ಎನ್‌ಡಿಎ ಸರ್ಕಾರ(NDA Govt) ರೈತರ(Farmers) ಹಿತ ಕಾಪಾಡಲು ಮೊದಲ ಹೆಜ್ಜೆಯನ್ನಿಟ್ಟಿದೆ. ರೈತರಿಗೆ ಕೇಂದ್ರ ಸರ್ಕಾರ(Central Govt) ಸಿಹಿ ಸುದ್ದಿ ನೀಡಿದೆ. ಮೋದಿ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಭತ್ತ(Paddy), ರಾಗಿ(Ragi), ತೊಗರಿ(Dal) ಸೇರಿ 22 ಬೆಳೆಗಳಿಗೆ ಕನಿಷ್ಟ ಬೆಂಬಲ ಬೆಲೆಯನ್ನು(Minimum Support Price) ಹೆಚ್ಚಿಸಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಶೇ.50 ರಷ್ಟು ಎಂಎಸ್‌ಪಿ ಹೆಚ್ಚಿಸಿದೆ.
ಭತ್ತದ ಮೇಲಿನ ಎಂಎಸ್‌ಪಿಯನ್ನು 143 ರೂಪಾಯಿ ಹೆಚ್ಚಿಸಿದ್ದು, ಭತ್ತದ ಕನಿಷ್ಠ ಬೆಲೆ ಈಗ 2,300 ರೂಪಾಯಿ ಆಗಿದೆ. ಅದೇ ರೀತಿ ರಾಗಿಗೆ 268 ರೂ., ಗೋಧಿ 150 ರೂ., ಮೆಕ್ಕೆ ಜೋಳ 128 ರೂ., ಜೋಳ 210 ರೂ., ಸಜ್ಜೆ 150 ರೂ., ತೊಗರಿ 400 ರೂ., ಹೆಸರುಬೇಳೆ 803 ರೂ., ಉದ್ದಿನ ಬೇಳೆ 350 ರೂ., ಕಡಲೆಕಾಯಿ 527 ರೂ., ಸೂರ್ಯಕಾಂತಿ 360 ರೂ., ಸೋಯಾಬೀನ್ 300 ರೂ., ಹತ್ತಿ 400 ರೂ., ಎಳ್ಳಿ 632 ರೂ., ಹುಚ್ಚೆಳ್ಳಿ 983 ರೂ. ಬೆಂಬಲ ಬೆಲೆಯನ್ನು ಕೇಂದ್ರ ಸರ್ಕಾರ ಘೋಷಿಸಿದೆ. ಇದರಿಂದ 2 ಲಕ್ಷ ರೈತರಿಗೆ ಲಾಭವಾಗಲಿದೆ.
ಸರ್ಕಾರಕ್ಕೆ 35,000 ಕೋಟಿ ರೂ. ಹೆಚ್ಚುವರಿ ಹೊರೆ ಆಗಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಸರ್ಕಾರಿ ಗೋದಾಮಿನಲ್ಲಿ ಅಕ್ಕಿಯ ದಾಸ್ತಾನು ಸಾಕಷ್ಟು ಇರುವಾಗಲೇ ಭತ್ತಕ್ಕೆ ಬೆಂಬಲ ಬೆಲೆಯನ್ನು ಪ್ರತಿ ಕ್ವಿಂಟಾಲ್‌ಗೆ 117 ರೂ. ಹೆಚ್ಚಳ ಮಾಡಲಾಗಿದೆ. ಕೇಂದ್ರದಲ್ಲಿ ಮೂರನೇ ಬಾರಿಗೆ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಪ್ರಕಟಿಸಿದ ಮೊದಲ ನಿರ್ಧಾರ ಇದಾಗಿದೆ. ಬೆಂಬಲ ಬೆಲೆ ಹೆಚ್ಚಳ ಮಾಡಿರುವುದರ ಹಿಂದೆ ಹರಿಯಾಣ, ಮಹಾರಾಷ್ಟ, ಜಾರ್ಖಂಡ್, ದೆಹಲಿ ವಿಧಾನಸಭಾ ಚುನಾವಣೆಗಳ ಲೆಕ್ಕಾಚಾರವೂ ಇದೆ ಎನ್ನಲಾಗಿದೆ.
2026 ರಲ್ಲಿ ಹೈಡ್ರೋಪೋನಿಕ್ ಅವಕಾಡೊ ಕೃಷಿ ಮತ್ತು ಜೇನು ಪರಾಗಸ್ಪರ್ಶದ ಸಂಯೋಜನೆ ಹೊಸ…
ಚಾಮರಾಜನಗರ ಜಿಲ್ಲೆಯಲ್ಲಿ ರೇಷ್ಮೆ ಗೂಡಿಗೆ ಕೆಜಿಗೆ 750ರಿಂದ 800 ರೂಪಾಯಿವರೆಗೆ ಬೆಲೆ ಸಿಗುತ್ತಿದೆ.…
ಕರ್ನಾಟಕದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಇವಿಎಂ ಬದಲಿಗೆ ಬ್ಯಾಲೆಟ್ ಪೇಪರ್ ಮೂಲಕ ಮತದಾನ…
ಕೇಂದ್ರ ಸರ್ಕಾರವು ರಾಜ್ಯದ ರಬ್ಬರ್ ಕೃಷಿಯನ್ನು ಈಶಾನ್ಯಕ್ಕೆ ಸ್ಥಳಾಂತರಿಸುವ ಮೂಲಕ ರಬ್ಬರ್ ಕ್ಷೇತ್ರವನ್ನು…
ಅಡಿಕೆ ಮಾರುಕಟ್ಟೆ ಎಂದರೆ ಕೇವಲ ಕೃಷಿ ಉತ್ಪನ್ನಗಳ ವಿನಿಮಯ ಕೇಂದ್ರವಲ್ಲ; ಅದೊಂದು ಸಂಕೀರ್ಣವಾದ…
ಮಿಝೋರಂ ಸರ್ಕಾರವು ಅಡಿಕೆ ಕಳ್ಳಸಾಗಣೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಘೋಷಿಸಿದೆ. ಯಾವುದೇ…