#Chandrayana3| ಚಂದ್ರಯಾನ ಯಶಸ್ವಿಯ ನೆನಪಿಗಾಗಿ ಲ್ಯಾಂಡಿಂಗ್ ದಿನವನ್ನು ರಾಷ್ಟ್ರೀಯ ಬಾಹ್ಯಾಕಾಶ ದಿನವಾಗಿ ಆಚರಣೆ | ಕೇಂದ್ರ ಸಚಿವ ಸಂಪುಟ ನಿರ್ಧಾರ |

August 29, 2023
5:59 PM
ಚಂದ್ರಯಾನ್ ಯಶಸ್ಸಿನ ಹಿನ್ನೆಲೆಯಲ್ಲಿ ಆಗಸ್ಟ್ 23 ಅನ್ನು ‘ರಾಷ್ಟ್ರೀಯ ವಿಜ್ಞಾನ ದಿನ’ ಎಂದು ಆಚರಿಸಲು ನಿರ್ಧರಿಸಲಾಗಿದೆ.

ನಮ್ಮ ಹೆಮ್ಮೆಯ ಇಸ್ರೋ #ISRO ವಿಜ್ಞಾನಿಗಳ ತಂಡ ಭಾರತದ ಕನಸನ್ನು ನನಸು ಮಾಡಿದ್ದಾರೆ. ಚಂದ್ರಯಾನ -3 #Chandrayaan-3 ರ ಯಶಸ್ವಿ ಉಡಾವಣೆ ಇಡೀ ವಿಶ್ವವನ್ನೆ ಭಾರತದ ಕಡೆ ಬೆರಗುಗಣ್ಣಿನಿಂದ ನೋಡುವಂತೆ ಮಾಡಿದೆ. ಚಂದ್ರಯಾನ-3 ಮೂಲಕ ಭಾರತ ಮಹತ್ತರ ಸಾಧನೆಯನ್ನು ಮಾಡಿದೆ. ಇಸ್ರೋ ಸಂಸ್ಥೆಗೆ ನಾವು ಅಭಿನಂದನೆ ಸಲ್ಲಿಸುತ್ತೇವೆ. ವಿಜ್ಞಾನಿಗಳ ಈ ಸಾಧನೆ ಎಲ್ಲರಿಗೂ ಪ್ರೇರಣೆ ಆಗಿದೆ. ಪ್ರಧಾನಿ ನರೇಂದ್ರ ಮೋದಿ Narendra Modi ಅವರು ವಿಜ್ಞಾನಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಿದ್ದಾರೆ ಎಂದು  ಕೇಂದ್ರ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ. ಚಂದ್ರನ ದಕ್ಷಿಣ ಧ್ರುವದಲ್ಲಿ ಚಂದ್ರಯಾನ 3 ಯಶಸ್ವಿಯಾಗಿ ಲ್ಯಾಂಡಿಂಗ್ ಮಾಡಿದ್ದನ್ನು ಗುರುತಿಸುವುದಕ್ಕಾಗಿ ಆಗಸ್ಟ್ 23 ನ್ನು ಕೇಂದ್ರ ಸಚಿವ ಸಂಪುಟ  ‘ರಾಷ್ಟ್ರೀಯ ಬಾಹ್ಯಾಕಾಶ ದಿನ’ #NationalSpaceDay ಎಂದು ಘೋಷಿಸಿದೆ.

Advertisement
Advertisement

ಚಂದ್ರಯಾನ-3 ಮಿಷನ್‌ಗಾಗಿ ಕೆಲಸ ಮಾಡಿದ ಇಸ್ರೋ ವಿಜ್ಞಾನಿಗಳ ಐತಿಹಾಸಿಕ ಯಶಸ್ಸನ್ನು ಸಚಿವ ಸಂಪುಟ ಶ್ಲಾಘಿಸುತ್ತದೆ. ಇದು ಜಾಗತಿಕ ವೇದಿಕೆಯಲ್ಲಿ ನಮ್ಮ ಶಕ್ತಿಯ ಸಂಕೇತವಾಗಿದೆ. ಸಚಿವ  ಸಂಪುಟವು ಆಗಸ್ಟ್ 23 ಅನ್ನು ‘ರಾಷ್ಟ್ರೀಯ ವಿಜ್ಞಾನ ದಿನ’ ಎಂದು ಆಚರಿಸುವ ಕ್ರಮವನ್ನು ಸ್ವಾಗತಿಸುತ್ತದೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಕ್ಯಾಬಿನೆಟ್ ಸಭೆಯ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ಆಗಸ್ಟ್ 26 ರಂದು ಬೆಂಗಳೂರಿನ ಇಸ್ರೋ ಕಮಾಂಡ್ ಸೆಂಟರ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಈ ಘೋಷಣೆ ಮಾಡಿದ್ದರು.

Advertisement

ಇಂದಿನ ಯುಗದಲ್ಲಿ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂದಿರುವ ದೇಶವು ಇತಿಹಾಸ ಸೃಷ್ಟಿಸುತ್ತದೆ. ನಮ್ಮ ಯುವ ಪೀಳಿಗೆಯನ್ನು ವಿಜ್ಞಾನ ಮತ್ತು ತಂತ್ರಜ್ಞಾನ ಮತ್ತು ಬಾಹ್ಯಾಕಾಶ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಉತ್ತೇಜಿಸಲು, ನಾವು  ನಮ್ಮ ಚಂದ್ರಯಾನ-3 ಲ್ಯಾಂಡರ್ ಚಂದ್ರನನ್ನು ಸ್ಪರ್ಶಿಸಿದ ದಿನವಾದ ಆಗಸ್ಟ್ 23ನ್ನು ರಾಷ್ಟ್ರೀಯ ಬಾಹ್ಯಾಕಾಶ ದಿನವನ್ನಾಗಿ ಆಚರಿಸಲಾಗುವುದು ಎಂದು ಪ್ರಧಾನಿ ಹೇಳಿದ್ದಾರೆ. ಇದನ್ನು ಕೇಂದ್ರ ಸಚಿವ ಸಂಪುಟ ಅನುಮೋದಿಸುತ್ತದೆ ಎಂದಿದ್ದಾರೆ ಠಾಕೂರ್.

Advertisement

Source: Digital Media

Advertisement
Advertisement
Advertisement

Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ದಿಢೀರಾಗಿ ಬೆಳೆಯುವುದು , ಫಸಲು ನೀಡುವುದು ಅವಸರವೇ ಅಪಘಾತಕ್ಕೆ ಕಾರಣ | ಬೇಗ ಫಸಲು ಬಂದ ಸಸ್ಯ ಬೇಗನೇ ಸಾಯುತ್ತದೆ |
April 28, 2024
9:26 PM
by: ಪ್ರಬಂಧ ಅಂಬುತೀರ್ಥ
ಮಾವು ಮಾಂತ್ರಿಕ ಹಾಗೂ ಸುಬ್ರಾಯ ಭಟ್ಟರ 200ಕ್ಕೂ ಹೆಚ್ಚು ನಾಡು ಮಾವು ಹಾಗೂ ಹಲಸು ತಳಿ ಸಂರಕ್ಷಣೆ
April 28, 2024
9:24 PM
by: The Rural Mirror ಸುದ್ದಿಜಾಲ
ಭಾರತದಲ್ಲಿ ಏರಿದ ತಾಪಮಾನ | ಅತ್ತ ತಾಂಜೇನಿಯಾದಲ್ಲಿ ಭಾರೀ ಮಳೆ, ಪ್ರವಾಹ | 155 ಮಂದಿ ಸಾವು |
April 28, 2024
4:55 PM
by: The Rural Mirror ಸುದ್ದಿಜಾಲ
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಮುಂದಿನ ವಾರ ಕಾಡಲಿದೆ ರಣ ಬಿಸಿಲು | ದೂರ ಸಾಗಿದ ಮಳೆ | ಬಿಸಿ ಗಾಳಿಯ ಮುನ್ಸೂಚನೆ |
April 28, 2024
4:40 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror