23 ಕ್ರೂರ ನಾಯಿ ತಳಿಗಳ ಆಮದು, ಮಾರಾಟ ನಿಷೇಧಿಸಿದ ಕೆಂದ್ರ ಸರ್ಕಾರ | ಮನುಷ್ಯನ ಜೀವಕ್ಕೆ ಅಪಾಯ ತರುವ ನಿಷೇಧಿತ ನಾಯಿ ತಳಿಗಳ ಪಟ್ಟಿ ಇಲ್ಲಿದೆ |

March 14, 2024
10:50 AM
ದೇಶಾದ್ಯಂತ ಹೆಚ್ಚುತ್ತಿರುವ ನಾಯಿಗಳ ದಾಳಿಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಅದರಲ್ಲೂ ವಿಶೇಷವಾಗಿ ಮಕ್ಕಳು ಮತ್ತು ವೃದ್ಧರ ಮೇಲೆ ಹೆಚ್ಚುತ್ತಿರುವ ನಾಯಿ ದಾಳಿಯ ಕಾರಣದಿಂದ ಕೇಂದ್ರ ಸರ್ಕಾರವು ಬುಧವಾರ 23 'ಕ್ರೂರ' ನಾಯಿ ತಳಿಗಳ ಆಮದು, ಮಾರಾಟ ಮತ್ತು ಸಂತಾನೋತ್ಪತ್ತಿಯ ಮೇಲೆ ನಿಷೇಧ ಹೇರಿದೆ.

ದಿನ ಬೆಳಗಾದರೆ ಬೆಂಗಳೂರು(Bengaluru) ಹಾಗೂ ಇತರ ನಗರಗಳು ಸೇರಿದಂತೆ ಕೇಳುವ ಸುದ್ದಿ ನಾಯಿಗಳ ಉಪಟಳ(Dog bite). ಬೀದಿನಾಯಿಗಳ(street dogs) ಅಟ್ಟಹಾಸದಿಂದ ಅದೆಷ್ಟೋ ಮಕ್ಕಳು(Children) ಪ್ರಾಣ ಕಳೆದುಕೊಂಡಿದ್ದಾರೆ. ಈ ಮಧ್ಯೆ ದೇಶಾದ್ಯಂತ ಹೆಚ್ಚುತ್ತಿರುವ ನಾಯಿ ಕಡಿತದ ಪ್ರಕರಣಗಳ ಮಧ್ಯೆ, “ಮನುಷ್ಯನ ಜೀವಕ್ಕೆ ಅಪಾಯ”(Danger to human life) ಎಂದು ಪರಿಗಣಿಸಲಾದ 23 ಕ್ರೂ” ನಾಯಿ ತಳಿಗಳ(Ferocious dog breed) ಆಮದು(Import), ಮಾರಾಟ(selling) ಮತ್ತು ಸಂತಾನೋತ್ಪತ್ತಿಯ(Breeding) ಮೇಲೆ ಕೇಂದ್ರವು(Central Govt) ನಿಷೇಧ(Ban) ಹೇರಿದೆ.

Advertisement
Advertisement

ಮೀನುಗಾರಿಕೆ(Fishing), ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯದ(Animal Husbandry and Dairying ministry) ಜಂಟಿ ಕಾರ್ಯದರ್ಶಿ ಡಾ.ಒ.ಪಿ.ಚೌಧರಿ ಅವರು ನಿಷೇಧ ಹೇರಿರುವ ಬಗ್ಗೆ ಖಚಿತಪಡಿಸಿಕೊಳ್ಳಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರವನ್ನು ಕಳುಹಿಸಿದ್ದಾರೆ.

Advertisement

ನಿಷೇಧಿತ ನಾಯಿ ತಳಿಗಳ ಪಟ್ಟಿ: ಪಿಟ್‌ಬುಲ್ ಟೆರಿಯರ್, ಟೋಸಾ ಇನು, ಅಮೇರಿಕನ್ ಸ್ಟಾಫರ್ಡ್‌ಶೈರ್ ಟೆರಿಯರ್, ಫಿಲಾ ಬ್ರೆಸಿಲಿರೊ, ಡೊಗೊ ಅರ್ಜೆಂಟಿನೋ, ಅಮೇರಿಕನ್ ಬುಲ್‌ಡಾಗ್, ಬೋರ್‌ಬೋಲ್, ಕಂಗಲ್, ರಷ್ಯನ್ ಶೆಫರ್ಡ್, ಟೊರ್ನ್‌ಜಾಕ್, ಸರ್ಪ್ಲಾನಿನಾಕ್, ಜಪಾನೀಸ್ ಟೋಸಾ ಮತ್ತು ಅಕಿಟಾ, ಮಾಸ್ಟಿಫ್ಸ್, ರಾಟ್‌ವೀಲರ್, ಟೆರಿಯರ್‌ಗಳು ರಿಡ್ಜ್ಬ್ಯಾಕ್, ವುಲ್ಫ್ ಡಾಗ್ಸ್, ಕೆನರಿಯೊ, ಅಕ್ಬಾಶ್ ನಾಯಿ, ಮಾಸ್ಕೋ ಗಾರ್ಡ್ ಡಾಗ್, ಕೇನ್ ಕೊರ್ಸೊ, ಮತ್ತು ಸಾಮಾನ್ಯವಾಗಿ ಬ್ಯಾನ್ ಡಾಗ್‌ಗೆ ಭಾರತದಲ್ಲಿ ನಿಷೇಧವನ್ನು ವಿಧಿಸಲಾಗಿದೆ.ಮಿಶ್ರತಳಿಗಳು ಸೇರಿದಂತೆ ಮೇಲಿನ ನಾಯಿ ತಳಿಗಳನ್ನು ಆಮದು, ತಳಿ, ಸಾಕುನಾಯಿಗಳಾಗಿ ಮಾರಾಟ ಮಾಡುವುದು ಮತ್ತು ಇತರ ಉದ್ದೇಶಗಳಿಗಾಗಿ ನಿಷೇಧಿಸಲಾಗಿದೆ ಎಂದು ತಜ್ಞರ ಸಮಿತಿಯ ಶಿಫಾರಸುಗಳನ್ನು ಉಲ್ಲೇಖಿಸಿ ಪತ್ರದಲ್ಲಿ ತಿಳಿಸಲಾಗಿದೆ.

ಪಶು ಸಂಗೋಪನಾ ಆಯುಕ್ತರ ಅಧ್ಯಕ್ಷತೆಯಲ್ಲಿ ರಚಿಸಲಾದ ತಜ್ಞರ ಸಮಿತಿಯು ಈ ಮೇಲೆ ಉಲ್ಲೇಖಿಸಿದ ನಾಯಿ ತಳಿಗಳ ಆಮದನ್ನು ನಿಷೇಧಿಸಲು ಶಿಫಾರಸು ಮಾಡಿದೆ. ಶ್ವಾನ ಸಾಕಣೆ ಮತ್ತು ಮಾರುಕಟ್ಟೆ ನಿಯಮಗಳು 2017 ಮತ್ತು ಪೆಟ್ ಶಾಪ್ ನಿಯಮಗಳು 2018ರ ಜಾರಿಗಾಗಿ ಕೇಂದ್ರ ಸರ್ಕಾರವು ಇದೇ ವೇಳೆ ಸೂಚಿಸಿದೆ. ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್ (PETA) ಇಂಡಿಯಾದಿಂದ ಮನವಿ ಮಾಡಿದ ನಂತರ ಕೇಂದ್ರದ ಈ ಕ್ರಮವು ಬಂದಿದೆ. ಈ ಬಗ್ಗೆ ಪೇಟಾ ದೆಹಲಿ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿಯನ್ನೂ ಸಲ್ಲಿಸಿದೆ. ತನ್ನ ಅರ್ಜಿಯಲ್ಲಿ PETA, ಈ ಆದೇಶವು ಮಾನವರು ಮತ್ತು ನಾಯಿಗಳೆರಡಕ್ಕೂ ರಕ್ಷಣೆಯನ್ನು ಒದಗಿಸುವಲ್ಲಿ ಪ್ರಮುಖವಾಗಿದೆ ಎಂದು ತಿಳಿದು ಬಂದಿದೆ.

Advertisement

ಕಳೆದ ಕೆಲವು ತಿಂಗಳು ದೇಶಾದ್ಯಂತ ನಾಯಿ ಕಡಿತದಿಂದ ಹಲವಾರು ಸಾವುಗಳು ಸಂಭವಿಸಿವೆ. ಮಂಗಳವಾರ, ಹಿಮಾಚಲದ ಬಿಲಾಸ್‌ಪುರ ಪ್ರದೇಶದಲ್ಲಿ ಬೀದಿ ನಾಯಿಯ ದಾಳಿಯಿಂದ 20 ಜನರು ಗಾಯಗೊಂಡಿದ್ದರು. ದೆಹಲಿಯಲ್ಲಿ ಪಿಟ್‌ಬುಲ್‌ ದಾಳಿಯಿಂದ ಪುಟ್ಟ ಮಗು 17 ದಿನಗಳ ಕಾಲ ಆಸ್ಪತ್ರೆಗೆ ದಾಖಲಾಗಿದ್ದರು. ಕಳೆದ ವಾರ ಗಾಝಿಯಾಬಾದ್‌ನಲ್ಲಿ ಪಿಟ್ ಬುಲ್ ದಾಳಿಗೆ 10 ವರ್ಷದ ಇನ್ನೊಂದು ಮಗು ತೀವ್ರವಾಗಿ ಗಾಯಗೊಂಡಿತ್ತು.

Source : ANI

Advertisement
Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ತಾಪಮಾನದ ಬರೆ…! ಎಳೆ ಅಡಿಕೆ ಬೀಳುತ್ತಿದೆ…! | ಮಳೆ ಬಾರದಿದ್ದರೆ ಸಂಕಷ್ಟ… ಮಳೆ ಬಂದರೂ ಕಷ್ಟ..! |
May 5, 2024
3:21 PM
by: ಮಹೇಶ್ ಪುಚ್ಚಪ್ಪಾಡಿ
Karnataka Weather | 05-05-2024 | ಮೋಡ-ಒಣ ಹವೆ | ಮೇ.6 ನಂತರವೇ ಉತ್ತಮ ಮಳೆ |
May 5, 2024
2:10 PM
by: ಸಾಯಿಶೇಖರ್ ಕರಿಕಳ
Karnataka Weather | 04-05-2024 | ರಾಜ್ಯದಲ್ಲಿ ಬಿಸಿಲು-ಮೋಡದ ವಾತಾವರಣ | ಮೇ 6 ರಿಂದ ಮುಂಗಾರು ಪೂರ್ವ ಮಳೆ ಆರಂಭ
May 4, 2024
12:30 PM
by: ಸಾಯಿಶೇಖರ್ ಕರಿಕಳ
ಕೊಕೋ ಧಾರಣೆ ಇಳಿಕೆ | ಒಮ್ಮೆಲೇ ಕುಸಿತ ಕಂಡ ಕೊಕೋ ಧಾರಣೆ |
May 4, 2024
10:32 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror