ಸ್ವದೇಶಿ ಉಡುಪುಗಳನ್ನು ಉತ್ತೇಜಿಸಲು ನೂಲುವ ಚಕ್ರದ ಬಳಕೆ ಮಾಡಿ ಉದ್ಯಮವನ್ನಾಗಿಸಿದ್ದೂ ಅಲ್ಲದೆ ಸಾಕಷ್ಟು ಜನರು ಇಂತಹ ಬಟ್ಟೆ ತೊಡುವಂತೆ ಮಾಡಿದ್ದಾರೆ ಪುಣೆಯ ಸಾಫ್ಟ್ ವೇರ್ ಇಂಜಿನಿಯರ್. ಈ ವಿಶೇಷ ಕಾರ್ಯ ಗ್ರಾಮೀಣ ಅಭಿವೃದ್ಧಿಗೆ ಮಾದರಿಯೂ ಆಗಿದೆ.
ಮಹಾತ್ಮ ಗಾಂಧೀಜಿಯವರು ವಿದೇಶಿ ನಿರ್ಮಿತ ಉತ್ಪನ್ನಗಳನ್ನು ಬಹಿಷ್ಕರಿಸಲು ಮತ್ತು ಸ್ವದೇಶಿ ಉಡುಪುಗಳನ್ನು ಉತ್ತೇಜಿಸಲು ನೂಲುವ ಚಕ್ರದ ಬಳಕೆಯನ್ನು ಪ್ರಮುಖ ಸಾಧನವಾಗಿ ನಿಯೋಜಿಸಿದರು. ಆದರಂತೆ ಅದೇ ಸಂದೇಶವನ್ನು ಪ್ರಚಾರ ಮಾಡುವ ದೃಷ್ಟಿಯಲ್ಲಿ ಪುಣೆಯ ಸಾಫ್ಟ್ ವೇರ್ ಇಂಜಿನಿಯರ್ ಅಮಿತ್ ದೇಶಪಾಂಡೆ ಚರಕಾವನ್ನು ಬಳಸಿಕೊಂಡು ಉತ್ಪನ್ನಗಳನ್ನು ತಯಾರಿಸಿದ್ದಾರೆ.
ಬೃಹತ್ ಪ್ರಮಾಣದ ಪ್ಲಾಸ್ಟಿಕ್ ತ್ಯಾಜ್ಯವು ನಗರ ಪ್ರದೇಶಗಳಲ್ಲಿ ಮಾತ್ರ ಉತ್ಪತ್ತಿಯಾಗುತ್ತದೆ. ಅಂತಹ ವಸ್ತುಗಳನ್ನು ಮರುಬಳಕೆ ಮಾಡಬೇಕಾಗುತ್ತದೆ. ಆದರೆ ಗ್ರಾಮೀಣ ಜನರು ಬದುಕನ್ನು ಏರಿಸಲು ಅಲ್ಲಿನ ಕರಕುಶಲ ವಸ್ತುಗಳಿಗೆ ಮಾರುಕಟ್ಟೆ ಮಾಡಿಕೊಡಬೇಕಿದೆ. ಈ ಕಾರಣದಿಂದ ಗ್ರಾಮೀಣಾಭಿವೃದ್ಧಿಯ ಉದ್ಯಮಗಳು ಅಗತ್ಯವಾಗಿದೆ ಎನ್ನುವತ್ತಾರೆ ಅಮಿತ್. ನಮ್ಮ ಗ್ರಾಮಗಳು ಒಂದು ಕಾಲದಲ್ಲಿ ಕರಕುಶಲ ವಸ್ತುಗಳಿಗೆ ಹೆಸರುವಾಸಿಯಾಗಿತ್ತು ಎನ್ನುತ್ತಾರೆ ಅವರು.
ಅಮಿತ್ ದೇಶಪಾಂಡೆ ಮೊದಲು ಚರಕಾದಿಂದ ಮಾಡಿದ ಉತ್ಪನ್ನಗಳಿಗೆ ಜನರು ಅಷ್ಟಾಗಿ ಗಮನ ಕೊಡಲಿಲ್ಲ. ಅದಕ್ಕಾಗಿ ಅಮಿತ್ ಅವರು ಎಕ್ಸ್ ಪೋಸ್, ವರ್ಕ್ ಶಾಪ್‌ಗಳು, ಪ್ರದರ್ಶನಗಳಲ್ಲಿ ವೀಡಿಯೋವನ್ನು ಪ್ಲೇ ಮಾಡಿದರು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವನ್ನು ಪ್ರಸಾರ ಮಾಡಿದೆ. ಇದು ಹೆಚ್ಚು ಪ್ರಯೋಜನವಾಯಿತು ಎಂದರು.
ಅದಾದ ಬಳಿಕ ಖಾದಿ ವಸ್ತುಗಳು, ಕರಕುಶಲ ಉತ್ಪನ್ನಗಳು ಕೆಲವು ಅಂಗಡಿಗಳ ಕಪಾಟಿನಲ್ಲಿ ಕಂಡುಬಂದವು ಮತ್ತು ಆನ್‌ಲೈನ್‌ನಲ್ಲಿ ಮಾರಾಟ ಮಾಡಲು ವಬ್‌ಸೈಟ್ ಅನ್ನು ಪ್ರಾರಂಭಿಸಿದರು. ಈಗ ಅಮಿತ್ ಅವರು ಕಾರ್ಪೊರೇಟ್ ಉಡುಗೊರೆಗಳನ್ನು ಸಹ ಪೊರೈಸುತ್ತಾರೆ. ಕಳೆದ ವರ್ಷದಿಂದ ಅಮಿತಾ ಅವರ ಪತಿ ಅಭಿಷೇಕ್ ಪರಂಜ್ವೆ ಕೂಡಾ ಸೇರಿಕೊಂಡರು. ಕಳೆದ ವರ್ಷ ಕೊರೋನಾ ಸಾಂಕ್ರಾಮಿಕ ರೋಗದ ನಂತರ ತನ್ನ ಆದಾಯವನ್ನು ಹೆಚ್ಚಿತು ಎನ್ನುತ್ತಾರೆ.
ಗ್ರಾಮೀಣ ಭಾಗಗಳಲ್ಲಿ ಇಂತಹ ಉದ್ಯಮಗಳು ಬೆಳೆದರೆ ಮಾತ್ರವೇ ಗ್ರಾಮೀಣಾಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಗ್ರಾಮೀಣ ಜನರ ಆದಾಯ ಹೆಚ್ಚಾಗುವುದು ಅಲ್ಲದೆ ಮಾರುಕಟ್ಟೆ ಕೂಡಾ ಬೆಳೆಯಲು ಸಾಧ್ಯವಿದೆ.