Advertisement
MIRROR FOCUS

ಗೇರು ಹಣ್ಣಿನಿಂದ ಆದಾಯಕ್ಕೆ ಹೊಸ ದಾರಿ | ಮಾ.11 ರಂದು ICAR–ಗೇರು ಸಂಶೋಧನಾ ನಿರ್ದೇಶನಾಲಯದಲ್ಲಿ ಉದ್ಯಮ–ವಿಜ್ಞಾನಿಗಳ ಸಂವಾದ

Share

 ಗೇರು ಹಣ್ಣಿನಿಂದ ಮೌಲ್ಯವರ್ಧನೆ ಮಾಡಿ ಹೆಚ್ಚಿನ ಆದಾಯ ಗಳಿಸಲು ರೈತರು, ಉದ್ಯಮಿಗಳು ಹಾಗೂ ಆಸಕ್ತರಿಗೆ ಮಹತ್ವದ ಅವಕಾಶ ಒದಗಿಸುವ ಉದ್ದೇಶದಿಂದ ICAR–ಗೇರು ಸಂಶೋಧನಾ ನಿರ್ದೇಶನಾಲಯ, ಪುತ್ತೂರು ವತಿಯಿಂದ “Cashew Apple to Market: Value Addition Possibilities and the Way Forward” ಎಂಬ ವಿಷಯದಡಿ Industry Interface Meeting ಆಯೋಜಿಸಲಾಗಿದೆ. ಈ ಸಂವಾದ ಕಾರ್ಯಕ್ರಮವು ಮಾರ್ಚ್‌ 11, 2026ರಂದು ಮಧ್ಯಾಹ್ನ 2:30ಕ್ಕೆ ಪುತ್ತೂರಿನ ICAR–Directorate of Cashew Research ಕೇಂದ್ರದಲ್ಲಿ ನಡೆಯಲಿದೆ.

Advertisement

ಗೇರು ಹಣ್ಣಿನ ಮೌಲ್ಯವರ್ಧನೆ, ತಂತ್ರಜ್ಞಾನ ಬಳಕೆ ಮತ್ತು ಉದ್ಯಮೀಕರಣದ ಅವಕಾಶಗಳ ಕುರಿತು ವಿಜ್ಞಾನಿಗಳು, ಉದ್ಯಮಿಗಳು ಹಾಗೂ ರೈತರಿಗೆ ನೇರ ಸಂವಾದ ಮತ್ತು ಮಾರ್ಗದರ್ಶನ ನೀಡುವ ಪ್ರಮುಖ ವೇದಿಕೆ ಇದಾಗಿದೆ. ಈ ಸಂವಾದ ಹಾಗೂ ಸಭೆಯಲ್ಲಿ ಗೇರು ಹಣ್ಣಿನ ಮೌಲ್ಯವರ್ಧನೆ ತಂತ್ರಜ್ಞಾನಗಳ ಪ್ರದರ್ಶನ,  ವಿಜ್ಞಾನಿಗಳು ಮತ್ತು ನವೋದ್ಯಮಿಗಳೊಂದಿಗೆ ನೇರ ಸಂವಾದ, ಲೈಸೆನ್ಸಿಂಗ್ ಮತ್ತು ವಾಣಿಜ್ಯೀಕರಣದ ಅವಕಾಶಗಳ ಪರಿಚಯ, ಉದ್ಯಮ ಆರಂಭಿಸಲು ಬೇಕಾದ ಬಿಸಿನೆಸ್ ಮಾದರಿ ಹಾಗೂ ಮಾರ್ಗದರ್ಶನ ಹಾಗೂ ಉದ್ಯಮಿಗಳು ಮತ್ತು ವಿವಿಧ ಕ್ಷೇತ್ರದ ತಜ್ಞರೊಂದಿಗೆ ನೆಟ್‌ವರ್ಕಿಂಗ್ ಅವಕಾಶಗಳ ಬಗ್ಗೆ ಮಾಹಿತಿ ಹಾಗೂ ಗೇರು ಹಣ್ಣಿನಿಂದ ಜ್ಯೂಸ್‌, ಜ್ಯಾಂ, ಜೆಲ್ಲಿ, ಫರ್ಮೆಂಟೆಡ್ ಉತ್ಪನ್ನಗಳು ಸೇರಿದಂತೆ ಹಲವಾರು ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಿ ಉತ್ತಮ ಆದಾಯ ಗಳಿಸುವ ಸಾಧ್ಯತೆಗಳ ಕುರಿತು ವಿವರವಾದ ಮಾಹಿತಿ ನೀಡಲಾಗುತ್ತದೆ.

ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ನೋಂದಣಿ ಉಚಿತವಾಗಿದೆ, ಆದರೆ ಆಸನಗಳು ಸೀಮಿತವಾಗಿರುವುದರಿಂದ ಪೂರ್ವ ನೋಂದಣಿ ಕಡ್ಡಾಯವಾಗಿದೆ. ಹೆಚ್ಚಿನ ಮಾಹಿತಿಗೆ  ಡಾ. ಮೋಹನ, ಜಿ.ಎಸ್.: 99022 73468 ಅಥವಾ ಡಾ. ಅಶ್ವಥಿ ಚಂದ್ರಕುಮಾರ್: 97780 40698 ಅವರನ್ನು ಸಂಪರ್ಕ ಮಾಡಬಹುದು.

