ಚಂದ್ರಯಾನ-3 ನಾಳೆ ಸಂಜೆ 6.04 ರ ಸುಮಾರಿಗೆ ಚಂದ್ರನ ಮೇಲೆ ಇಳಿಯಲಿದೆ. ಬಾಹ್ಯಾಕಾಶ ನೌಕೆಯು ತನ್ನ ಅಂತಿಮ ತಾಣವಾದ ಚಂದ್ರನ ದಕ್ಷಿಣ ಧ್ರುವದಿಂದ ಕೇವಲ ಒಂದು ದಿನದ ದೂರದಲ್ಲಿದೆ. ಲ್ಯಾಂಡರ್ ಮಾಡ್ಯೂಲ್‌ನ ಆರೋಗ್ಯದ ಆಧಾರದ ಮೇಲೆ ಇಸ್ರೋ ಸಾಫ್ಟ್ ಲ್ಯಾಂಡಿಂಗ್ ಅನ್ನು ಆಗಸ್ಟ್ 27 ಕ್ಕೆ ಕೂಡಾ ಮುಂದೂಡಬಹುದು.
Advertisement
ಚಂದ್ರನ ಅಂಗಳದಲ್ಲಿ ನೌಕೆಯು ಯಶಸ್ವಿ ಸಾಫ್ಟ್ ಲ್ಯಾಂಡಿಂಗ್ ಬಗ್ಗೆ ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಉಡಾವಣೆಗೆ ಮುಂಚಿನ ಎಲ್ಲಾ ಸಿದ್ಧತೆಗಳು ಮತ್ತು ಇಂಟಿಗ್ರೇಟೆಡ್ ಮಾಡ್ಯೂಲ್ ಮತ್ತು ಲ್ಯಾಂಡಿಂಗ್ ಮಾಡ್ಯೂಲ್ ಚಂದ್ರನತ್ತ ತಮ್ಮ ಪ್ರಯಾಣದಲ್ಲಿನ ಎಲ್ಲಾ ಯಶಸ್ಸುಗಳ ಕಾರಣದಿಂದ ನೌಕೆಯು ಯಶಸ್ವಿಯಾಗಿ ಚಂದ್ರನ ಅಂಗಳದಲ್ಲಿ ಇಳಿಯಲಿದೆ ಎಂದು ಅವರು ಹೇಳಿದ್ದಾರೆ.
Advertisement
ನಾಳೆ ಸಂಜೆ 6.04 ಕ್ಕೆ ಐತಿಹಾಸಿಕ ಲ್ಯಾಂಡಿಂಗ್‌ಗೆ ಮುಂಚಿತವಾಗಿ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಲ್ಯಾಂಡಿಂಗ್ ಪ್ರಕ್ರಿಯೆಯ ನೇರ ಪ್ರಸಾರವನ್ನು ಮಾಡುತ್ತದೆ.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement