ಮಹಿಳೆಯರಿಗೆ ಸಿಹಿ ಸುದ್ದಿ ಕೊಟ್ಟ ಕೇಂದ್ರ ಬಜೆಟ್‌ | 3 ಕೋಟಿ ಸ್ತ್ರೀಯರಿಗೆ ಸಿಗಲಿದೆ ‘ಲಕ್‌ಪತಿ ದೀದಿ’ ಲಾಭ

February 1, 2024
12:55 PM
ಕೇಂದ್ರ ಬಜೆಟ್‌ ನಲ್ಲಿ ಮಹಿಳೆಯರಿಗೂ ಆದ್ಯತೆ ನೀಡಿದ ನಿರ್ಮಲಕ್ಕ.

2024 ರ ಮಧ್ಯಂತರ ಬಜೆಟ್(Interim Budget) ಅನ್ನು ಮಂಡಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್(Nirmala Sitharaman), ಬಜೆಟ್ ಮಂಡನೆ ವೇಳೆ 10 ವರ್ಷಗಳ ಕೇಂದ್ರ ಸರ್ಕಾರದ(Central Govt) ಸಾಧನೆಗಳನ್ನು ವಿವರಿಸಿದರು. ಇದೇ ವೇಳೆ, ದೇಶದ 3 ಕೋಟಿ ಮಹಿಳೆಯರನ್ನು ಲಕ್ ಪತಿ ದೀದಿಯನ್ನಾಗಿ ಮಾಡುವುದಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್  ಅವರು ಲೋಕಸಭೆಯಲ್ಲಿ ಇಂದು ನರೇಂದ್ರ ಮೋದಿ (Narendra Modi) ಸರ್ಕಾರದ 2ನೇ ಆಡಳಿತಾವಧಿಯ ಕೊನೆಯ ಬಜೆಟ್‌ (Union Budget 2024) ಅನ್ನು ಮಂಡಿಸಿದರು. 

Advertisement
Advertisement

ಪ್ರಧಾನಿ ನರೇಂದ್ರ ಮೋದಿ ಅವರು 2023ರ ಆಗಸ್ಟ್ 15ರಂದು ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಲಖ್ಪತಿ ದೀದಿ ಯೋಜನೆಯನ್ನು ಪ್ರಾರಂಭಿಸುವುದಾಗಿ ಘೋಷಿಸಿದ್ದರು. ಆಗ ಅವರು ದೇಶದಲ್ಲಿ ಎರಡು ಕೋಟಿ ಲಖ್ಪತಿ ದೀದಿಗಳನ್ನು ಸೃಷ್ಟಿಸುವ ಗುರಿಯನ್ನು ಹೊಂದಿದ್ದರು. ಇದೀಗ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಈ ಗುರಿಯನ್ನು 3 ಕೋಟಿಗೆ ಹೆಚ್ಚಿಸಿದ್ದಾರೆ. ಆ ಮೂಲಕ ಈ ಯೋಜನೆಯಿಂದ 9 ಕೋಟಿ ಮಹಿಳೆಯರ ಜೀವನದ ಮೇಲೆ ಪರಿಣಾಮ ಬೀರಲಿದೆ.

ಲಕ್‌ ಪತಿ ದೀದಿ ಯೋಜನೆಯ ಉದ್ದೇಶವು ಬಡತನ ನಿರ್ಮೂಲನೆ ಮತ್ತು ಆರ್ಥಿಕ ಸಬಲೀಕರಣವಾಗಿದೆ. ಈ ಯೋಜನೆಯಡಿ ಮಹಿಳೆಯರಿಗೆ ಕೌಶಲ್ಯ ತರಬೇತಿ ನೀಡಲಾಗುತ್ತಿದ್ದು, ಇದರಿಂದ ಮಹಿಳಾ ಸ್ವ-ಸಹಾಯ ಗುಂಪುಗಳ ಮೂಲಕ ವರ್ಷಕ್ಕೆ 1 ಲಕ್ಷ ರೂಪಾಯಿ ಸಹಾಯಧನ ನೀಡಿ ಈ ಯೋಜನೆಯನ್ನು ಜಾರಿಗೊಳಿಸುವ ಉದ್ದೇಶ ಹೊಂದಲಾಗಿದೆ. ಲಕ್‌ ಪತಿ ದೀದಿ ಆಗಲು ಮಹಿಳೆಯರಿಗೆ ವಿವಿಧ ರೀತಿಯ ತರಬೇತಿ ನೀಡಲಾಗುವುದು. ಇದರಲ್ಲಿ ಮಹಿಳಾ ಸ್ವಸಹಾಯ ಗುಂಪುಗಳಿಗೆ (ಎಸ್‌ಎಚ್‌ಜಿ) ಡ್ರೋನ್‌ಗಳನ್ನು ಒದಗಿಸುವ ಮೂಲಕ ಅವರಿಗೆ ಡ್ರೋನ್‌ಗಳ ಕಾರ್ಯಾಚರಣೆ ಮತ್ತು ದುರಸ್ತಿ ಕುರಿತು ತರಬೇತಿ ನೀಡಲಾಗುತ್ತದೆ.

ಡ್ರೋನ್‌ಗಳು ಮಹಿಳೆಯರ ಭವಿಷ್ಯವನ್ನೇ ಬದಲಿಸಲಿದ್ದು, ಕಳೆದ ವರ್ಷ ನವೆಂಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಮಿತಿಯು ಲಕ್ಷಪತಿ ದೀದಿ ಯೋಜನೆಯಡಿ 1261 ಕೋಟಿ ರೂ.ಗಳನ್ನು ವ್ಯಯಿಸಿ 15,000 ಮಹಿಳಾ ಸ್ವಸಹಾಯ ಸಂಘಗಳಿಗೆ ಡ್ರೋನ್‌ಗಳನ್ನು ನೀಡಲು ನಿರ್ಧರಿಸಿತ್ತು. ಸಭೆಯಲ್ಲಿ, 2024-25 ಮತ್ತು 25-26 ರ ಎರಡು ಹಣಕಾಸು ವರ್ಷಗಳಲ್ಲಿ ಮಹಿಳಾ ಸ್ವಸಹಾಯ ಗುಂಪುಗಳಿಗೆ 14,500 ಡ್ರೋನ್‌ಗಳನ್ನು ಒದಗಿಸಲು ಸಹ ನಿರ್ಧಾರ ತೆಗೆದುಕೊಂಡಿತ್ತು.

2023-24 ರ ಹಣಕಾಸು ವರ್ಷದ ಮಾರ್ಚ್ ವೇಳೆಗೆ, ರಸಗೊಬ್ಬರ ಕಂಪನಿಗಳು ಮಹಿಳಾ ಸ್ವಸಹಾಯ ಗುಂಪುಗಳಿಗೆ 500 ಡ್ರೋನ್‌ಗಳನ್ನು ನೀಡುತ್ತವೆ. ಈ ಡ್ರೋನ್ ಅನ್ನು ಕೃಷಿ ಕೆಲಸದಲ್ಲಿ ವಿಶೇಷವಾಗಿ ಕೀಟನಾಶಕ ಮತ್ತು ರಸಗೊಬ್ಬರಗಳನ್ನು ಸಿಂಪಡಿಸಲು ಬಳಸಲಾಗುತ್ತದೆ. ಈ ಡ್ರೋನ್‌ಗಳನ್ನು ರೈತರಿಗೆ ಬಾಡಿಗೆಗೆ ನೀಡಲಾಗುವುದು, ಇದು ಮಹಿಳಾ ಸ್ವಸಹಾಯ ಸಂಘಗಳಿಗೆ ಆದಾಯವನ್ನು ತರಲಿವೆ.

ಕೃಷಿಯಲ್ಲಿ ಡ್ರೋನ್‌ಗಳನ್ನು ಬಳಸಬಹುದಾದ ಪ್ರದೇಶವನ್ನು ಪರಿಗಣಿಸಿ, 15,000 ಮಹಿಳಾ ಸ್ವಸಹಾಯ ಗುಂಪುಗಳನ್ನು ಆಯ್ಕೆ ಮಾಡಲಾಗುತ್ತದೆ ಮತ್ತು ಕ್ಲಸ್ಟರ್ ಲೆವೆಲ್ ಫೆಡರೇಶನ್ (ಸಿಎಲ್‌ಎಫ್) ರಚಿಸಲಾಗುತ್ತದೆ. ಒಂದು ಡ್ರೋನ್‌ನ ಬೆಲೆ 10 ಲಕ್ಷ ರೂಪಾಯಿ ಮತ್ತು ಇದರಲ್ಲಿ ಸರ್ಕಾರ 8 ಲಕ್ಷ ರೂಪಾಯಿಗಳನ್ನು ಪಾವತಿಸುತ್ತದೆ. ಉಳಿದ ಎರಡು ಲಕ್ಷ CLF ರಾಷ್ಟ್ರೀಯ ಕೃಷಿ ಇನ್ಫ್ರಾ ಫೈನಾನ್ಸಿಂಗ್ ಫೆಸಿಲಿಟಿಯಿಂದ ಸಾಲವನ್ನು ತೆಗೆದುಕೊಳ್ಳುತ್ತದೆ.

ಡ್ರೋನ್ ಪೈಲಟ್‌ಗೆ 15000 ಗೌರವಧನ: 18 ವರ್ಷ ಮೇಲ್ಪಟ್ಟ 10ನೇ ತರಗತಿ ಉತ್ತೀರ್ಣರಾದ ಯಾವುದೇ ಸ್ವಸಹಾಯ ಸಂಘಕ್ಕೆ ಸೇರಿದ ಮಹಿಳೆಗೆ ಡ್ರೋನ್ ಹಾರಿಸಲು 15 ದಿನಗಳ ತರಬೇತಿ ನೀಡಲಾಗುತ್ತದೆ. ಪೈಲಟ್ ಮಹಿಳೆಗೆ ಮಾಸಿಕ 15,000 ರೂಪಾಯಿ, ಪೈಲಟ್‌ಗೆ ಸಹಾಯ ಮಾಡಲು ಸಹ ಪೈಲಟ್ ಸಹ ಇರುತ್ತಾರೆ, ಅವರಿಗೆ ತಿಂಗಳಿಗೆ 10,000 ರೂಪಾಯಿ ನೀಡಲಾಗುತ್ತದೆ. ಅದೇ ರೀತಿ ಕೆಲವು ಮಹಿಳೆಯರಿಗೆ ಡ್ರೋನ್ ದುರಸ್ತಿ ಇತ್ಯಾದಿ ಕೆಲಸಗಳಿಗೆ ತರಬೇತಿಯನ್ನೂ ನೀಡಲಾಗುವುದು, ಅವರಿಗೆ ತಿಂಗಳಿಗೆ ಐದು ಸಾವಿರ ರೂಪಾಯಿ ಸಹಾಯಧನ ನೀಡುವ ಉದ್ದೇಶ ಹೊಂದಲಾಗಿದೆ.

ಲಖ್ಪತಿ ದೀದಿ ಯೋಜನೆಯ ಉದ್ದೇಶವು ಬಡತನ ನಿರ್ಮೂಲನೆ ಮತ್ತು ಆರ್ಥಿಕ ಸಬಲೀಕರಣವಾಗಿದೆ. ಈ ಯೋಜನೆಯಡಿ ಮಹಿಳೆಯರಿಗೆ ಕೌಶಲ್ಯ ತರಬೇತಿ ನೀಡಲಾಗುತ್ತಿದ್ದು, ಇದರಿಂದ ಮಹಿಳಾ ಸ್ವ-ಸಹಾಯ ಗುಂಪುಗಳ ಮೂಲಕ ವರ್ಷಕ್ಕೆ 1 ಲಕ್ಷ ರೂಪಾಯಿ ಸಹಾಯಧನ ನೀಡಿ ಈ ಯೋಜನೆಯನ್ನು ಜಾರಿಗೊಳಿಸುವ ಉದ್ದೇಶ ಹೊಂದಲಾಗಿದೆ.

  • ಅಂತರ್ಜಾಲ ಮಾಹಿತಿ( ನ್ಯೂಸ್‌ 18)
Advertisement
Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಸರ್ಕಾರಿ ಶಾಲೆ ಮಕ್ಕಳಿಗೆ ಚೆಸ್ ಪಾಠ | ದ.ಕ ದಲ್ಲಿ “ಚೆಸ್ ಇನ್ ಸ್ಕೂಲ್” ಆರಂಭ | ಗ್ರಾಮೀಣ ಮಕ್ಕಳಿಗೆ ಬೌದ್ಧಿಕ ಅವಕಾಶ
January 29, 2026
2:18 PM
by: ದ ರೂರಲ್ ಮಿರರ್.ಕಾಂ
ಕೊಳೆ ರೋಗ ನಿಯಂತ್ರಣಕ್ಕೂ ತೆರಿಗೆ…? ಮೈಲುತುತ್ತಿಗೆ ಸುಂಕ – ಅಡಿಕೆ ರೈತನಿಗೆ ಮತ್ತೊಂದು ಹೊರೆ..!
January 29, 2026
7:39 AM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ದೇಶದಲ್ಲಿ ರಬಿ ಋತು ಬಿತ್ತನೆ ದಾಖಲೆ ಹೆಚ್ಚಳ | 660.48 ಲಕ್ಷ ಹೆಕ್ಟೇರ್‌ಗೆ ಏರಿದ ಒಟ್ಟು ವಿಸ್ತೀರ್ಣ
January 29, 2026
7:18 AM
by: ದ ರೂರಲ್ ಮಿರರ್.ಕಾಂ
ಯೂರಿಯಾ ಮಾರಾಟ 3.8% ಏರಿಕೆ | ದೇಶೀಯ ಉತ್ಪಾದನೆ ಕುಸಿತ, ಆಮದು 85% ಹೆಚ್ಚಳ
January 29, 2026
7:08 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror