ಮಾಹಿತಿ

ಕೇಂದ್ರ ಸರಕಾರದ PM ಸೂರ್ಯ ಘರ್ ಸೋಲಾರ್ ಸಬ್ಸಿಡಿ ಯೋಜನೆ ಪೂರ್ಣ ಮಾಹಿತಿ

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ತಾವು ಸೋಲಾರ್(Solar) ಅಳವಡಿಸಿ ಸಬ್ಸಿಡಿ(Subsidy) ಪಡೆಯಲು ಉತ್ಸುಕರಾಗಿದ್ದರೆ ಮೊದಲು ಕೆಲವೊಂದು ಮೂಲ ವಿಷಯಗಳನ್ನು ಅರಿಯಿರಿ. ಮೊದಲು ವಿದ್ಯುತ್ ಬಿಲ್(Electricity Bill) ನಲ್ಲಿ‌ ನಿಮ್ಮ ಮನೆಗೆ ಅಳವಡಿಸಿರುವ ಪೂರ್ಣ ಲೋಡ್ (KW) ಎಷ್ಟು ಇದೆ ಎಂಬುದ‌ನು ನೋಡಿ..ಅಷ್ಟೇ ಆನ್ ಲೈನ್‌ ಅರ್ಜಿಯಲ್ಲಿ ಭರ್ತಿ ಮಾಡಿ ಇಲ್ಲವಾದಲ್ಲಿ ಅರ್ಜಿ ರಿಜೆಕ್ಟ್‌ ಆಗುವ ಸಾಧ್ಯತೆ..

Advertisement

ಈಗ ತಮ್ಮ ಮನೆಗೆ ಅಳವಡಿಸಿರುವ ಪೂರ್ಣ ಲೋಡ್ ನ ಬಗ್ಗೆ ಮಾಹಿತಿ 1 ಕಿಲೋ ವ್ಯಾಟ್ ಅಂದರೆ 1000 ವ್ಯಾಟ್ ಉದಾಹರಣೆಗೆ ಮನೆಯಲ್ಲಿ ಸಾಮಾನ್ಯ ಉಪಯೋಗಿಸುವ ಎಲೆಕ್ಟ್ರಿಕ್ ಉಪಕರಣಗಳು ಫ್ರಿಡ್ಜ್ -350 ರಿಂದ 800 ವ್ಯಾಟ್ ಇರುತ್ತದೆ ಫ್ಯಾನ್ 75 ವ್ಯಾಟ್ ಬಲ್ಬ್ ಗಳು max 23 ವ್ಯಾಟ್ LED TV max -30 ರಿಂದ 120 ವ್ಯಾಟ್ ವರೆಗೆ (TV ಯ ಸೈಜ್ ಮೇಲೆ ನಿರ್ಣಯ) ಈ ಎಲ್ಲಾ ಲೋಡ್ ಗಳನ್ನು ಒಟ್ಟುಗೂಡಿಸುವಾಗ ನಿಮಗೆ ಮನೆಯ ಪೂರ್ಣ ಲೋಡ್ KW ಗೊತ್ತಾಗುತ್ತದೆ.

ಈಗ ತಾವು ಸೋಲಾರ್ ಯಾವ ಕಾರಣಕ್ಕೆ ಪಡೆಯುತ್ತಿದ್ದೀರಿ ಎಂಬುದನ್ನು ನಿರ್ಧರಿಸಿ ಸೋಲಾರ್ ಸಿಸ್ಟಮ್ ನಲ್ಲಿ 3 ವಿಧಗಳಿವೆ Off grid system ಸೋಲಾರ್ ಪ್ಯಾನಲ್ ಮೂಲಕ ಪಡೆದ ವಿದ್ಯುತ್ ನ್ನು ಬ್ಯಾಟರಿ ಮೂಲಕ ಶೇಖರಿಸಿ ವಿದ್ಯುತ್ ಇಲ್ಲದ ಸಮಯ ಇನ್ವರ್ಟರ್ ಮೂಲಕ ಮನೆಗೆ ವಿದ್ಯುತ್ ಉಪಯೋಗಿಸುವುದು On grid system ಸೋಲಾರ್ ಪ್ಯಾನಲ್ ನಿಂದ ಪಡೆಯುವ ವಿದ್ಯುತ್ ನ್ನು ಬ್ಯಾಟರಿ ಸಹಾಯ ಇಲ್ಲದೆ ಇನ್ವರ್ಟರ್ ಮೂಲಕ ಪಡೆದು ಮನೆಗೆ ಬೇಕಾದಷ್ಟು ವಿದ್ಯುತ್ ಉಪಯೋಗಿಸಿ ಉಳಿದದ್ದನ್ನು ನೆಟ್ ಮೀಟರ್ ಮೂಲಕ ವಿದ್ಯುತ್ ಕ೦ಪನಿಗೆ ಮಾರಾಟ ಮಾಡುವ ಸಿಸ್ಟಮ್ Hybrid solar system On grid. ಸಾಮ್ಯತೆ ಹೊಂದಿರುವ ಸ್ವಲ್ಪ ದುಬಾರಿ ಸಿಸ್ಟಮ್ ಇದಾಗಿದೆ ಸಾಮಾನ್ಯವಾಗಿ ಜನರು ವಿದ್ಯುತ್ ಬಿಲ್ ಕಡಿಮೆ ಮಾಡುವ ನಿಟ್ಟಿನಲ್ಲಿ On grid ಸಿಸ್ಟಮ್ ಅಳವಡಿಸಿ ಮನೆಗೆ ಎಷ್ಟು ಬೇಕೋ ಅಷ್ಟೇ ವಿದ್ಯುತ್ ಉಪಯೋಗಿಸಿ ಉಳಿದದ್ದನ್ನು ವಿದ್ಯುತ್ ಕಂಪನಿಗೆ ಮಾರಾಟ ಮಾಡುವ ಉತ್ಸುಕತೆ ಹೊಂದಿರುತ್ತಾರೆ.

ಈ On grid solar ಸೋಲಾರ್ ಅಳವಡಿಸಲು ತಮಗೆ ತಗಲುವ ವೆಚ್ಚ 1 ಕಿಲೋ ವ್ಯಾಟ್ ಗೆ 55000 ದಿಂದ 80,000 ವರೆಗೆ ತಗಲುತ್ತದೆ (depend on equipment quality) ನಿಮಗೆ ಸಿಗುವ ಸಬ್ಸಿಡಿ 30,000 ರೂಪಾಯಿ 2 KW ಅಳವಡಿಸಲು ತಗಲುವ ವೆಚ್ಚ 1 ಲಕ್ಷ್ಮ ದಿಂದ 1.80 ಲಕ್ಷ ಇರುತ್ತದೆ (depending on equipment quality) ನಿಮಗೆ ಸಿಗುವ ಸಬ್ಸಿಡಿ – 60,000 3 KW ಗೆ ತಗಲುವ ವೆಚ್ಚ 1.40 ಲಕ್ಷ ‌ದಿ೦ದ 2 ಲಕ್ಷ (depending on equipment quality) ನಿಮಗೆ ಸಿಗುವ ಸಬ್ಸಿಡಿ 78,000 On grid ನಲ್ಲಿ ತಾವು ಮಾರಾಟ ಮಾಡುವ 1 Unit ಸೋಲಾರ್ ವಿದ್ಯುತ್ ಗೆ KEB 4 ರೂಪಾಯಿ ನೀಡುತ್ತದೆ 1 KW ಸೋಲಾರ್ ತಿಂಗಳಿಗೆ ಸರಾಸರಿ maximum 120 Unit ವಿದ್ಯುತ್ ಉತ್ಪಾದಿಸುತ್ತದೆ (ಮೋಡ , ಮಳೆ , ರಾತ್ರಿ ಸಮಯ ಸೇರಿ).ಉದಾಹರಣೆಗೆ – ತಿಂಗಳಿಗೆ‌‌ ನಿಮ್ಮ ಮನೆಯ ವಿದ್ಯುತ್ ಬಳಕೆ 60 Unit ಇದ್ದಲ್ಲಿ ತಾವು‌ ಉಳಿದ 60 ಯೂನಿಟ್ ಮಾರಾಟ ಮಾಡುತ್ತೀರಿ ಹೀಗೆ KW ಜಾಸ್ತಿ‌ ಆದ೦ತೆ ಉತ್ಪಾದನಾ ವಿದ್ಯುತ್ ಕೂಡ‌‌ ಜಾಸ್ತಿಯಾಗುತ್ತದೆ.

Advertisement

ಆದರೆ ತಮಗೆ ವಿದ್ಯುತ್ ಕ೦ಪನಿ‌ ಬಿಲ್ ನಲ್ಲಿ‌ ನಮೂದಿಸಿರುವ ಮನೆಯ ಪೂರ್ಣ ಲೋಡ್ ಎಷ್ಟು ಇದೆಯೋ ಅಷ್ಟೇ ಅರ್ಜಿಯಲ್ಲಿ ತುಂಬಿರಿ ಸೋಲಾರ್ ಪ್ಯಾನಲ್ ತಿಂಗಳಿಗೊಮ್ಮೆ ಸ್ವಚ್ಚತೆ ಮಾಡಲು ಮರೆಯದಿರಿ. ಎಷ್ಟು ಬಿಸಿಲು‌ ಜಾಸ್ತಿ ಇರುವುದೋ ವಿದ್ಯುತ್ ಉತ್ಪಾದನೆ ಕೂಡ ಜಾಸ್ತಿ ಆಗುತ್ತದೆ. ಪ್ಯಾನಲ್ ಅಳವಡಿಸುವಾಗ ಸೂರ್ಯನ ಕಿರಣಗಳಿಗೆ ಸರಿಯಾಗಿ ಪೂರ್ವ – ಪಶ್ಚಿಮಕ್ಕೆ ಹೊಂದಿ ಪ್ಯಾನಲ್ ಹಾಕಬೇಕು ಅದಕ್ಕಾಗಿ ನುರಿತ‌ ಸೋಲಾರ್ ಟೆಕ್ನಿಷಿಯನ್ ಅತ್ಯಗತ್ಯ.

Advertisement

ಉಪಯೋಗಕ್ಕೆ ಬಾರದ ಭೂಮಿ ಇದ್ದಲ್ಲಿ ಸೂರ್ಯನ ಬೆಳಕು ಪೂರ್ಣ ಪ್ರಮಾಣದಲ್ಲಿ ಇದ್ದಲ್ಲಿ ಜೊತೆಗೆ ಒಳ್ಳೆಯ ಬಜೆಟ್ ಇದ್ದಲ್ಲಿ ತಾವು 25 KW ವರೆಗಿನ On grid ಸೋಲಾರ್ ಅಳವಡಿಸಿ ನೇರ ಮಾರಾಟ ಮಾಡಿ ಹೆಚ್ಚು ಲಾಭದಾಯಕ ಪ್ರಾಜೆಕ್ಟ್ ಗೆ ಹಾಕಿದ‌ ಮೊತ್ತವನ್ನು ಆದಷ್ಟು ಬೇಗ ಪಡೆದು ಮುಂದಕ್ಕೆ ನಿರ೦ತರ ಲಾಭ ಪಡೆಯುತ್ತೀರಿ..ಇದಕ್ಕಾಗಿ ಕೇಂದ್ರ ಸರಕಾರದ ನವೀಕರಿಸಬಹುದಾದ ಇ೦ಧನ ಮೂಲಗಳ ಸಚಿವಾಲಯ ಯೋಜನೆ ಇದೆ

Source : Digital Media

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ರಾಜ್ಯದ ಹಲವೆಡೆ ಮುಂದಿನ 7 ದಿನಗಳ ಕಾಲ ವ್ಯಾಪಕ ಮಳೆ | ಬೆಂಗಳೂರಿಗೆ ಎಲ್ಲೋ ಅಲರ್ಟ್

ಕರಾವಳಿ ಸೇರಿದಂತೆ ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಧಾರಾಕಾರ ಮಳೆಯಾಗಿದೆ. ರಾಜ್ಯದ…

8 minutes ago

ಬದುಕು ಪುರಾಣ | ಜ್ಞಾನದ ಪ್ರತಿನಿಧಿ ಗಂಗಾಪುತ್ರ

ತ್ಯಾಗಕ್ಕೊಂದು ಸ್ವ-ಸ್ವರೂಪ ಇದ್ದರೆ ಅದು ‘ಭೀಷ್ಮಾಚಾರ್ಯ’ರಿಗೆ ಹೊಂದುತ್ತದೆ. ತ್ಯಾಗವೆಂದರೆ ದೇಹವನ್ನು ಕಳೆದುಕೊಳ್ಳುವುದಲ್ಲ! ದೇಹವಿದ್ದೂ…

1 day ago

ಬೆಳೆ ಹಾನಿ ಕುರಿತು ಸಮಗ್ರವಾಗಿ ಸಮೀಕ್ಷೆಗೆ ಸೂಚನೆ

ವಿಜಯಪುರ ಜಿಲ್ಲೆಯಲ್ಲಿ ಮಳೆಯಿಂದ ಹಾನಿಗೊಳಗಾದ ಗ್ರಾಮೀಣ ರಸ್ತೆ, ಕೃಷಿ, ತೋಟಗಾರಿಕೆ ಬೆಳೆಗಳು, ಜನ-ಜಾನುವಾರುಗಳ…

1 day ago

ಹವಾಮಾನ ವರದಿ | 09-08-2025 | ಬಂಗಾಳಕೊಲ್ಲಿಯ ವಾಯುಭಾರ ಕುಸಿತ- ಮುಂಗಾರು ಚುರುಕು |

ತಮಿಳುನಾಡು ಕರಾವಳಿ ಸಮೀಪ ಉಂಟಾಗಿರುವ ವಾಯುಭಾರ ಕುಸಿತವು ಆಂದ್ರಾ ಕರಾವಳಿ ದಾಟಿ ಉತ್ತರಕ್ಕೆ…

2 days ago

ಹೊಸರುಚಿ | ಹಲಸಿನ ಹಣ್ಣಿನ ಹಲ್ವ

ಹಲಸಿನ ಹಣ್ಣಿನ ಹಲ್ವಕ್ಕೆ ಬೇಕಾಗುವ ಸಾಮಗ್ರಿಗಳು :  ಹಲಸಿನ ಹಣ್ಣು 1 ಕಪ್. ಜಾರ್…

2 days ago

ನೆಗೆಟಿವ್ ವಾತಾವರಣದಿಂದ ಮಕ್ಕಳನ್ನು ರಕ್ಷಿಸುವುದೇ ಪಾಲಕರಿಗಿರುವ ಅತಿ ದೊಡ್ಡ ಸವಾಲು

ಈಗಿನ ಹೆತ್ತವರ ಮಾತೇ ಹಾಗೆ. ನಾವು ಕಷ್ಟಪಟ್ಟಿದ್ದೇವೆ. ನಮ್ಮ ಮಕ್ಕಳು ಕಷ್ಟಪಡುವುದು ಬೇಡ.…

2 days ago