ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ವಿಜಯದಶಮಿಯಂದು ಬೆಳಿಗ್ಗೆ 4 ಗಂಟೆಗೆ ಬ್ರಾಹ್ಮೀ ಮುಹೂರ್ತದಲ್ಲಿ ಚಿಕ್ಕ್ಕಮಕ್ಕಳಿಗೆ ಅಕ್ಷರಾಭ್ಯಾಸ ನಡೆಯುತ್ತದೆ. ಸಾವಿರಾರು ಮಂದಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಾರೆ.ಕರ್ನಾಟಕ ಮಾತ್ರವಲ್ಲ ಕೇರಳ ಸೇರಿದಂತೆ ದೂರದ ಊರುಗಳಿಂದಲೂ ಈ ಕ್ಷೇತ್ರದಲ್ಲಿ ಅಕ್ಷರಾಭ್ಯಾಸವನ್ನು ಮಾಡಿಸಲಾಗುತ್ತದೆ.
ಲಕ್ಷ್ಮೀ, ಸರಸ್ವತಿ ಹಾಗೂ ಪಾರ್ವತಿಯ ಐಕ್ಯ ಸ್ವರೂಪಿಣಿಯಾಗಿ ನೆಲೆನಿಂತ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ವಿದ್ಯಾರಂಭ ಮಾಡಿಸಿದರೆ ಮಕ್ಕಳು ಭವಿಷ್ಯದಲ್ಲಿ ಉತ್ತಮವಾಗಿ ವಿದ್ಯೆ ಕಲಿಯುತ್ತಾರೆ ಎನ್ನುವ ನಂಬಿಕೆ ಭಕ್ತರಲ್ಲಿದೆ. ವಿಜಯದಶಮಿಯ ಶುಭ ಮುಹೂರ್ತದಲ್ಲಿ ಪುರೋಹಿತರ ಮಾರ್ಗದರ್ಶನದ ಮೇರೆಗೆ ಪಾಲಕರು ತಮ್ಮ ಮಕ್ಕಳ ಕೈ ಹಿಡಿದು ಅಕ್ಕಿತುಂಬಿದ ಬಟ್ಟಲಿನಲ್ಲಿ ಓಂಕಾರದಿಂದ ಮೊದಲ್ಗೊಂಡು ದೇವಿಯ ಸ್ತೋತ್ರ ಹಾಗೂ ವರ್ಣ ಮಾಲೆಗ ಮತ್ತು ಸಂಖ್ಯೆಗಳನ್ನು ಬರೆಯಿಸಿ ಅಕ್ಷರಾಭ್ಯಾಸಕ್ಕೆ ಮುನ್ನುಡಿ ಬರೆದರು.
ನಂತರ ಪೋಷಕರು ತಮ್ಮ ಮಕ್ಕಳ ನಾಲಗೆಯ ಮೇಲೆ ಉಂಗುರದಿಂದ ಓಂಕಾರವನ್ನು ಬರೆದು ಶ್ರೀದೇವಿಯ ಆಶೀರ್ವಾದವನ್ನು ಬೇಡಿದರು. ಬಳಿಕ ದೇವಸ್ಥಾನದ ಮುಂಬಾಗದಲ್ಲಿರುವ ಧ್ವಜಕಟ್ಟೆಯಲ್ಲಿ ದೇವಿಗೆ ಪ್ರಾರ್ಥನೆ ಸಲ್ಲಿಸುವ ಮೂಲಕ ವಿದ್ಯಾರಂಭದ ವಿಧಿವಿಧಾನಗಳು ಸಾಂಗವಾಗಿ ಮುಗಿದವು. ರಾಜ್ಯ ಹಾಗೂ ನೆರೆಯ ಕೇರಳ ಹಾಗೂ ತಮಿಳುನಾಡು ರಾಜ್ಯದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವಿಯ ದರ್ಶನ ಪಡೆದು ಪುನೀತರಾದರು.
On Vijayadashami, children at Kollur Sri Mookambika Temple in Bynduru Taluk of Udupi District participate in the ritual of Aksharabhyas. Thousands of people, including those from distant places like Kerala, attend this program. This event promotes literacy not only within Karnataka but also across borders.