ಉಚಿತ ವಿದ್ಯುತ್‌ ನೀಡುವ ಸರ್ಕಾರಗಳಿಗೆ ಕೇಂದ್ರ ಸರ್ಕಾರದಿಂದ ಎಚ್ಚರಿಕೆ | ಸಾಲದ ಸುಳಿಗೆ ಸಿಲುಕಲಿವೆ ರಾಜ್ಯಗಳು| ಕೇಂದ್ರ ಇಂಧನ ಸಚಿವ

April 8, 2024
12:22 PM

ಸಾಲ ಮಾಡಿ ಜನರಿಗೆ ಉಚಿತ ವಿದ್ಯುತ್‌ (Free Electricity) ನೀಡುವ ರಾಜ್ಯಗಳು ಸಾಲದ ಸುಳಿಗೆ ಸಿಲುಕಲಿವೆ ಎಂದು ಕೇಂದ್ರ ಸರ್ಕಾರ(Central Govt) ಎಚ್ಚರಿಕೆ ನೀಡಿದೆ.

Advertisement
ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ಕೇಂದ್ರ ಇಂಧನ ಸಚಿವ ಆ‌ರ್.ಕೆ. ಸಿಂಗ್ (RK Singh), ಪಂಜಾಬ್‌ನಂತಹ ರಾಜ್ಯಗಳು ಸಾಲದ ಹಣದಲ್ಲಿ ವಿದ್ಯುತ್ ಖರೀದಿಸಿ ಜನರಿಗೆ ಉಚಿತವಾಗಿ ನೀಡುತ್ತಿವೆ. ರಾಜ್ಯ ಸರ್ಕಾರದ ಬಳಿಯೇ ಸಾಕಷ್ಟು ಹಣವಿದ್ದರೆ ಇಂತಹ ಜನಪ್ರಿಯ ಯೋಜನೆಗಳನ್ನು ಜಾರಿಗೊಳಿಸುವುದು ಸರಿ. ಆದರೆ, ಸಾಲ ಮಾಡಿ ವಿದ್ಯುತ್ ನೀಡಿದರೆ ಅದಕ್ಕೆ ಸರ್ಕಾರಗಳು ಬೆಲೆ ತೆರಬೇಕಾಗುತ್ತದೆ. ಏಕೆಂದರೆ ವಿದ್ಯುತ್ ತಯಾರಿಸಲು ಖರ್ಚು ತಗಲುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಬೇರೆಲ್ಲಾ ಉತ್ಪನ್ನಗಳಂತೆ ವಿದ್ಯುತ್ ತಯಾರಿಸಲು ಕೂಡ ಹಣ ಬೇಕು. 2022 ರಲ್ಲಿ ಪಂಜಾಬ್‌ನಲ್ಲಿ ಆಮ್ ಆದ್ಮಿ ಪಕ್ಷ (AAP) ಸರ್ಕಾರವು ಅಧಿಕಾರಕ್ಕೆ ಬಂದ ನಂತರ ಪ್ರತಿ ಮನೆಗೆ 300 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ಸೇರಿದಂತೆ ಹಲವಾರು ಜನಪರ ಕ್ರಮಗಳನ್ನು ಕೈಗೊಂಡಿದೆ. ಇದರಿಂದ ಪಂಜಾಬ್‌ನ ಎಎಪಿ ಸರ್ಕಾರದ (Punjab Government) ಈಗಾಗಲೇ 2 ವರ್ಷಗಳಲ್ಲಿ 47,000 ಕೋಟಿ ರೂಪಾಯಿಗಳಷ್ಟು ಸಾಲ ಪಡೆದುಕೊಂಡಿದೆ. ಜನರಿಗೆ ಯಾವುದೇ ರಾಜ್ಯ ಸರ್ಕಾರ ವಿದ್ಯುತ್ತನ್ನು ಉಚಿತವಾಗಿ ನೀಡುತ್ತದೆಯಾದರೆ ಅಷ್ಟು ಹಣ ರಾಜ್ಯ ಸರ್ಕಾರದ ಬಳಿಯೇ ಇರಬೇಕು. ಸಾಲ ಮಾಡಿ ಹಣ ತಂದು ಜನರಿಗೆ ಉಚಿತ ವಿದ್ಯುತ್‌ ನೀಡಿದರೆ ಖಂಡಿತ ಸಾಲದ ಸುಳಿಯಲ್ಲಿ ಸಿಲುಕಬೇಕಾಗುತ್ತದೆ ಎಂದು ಹೇಳಿದ್ದಾರೆ.

ವಿದ್ಯುತ್ ಉಚಿತವಾಗಿ ಸಿಗೋದಿಲ್ಲ ಎಂದು ನಾನು ರಾಜ್ಯಗಳಿಗೆ ಹೇಳುತ್ತಲೇ ಬಂದಿದ್ದೇನೆ. ಆದರೂ ಅವು ವಿದ್ಯುತ್ತನ್ನು ಉಚಿತವಾಗಿ ನೀಡುತ್ತವೆಯಾದರೆ ಅದಕ್ಕೆ ಬೆಲೆ ತೆರಬೇಕಾಗುತ್ತದೆ. ಈಗಾಗಲೇ ಸಾಲದಲ್ಲಿರುವ ರಾಜ್ಯಗಳು ಉಚಿತ ವಿದ್ಯುತ್‌ನಂತಹ ಜನಪ್ರಿಯ ಯೋಜನೆಗಳಿಗಾಗಿ ಇನ್ನಷ್ಟು ಸಾಲ ಮಾಡುತ್ತಿವೆ. ಹೀಗೆ ಸಾಲದ ಸುಳಿಗೆ ರಾಜ್ಯವನ್ನು ಸಿಲುಕಿಸಬಾರದು. ಉಚಿತಗಳಿಂದಾಗಿಯೇ ಅನೇಕ ರಾಜ್ಯ ಸರ್ಕಾರಗಳು ಸಾಲದ ಸುಳಿಯಲ್ಲಿ ಸಿಲುಕುತ್ತಿವೆ ಎಂದೂ ಅಭಿಪ್ರಾಯಪಟ್ಟಿದ್ದಾರೆ.

  • ಅಂತರ್ಜಾಲ ಮಾಹಿತಿ

Union Energy Minister RK Singh issued a stern warning to states indulging in the practice of providing free electricity to citizens, citing concerns over escalating debt. Singh highlighted the case of Punjab, which procures electricity through loans to distribute it at no cost to the populace. He emphasized that while such schemes may be popular, they come with a hefty financial burden that could push states further into indebtedness.

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ದೇಶದಾದ್ಯಂತ ಸಾಮಾನ್ಯ ಮಳೆ | ಮಲೆನಾಡು-ಕರಾವಳಿಯಲ್ಲಿ ವ್ಯಾಪಕ ಮಳೆ ಸಾಧ್ಯತೆ
July 16, 2025
7:51 AM
by: ದ ರೂರಲ್ ಮಿರರ್.ಕಾಂ
ಆರೋಗ್ಯದಲ್ಲಿ ಈ ರಾಶಿಯವರಿಗೆ ದೀರ್ಘಕಾಲದ ಕಾಯಿಲೆಯಿಂದ ಚೇತರಿಕೆ
July 16, 2025
7:17 AM
by: ದ ರೂರಲ್ ಮಿರರ್.ಕಾಂ
ಭೂಮಿಗೆ ಮರಳಿದ ಗಗನಯಾತ್ರಿ ಶುಭಾಂಶು ಶುಕ್ಲಾ
July 15, 2025
9:39 PM
by: ದ ರೂರಲ್ ಮಿರರ್.ಕಾಂ
ಮಂತ್ರಾಲಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಸತಿ ಗೃಹಗಳ ವ್ಯವಸ್ಥೆಗೆ ಕ್ರಮ
July 15, 2025
9:34 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group