ರೈತರನ್ನ ಸಂಕಷ್ಟಕ್ಕೆ ತಳ್ಳಿದ ಕೇಂದ್ರ ಸರ್ಕಾರ ನೀತಿ | ಈರುಳ್ಳಿ ದರ ನಿಯಂತ್ರಣ ನೀತಿಯಿಂದ ಮಾರ್ಕೆಟ್‌ನಲ್ಲೇ ಕೊಳೆಯುತ್ತಿದೆ ಲೋಡ್‌ಗಟ್ಟಲೆ ಈರುಳ್ಳಿ

February 2, 2024
1:39 PM
ಈರುಳ್ಳಿ ಬೆಳೆದ ರೈತರಿಗೆ ಈಗ ಧಾರಣೆಯ ಸಂಕಷ್ಟ ಇದೆ.

ಕಳೆದ ಕೆಲ ದಿನಗಳಿಂದ ಈರುಳ್ಳಿ ದರ(Onion Price) ಅತ್ತ ಆರಕ್ಕೂ ಏರದೇ ಇತ್ತ ಮೂರಕ್ಕೂ ಇಳಿಯದೆ ಗ್ರಾಹಕರ(customer) ಪಾಲಿಗೆ ಕೊಂಚ ತೃಪ್ತಿದಾಯಕವಾಗಿತ್ತು. ಆದರೆ ರೈತರು(Farmer) ದರ ಏರಬಹುದು ಅನ್ನುವ ನಿರೀಕ್ಷೆಯಲ್ಲಿದ್ರು.  ರೈತರ ಪಾಲಿಗೆ ಈಗ ಮತ್ತೆ ನಿರಾಸೆಯಾಗಿದೆ. ಈರುಳ್ಳಿ ದರ ಕುಸಿತಗೊಂಡಿದ್ದು ಗ್ರಾಹಕರಿಗೆ ಖುಷಿಯಾದರೆ ರೈತರಿಗೆ ಕಣ್ಣೀರು ತರಿಸ್ತಿದೆ.  ಮಳೆ‌ ಇಲ್ಲದೆ ಬಿತ್ತನೆ ಮಾಡಲಾಗದೇ ಸಂಕಷ್ಟ ಅನುಭವಿಸಿದ್ದ ಅನ್ನದಾತರಿಗೆ ಈಗ‌ ಮತ್ತೆ ಗಾಯದ ಮೇಲೆ‌ ಬರೆ ಎಳೆದಂತಾಗಿದೆ.

ಬೆಂಗಳೂರಿನ(Bengaluru) ಎಪಿಎಂಸಿ ಮಾರುಕಟ್ಟೆಯಲ್ಲಿ(APMC Market) ಕಣ್ಣು ಹಾಯಿಸಿದ ಕಡೆಯಲ್ಲ ಬರೀ ಈರುಳ್ಳಿ ಮೂಟೆಗಳ ರಾಶಿ. ಈರುಳ್ಳಿ ಲೋಡ್‌ ಜೊತೆಗೆ ಮಾರ್ಕೆಟ್‌ಗೆ ಎಂಟ್ರಿ ಕೊಡ್ತಿರೋ ಲಾರಿಗಳು. ಮಾರಾಟ ಆಗದೇ ಈರುಳ್ಳಿ ಉಳಿಯಲು ಕಾರಣ ಕೇಂದ್ರ ಸರ್ಕಾರದ ನಿರ್ಧಾರ. ಈರುಳ್ಳಿ ದರ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ(Central Govt) ಕಳೆದ ಅಕ್ಟೋಬರ್‌ನಲ್ಲಿ ಈರುಳ್ಳಿ ರಫ್ತು(Onion Export)ಮಾಡೋದನ್ನ ನಿಷೇಧ ಮಾಡಿತ್ತು. ಆ ಬಳಿಕ ಈರುಳ್ಳಿ ಕೊರತೆ ಕಾರಣಕ್ಕೆ ದರ ನಿಯಂತ್ರಣಕ್ಕೆ ರಫ್ತು ನಿಷೇಧವನ್ನು ಮಾರ್ಚ್ 31ರ ವರೆಗೂ ವಿಸ್ತರಿಸಿತ್ತು. ಇದೀಗ ನಿರೀಕ್ಷೆಗಿಂತ ಅಧಿಕ ಇಳುವರಿ ಈರುಳ್ಳಿ ಬಂದಿದೆ. ಕೊಳ್ಳುವರಿಲ್ಲದೇ ದರ ಇಳಿಕೆಯಾಗಿದೆ. ಅನ್ನದಾತರಿಗೆ ಗಾಯದ ಮೇಲೆ ಬರೆ ಬಿದ್ದಂತಾಗಿದೆ.

ಬೆಂಗಳೂರು ಎಪಿಎಂಸಿ ಮಾರುಕಟ್ಟೆಯಲ್ಲಿ ದಿನದ ಬೇಡಿಕೆ ಸರಾಸರಿ 30 ರಿಂದ 40 ಸಾವಿರ ಮೂಟೆ‌ಯಿದೆ. ಆದರೆ ಕಳೆದ ಎರಡು ವಾರದಿಂದ ಬೇಡಿಕೆಗಿಂತ ಹೆಚ್ಚಿನ ಈರುಳ್ಳಿ ಮಾರ್ಕೆಟ್ ಗೆ ಬರ್ತಿದ್ದು, 50 ರಿಂದ 70 ಸಾವಿರ ಮೂಟೆ ಈರುಳ್ಳಿ ಬರ್ತಿದೆ. ಕಳೆದ ಶನಿವಾರ 80 ಸಾವಿರ ಮೂಟೆ ಈರುಳ್ಳಿ ಬಂದಿತ್ತು. ಇದರಿಂದ ಬೆಲೆ ಕಮ್ಮಿಯಾಗ್ತಿದೆ ಅಂತಾರೆ ವರ್ತಕರು.

ರಾಜ್ಯದ 13 ಜಿಲ್ಲೆಗಳಲ್ಲಿ ಒಟ್ಟು 30 ಲಕ್ಷದಷ್ಟು ಈರುಳ್ಳಿ ಬೆಳೆಗಾರರಿದ್ದಾರೆ, ಗದಗ, ಹುಬ್ಬಳ್ಳಿ ಧಾರವಾಡ, ಬಾಗಲಕೋಟೆಯಲ್ಲಿ ಅಧಿಕವಾಗಿ ಈರುಳ್ಳಿ ಬೆಳೆಯಲಾಗುತ್ತೆ. ಆದರೆ ರೈತರ ಶ್ರಮಕ್ಕೆ ತಕ್ಕ ಬೆಲೆ ಸಿಗುತ್ತಿಲ್ಲ. ಕ್ವಿಂಟಲ್‌ಗೆ ₹800 ರಿಂದ ₹1200 ಆಗಿದೆ. ರಫ್ತು ನಿಷೇಧ ತೆರವು ಮಾಡಿ ಅಂತ ರೈತರು ಆಗ್ರಹಿಸ್ತಿದ್ದಾರೆ. ಇನ್ನೂ ಮಹಾರಾಷ್ಟ್ರದ ನಾಸಿಕ್‌ನಿಂದಲೂ ಈರುಳ್ಳಿ ಬರ್ತಿರೋದು ಸಂಕಷ್ಟ ಎದುರಾಗಿದೆ. ಈರುಳ್ಳಿ ದರ ಕುಸಿತ ಗ್ರಾಹಕರಿಗೆ ಖುಷಿಯಾಗಿದ್ದರೆ ರೈತರಿಗೆ ಕಣ್ಣೀರು ತರಿಸ್ತಿದೆ. ಆದರೆ ಮಾರುಕಟ್ಟೆಯಲ್ಲಿ ಇಬ್ಬರ ಹಿತವೂ ಮುಖ್ಯ ಅನ್ನೋದು ಸತ್ಯ.

– ಅಂತರ್ಜಾಲ ಮಾಹಿತಿ

Onion prices have fallen, while the consumers are happy, the farmers are in tears. The rice farmers who had suffered because they could not sow without rain, now it is as if the wound has been drawn again.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ರಸ್ತೆ ಬದಿಯಲ್ಲಿ ಕಸ ಎಸೆಯುವವರೇ, ಒಮ್ಮೆ ಇವರನ್ನು ನೋಡಿ…! – 5 ದಿನಗಳಲ್ಲಿ ಕಂಡ ಭಯಾನಕ ವಾಸ್ತವ
October 13, 2026
11:01 PM
by: ಮಹೇಶ್ ಪುಚ್ಚಪ್ಪಾಡಿ
ಸುಳ್ಯದಲ್ಲಿ ಅ.19 ರಂದು ಪ್ರಶಾಂತಿ ಡೆಂಟಲ್ ಕ್ಲಿನಿಕ್ ಉದ್ಘಾಟನೆ
October 13, 2026
10:36 AM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 13-10-2026 | ಅ.15ರಿಂದ ಕರ್ನಾಟಕದಲ್ಲಿ ಮತ್ತೆ ಮಳೆ ಸಾಧ್ಯತೆ – ಹಿಂಗಾರು ಆರಂಭದ ಮುನ್ಸೂಚನೆ
October 13, 2026
10:15 AM
by: ಸಾಯಿಶೇಖರ್ ಕರಿಕಳ
ಚಿತ್ರದುರ್ಗದಲ್ಲಿ ಕಣ್ಣೆದುರೇ ಒಣಗಿದ ಬೆಳೆ… ರೈತನಿಗೆ ದಿಕ್ಕೇ ತೋಚದ ಸ್ಥಿತಿ – ವಿಶೇಷ ಪ್ಯಾಕೇಜ್‌ಗೆ ರೈತರ ಒತ್ತಾಯ
October 13, 2026
9:55 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror