7.ಭಗವಂತ ಕೃಷ್ಣನಾ ಈ ಗೀತೆ ಶಾಸ್ತ್ರವಿದು ನಗದು ಪುಣ್ಯದ ಕಣಜ ಸಕಲ ದುಃಖ ಹರಣ ಮಗದೊಮ್ಮೆ ಪೇಳುವೆನು ವೇದ ಮಹಿಮಾ ವ್ಯಾಸ ಸುಗುಣ ಸಾರಿಹರಿಲ್ಲಿ ಗೋಪ ಬಾಲ…
6.ಪೇಳಿಹನು ಪರಮಾತ್ಮ ತನ್ನ ದಿವ್ಯಾತ್ಮರಿಗೆ ಪೇಳಿಹನು ಓದಿ ಕೇಳುವ ಭಾಗ್ಯ ಮಹತು ಕೇಳಿದರು ಪುಣ್ಯವದು ಹೆಚ್ಚುತ್ತ ಪೋಗುವುದು ಕೇಳಿ ಪಾಪವು ನಾಶ ಗೋಪ ಬಾಲ |
5. ಯಾರವನು ಪಾವಿತ್ರ್ಯದಲಿ ತಾನು ಇರುತಲ್ಲಿ ಯಾರು ಇಂದ್ರಿಯಗಳನು ವಶದಲ್ಲಿ ಇರಿಸಿ ಯಾರಿದರ ಪಾರಾಯಣವ ನಿತ್ಯ ಮಾಡುವನೊ ಆರವನು ನನ ಪಡೆವ ಗೋಪ ಬಾಲ |
4. ಗೀತೆಯದು ವೇದಗಳ ಗೂಢಾರ್ಥ ಹೂರಣವು ಗೀತೆ ತಾ ಸಾರುವುದು ಪರಮ ವೇದಾಂತ ಗೀತೆ ಆ ಕನ್ನಡಿಯ ತೆರದಲ್ಲಿ ವೇದಾರ್ಥ ಗೀತೆ ತಾನ್ದೋರುವುದು ಗೋಪ ಬಾಲ |
3 . ಗೀತೆಯಾ ಸಾರವದು ಸಂಪೂರ್ಣ ಶಾಸ್ತ್ರಗಳ ಮಾತೆ ಮಮತೆಯ ಎದೆಯ ಅಮೃತದ ಹಾಲು ಗೀತೆ ಶಾಸ್ತ್ರವು ಚೆನ್ನ ನಿಶ್ಚಿತದ ಸಿದ್ಧಾಂತ ಗೀತೆ ಮಹಿಮೆಯನರಿಯೊ ಗೋಪ ಬಾಲ…
2. ಆ ಬೊಮ್ಮ ಸಚ್ಚಿದಾನಂದನವ ಪರಿಪೂರ್ಣ ಆ ಬೊಮ್ಮ ಆಕಾರವಿಲ್ಲದವನು ಆ ಬೊಮ್ಮ ಸರ್ವತ್ರ ತಾ ವಿರಾಜಾಮಾನ ಆ ಬೊಮ್ಮ ಪರಮ ಪದ ಗೋಪ ಬಾಲ |
1. ಭಗವಂತ ನುಡಿದಿಹನು ಬಂಧನಾ ಮೋಕ್ಷಗಳು ನಿಗಮಗೋಚರ ಪೇಳಿಹನು ಇಲ್ಲವಿಲ್ಲ ಸುಗುಣ ರೂಪನ ನುಡಿ ದ್ವೈತಾದ್ವೈತಗಳಿಲ್ಲ ಅಗಲಾಳವಾ ಬ್ರಹ್ಮ - ಗೋಪ ಬಾಲ |
20. ಯಾರವರು ನೋಡುತಲಿ ಜಗದಾದಿ ವಂದ್ಯನಾ ಯಾರ ಅಂಶವನು ಸುರಜನರರಿಯರೊ? ಯಾರವನು ಈ ವಿಶ್ವವನ್ನೆ ತಾನ್ ಧರಿಸಿಹನೊ ಮೇರು ಮಹಿಮಗೆ ನಮನ ಗೋಪ ಬಾಲ |
19. ಯಾರವರು ನಿತ್ಯವೂ ಸಾಮವೇದಾ ಮಂತ್ರ ಯಾರನ್ನು ನುತಿಸಿ ಕೀರ್ತನೆ ಪಾಡುವರೊ ಯಾರನ್ನು ಯೋಗಿಗಳು ನಿಶ್ಚಲದ ಮನದಿಂದ ಯಾರನ್ನು ಸುರಜನರು ಗೋಪ ಬಾಲ |
18. ಯಾರವನು ಅವನೆ ಆ ಶ್ರೀಕೃಷ್ಣ ಪರಮಾತ್ಮ ಯಾರನ್ನು ಬೊಮ್ಮ ವರುಣಾ ಇಂದ್ರರುಗಳು ಯಾರನ್ನು ಮುನಿಜನರು ವೇದ ಮಂತ್ರಗಳಿಂದ ಯಾರನ್ನು ಋಷಿ ಜನರು ಗೋಪ ಬಾಲ |