ಕೇಂದ್ರ ಮೋಟಾರು ವಾಹನ ಖಾಯಿದೆ ತಿದ್ದುಪಡಿ | ವಾಹನಗಳಿಗೆ HSRP ನಂಬರ್ ಪ್ಲೇಟ್ ಕಡ್ಡಾಯ

October 26, 2023
12:02 PM

ಕರ್ನಾಟಕ ರಾಜ್ಯ ಸರಕಾರದ ಸಾರಿಗೆ ಇಲಾಖೆಯ ಅಧಿಕೃತ ಜಾಲತಾಣದಲ್ಲಿ ಸುತ್ತೋಲೆಯೊಂದು ಬಂದಿದೆ, ಹೀಗಿದೆ ಅದು… “ದಿನಾಂಕ : 01-04-2019 ಕ್ಕಿಂತ ಮೊದಲು ನೋಂದಣಿಯಾಗಿರುವ ವಾಹನಗಳಿಗೆ “HSRP” ನಂಬರ್ ಪ್ಲೇಟ್ ಗಳನ್ನು ಅಳವಡಿಸಲು ಕೊನೆಯ ದಿನಾಂಕ 17-11-2023” .ಇದು ಕೇಂದ್ರ ಮೋಟಾರು ವಾಹನ ಖಾಯಿದೆ ತಿದ್ದುಪಡಿಯ ಒಂದು ಭಾಗ… ಏನಿದು HSRP..?

Advertisement
Advertisement
Advertisement

ಅನೇಕರಿಗೆ ಬಗ್ಗೆ ಮಾಹಿತಿ. ಈ ಒಂದು ನಿಯಮದ ಬಗ್ಗೆ ಜಾಗೃತಿಯು ಕಡಿಮೆಯೇ ಇದೆ. ಈ ನಂಬರ್ ಪ್ಲೇಟ್ ನಿಯಮವು ಕರ್ನಾಟಕದಲಷ್ಟೇ ಅಲ್ಲದೆ ಇನ್ನೂ 12 ರಾಜ್ಯಗಳಲ್ಲಿ ಜಾರಿಯಲ್ಲಿದೆ. ಈ ರೀತಿಯ ನಂಬರ್ ಪ್ಲೇಟ್ ಗಳು ಶಾಶ್ವತ ಅಚ್ಚಿನ ಗುರುತಿನ ಸಂಖ್ಯೆಗಳೊಂದಿಗೆ ಕ್ರೋಮಿಯಂ ಆಧಾರಿತ ಅಶೋಕಚಕ್ರದ ಹೊಲೊಗ್ರಾಮ್ ಸೇರಿದಂತೆ ವಿಶಿಷ್ಟ ಲಕ್ಷಣಗಳನ್ನು ಹೊಂದಿವೆ. ಈ ಗುಣಲಕ್ಷಣಗಳು ನಂಬರ್ ಪ್ಲೇಟ್ ಗಳನ್ನ ಟ್ಯಾಂಪರಿಂಗ್ ಮಾಡುವುದನ್ನು ವಾಸ್ತವಿಕವಾಗಿ ಅಸಾಧ್ಯವಾಗಿಸುತ್ತದೆ. ಇಂತಹ ನಂಬರ್ ಪ್ಲೇಟ್ ಗಳನ್ನು ಬಳಸುವ ಪ್ರಮುಖ ಉದ್ದೇಶ ವಾಹನ-ಸಂಬಂಧಿತ ಅಪರಾಧಗಳನ್ನು ನಿಗ್ರಹಿಸುವುದು. ನಂಬರ್ ಪ್ಲೇಟ್ ಗಳನ್ನು ತಿದ್ದುವುದು ಮತ್ತು ನಕಲಿ ಮಾಡುವುದನ್ನು ತಡೆಯುವ ಮೂಲಕ, ರಸ್ತೆಯಲ್ಲಿರುವ ಎಲ್ಲಾ ವಾಹನಗಳನ್ನು ಗುರುತಿಸುವಲ್ಲಿ ಸಹಾಯ ಮಾಡುತ್ತವೆ.

