ಮಹಿಳಾ ಗ್ರಾಮಸಭೆ | ರಾಷ್ಟೀಯ ಕೃಷಿ ವಿಕಾಸ ಯೋಜನೆ ಬಗ್ಗೆ ಮಾಹಿತಿ ನೀಡಿದ ವಿಜ್ಞಾನಿ

May 25, 2025
5:57 AM

ಸುಳ್ಯ ತಾಲೂಕಿನ ಸಂಪಾಜೆ ಗ್ರಾಮ ಪಂಚಾಯತ್ ಸಭಾಭವನದಲ್ಲಿ “ಮಹಿಳಾ ಗ್ರಾಮಸಭೆ” ಯು ಈಚೆಗೆ ನಡೆಯಿತು. ಸಭೆಯಲ್ಲಿ ವಿವಿಧ ವಿಷಯದ ಬಗ್ಗೆ ಮಾಹಿತಿ ನೀಡಲಾಯಿತು. ಅಡಿಕೆ ಹಳದಿ ಎಲೆರೋಗ ಪೀಡಿತ ಪ್ರದೇಶದಲ್ಲಿ ಪರ್ಯಾಯ ಬೆಳೆಯಾಗಿ ಗೇರು ಕೃಷಿಯ ಬಗ್ಗೆಯೂ ಈ ಹಿಂದೆ ಚಿಂತನೆ ನಡೆದಿತ್ತು. ಹೀಗಾಗಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿಯಲ್ಲಿ ಸಂಪಾಜೆಯಲ್ಲಿ ಗೇರು ಕೃಷಿಯ ಬಗ್ಗೆ ಗೇರು ಸಂಶೋಧನಾ ಮಂಡಳಿ ವಿಜ್ಞಾನಿ ಡಾ.ಅಶ್ವತಿ ಅವರು ಮಾಹಿತಿ ನೀಡಿದರು.

ರಾಷ್ಟೀಯ ಕೃಷಿ ವಿಕಾಸ ಯೋಜನೆ ಗೇರು ಕೃಷಿಯ ಬಗ್ಗೆ ಡಾ. ಅಶ್ವತಿ ಮಾತನಾಡಿ ಸಂಪಾಜೆ ಗ್ರಾಮಕ್ಕೆ ಗೇರು ಸಂಶೋಧನಾ ಮಂಡಳಿಯಿಂದ ಒಂದು ಪ್ರಾಜೆಕ್ಟ್ ಪ್ರಸ್ತಾವನೆ ಸರಕಾರಕ್ಕೆ ಸಲ್ಲಿಸಿದ್ದು ಯಶಸ್ವಿಯಾಗಿದೆ. ಇದರಿಂದ ಕೃಷಿಕರಿಗೆ ಗೇರು ಗಿಡಗಳು, ಯಂತ್ರೋಪಕರಣಗಳು, ಹಾಗೂ ಅವಶ್ಯಕತೆ ಇದ್ದಲ್ಲಿ FPO ಮುಂತಾದ ಸೌಲಭ್ಯಗಳನ್ನು ಕೊಡಲು ಸಾಧ್ಯವಿದೆ. ಇದಕ್ಕೆ ಗ್ರಾಮ ಪಂಚಾಯತ್, ಸ್ವ ಸಹಾಯ ಸಂಘದ ಸದಸ್ಯರುಗಳು ಮತ್ತು ಗ್ರಾಮದ ಜನರ ಸಹಕಾರ ಬಹಳ ಮುಖ್ಯ ಆಗಿರುತ್ತದೆ. ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯತ್ ಜೊತೆಗೆ ನಮ್ಮ ಸಂಸ್ಥೆಯು ಸಂಪರ್ಕದಲ್ಲಿ ಇದ್ದುಕೊಂಡು ಉತ್ತಮ ರೀತಿಯ ಫಲಿತಾಂಶವನ್ನು ನೀಡಲು ಸಹಕಾರ ನೀಡಲಿದೆ. ಸಂಜೀವಿನಿ ಒಕ್ಕೂಟದ ಕೃಷಿ ಸಖಿ ಮೋಹಿನಿ ವಿಶ್ವನಾಥ್ ನಿಶಾ ಅವರು  ಸಂಸ್ಥೆಯ ಜೊತೆಗೆ ಸ್ಪಂದಿಸುತ್ತಿದ್ದು  ಗ್ರಾಮ ಪಂಚಾಯತ್ ಸಹಕಾರ ನೀಡುತ್ತಿದೆ ಎಂದು ಹೇಳಿದರು.

ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ  ಸುಮತಿ ಶಕ್ತಿವೇಲು ಇವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.  ಸಭೆಯಲ್ಲಿ ಲತಾಕುಮಾರಿ ,ವಕೀಲರು ಸುಳ್ಯ, ಮೇರಿ ಎಸ್. ಬ್ಲಾಕ್ ಮೆನೇಜರ್ ನಾನ್ ಪಾರ್ಮ್, NRLM, ಸುಳ್ಯ , ಕೃಷಿಕರಾದ  ಅಶೋಕ್ ಪ್ರಭು , ದೀಪಿಕಾ ಪಿ ಮೇಲ್ವಿಚಾರಕರು ICDS ವಲಯ ಅರಂತೋಡು, ಅನುಷ್ಯ ಜಿಲ್ಲಾ ಮಿಷನ್ ಸಂಯೋಜಕರು ಜಿಲ್ಲಾ ಮಹಿಳಾ ಸಬಲೀಕರಣ ಘಟಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ,  ಅವಿನಾಶ್ ಡೆಲ್ಲಾರಿಯೋ ಕ್ಲಸ್ಟರ್ ಸೂಪರ್ ವೈಸರ್ ಎನ್ ಆರ್ ಎಲ್ ಎಂ ,ಸುಜಾತ ಆಪ್ತ ಸಮಾಲೋಚಕಿ ಕೆನರಾ ಬ್ಯಾಂಕ್  ಮೊದಲಾದವರು ಮಾಹಿತಿ ನೀಡಿದರು.

ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಸರಿತಾ ಓಲ್ಗಾ ಡಿ’ಸೋಜಾ  ಸ್ವಾಗತಿಸಿದರು. ಕೃಷಿ ಸಖಿ ಮೋಹಿನಿ ವಿಶ್ವನಾಥ್ (ನಿಶಾ) ಕಾರ್ಯಕ್ರಮ ನಿರೂಪಿಸಿದರು.

Advertisement
Advertisement
Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ತೆಂಗಿನಕಾಯಿಯಿಂದ Gen-Z ಫೇವರಿಟ್ ಫುಡ್‌…! ವೆಗನ್ ಕುಲ್ಫಿ ಮತ್ತು ಚಾಕೊಲೇಟ್ ಬಿಡುಗಡೆ
January 9, 2026
10:26 PM
by: ದ ರೂರಲ್ ಮಿರರ್.ಕಾಂ
ತೆಂಗು ರೈತರಿಗೆ ಹೊಸ ದಾರಿ | ಮೌಲ್ಯವರ್ಧನೆ ಮತ್ತು ಬಹುಬೆಳೆ ಪದ್ಧತಿಗೆ ಉತ್ತೇಜನ
January 9, 2026
10:16 PM
by: ದ ರೂರಲ್ ಮಿರರ್.ಕಾಂ
ತೆಂಗಿನಕಾಯಿ ಬೆಲೆ ಏಕೆ ಇಳಿಯುತ್ತಿದೆ? ರೈತರಿಗೆ ಮುಂದೇನು?
January 9, 2026
10:08 PM
by: ದ ರೂರಲ್ ಮಿರರ್.ಕಾಂ
ಡಿಜಿಟಲ್ ಕೃಷಿ, ಹವಾಮಾನ ಸಹಿಷ್ಣು ಬೆಳೆಗಳಿಗೆ ಬೆಂಬಲ -ಕೃಷಿ ಸಚಿವರಿಂದ ಸಭೆ
January 9, 2026
9:34 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror