Advertisement
ಕಲೆ-ಸಂಸ್ಕೃತಿ

ಪುಣೆಯ ಸಾಫ್ಟ್ ವೇರ್  ಇಂಜಿನಿಯರ್ ವಿಶೇಷ ಸಾಧನೆ | ಚರಕಾದಿಂದ 7,00,000 ಪ್ಲಾಸ್ಟಿಕ್ ಹೊದಿಕೆ, ಬ್ಯಾಗ್ ಹಾಗೂ ಮ್ಯಾಟ್‌ಗಳನ್ನು ತಯಾರಿಸಿದ ಐಟಿ ಇಂಜಿನಿಯರ್ |

Share

ಸ್ವದೇಶಿ ಉಡುಪುಗಳನ್ನು ಉತ್ತೇಜಿಸಲು ನೂಲುವ ಚಕ್ರದ ಬಳಕೆ ಮಾಡಿ ಉದ್ಯಮವನ್ನಾಗಿಸಿದ್ದೂ ಅಲ್ಲದೆ ಸಾಕಷ್ಟು ಜನರು ಇಂತಹ ಬಟ್ಟೆ ತೊಡುವಂತೆ ಮಾಡಿದ್ದಾರೆ ಪುಣೆಯ ಸಾಫ್ಟ್ ವೇರ್  ಇಂಜಿನಿಯರ್. ಈ ವಿಶೇಷ ಕಾರ್ಯ ಗ್ರಾಮೀಣ ಅಭಿವೃದ್ಧಿಗೆ ಮಾದರಿಯೂ ಆಗಿದೆ.

ಮಹಾತ್ಮ ಗಾಂಧೀಜಿಯವರು ವಿದೇಶಿ ನಿರ್ಮಿತ ಉತ್ಪನ್ನಗಳನ್ನು ಬಹಿಷ್ಕರಿಸಲು ಮತ್ತು ಸ್ವದೇಶಿ ಉಡುಪುಗಳನ್ನು ಉತ್ತೇಜಿಸಲು ನೂಲುವ ಚಕ್ರದ ಬಳಕೆಯನ್ನು ಪ್ರಮುಖ ಸಾಧನವಾಗಿ ನಿಯೋಜಿಸಿದರು. ಆದರಂತೆ ಅದೇ ಸಂದೇಶವನ್ನು ಪ್ರಚಾರ ಮಾಡುವ ದೃಷ್ಟಿಯಲ್ಲಿ ಪುಣೆಯ ಸಾಫ್ಟ್ ವೇರ್  ಇಂಜಿನಿಯರ್ ಅಮಿತ್ ದೇಶಪಾಂಡೆ ಚರಕಾವನ್ನು ಬಳಸಿಕೊಂಡು ಉತ್ಪನ್ನಗಳನ್ನು ತಯಾರಿಸಿದ್ದಾರೆ.

ಬೃಹತ್ ಪ್ರಮಾಣದ ಪ್ಲಾಸ್ಟಿಕ್ ತ್ಯಾಜ್ಯವು ನಗರ ಪ್ರದೇಶಗಳಲ್ಲಿ ಮಾತ್ರ ಉತ್ಪತ್ತಿಯಾಗುತ್ತದೆ. ಅಂತಹ ವಸ್ತುಗಳನ್ನು  ಮರುಬಳಕೆ ಮಾಡಬೇಕಾಗುತ್ತದೆ. ಆದರೆ ಗ್ರಾಮೀಣ ಜನರು ಬದುಕನ್ನು ಏರಿಸಲು ಅಲ್ಲಿನ ಕರಕುಶಲ ವಸ್ತುಗಳಿಗೆ ಮಾರುಕಟ್ಟೆ ಮಾಡಿಕೊಡಬೇಕಿದೆ. ಈ ಕಾರಣದಿಂದ ಗ್ರಾಮೀಣಾಭಿವೃದ್ಧಿಯ ಉದ್ಯಮಗಳು ಅಗತ್ಯವಾಗಿದೆ ಎನ್ನುವತ್ತಾರೆ ಅಮಿತ್.‌  ನಮ್ಮ ಗ್ರಾಮಗಳು ಒಂದು ಕಾಲದಲ್ಲಿ ಕರಕುಶಲ ವಸ್ತುಗಳಿಗೆ ಹೆಸರುವಾಸಿಯಾಗಿತ್ತು ಎನ್ನುತ್ತಾರೆ ಅವರು.

ಅಮಿತ್ ದೇಶಪಾಂಡೆ ಮೊದಲು ಚರಕಾದಿಂದ ಮಾಡಿದ ಉತ್ಪನ್ನಗಳಿಗೆ ಜನರು ಅಷ್ಟಾಗಿ ಗಮನ ಕೊಡಲಿಲ್ಲ. ಅದಕ್ಕಾಗಿ ಅಮಿತ್ ಅವರು ಎಕ್ಸ್ ಪೋಸ್, ವರ್ಕ್ ಶಾಪ್‌ಗಳು, ಪ್ರದರ್ಶನಗಳಲ್ಲಿ ವೀಡಿಯೋವನ್ನು ಪ್ಲೇ ಮಾಡಿದರು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವನ್ನು ಪ್ರಸಾರ ಮಾಡಿದೆ. ಇದು ಹೆಚ್ಚು ಪ್ರಯೋಜನವಾಯಿತು ಎಂದರು.

ಅದಾದ ಬಳಿಕ ಖಾದಿ ವಸ್ತುಗಳು, ಕರಕುಶಲ ಉತ್ಪನ್ನಗಳು ಕೆಲವು ಅಂಗಡಿಗಳ ಕಪಾಟಿನಲ್ಲಿ ಕಂಡುಬಂದವು ಮತ್ತು ಆನ್‌ಲೈನ್‌ನಲ್ಲಿ ಮಾರಾಟ ಮಾಡಲು ವಬ್‌ಸೈಟ್ ಅನ್ನು ಪ್ರಾರಂಭಿಸಿದರು. ಈಗ ಅಮಿತ್‌ ಅವರು ಕಾರ್ಪೊರೇಟ್ ಉಡುಗೊರೆಗಳನ್ನು ಸಹ ಪೊರೈಸುತ್ತಾರೆ. ಕಳೆದ ವರ್ಷದಿಂದ ಅಮಿತಾ ಅವರ ಪತಿ ಅಭಿಷೇಕ್ ಪರಂಜ್ವೆ ಕೂಡಾ ಸೇರಿಕೊಂಡರು. ಕಳೆದ ವರ್ಷ ಕೊರೋನಾ ಸಾಂಕ್ರಾಮಿಕ ರೋಗದ ನಂತರ ತನ್ನ ಆದಾಯವನ್ನು ಹೆಚ್ಚಿತು ಎನ್ನುತ್ತಾರೆ.

ಗ್ರಾಮೀಣ ಭಾಗಗಳಲ್ಲಿ ಇಂತಹ ಉದ್ಯಮಗಳು ಬೆಳೆದರೆ ಮಾತ್ರವೇ ಗ್ರಾಮೀಣಾಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಗ್ರಾಮೀಣ ಜನರ ಆದಾಯ ಹೆಚ್ಚಾಗುವುದು ಅಲ್ಲದೆ ಮಾರುಕಟ್ಟೆ ಕೂಡಾ ಬೆಳೆಯಲು ಸಾಧ್ಯವಿದೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

Published by
ಮಿರರ್‌ ಡೆಸ್ಕ್‌

Recent Posts

ಕೃಷಿ ಯೋಜನೆಯ ಪ್ರಗತಿಯಲ್ಲಿ ತುಮಕೂರಿಗೆ ರಾಜ್ಯದಲ್ಲೇ ಮೊದಲ ಸ್ಥಾನ

ಪ್ರಧಾನಮಂತ್ರಿ ಧನ್-ಧಾನ್ಯ ಕೃಷಿ ಯೋಜನೆಯ ಪ್ರಗತಿ ಮೌಲ್ಯಮಾಪನದಲ್ಲಿ ತುಮಕೂರು ಜಿಲ್ಲೆ ಕರ್ನಾಟಕದಲ್ಲಿ ಮೊದಲ…

15 hours ago

ಬರಗಾಲದಲ್ಲೂ ಬೆಳೆ ಉಳಿಸಿದ ಸಾವಯವ ಕೃಷಿ – ಸಾವಯವ ಕೃಷಿ ಅಬ್ಬರಿಸಿ ಬರುವುದಿಲ್ಲ- ಮುಗ್ಗರಿಸಿ ಬೀಳುವುದಿಲ್ಲ..!

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಚಿಕ್ಕಬಾಗೇವಾಡಿಯ ಸಾವಯವ ಕೃಷಿಕ ಕಲ್ಲಪ್ಪ ಪಂಡಿತಪ್ಪ ನೇಗಿನಾಳ…

20 hours ago

ರಾಜ್ಯಾದ್ಯಂತ ನವರಾತ್ರಿ ಸಂಭ್ರಮ : ಶಕ್ತಿಪೀಠಗಳಲ್ಲಿ ವಿಶೇಷ ಪೂಜೆ, ಮಂಗಳೂರು–ಮಡಿಕೇರಿ–ಶ್ರೀರಂಗಪಟ್ಟಣದಲ್ಲಿ ದಸರಾ ಸಂಭ್ರಮ

ರಾಜ್ಯಾದ್ಯಂತ ನವರಾತ್ರಿ ಸಂಭ್ರಮ ಮನೆಮಾಡಿದ್ದು, ಶೃಂಗೇರಿ, ಹೊರನಾಡು, ಕಟೀಲು ಮತ್ತು ಕೊಲ್ಲೂರು ಸೇರಿದಂತೆ…

2 days ago

ಪಶ್ಚಿಮ ಘಟ್ಟ ಉಳಿಸಿ, ಉತ್ತರ ಕನ್ನಡ ರಕ್ಷಿಸಿ : ಬೇಡ್ತಿ–ಅಘನಾಶಿನಿ ನದಿ ತಿರುವು ಯೋಜನೆಗೆ ವಿರೋಧ

ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಬೃಹತ್ ಧರಣಿಯಲ್ಲಿ ಬೇಡ್ತಿ–ಅಘನಾಶಿನಿ ನದಿ ತಿರುವು ಯೋಜನೆಯನ್ನು…

2 days ago

ನಗರೀಕರಣದ ನಡುವೆ ಪ್ರಕೃತಿ, ವನ್ಯಜೀವಿಗಳ ಸಮತೋಲನ ಕಾಪಾಡುವುದು ಆದ್ಯತೆಯಾಗಲಿ

ನಗರೀಕರಣದ ನಡುವೆ ಪ್ರಕೃತಿ ಮತ್ತು ವನ್ಯಜೀವಿಗಳ ನಡುವಿನ ಸಮತೋಲನ ಕಾಪಾಡುವುದು ಎಲ್ಲರ ಆದ್ಯತೆಯಾಗಬೇಕು…

3 days ago

ಕೊರಿಯರ್ ಮೂಲಕ ಮಾದಕ ದ್ರವ್ಯ ಸಾಗಾಟ..! ಮಂಗಳೂರಿನಲ್ಲಿ 1.58 ಕೋಟಿ ರೂ. ಮೌಲ್ಯದ ಎಂಡಿಎಂಎ ವಶ

ಮಂಗಳೂರಿನಲ್ಲಿ ಕೊರಿಯರ್ ಮೂಲಕ ಎಂಡಿಎಂಎ ಸಾಗಾಟ ಮಾಡಿದ ಆರೋಪದ ಮೇಲೆ ಸಿಸಿಬಿ ಪೊಲೀಸರು…

3 days ago