Advertisement

ಏನಿದು “HSRP” ನಂಬರ್ ಪ್ಲೇಟ್ : “ಹೈ ಸೆಕ್ಯುರಿಟಿ ನಂಬರ್ ಪ್ಲೇಟ್” ಇದೊಂದು ಅಲ್ಯೂಮಿನಿಯಂ ಲೋಹದಿಂದ ನಿರ್ಮಿತವಾದ ನಂಬರ್ ಪ್ಲೇಟ್ ಆಗಿದ್ದು, ಅದನ್ನು ವಾಹನದ ಮೇಲೆ ಮರುಬಳಕೆ ಮಾಡಲಾಗದ ಸ್ನ್ಯಾಪ್-ಆನ್ ಲಾಕ್‌ಗಳ ಮೂಲಕ ಜೋಡಿಸಲಾಗುತ್ತದೆ. ನಂಬರ್ ಪ್ಲೇಟಿನ ಮೇಲಿನ ಎಡ ಮೂಲೆಯಲ್ಲಿ 20mm x 20mm ಗಾತ್ರದ ಕ್ರೋಮಿಯಂ ಆಧಾರಿತ ಹೊಲೊಗ್ರಾಮ್ ಅಶೋಕ ಚಕ್ರದ ಇದೆ. ಕೆಳಗಿನ ಎಡ ಮೂಲೆಯಲ್ಲಿ ವಿಶಿಷ್ಟವಾದ ಲೇಸರ್-ಬ್ರಾಂಡ್ 10-ಅಂಕಿಯ ಶಾಶ್ವತ ಗುರುತಿನ ಸಂಖ್ಯೆ ಇದೆ. ಎಡ ಮೂಲೆಯ ಮಧ್ಯಭಾಗದಲ್ಲಿ ‘IND’ ಎಂದು ನೀಲಿ ಬಣ್ಣದಿಂದ ಬರೆದಿರುತ್ತಾರೆ. ವಾಹನದ ನೋಂದಣಿ ಸಂಖ್ಯೆಯ ಮೇಲೆ ಹಾಟ್-ಸ್ಟ್ಯಾಂಪ್ಡ್ ಫಿಲ್ಮ್ ನಿಂದ ಸಂಖ್ಯೆಗಳನ್ನ ಸ್ಟಾಂಪಿಂಗ್ ಮಾಡಿರುತ್ತಾರೆ.

ನಂಬರ್ ಪ್ಲೇಟ್ ಗಳನ್ನು ಅಳವಡಿಸಲು ಸರಕಾರ ಕೆಲವು ಅಧಿಕೃತ ವಿತರಕರಿಗೆ ಮಾತ್ರ ಪರವಾನಿಗೆ ನೀಡಿದೆ. ಆ ವಿತರಕರು ಸರಕಾರದ “ವಾಹನ್ ಪೋರ್ಟಲ್‌”ನಲ್ಲಿ ಲೇಸರ್ ಕೋಡಿಂಗ್ ಅನ್ನು ನವೀಕರಿಸಬೇಕಾಗುತ್ತದೆ. ಆದಾಗ್ಯೂ, ನೋಂದಣಿ ಪ್ರಮಾಣಪತ್ರಗಳು, ಫಿಟ್ನೆಸ್ ಪ್ರಮಾಣಪತ್ರಗಳು ಇಲ್ಲದ ಮತ್ತು ಮಿತಿಮೀರಿದ ರಸ್ತೆ ತೆರಿಗೆ ಬಾಕಿ ಹೊಂದಿರುವ ವಾಹನಗಳು “HSRP” ನಂಬರ್ ಪ್ಲೇಟ್ ಸ್ಥಾಪನೆಗೆ ಅರ್ಹರಾಗಿರುವುದಿಲ್ಲ.

Advertisement

ದಿನಾಂಕ : 01-04-2019 ರ ನಂತರ ನೋಂದಾವಣಿಗೊಂಡ ವಾಹನಗಳಿಗೆ ಈಗಾಗಲೇ “HSRP” ನಂಬರ್ ಪ್ಲೇಟ್ ಗಳನ್ನು ಕಡ್ಡಾಯಗೊಳಿಸಲಾಗಿತ್ತು. ಆದಾಗ್ಯೂ ವಾಹನ ಡೀಲರ್ ಗಳ ನಿರ್ಲಕ್ಷ್ಯದಿಂದ ಅಂತಹ ನಂಬರ್ ಪ್ಲೇಟ್ ಗಳನ್ನು ಅಳವಡಿಸದ ವಾಹನಗಳಲ್ಲಿ ಕಡ್ಡಾಯವಾಗಿ HSRP ನಂಬರ್ ಪ್ಲೇಟ್ ಗಳನ್ನು ಅಳವಡಿಸಬೇಕು.

ನಂಬರ್ ಪ್ಲೇಟ್ ಗಳನ್ನು ಯಾವುದೇ ಅನಧಿಕೃತ ನಂಬರ್ ಪ್ಲೇಟ್ ತಯಾರಕರ ಬಳಿ ಮಾಡಿಸುವ ಹಾಗಿಲ್ಲ. ಸರಕಾರ ಅಧಿಕೃತವಾಗಿ ನಿಗದಿಪಡಿಸಿದ ಕೆಲ ವಿತರಕರು ಮಾತ್ರ ಇಂತಹ ನಂಬರ್ ಪ್ಲೇಟ್ ವಿತರಣೆಗೆ ಅರ್ಹರು. ಅರ್ಹ ವಿತರಣದಾರರ ವಿವರಗಳು ಸರಕಾರದ ಇಲಾಖೆಯ ಜಾಲತಾಣದಲ್ಲಿ ಲಭ್ಯವಿರುತ್ತದೆ. ಅಲ್ಲದೆ https://bookmyhsrp.com/Index.aspx ಜಾಲತಾಣದಲ್ಲಿ ಆನ್ ಲೈನ್ ಮುಖಾಂತರ “HSRP” ನಂಬರ್ ಪ್ಲೇಟ್ ಅನ್ನು ಪಡೆಯಬಹುದು,

Advertisement

ಮೇಲಿನ ಜಾಲತಾಣದಲ್ಲಿ “ಬುಕ್” ಲಿಂಕ್ ಅನ್ನು ಬಳಸಿ ನಂತರದ ಪುಟದಲ್ಲಿ ನಿಮ್ಮ ರಾಜ್ಯ ವನ್ನು ಸೆಲೆಕ್ಟ್ ಮಾಡಿ ನಿಮ್ಮ ವಾಹನದ ನೋಂದಣಿ ಸಂಖ್ಯೆ, ಇಂಜಿನ್ ಸಂಖ್ಯೆ ಮತ್ತು ಚಾಸಿ ಸಂಖ್ಯೆ ನಮೂದಿಸಿ ಮುಂದಿನ ಪುಟಕ್ಕೆ ಹೋದಲ್ಲಿ ಅಲ್ಲಿ ನಿಮ್ಮ ವಾಹನದ ರಿಜಿಸ್ಟ್ರೇಷನ್ ದಿನಾಂಕ ಕಾಣಸಿಗುತ್ತದೆ. ಅಲ್ಲಿ ಮತ್ತೊಮ್ಮೆ ನಿಮ್ಮ ಮೊಬೈಲ್ ನಂಬರ್ ಮತ್ತು ವಿಳಾಸವನ್ನು ನಮೂದಿಸಿ ಮುಂದಿನ ಪುಟಕ್ಕೆ ಹೋದರೆ ಅಲ್ಲಿ “ಹೋಂ ಡೆಲಿವರಿ” ಮತ್ತು “ಡೀಲರ್ ಅಪಾಯಿಂಟ್ಮೆಂಟ್” ಅನ್ನುವ ಎರಡು ಆಯ್ಕೆ ಕಾಣಸಿಗುತ್ತೆ. ಆದರೆ ನಂಬರ್ ಪ್ಲೇಟ್ಗಳನ್ನು ಮರುಬಳಕೆ ಮಾಡಲಾಗದ ಲಾಕ್ ಮುಖಾಂತರ ಜೋಡಿಸಬೇಕಾದ ಕಾರಣ ವಾಹನವನ್ನು ಡೀಲರ್‌ ಗಳ ವರ್ಕ್ ಶಾಪಿಗೆ ಕೊಂಡು ಹೋಗಬೇಕಾಗಿರುವುದರಿಂದ “ಹೋಂ ಡೆಲಿವರಿ” ಆಯ್ಕೆ ಬಹುತೇಕ ಕಡೆಗಳಲ್ಲಿ ಸೇವೆಗೆ ಲಭ್ಯವಿರುವುದಿಲ್ಲ. ಹಾಗಾಗಿ “ಡೀಲರ್ ಅಪಾಯಿಂಟ್ಮೆಂಟ್” ಸೆಲೆಕ್ಟ್ ಮಾಡಿಕೊಂಡು ಮುಂದಿನ ಪುಟದಲ್ಲಿ ನಿಮ್ಮ ಸ್ಥಳದ ಪಿನ್ ಕೋಡ್ ನಮೂದಿಸಿದಲ್ಲಿ ನಿಮ್ಮ ಹತ್ತಿರದ ಡೀಲರ್ ವಿವರಗಳು ಗೋಚರಿಸುತ್ತದೆ. ನಂತರ ನಿಮಗೆ ಸೂಕ್ತವಾದ ದಿನ ಮತ್ತು ಸಮಯದ ಸ್ಲಾಟ್ ನಿಗದಿಪಡಿಸಿದ ನಂತರ ಪೇಮೆಂಟ್ ಮಾಡಿದಲ್ಲಿ “HSRP” ನಂಬರ್ ಪ್ಲೇಟ್ ಆನ್ ಲೈನ್ ನೊಂದಣಿ ಪೂರ್ಣಗೊಳ್ಳುತ್ತದೆ. ನಂತರ ನೀವು ನಿಗದಿ ಪಡಿಸಿದ ದಿನಾಂಕ ಮತ್ತು ಸಮಯಕ್ಕೆ ಡೀಲರ್ ಬಳಿ ಹೋದಲ್ಲಿ ನಿಮ್ಮ “HSRP” ನಂಬರ್ ಪ್ಲೇಟ್ ಅನ್ನು ಬದಲಾಯಿಸಲಾಗುತ್ತದೆ.

