Advertisement

ಕಾವ್ಯ ಮಾಲೆ

ಶ್ರೀಮದ್‌ ಭಗವದ್ಗೀತೆ | ಮುಕ್ತಕ ಮಾತು | ಗೀತಾ ಮಹಾತ್ಮ್ಯ | ಮುಕ್ತಕ – 7 |

7.ಭಗವಂತ ಕೃಷ್ಣನಾ ಈ ಗೀತೆ ಶಾಸ್ತ್ರವಿದು ನಗದು ಪುಣ್ಯದ ಕಣಜ ಸಕಲ ದುಃಖ ಹರಣ ಮಗದೊಮ್ಮೆ ಪೇಳುವೆನು ವೇದ ಮಹಿಮಾ ವ್ಯಾಸ ಸುಗುಣ ಸಾರಿಹರಿಲ್ಲಿ ಗೋಪ ಬಾಲ…

3 years ago

ಶ್ರೀಮದ್‌ ಭಗವದ್ಗೀತೆ | ಮುಕ್ತಕ ಮಾತು | ಗೀತಾ ಮಹಾತ್ಮ್ಯ | ಮುಕ್ತಕ -6 |

6.ಪೇಳಿಹನು ಪರಮಾತ್ಮ ತನ್ನ ದಿವ್ಯಾತ್ಮರಿಗೆ ಪೇಳಿಹನು ಓದಿ ಕೇಳುವ ಭಾಗ್ಯ ಮಹತು ಕೇಳಿದರು ಪುಣ್ಯವದು ಹೆಚ್ಚುತ್ತ ಪೋಗುವುದು ಕೇಳಿ ಪಾಪವು ನಾಶ ಗೋಪ ಬಾಲ |

3 years ago

ಶ್ರೀಮದ್‌ ಭಗವದ್ಗೀತೆ | ಮುಕ್ತಕ ಮಾತು | ಗೀತಾ ಮಹಾತ್ಮ್ಯ | ಮುಕ್ತಕ-5 |

5. ಯಾರವನು ಪಾವಿತ್ರ್ಯದಲಿ ತಾನು ಇರುತಲ್ಲಿ ಯಾರು ಇಂದ್ರಿಯಗಳನು ವಶದಲ್ಲಿ ಇರಿಸಿ ಯಾರಿದರ ಪಾರಾಯಣವ ನಿತ್ಯ ಮಾಡುವನೊ ಆರವನು ನನ ಪಡೆವ ಗೋಪ ಬಾಲ |  

3 years ago

ಶ್ರೀಮದ್‌ ಭಗವದ್ಗೀತೆ | ಮುಕ್ತಕ ಮಾತು | ಗೀತಾ ಮಹಾತ್ಮ್ಯ | ಮುಕ್ತಕ – 4 |

4. ಗೀತೆಯದು ವೇದಗಳ ಗೂಢಾರ್ಥ ಹೂರಣವು ಗೀತೆ ತಾ ಸಾರುವುದು ಪರಮ ವೇದಾಂತ ಗೀತೆ ಆ ಕನ್ನಡಿಯ ತೆರದಲ್ಲಿ ವೇದಾರ್ಥ ಗೀತೆ ತಾನ್ದೋರುವುದು ಗೋಪ ಬಾಲ |

3 years ago

ಶ್ರೀಮದ್‌ ಭಗವದ್ಗೀತೆ | ಮುಕ್ತಕ ಮಾತು | ಗೀತಾ ಮಹಾತ್ಮ್ಯ | ಮುಕ್ತಕ-3 |

3 . ಗೀತೆಯಾ ಸಾರವದು ‌ಸಂಪೂರ್ಣ ಶಾಸ್ತ್ರಗಳ ಮಾತೆ ಮಮತೆಯ ಎದೆಯ ಅಮೃತದ ಹಾಲು ಗೀತೆ ಶಾಸ್ತ್ರವು ಚೆನ್ನ ನಿಶ್ಚಿತದ ಸಿದ್ಧಾಂತ ಗೀತೆ ಮಹಿಮೆಯನರಿಯೊ ಗೋಪ ಬಾಲ…

