MIRROR FOCUS

ರಾಜ್ಯದ ಸಾರಿಗೆ ಅಭಿವೃದ್ಧಿಗೆ ಕೇಂದ್ರದಿಂದ ಕೊಡುಗೆ : ಮೈಸೂರಿಗೆ ಮೆಟ್ರೋ ವಿಸ್ತರಣೆ, ರಾಜ್ಯಕ್ಕೆ 1200 ಎಲೆಕ್ಟ್ರಿಕ್ ಬಸ್: ಮೋದಿ ಭರವಸೆ

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ರಾಜ್ಯಗಳು ಅಭಿವೃದ್ಧಿಯಾದರೆ ದೇಶ ಉದ್ಧಾರವಾದಂತೆ. ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯಕ್ಕೆ ಕೇಂದ್ರ ಸರ್ಕಾರ ಅನೇಕ ಯೋಜನೆಗಳನ್ನು ನೀಡುತ್ತಲೇ ಬಂದಿದೆ. ಇದೀಗ  ಕರ್ನಾಟಕದ ಸಾರಿಗೆ ಸಂಪರ್ಕ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು ಮಾಲಿನ್ಯ ನಿಯಂತ್ರಣಕ್ಕಾಗಿ 1200 ಎಲೆಕ್ಟ್ರಿಕ್ ಬಸ್‍ಗಳನ್ನು ಕೇಂದ್ರ ಸರ್ಕಾರ ನೀಡುತ್ತಿದೆ. ಅದಕ್ಕಾಗಿ ರಾಜ್ಯ ಸರ್ಕಾರಕ್ಕೆ 500 ಕೋಟಿ ರೂ. ಅನುದಾನ ನೀಡಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ(PM Narendra Modi) ಹೇಳಿದ್ದಾರೆ.

Advertisement

ಉತ್ತರ ಪ್ರದೇಶದಲ್ಲಿ ಪ್ರಾದೇಶಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆ (Regional Rapid Transit System) ಕಾರಿಡಾರ್‌ನ ದೆಹಲಿ-ಗಾಜಿಯಾಬಾದ್ – ಮೀರತ್ ರೈಲುಗಳ ವಿಭಾಗವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಈ ವೇಳೆ ಬೆಂಗಳೂರಿನಲ್ಲೂ (Bengaluru) ಎರಡು ಮೆಟ್ರೋ ಲೇನ್‍ಗಳನ್ನು ಉದ್ಘಾಟಿಸಲಾಗುತ್ತಿದೆ. ಇದರಿಂದ ಜನರಿಗೆ ಅನುಕೂಲವಾಗಲಿದೆ ಎಂದು ಅವರು ಹೇಳಿದ್ದಾರೆ.

ಮೆಟ್ರೋದಲ್ಲಿ (Metro) ನಿತ್ಯ 80 ಲಕ್ಷಕ್ಕೂ ಅಧಿಕ ಜನರು ಪ್ರಯಾಣ ಮಾಡುತ್ತಿದ್ದಾರೆ. ಉತ್ತರ ಪ್ರದೇಶದಂತೆ ಕರ್ನಾಟಕದಲ್ಲೂ ಮೆಟ್ರೋ ವಿಸ್ತರಣೆ ಮಾಡುತ್ತೇವೆ. ಬೆಂಗಳೂರಲ್ಲಿ ಮೆಟ್ರೋ ವಿಸ್ತರಣೆ ಮಾಡಲಾಗುತ್ತದೆ. ಅಲ್ಲದೇ ಮೈಸೂರಿನಲ್ಲೂ (Mysuru) ಮೆಟ್ರೋ ಸಾರಿಗೆ ಆರಂಭಿಸುತ್ತೇವೆ ಎಂದು ಅವರು ಭರವಸೆ ನೀಡಿದ್ದಾರೆ. ನನ್ನ ಬಾಲ್ಯವನ್ನು ರೈಲ್ವೆ ಪ್ಲಾಟ್ ಫಾರಂನಲ್ಲೇ ಕಳೆದೆ, ಇಂದು ರೈಲ್ವೆ ವ್ಯವಸ್ಥೆಯಲ್ಲಿನ ಬದಲಾವಣೆ ಹೆಚ್ಚು ಖುಷಿ ಕೊಟ್ಟಿದೆ. ರೈಲ್ವೆಯಲ್ಲಿ ಹೆಣ್ಣು ಮಕ್ಕಳಿಗೆ ಆದ್ಯತೆ ನೀಡಲಾಗಿದೆ. ಇದು ನಾರಿ ಶಕ್ತಿ ಅಭಿವೃದ್ಧಿಯ ಪ್ರತೀಕವಾಗಿದೆ. ನಮೋ ಭಾರತ್ ರೈಲಿನಲ್ಲಿ ಆಧುನಿಕತೆ, ವೇಗ ಮತ್ತು ಅತ್ಯುತ್ತಮ ಸೌಲಭ್ಯಗಳಿದೆ. ಭಾರತದ ಹೊಸ ಸಂಕಲ್ಪವನ್ನು ಈ ರೈಲು ತೋರಿಸುತ್ತಿದೆ ಎಂದಿದ್ದಾರೆ.

ನಮೋ ಭಾರತ್ (Namo Bharat) ರೈಲು ಭಾರತದಲ್ಲೇ ತಯಾರಾಗಿದೆ. ಇದು ವಿಮಾನಕ್ಕಿಂತ ಕಡಿಮೆ ಸದ್ದು ಮಾಡುವ ರೈಲಾಗಿದೆ. ಅತ್ಯುತ್ತಮ ಪ್ರಯಾಣದ ಅನುಭವವನ್ನು ನೀಡಲಿದೆ. ಈ ರೈಲಿನ ವ್ಯವಸ್ಥೆಯಿಂದ ಭಾರತದ ಆರ್ಥಿಕತೆ ಹೆಚ್ಚಲಿದೆ. ಇಂದು ಉದ್ಘಾಟನೆಯಾಗಿರುವ ಯೋಜನೆ ಒಂದು ಆರಂಭವಾಗಿದೆ ಅಷ್ಟೇ. ಇದೇ ರೀತಿ ಬೇರೆ ಬೇರೆ ರಾಜ್ಯಗಳಲ್ಲೂ ಈ ಯೋಜನೆ ಜಾರಿಗೆ ತರಲಾಗುತ್ತದೆ ಎಂದು ಅವರು ತಿಳಿಸಿದರು.

ಭಾರತೀಯ ರೈಲ್ವೆಯ ಕಾಯಕಲ್ಪ ಮಾಡಲಾಗುತ್ತಿದೆ. ರೈಲ್ವೆ ಸಂಪರ್ಕ ವಿಸ್ತರಣೆಯಿಂದ ಉದ್ಯೋಗ ಸೃಷ್ಟಿಯಾಗಲಿದೆ. ನನಗೆ ಸಣ್ಣ ಕನಸು ಕಾಣುವ ಹವ್ಯಾಸ ಇಲ್ಲ, ಕುಂಟುತ್ತಾ ನಡೆಯುವ ರೂಢಿಯೂ ಇಲ್ಲ. ನಾವು ಯಾವ ದೇಶಕ್ಕಿಂತ ಹಿಂದೆ ಉಳಿಯುವುದಿಲ್ಲ, ಭಾರತೀಯ ರೈಲ್ವೆ 100% ವಿದ್ಯುಧೀಕರಣ ದೂರ ಇಲ್ಲ ಎಂದಿದ್ದಾರೆ. ಕರ್ನಾಟಕದಲ್ಲಿ ಸಾರಿಗೆ ಸಂಪರ್ಕ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು ಮಾಲಿನ್ಯ ನಿಯಂತ್ರಣಕ್ಕಾಗಿ 1200 ಎಲೆಕ್ಟ್ರಿಕ್ ಬಸ್‍ಗಳನ್ನು ಕೇಂದ್ರ ಸರ್ಕಾರ ನೀಡುತ್ತಿದೆ. ಅದಕ್ಕಾಗಿ ರಾಜ್ಯ ಸರ್ಕಾರಕ್ಕೆ 500 ಕೋಟಿ ರೂ. ಅನುದಾನ ನೀಡಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಉತ್ತರ ಪ್ರದೇಶದಲ್ಲಿ ಪ್ರಾದೇಶಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆ (Regional Rapid Transit System) ಕಾರಿಡಾರ್‌ನ ದೆಹಲಿ-ಗಾಜಿಯಾಬಾದ್ – ಮೀರತ್ ರೈಲುಗಳ ವಿಭಾಗವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಈ ವೇಳೆ ಬೆಂಗಳೂರಿನಲ್ಲೂ (Bengaluru) ಎರಡು ಮೆಟ್ರೋ ಲೇನ್‍ಗಳನ್ನು ಉದ್ಘಾಟಿಸಲಾಗುತ್ತಿದೆ. ಇದರಿಂದ ಜನರಿಗೆ ಅನುಕೂಲವಾಗಲಿದೆ ಎಂದು ಅವರು ಹೇಳಿದ್ದಾರೆ.

ಮೆಟ್ರೋದಲ್ಲಿ (Metro) ನಿತ್ಯ 80 ಲಕ್ಷಕ್ಕೂ ಅಧಿಕ ಜನರು ಪ್ರಯಾಣ ಮಾಡುತ್ತಿದ್ದಾರೆ. ಉತ್ತರ ಪ್ರದೇಶದಂತೆ ಕರ್ನಾಟಕದಲ್ಲೂ ಮೆಟ್ರೋ ವಿಸ್ತರಣೆ ಮಾಡುತ್ತೇವೆ. ಬೆಂಗಳೂರಲ್ಲಿ ಮೆಟ್ರೋ ವಿಸ್ತರಣೆ ಮಾಡಲಾಗುತ್ತದೆ. ಅಲ್ಲದೇ ಮೈಸೂರಿನಲ್ಲೂ (Mysuru) ಮೆಟ್ರೋ ಸಾರಿಗೆ ಆರಂಭಿಸುತ್ತೇವೆ ಎಂದು ಅವರು ಭರವಸೆ ನೀಡಿದ್ದಾರೆ. ನನ್ನ ಬಾಲ್ಯವನ್ನು ರೈಲ್ವೆ ಪ್ಲಾಟ್ ಫಾರಂನಲ್ಲೇ ಕಳೆದೆ, ಇಂದು ರೈಲ್ವೆ ವ್ಯವಸ್ಥೆಯಲ್ಲಿನ ಬದಲಾವಣೆ ಹೆಚ್ಚು ಖುಷಿ ಕೊಟ್ಟಿದೆ. ರೈಲ್ವೆಯಲ್ಲಿ ಹೆಣ್ಣು ಮಕ್ಕಳಿಗೆ ಆದ್ಯತೆ ನೀಡಲಾಗಿದೆ. ಇದು ನಾರಿ ಶಕ್ತಿ ಅಭಿವೃದ್ಧಿಯ ಪ್ರತೀಕವಾಗಿದೆ. ನಮೋ ಭಾರತ್ ರೈಲಿನಲ್ಲಿ ಆಧುನಿಕತೆ, ವೇಗ ಮತ್ತು ಅತ್ಯುತ್ತಮ ಸೌಲಭ್ಯಗಳಿದೆ. ಭಾರತದ ಹೊಸ ಸಂಕಲ್ಪವನ್ನು ಈ ರೈಲು ತೋರಿಸುತ್ತಿದೆ ಎಂದಿದ್ದಾರೆ.

ನಮೋ ಭಾರತ್ (Namo Bharat) ರೈಲು ಭಾರತದಲ್ಲೇ ತಯಾರಾಗಿದೆ. ಇದು ವಿಮಾನಕ್ಕಿಂತ ಕಡಿಮೆ ಸದ್ದು ಮಾಡುವ ರೈಲಾಗಿದೆ. ಅತ್ಯುತ್ತಮ ಪ್ರಯಾಣದ ಅನುಭವವನ್ನು ನೀಡಲಿದೆ. ಈ ರೈಲಿನ ವ್ಯವಸ್ಥೆಯಿಂದ ಭಾರತದ ಆರ್ಥಿಕತೆ ಹೆಚ್ಚಲಿದೆ. ಇಂದು ಉದ್ಘಾಟನೆಯಾಗಿರುವ ಯೋಜನೆ ಒಂದು ಆರಂಭವಾಗಿದೆ ಅಷ್ಟೇ. ಇದೇ ರೀತಿ ಬೇರೆ ಬೇರೆ ರಾಜ್ಯಗಳಲ್ಲೂ ಈ ಯೋಜನೆ ಜಾರಿಗೆ ತರಲಾಗುತ್ತದೆ ಎಂದು ಅವರು ತಿಳಿಸಿದರು.

ಭಾರತೀಯ ರೈಲ್ವೆಯ ಕಾಯಕಲ್ಪ ಮಾಡಲಾಗುತ್ತಿದೆ. ರೈಲ್ವೆ ಸಂಪರ್ಕ ವಿಸ್ತರಣೆಯಿಂದ ಉದ್ಯೋಗ ಸೃಷ್ಟಿಯಾಗಲಿದೆ. ನನಗೆ ಸಣ್ಣ ಕನಸು ಕಾಣುವ ಹವ್ಯಾಸ ಇಲ್ಲ, ಕುಂಟುತ್ತಾ ನಡೆಯುವ ರೂಢಿಯೂ ಇಲ್ಲ. ನಾವು ಯಾವ ದೇಶಕ್ಕಿಂತ ಹಿಂದೆ ಉಳಿಯುವುದಿಲ್ಲ, ಭಾರತೀಯ ರೈಲ್ವೆ 100% ವಿದ್ಯುಧೀಕರಣ ದೂರ ಇಲ್ಲ ಎಂದಿದ್ದಾರೆ. ಈ ಯೋಜನೆಯಲ್ಲಿ ಮಲ್ಟಿ ಮಾಡೇಲ್ ಕನೆಕ್ಟಿವಿಟ್ ಬಗ್ಗೆಯೂ ಗಮನಹರಿಸಲಾಗಿದೆ. ಎಲೆಕ್ಟ್ರಿಕ್ ಬಸ್‍ಗಳ ನೆಟ್‍ವರ್ಕ್ ಮಾಡಲಾಗುತ್ತಿದೆ. ರಾಜ್ಯಗಳಿಗೆ 10,000 ಬಸ್ ಕೊಡಲಾಗುತ್ತಿದೆ. ದೆಹಲಿಗೆ 1300ಕ್ಕೂ ಹೆಚ್ಚು ಬಸ್ ನೀಡುವ ಪ್ರಯತ್ನ ಮಾಡಲಾಗುತ್ತಿದೆ ಎಂದಿದ್ದಾರೆ.

– ಅಂತರ್ಜಾಲ ಮಾಹಿತಿ

The Central Government is providing 1200 electric buses for pollution control while the transport connectivity system of Karnataka is being developed. 500 crores to the state government for that. Prime Minister Narendra Modi has said that the grant has been given. He was speaking while inaugurating the Delhi-Ghaziabad-Meerut section of the Regional Rapid Transit System corridor in Uttar Pradesh. At this time, two metro lanes are being inaugurated in Bengaluru.
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಹವಾಮಾನ ವರದಿ | 17-04-2025 | ಎ.20 ರಿಂದ ರಾಜ್ಯದ ವಿವಿದೆಡೆ ಮತ್ತೆ ಮಳೆ

ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಮೋಡ ಹಾಗೂ ಕೆಲವು ಕಡೆ ತುಂತುರು ಮಳೆ…

43 minutes ago

ಪುತ್ತೂರು ಜಾತ್ರೆ ಎಂದರೆ “ನಮ್ಮ ಮನೆ ಉತ್ಸವ”

ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಪುಣ್ಯ ಕ್ಷೇತ್ರಗಳಲ್ಲಿ ಪುತ್ತೂರು ಶ್ರೀ ಮಹತೋಭಾರ ಶ್ರೀ…

7 hours ago

ಕೆಲವು ವಿಶೇಷ ಯೋಗಗಳು ಮತ್ತು ಗ್ರಹಗಳ ಸಂಯೋಜನೆ

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಾಭಕ್ತರದ ಜ್ಯೋತಿಷ್ಗಳನ್ನು ಸಂಪರ್ಕಿಸಿ 9535156490

12 hours ago

ಮೀಸಲಾತಿಗಾಗಿ ಜಾತಿಯಾಗುವ ಮತಧರ್ಮ

ಜಾತಿಗಣತಿ ಮಾಡಿ ಏನನ್ನು ಸಾಧಿಸಲು ಸಾಧ್ಯ? ಸದ್ಯ ಬಹಿರಂಗ ಆಗಿರುವ ವರದಿಯು ಇನ್ನಷ್ಟು…

20 hours ago

ಸರಕಾರಿ ಶಾಲೆಯಲ್ಲಿ ಬೆಳೆಸಿದ ತರಕಾರಿ ಜಿಲ್ಲಾಧಿಕಾರಿಗೆ ಕೊಡುಗೆ

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕುತ್ಲೂರು ಸರಕಾರಿ ಶಾಲೆ ವಿದ್ಯಾರ್ಥಿ ವಿದ್ಯಾರ್ಥಿನಿಯರು…

21 hours ago

ಅನ್ನದ ಪರಿಮಳ ಮನವರಳಿಸ ಬಹುದಲ್ಲವೇ..!

ಅನ್ನದ ಪರಿಮಳ ಎಷ್ಟು ಸೊಗಸು. ಅಡುಗೆ ಮನೆಯ ಭಾಷೆಯೇ ಅಂತಹದ್ದು.

1 day ago