ಗೇರು ಹಣ್ಣು ಸಾಮಾನ್ಯವಾಗಿ ನಿರ್ಲಕ್ಷ್ಯಕ್ಕೆ ಒಳಗಾಗುವ ಉಪ ಉತ್ಪನ್ನವಾಗಿದ್ದರೂ, ಅದರ ಮೌಲ್ಯವರ್ಧನೆಯ ಮೂಲಕ ಹೆಚ್ಚಿನ ಆದಾಯ ಗಳಿಸುವ ಸಾಧ್ಯತೆ ಇದೆ. ಈ ಕಾರ್ಯಕ್ರಮವು ರೈತರು, ಯುವ ಉದ್ಯಮಿಗಳು ಹಾಗೂ ಆಹಾರ ಸಂಸ್ಕರಣೆಯಲ್ಲಿ ಆಸಕ್ತಿ ಹೊಂದಿರುವವರಿಗೆ ಹೊಸ ದಾರಿ ತೆರೆಸಲಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

ICAR–Directorate of Cashew Research, Puttur is organizing an Industry Interface Meeting titled “Cashew Apple to Market: Value Addition Possibilities and the Way Forward” on March 11, 2026, at 2:30 PM. The program will showcase technologies, business opportunities, and commercialization prospects related to cashew apple value addition. Registration is free but mandatory, and the event is expected to benefit farmers, entrepreneurs, and stakeholders interested in cashew-based enterprises.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಪರರನ್ನು ಮೆಟ್ಟಿಲಾಗಿಸಿದ ಸಾಧನೆ ಶಾಶ್ವತವಲ್ಲ: ಆತ್ಮವಂಚನೆಯ ಅಂಧಕಾರದತ್ತ ಕರೆದೊಯ್ಯುವ ಮಾರ್ಗ

ಇತರರ ಪರಿಶ್ರಮವನ್ನು ಮೆಟ್ಟಿಲಾಗಿಸಿಕೊಂಡ ಸಾಧನೆ ತಾತ್ಕಾಲಿಕವಾಗಿದ್ದು, ನಿಜವಾದ ಯಶಸ್ಸು ಸ್ವಪರಿಶ್ರಮ, ಸತ್ಯ ಮತ್ತು…

2 hours ago

ಹಿರಿಯರ ಪರಿಶ್ರಮದ ಫಲ ಮಕ್ಕಳಿಗೆ ಪರವಾನಗಿ ಆಗಬಾರದು

ಇತ್ತೀಚೆಗೆ (13.02.2026) ಬೆಂಗಳೂರಿನ ಆರು ಮಂದಿ ಎಳೆಯ ಗೆಳೆಯರು (ಎಲ್ಲರೂ 16 ರಿಂದ …

2 hours ago

ವಿಕಸಿತ ಭಾರತಕ್ಕೆ ಕೃತಕ ಬುದ್ಧಿಮತ್ತೆ ಅಡಿಪಾಯ : ಉತ್ಪಾದಕತೆ ಹೆಚ್ಚಳಕ್ಕೆ AI ಸಹಕಾರಿ

ಕೃತಕ ಬುದ್ಧಿಮತ್ತೆ (AI) ವಿಕಸಿತ ಭಾರತದ ನಿರ್ಮಾಣಕ್ಕೆ ಅಡಿಪಾಯವಾಗಿದ್ದು, ಉತ್ಪಾದಕತೆ, ಸ್ಪರ್ಧಾತ್ಮಕತೆ ಹಾಗೂ…

2 hours ago

ಸಫಾರಿ ಆರಂಭಿಸಲು ಮತ್ತೆ ಅನುಮತಿ | ಸಮಯ ಕಡಿತ, GPS-ಡ್ಯಾಶ್ ಕ್ಯಾಮ್ ಕಡ್ಡಾಯ – ಸಚಿವ ಈಶ್ವರ್ ಖಂಡ್ರೆ

ಬಂಡಿಪುರ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಸಫಾರಿಯನ್ನು ಮತ್ತೆ ಆರಂಭಿಸಲು ಅನುಮತಿ…

2 hours ago

ಚಿಕ್ಕಮಗಳೂರು : ಅರಣ್ಯ ಸಂರಕ್ಷಣೆಗೆ ಇಲಾಖೆ ಸನ್ನದ್ಧ; 970 ಕಿ.ಮೀ. ‘ಬೆಂಕಿ ಪಥ’ ನಿರ್ಮಾಣ

ಚಿಕ್ಕಮಗಳೂರು ಅರಣ್ಯ ವಿಭಾಗದಲ್ಲಿ ಕಾಡು ಬೆಂಕಿ ತಡೆಯಲು 970 ಕಿ.ಮೀ. ಬೆಂಕಿ ಪಥ…

2 hours ago

ಮಂಗಳೂರಿನಲ್ಲಿ ಫೆ.20 ರಿಂದ ‘ನಮ್ಮ ಸರಸ್ ಮೇಳ-2026’ | ಮಹಿಳಾ ಸ್ವ-ಸಹಾಯ ಗುಂಪುಗಳ ಉತ್ಪನ್ನಗಳ ಬೃಹತ್ ಪ್ರದರ್ಶನ

ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ಫೆಬ್ರವರಿ 20ರಿಂದ 28ರವರೆಗೆ ರಾಷ್ಟ್ರ ಮಟ್ಟದ ಮಹಿಳಾ…

3 hours ago