3 years ago

ಶ್ರೀಮದ್‌ ಭಗವದ್ಗೀತೆ | ಮುಕ್ತಕ ಮಾತು | ಗೀತಾ ಮಹಾತ್ಮ್ಯ | ಮುಕ್ತಕ-2 |

2. ಆ ಬೊಮ್ಮ ಸಚ್ಚಿದಾನಂದನವ ಪರಿಪೂರ್ಣ ಆ ಬೊಮ್ಮ ಆಕಾರವಿಲ್ಲದವನು ಆ ಬೊಮ್ಮ ಸರ್ವತ್ರ ತಾ ವಿರಾಜಾಮಾನ ಆ ಬೊಮ್ಮ ಪರಮ ಪದ ಗೋಪ ಬಾಲ |

3 years ago

ಶ್ರೀಮದ್‌ ಭಗವದ್ಗೀತೆ | ಮುಕ್ತಕ ಮಾತು | ಗೀತಾ ಮಹಾತ್ಮ್ಯ | ಮುಕ್ತಕ-1 |

1. ಭಗವಂತ ನುಡಿದಿಹನು ಬಂಧನಾ ಮೋಕ್ಷಗಳು ನಿಗಮಗೋಚರ ಪೇಳಿಹನು ಇಲ್ಲವಿಲ್ಲ ಸುಗುಣ ರೂಪನ ನುಡಿ ದ್ವೈತಾದ್ವೈತಗಳಿಲ್ಲ ಅಗಲಾಳವಾ ಬ್ರಹ್ಮ - ಗೋಪ ಬಾಲ |

3 years ago

ಶ್ರೀಮದ್‌ ಭಗವದ್ಗೀತೆ | ಮುಕ್ತಕ ಮಾತು | ಪ್ರಾರ್ಥನಾ ಶ್ಲೋಕ-20 |

20. ಯಾರವರು ನೋಡುತಲಿ ಜಗದಾದಿ ವಂದ್ಯನಾ ಯಾರ ಅಂಶವನು ಸುರಜನರರಿಯರೊ? ಯಾರವನು ಈ ವಿಶ್ವವನ್ನೆ ತಾನ್ ಧರಿಸಿಹನೊ ಮೇರು ಮಹಿಮಗೆ ನಮನ ಗೋಪ ಬಾಲ |

3 years ago

ಶ್ರೀಮದ್‌ ಭಗವದ್ಗೀತೆ | ಮುಕ್ತಕ ಮಾತು | ಪ್ರಾರ್ಥನಾ ಶ್ಲೋಕ-19 |

19. ಯಾರವರು ನಿತ್ಯವೂ ಸಾಮವೇದಾ ಮಂತ್ರ ಯಾರನ್ನು ನುತಿಸಿ ಕೀರ್ತನೆ ಪಾಡುವರೊ ಯಾರನ್ನು ಯೋಗಿಗಳು ನಿಶ್ಚಲದ ಮನದಿಂದ ಯಾರನ್ನು ಸುರಜನರು ಗೋಪ ಬಾಲ |

3 years ago

ಶ್ರೀಮದ್‌ ಭಗವದ್ಗೀತೆ | ಮುಕ್ತಕ ಮಾತು | ಪ್ರಾರ್ಥನಾ ಶ್ಲೋಕ-18 |

18. ಯಾರವನು ಅವನೆ ಆ ಶ್ರೀಕೃಷ್ಣ ಪರಮಾತ್ಮ ಯಾರನ್ನು ಬೊಮ್ಮ ವರುಣಾ ಇಂದ್ರರುಗಳು ಯಾರನ್ನು ಮುನಿಜನರು ವೇದ ಮಂತ್ರಗಳಿಂದ ಯಾರನ್ನು ಋಷಿ ಜನರು ಗೋಪ ಬಾಲ |

3 years ago