ಕಬ್ಬು ಖರೀದಿ ದರ ಹೆಚ್ಚಿಸಿದ ಕೇಂದ್ರ ಸರ್ಕಾರ | ಎಫ್​ಆರ್​ಪಿ ₹25 ಹೆಚ್ಚಿಸಿ ಪ್ರತಿ ಕ್ವಿಂಟಲ್‌ ದರ ₹340ಗೆ ಏರಿಕೆ

February 23, 2024
2:04 PM

ದೇಶದಾದ್ಯಂತ(Country) ಕಬ್ಬು ಬೆಳಗಾರರಿಗೆ(Sugarcane Farmer) ಕೇಂದ್ರ ಸರ್ಕಾರ(Central Govt) ಸಿಹಿ ಸುದ್ದಿಯನ್ನು ನೀಡಿದೆ. ಮುಂಬರುವ ಹಂಗಾಮಿನಲ್ಲಿ ಕಬ್ಬು ಖರೀದಿ(Sugarcane Price) ದರವನ್ನು ಪ್ರತಿ ಕ್ವಿಂಟಲ್​ಗೆ 25 ರೂಪಾಯಿ ಹೆಚ್ಚಳ ಮಾಡಿದೆ. ಅಂದರೆ ಈಗಿರುವ 315 ರೂಪಾಯಿಗೆ 25 ಸೇರಿಸಿ 340 ರೂಪಾಯಿ ಫೇರ್​ ಅಂಡ್​​ ರೆಮ್ಯುನ್​ರೇಟಿವ್​ ಪ್ರೈಸ್​ (FRP) ನಿಗದಿ ಮಾಡಿದೆ. ರೈತರ(Farmer Protest) ದೆಹಲಿ ಚಲೋ(Delhi Chalo) ಹೋರಾಟ ತೀವ್ರಗೊಳ್ಳುತ್ತಿರುವ ನಡುವೆ ಕೇಂದ್ರ ಸರ್ಕಾರ ಕಬ್ಬು ಬೆಳೆಗಾರರಿಗೆ ಈ ಭರ್ಜರಿ ಗಿಫ್ಟ್‌ ನೀಡಿದೆ.

Advertisement
Advertisement
Advertisement

ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ) ಸಭೆಯಲ್ಲಿ ಎಫ್‌ಆರ್‌ಪಿ ಹೆಚ್ಚಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಇದು ಸಾರ್ವತ್ರಿಕ ಲೋಕಸಭೆ ಚುನಾವಣೆಗೂ ಮುನ್ನ ರೈತರಿಗೆ ನೀಡಿದ ಭರ್ಜರಿ ಉಡುಗೊರೆಯಾಗಿದೆ. ಅಕ್ಟೋಬರ್‌ನಿಂದ ಪ್ರಾರಂಭವಾಗುವ 2024-25ರ ಹಂಗಾಮಿಗೆ ಕಾರ್ಖಾನೆಗಳು ಕಬ್ಬು ಬೆಳೆಗಾರರಿಗೆ ನೀಡಬೇಕಾದ ಕನಿಷ್ಠ ಬೆಲೆಯನ್ನು ಕ್ವಿಂಟಲ್‌ಗೆ 25 ರೂಪಾಯಿ ಹೆಚ್ಚಳ ಮಾಡಲಾಗಿದೆ. ರೈತರಿಂದ ಪ್ರತಿ ಕ್ವಿಂಟಲ್​​ಗೆ 340 ರೂ.ನಂತೆ ನೀಡಿ ಕಾರ್ಖಾನೆಗಳು ಕಬ್ಬು ಖರೀದಿಸುವಂತೆ ಸರ್ಕಾರ ನಿರ್ಧರಿಸಿದೆ.

Advertisement

ಅತಿ ಹೆಚ್ಚು ಏರಿಕೆ: ಕಬ್ಬು ಖರೀದಿ ದರದಲ್ಲಿ ಈವರೆಗೂ ಮಾಡಲಾದ ಅತಿ ಹೆಚ್ಚು ಏರಿಕೆ ಇದಾಗಿದೆ. 2014 ರಲ್ಲಿ ಅಧಿಕಾರಕ್ಕೆ ಬಂದ ನಂತರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಬ್ಬಿಗೆ ಘೋಷಿಸಿದ ಅತ್ಯಧಿಕ ನ್ಯಾಯಯುತ ಮತ್ತು ಲಾಭದಾಯಕ ಬೆಲೆಯಾಗಿದೆ. ಎರಡನೇ ಬಾರಿಗೆ ಕೇಂದ್ರ ಸರ್ಕಾರ ಎಫ್‌ಆರ್‌ಪಿಯನ್ನು ಪ್ರತಿ ಕ್ವಿಂಟಲ್​ಗೆ 25 ರೂ. ಹೆಚ್ಚಳ ಮಾಡಿದೆ. ಈ ಹಿಂದೆ 2017-18 ನೇ ಸಾಲಿನಲ್ಲೂ ಇಷ್ಟೇ ಪ್ರಮಾಣದ ಹೆಚ್ಚಳ ಮಾಡಲಾಗಿತ್ತು.

ಈ ಬಗ್ಗೆ ಸುದ್ದಿಗಾರರಿಗೆ ಮಾಹಿತಿ ನೀಡಿದ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್, ಸಿಸಿಇಎ 2024-25ರ ಕಬ್ಬಿನ ಎಫ್‌ಆರ್‌ಪಿಯನ್ನು ಪ್ರತಿ ಕ್ವಿಂಟಲ್‌ಗೆ 340 ರೂ.ಗೆ ಏರಿಸಿದೆ. ಇದು ಕಬ್ಬಿನ ಖರೀದಿಯಲ್ಲಿಯೇ ಅತಿ ಹೆಚ್ಚು ಬೆಲೆಯಾಗಿದ್ದು, 2023-24 ರ ಕಬ್ಬಿನ ಎಫ್​ಆರ್​ಪಿಗಿಂತ ಶೇಕಡಾ 8 ರಷ್ಟು ಹೆಚ್ಚಾಗಿದೆ ಎಂದು ತಿಳಿಸಿದರು.

Advertisement

ಕೇಂದ್ರ ಸರ್ಕಾರದ ಈ ನಿರ್ಧಾರ ಕಬ್ಬು ಬೆಳೆಗಾರರ ಆರ್ಥಿಕಾಭಿವೃದ್ಧಿಗೆ ನೆರವಾಗಲಿದೆ. ಕಬ್ಬರಿಗೆ ವಿಶ್ವದಲ್ಲೇ ಭಾರತವು ಅತಿ ಹೆಚ್ಚು ದರ ನೀಡುತ್ತಿದೆ. ಪರಿಷ್ಕೃತ ಖರೀದಿ ದರ ಅಕ್ಟೋಬರ್ 1, 2024 ರಿಂದ ಜಾರಿಗೆ ಬರಲಿದೆ. ಸರ್ಕಾರದ ಈ ನಿರ್ಧಾರವು 5 ಕೋಟಿಗೂ ಹೆಚ್ಚು ಕಬ್ಬು ರೈತರು ಮತ್ತು ಸಕ್ಕರೆ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಲಕ್ಷಾಂತರ ಜನರಿಗೆ ಪ್ರಯೋಜನವನ್ನು ನೀಡಲಿದೆ ಎಂದು ತಿಳಿಸಿದರು.

ರೈತರ ಆದಾಯವನ್ನು ದ್ವಿಗುಣಗೊಳಿಸುವ ಮೋದಿ ಗ್ಯಾರಂಟಿಯ ದೃಢೀಕರಣವಾಗಿದೆ. 2023-24 ರ ಹಂಗಾಮಿಗೆ ಒಟ್ಟು ಬಾಕಿ ಮೊತ್ತದ ಶೇಕಡಾ 80 ಕ್ಕಿಂತ ಹೆಚ್ಚು ಹಣವನ್ನು ಈಗಾಗಲೇ ರೈತರಿಗೆ ಪಾವತಿಸಲಾಗಿದೆ ಎಂದು ಠಾಕೂರ್ ಹೇಳಿದರು. ಕಬ್ಬನ್ನು ಮುಖ್ಯವಾಗಿ ಮಹಾರಾಷ್ಟ್ರ, ಉತ್ತರ ಪ್ರದೇಶ ಮತ್ತು ಕರ್ನಾಟಕದಲ್ಲಿ ಅತಿ ಹೆಚ್ಚಾಗಿ ಬೆಳೆಯಲಾಗುತ್ತದೆ.

Advertisement

– ಅಂತರ್ಜಾಲ ಮಾಹಿತಿ

Sugarcane price has been increased by Rs 25 per quintal for the coming season. That is, Rs 25 has been added to the existing Rs 315 and the Fair and Remunerative Price (FRP) has been fixed at Rs 340. The central government has given this huge gift to the sugarcane growers amid the Delhi Chalo struggle of farmers is intensifying.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ವಿಶ್ವ ಚೆಸ್ ಚಾಂಪಿಯನ್‌ಶಿಪ್‌ | ಭಾರತದ ಗುಕೇಶ್ ಚಾಂಪಿಯನ್‌ | ವಿಶ್ವದ ಕಿರಿಯ ಚಾಂಪಿಯನ್ ಆದ ಗುಕೇಶ್‌ |
December 12, 2024
6:48 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 12.12.2024 | ರಾಜ್ಯದ ಹಲವೆಡೆ ಮೋಡದ ವಾತಾವರಣ | ಸಂಜೆ ಸಾಮಾನ್ಯ ಮಳೆ ಸಾಧ್ಯತೆ | ಡಿ.17 ರ ನಂತರ ಕರಾವಳಿಯಲ್ಲಿ ಮತ್ತೆ ಮಳೆ ನಿರೀಕ್ಷೆ..?
December 12, 2024
12:22 PM
by: ಸಾಯಿಶೇಖರ್ ಕರಿಕಳ
ಜೇನುನೊಣಗಳಿಂದ ನಿಮ್ಮ ಹತ್ತಿರದ ಪರಿಸರ ಮಾಲಿನ್ಯ ಪತ್ತೆ…! | ಜೇನುತುಪ್ಪದ ಮೂಲಕ ಪರಿಸರ ಮಾಲಿನ್ಯದ ಸುಳಿವು..! |
December 10, 2024
11:12 PM
by: ವಿಶೇಷ ಪ್ರತಿನಿಧಿ
ಹವಾಮಾನ ವರದಿ | 10.12.2024 | ರಾಜ್ಯದ ಕೆಲವೆಡೆ ಇಂದೂ ಮಳೆ ಸಾಧ್ಯತೆ | ಡಿ.16ರಿಂದ ವಾಯುಭಾರ ಕುಸಿತ| ಮತ್ತೆ ಮಳೆ ಸಾಧ್ಯತೆ
December 10, 2024
1:33 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror