17. ಮೂಕರನು ಮಾತನಾಡುವ ತೆರದಿ ಮಾಡುವವ ಬೇಕು ಬೇಕಾದಂತೆ ಕುಂಟ ಗಿರಿಯೇರಿ ಬಾಕಿಯೆಲ್ಲವ ತಾನೆ ತಾನಾಗಿಯೇ ಮಾಡ್ವ ಏಕಚರಿತಗೆ ಮಣಿವೆ ಗೋಪ ಬಾಲ |
16. ಹರಿಕಥಾ ಬೋಧನೆಯು ವಿಕಸಿತದ ಚಿಂತನೆಯು ಭರಪೂರ ಮಕರಂದ ಹೀರ್ವ ಭ್ರಮರಗಳು ನರರಲ್ಲಿ ಸಜ್ಜನರು ಕಲಿದೋಷ ಕಳೆಯುತಲಿ ಮರುಗದೆಲೆ ತೋಷಿಸಲಿ ಗೋಪ ಬಾಲ |
15.ಗೀತೆಯೆಂಬುದು ವಚನದಾ ಜಲಾಶ್ರಯದಲ್ಲಿ ಗೀತಾರ್ಥ ನಿರ್ಮಲದ ಬಲುಚೆಂದ ಕಮಲ ನೀತಿಯದು ಅತಿಮಧುರ ಗಂಧೋಪಕಥೆಗಳೂ ನೇತಿಯೆನು ಭಾರತವು ಗೋಪ ಬಾಲ |
14. ಇಂಥ ರಣನದಿಯನ್ನು ಆ ಪಾಂಡು ಪುತ್ರರೂ ಅಂತೆ ಆ ಕೃಷ್ಣ ಅಂಬಿಗನ ಜೊತೆಗೆ ಸಂತ ಮಹಮಹಿಮ ವೇದಾ ವ್ಯಾಸರಂದಂತೆ ಚಿಂತಿಸದೆ ದಾಟಿದರು ಗೋಪ ಬಾಲ |
13.ನೋಡು ಕರ್ಣನವ ಪ್ರಕ್ಷುಬ್ದ ಪ್ರವಾಹವೂ ನೋಡು ಅಶ್ವತ್ಥಾಮ ಆ ವಿಕರ್ಣರವರು ನೋಡವರೆ ಘೋರ ಮೊಸಳೆಗಳು ಮತ್ತವು ಅಲ್ಲಿ ನೋಡು ಕೌರವ ಸುಳಿಯು ಗೋಪ ಬಾಲ |
11.ಜಗಕೆ ಆಚಾರ್ಯನೇಯಾಗಿ ನೀನೊಲವಿಂದ ಜಗದಲ್ಲಿ ಸಕಲ ಜನ ರಕ್ಷಕನೆಯಾದ ಜಗದೀಶ ಕರುಣಾಳು ಮಹಮಹಿಮ ದೇವನೇ ಸುಗುಣ ಕೃಷ್ಣನೆ ನಮನ ಗೋಪ ಬಾಲ |
12. ಅಲ್ಲಿ ಭೀಷ್ಮಾ ದ್ರೋಣ ದಂಡೆಗಳು ನೀನರಿಯೊ ಕಲ್ಲು ಬಂಡೆಯೆ ಜಯದ್ರತನೆ ಅರಿಯೊ ಮಲ್ಲ ಶಲ್ಯನು ತಿಮಿಂಗಿಲ ಕೃಪನು ಬಲು ಸೆಳೆತ ಎಲ್ಲವನು ನೀ ನೋಡು ಗೋಪ…
10. ವಸುದೇವ ಮಗನಾಗಿ ಕಂಸ ಚಾಣೂರರನು ಹಸನಾಗಿ ಸಂಹರಿಸಿದವನು ನೀನು ವಸುಧೆಯಲಿ ದೇವಕಿಗೆ ಪರಮ ಆನಂದವನು ಹಸನು ಮೊಗದಿಂ ನೀಡ್ದ ಗೋಪ ಬಾಲ |
9. ಎಲ್ಲ ಆ ಉಪನಿಷತ್ತುಗಳೆ ದನವಾಗಿಹವು ಬಲ್ಲವನು ಕರೆದಿರುವ ಗೀತಾಮೃತವದು ಎಲ್ಲ ಬಲ್ಲಾ ಜ್ಞಾನಿಗಳೆ ಅದನು ಕುಡಿವವರು ಎಲ್ಲವನು ನೀನರಿಯೊ ಗೋಪ ಬಾಲ |
8. ನೀ ಗೀತೆಯೆಂಬುವಾ ಅಮೃತ ಸಮ ಹಾಲನ್ನು ಬಾಗಿ ಹಿಂಡುವ ಕೃಷ್ಣ ನಿನಗೆನ್ನ ನಮನ ಬೇಗ ಬೇಗನೆ ಹಾಲು ಕರೆಯುವವ ನೀನಾಗೆ ಆಗಿಹನು ಪಾರ್ಥ ಕರು ಗೋಪ…