವೇಳೆ ಅಡಿಕೆ ಪತ್ತೆಯಾದರೆ ಬಂಧಿಸಲಾಗುತ್ತದೆ.

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ನನ್ನ ಚಿತ್ರ-ನನ್ನ ಖುಷಿ | ಬಣ್ಣಗಳ ಮೂಲಕ ಅರಳಿದ ಗಣೇಶ
September 14, 2026
11:33 AM
by: ದ ರೂರಲ್ ಮಿರರ್.ಕಾಂ
ನನ್ನ ಚಿತ್ರ-ನನ್ನ ಖುಷಿ | ಬಣ್ಣಗಳ ಲೋಕದಲ್ಲಿ ಪುಟ್ಟ ಮನಸ್ಸಿನ ಖುಷಿ
September 14, 2026
11:07 AM
by: ದ ರೂರಲ್ ಮಿರರ್.ಕಾಂ
ವಿಘ್ನಗಳ ಆಚೆ ಕಾಣುವ ಗಣೇಶತತ್ತ್ವ
September 14, 2026
8:21 AM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ಶಿರಾಡಿ ಘಾಟ್‌ನಲ್ಲಿ ಸೋಮವಾರ ಟ್ರಾಫಿಕ್‌ ಸಂಕಷ್ಟದ ಸಾಧ್ಯತೆ – ಮುಂಜಾಗ್ರತಾ ಕ್ರಮ ಅಗತ್ಯ
September 13, 2026
9:08 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror