ತಮಿಳುನಾಡಿಗೆ ಜುಲೈ 31ರವರೆಗೆ ಪ್ರತಿ ದಿನ 1 ಟಿಎಂಸಿ ನೀರು ಬಿಡುವಂತೆ ಕರ್ನಾಟಕಕ್ಕೆ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ನಿರ್ದೇಶನ ನೀಡಿತ್ತು. ಆದರೆ ಇದನ್ನು ಕರ್ನಾಟಕ ಸರ್ಕಾರ (Karnataka government) ಸ್ಪಷ್ಟವಾಗಿ ತಿರಸ್ಕರಿಸಿದೆ. ಇಂದು ಸಿಎಂ ಸಿದ್ದರಾಮಯ್ಯ (Siddaramaiah) ನೇತೃತ್ವದಲ್ಲಿ ಸರ್ವಪಕ್ಷಗಳ ಸಭೆ (All Party Meeting) ಕರೆಯಲಾಗಿತ್ತು. ಈ ಸಭೆಯಲ್ಲಿ ಪ್ರತಿ ದಿನ 1 ಟಿಎಂಸಿ ನೀರು ಬಿಡೋದಕ್ಕೆ ಆಗೋದಿಲ್ಲ ಅಂತ ನಿರ್ಧಾರಕ್ಕೆ ಬರಲಾಗಿದೆ. ಮುಂದೆ ಸಿಡಬ್ಯೂಎಂಎ ಮುಂದೆ ಅಪೀಲು ಹೋಗ್ತೇವೆ ಅಂತ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ನೀರು ಬಿಡದಿರಲು ಸರ್ಕಾರ ನಿರ್ಧಾರ: ತಮಿಳುನಾಡಿಗೆ ಪ್ರತಿ ದಿನ 1 ಟಿಎಂಸಿ ನೀರು ಬಿಡದಿರಲು ಸಿಎಂ ನೇತೃತ್ವದ ಸಭೆಯಲ್ಲಿ ನಿರ್ಧರಿಸಲಾಗಿದೆ. ನಾವು ನೀರನ್ನು ಬಿಡೋದು ಬೇಡ ಎಂಬ ನಿರ್ಧಾರಕ್ಕೆ ಬಂದೆವು. ಇದಕ್ಕಾಗಿ ಸರ್ವಪಕ್ಷಗಳ ಸಭೆ ಕರೆಯಲಾಗಿತ್ತು. ಮುಂದೆ ಸಿಡಬ್ಯೂಎಂಎ ಮುಂದೆ ಅಪೀಲು ಹೋಗ್ತೇವೆ ಅಂತ ಸಿಎಂ ಸ್ಪಷ್ಟಪಡಿಸಿದ್ದಾರೆ.
1 ಟಿಎಂಸಿ ಬದಲು 8 ಸಾವಿರ ಕ್ಯೂಸೆಕ್ ನೀರು: ಈ ಸಲ 30 ಇನ್ ಪ್ಲೋ ಕಡಿಮೆಯಾಗಿದೆ. ಎಲ್ಲಾ ಜಲಾಶಯಗಳು ಸೇರಿ 63 ಪರ್ಸೆಂಟ್ ನೀರು ಸಂಗ್ರಹವಾಗಿದೆ. ಎಲ್ಲರ ಅಭಿಪ್ರಾಯ ಏನು ಅಂದ್ರೆ 1 ಟಿಎಂಸಿ ನೀರು ಬಿಡಕ್ಕೆ ಆಗಲ್ಲ. ನಾವು ಅಪೀಲು ಹೋಗಲೇಬೇಕು ಅಂತ ನಿರ್ಧರಿಸಿದ್ದೇವೆ. ಹೀಗಾಗಿ 1 ಟಿಎಂಸಿ ಬದಲು 8 ಸಾವಿರ ಕ್ಯೂಸೆಕ್ ನೀರು ಬಿಡಲು ನಿರ್ಧಾರಿಸಿದ್ದೇವೆ. ಅದಕ್ಕಾಗಿ ಎಲ್ಲಾರ ಅಭಿಪ್ರಾಯ ತೆಗೆದುಕೊಂಡಿದ್ದೇವೆ ಅಂತ ಸಿಎಂ ಹೇಳಿದ್ದಾರೆ. ಸದ್ಯಕ್ಕೆ 8 ಸಾವಿರ ಕ್ಯೂಸೆಕ್ ನೀರು ಬಿಡೋಣ. ಒಂದು ವೇಳೆ ಮಳೆ ಬರದಿದ್ರೆ ಕಡಿಮೆ ಮಾಡೋಣ. ಸಿಡಬ್ಯೂಎಂಎ ಮುಂದೆ ಅಪೀಲು ಹಾಕೋಣ ಅಂತ ಸಿಎಂ ಹೇಳಿದ್ದಾರೆ.
- ಅಂತರ್ಜಾಲ ಮಾಹಿತಿ