ಸಾಮಾನ್ಯವಾಗಿ ನಾಲ್ಕು ಚಕ್ರಗಳ ವಾಹನಗಳಿಗೆ ಬೆಲೆಯು ರೂ. 600 ರಿಂದ ರೂ. 800 ರವರೆಗೂ ಇರಬಹುದು, ಮತ್ತು ದ್ವಿಚಕ್ರ ವಾಹನಗಳಿಗೆ ರೂ. 300 ರಿಂದ ರೂ. 500 ರ ನಡುವೆ ಬೆಲೆ ಇರಬಹುದು.

Advertisement

ನೆನಪಿರಲಿ ಸದ್ಯದ ಮಟ್ಟಿಗೆ ನಂಬರ್ ಪ್ಲೇಟ್ ಅಳವಡಿಸಲು ಕೊನೆಯ ದಿನಾಂಕ 17 ನವೆಂಬರ್ 2023 ಆಗಿರುತ್ತದೆ. ತಪ್ಪಿದ್ದಲ್ಲಿ ರೂಪಾಯಿ 500 ರಿಂದ 1000 ದವರೆಗೆ ದಂಡ ವಿಧಿಸಲಾಗುತ್ತದೆ. ಹೆಚ್ಚಿಗೆ ಇದರ ಬಗ್ಗೆ ಮಾಹಿತಿಯ ಕೊರತೆಯ ಕಾರಣ ಕೊನೆಯ ದಿನಾಂಕ ಮುಂದೂಡುವ ಸಾಧ್ಯತೆಗಳು ದಟ್ಟವಾಗಿದೆ. ಆದರೆ ಒಂದಲ್ಲ ಒಂದು ದಿನ “HSRP” ನಂಬರ್ ಪ್ಲೇಟ್ ಅಳವಡಿಕೆ ಮಾಡಲೇಬೇಕು. ಸಾವಿರ ರೂಪಾಯಿ ದಂಡದ ಬದಲು ಅದಕ್ಕಿಂತ ಕಡಿಮೆ ಮೊತ್ತದಲ್ಲಿ ನಂಬರ್ ಪ್ಲೇಟ್ ಬದಲಾಯಿಸುವುದು ಸೂಕ್ತ …

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಅಡಿಕೆ ಕ್ಯಾನ್ಸರ್‌ಕಾರಕವಲ್ಲ | WHO ವರದಿ ಸತ್ಯಕ್ಕೆ ದೂರವಾದುದು | ಅಧ್ಯಯನದ ನೆರವಿಗೆ ಕೇಂದ್ರ ಸರ್ಕಾರಕ್ಕೆ ಮನವಿ | ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್‌ ಕುಮಾರ್‌ ಕೊಡ್ಗಿ ಹೇಳಿಕೆ |
November 22, 2024
4:02 PM
by: ದ ರೂರಲ್ ಮಿರರ್.ಕಾಂ
ನ.23 | ಗುತ್ತಿಗಾರು ಸಹಕಾರಿ ಸಂಘದ ಶತಮಾನೋತ್ಸವ | ಕೃಷಿ ವಿಚಾರಗೋಷ್ಠಿ | ಅಡಿಕೆ ರೋಗಗಳ ಬಗ್ಗೆ ಮಾಹಿತಿ ವಿನಿಮಯ |
November 22, 2024
2:32 PM
by: ದ ರೂರಲ್ ಮಿರರ್.ಕಾಂ
ಕೋಲಾರದಲ್ಲಿ ಅತೀ ಹೆಚ್ಚು ನಕಲಿ ವೈದ್ಯರು…! | ನಕಲಿ ವೈದ್ಯರ ಕಡಿವಾಣಕ್ಕೆ ಕಟ್ಟುನಿಟ್ಟಿನ ಕ್ರಮ
November 21, 2024
7:36 PM
by: The Rural Mirror ಸುದ್ದಿಜಾಲ
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ  ಮನವಿ
November 21, 2024
7:32 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror