ಅಪಾಯದಲ್ಲಿದೆ ಪಶ್ಚಿಮ ಘಟ್ಟದ ಸೌಂದರ್ಯದ ಗಣಿ ಚಾರ್ಮಾಡಿ ಘಾಟ್‍ | ಐದಾರು ಕಡೆ ಬಿರುಕು ಬಿಟ್ಟ ಭೂಮಿ | ಆತಂಕದಲ್ಲಿ ಜನತೆ

July 6, 2024
11:21 AM
ಭಾರೀ ಮಳೆಗೆ ಚಾರ್ಮಾಡಿ ಘಾಟ್ ವರ್ಷದಿಂದ ವರ್ಷಕ್ಕೆ ತನ್ನ ಸಾಮರ್ಥ್ಯ ಕಳೆದುಕೊಳ್ಳುತ್ತಿದ್ದಯೇ ಎಂಬ ಅನುಮಾನ ಈಗ ಕಾಡುತ್ತಿದೆ.

ಚಾರ್ಮಾಡಿ ಘಾಟ್(Charmadi Ghat)..‌ ಪಶ್ಚಿಮ ಘಟ್ಟದ(Western Ghats) ಸೌಂದರ್ಯದ ಗಣಿ.. ಹಚ್ಚ ಹಸುರಿನ ಸಿರಿಯ ಘಾಟ್‌ ಮಧ್ಯೆ ರಸ್ತೆಯಲ್ಲಿ ಸಾಗುವುದೆಂದರೆ ಅದೇನೋ ಸ್ವರ್ಗದಲ್ಲಿ ಸಂಚರಿಸಿದಂತೆ ಭಾಸವಾಗುತ್ತದೆ. ಅದರಲ್ಲೂ ಈ ಮಳೆಗಾಲದಲ್ಲಂತೂ(Rainy Season) ಇಡೀ ಸ್ವರ್ಗ ಲೋಕವೇ ಧರೆಗಿಳಿದಂತೆ ಇರುತ್ತದೆ. ಆದರೆ ಇಂತಹ ಚಾರ್ಮಾಡಿ ಘಾಟಿಗೆ  ಈಗ ಆಯಸ್ಸು ಇದೆಯೋ ಅಥವಾ ಇಲ್ಲವೋ ಎಂಬ ಅನುಮಾನ ದಟ್ಟವಾಗಿ ಕಾಡುತ್ತಿದೆ. ಯಾಕೆಂದರೆ ಮುಂಗಾರು ಮಳೆ ಇಡೀ ಮಲೆನಾಡಿಗೆ ಕೈಕೊಟ್ಟಿದ್ದರು ಕೂಡ ಚಾರ್ಮಾಡಿ ಘಾಟಿಯಲ್ಲಿ ಮಳೆಗೆ ಕೊರತೆ ಉಂಟಾಗಿರಲಿಲ್ಲ. ಅದರಲ್ಲೂ ಕಳೆದ 15 ದಿನಗಳಿಂದ ಚಾರ್ಮಾಡಿ ಘಾಟಿಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಚಾರ್ಮಾಡಿ ಘಾಟಿಯಲ್ಲಿ ಐದಾರು ಕಡೆ ಭೂಮಿ ಬಾಯ್ಬಿಟ್ಟಿದ್ದು ರಸ್ತೆಯ ತಡೆಗೋಡೆಗಳು ಕೂಡ ಬಿರುಕು(damage) ಬಿಟ್ಟಿವೆ.

Advertisement
Advertisement
Advertisement
Advertisement

ಚಾರ್ಮಾಡಿ ಘಾಟಿ ಬದುಕಿನ ದಾರಿಯಾಗಿದೆ. ಈ ಮಾರ್ಗದಲ್ಲಿ ನಿತ್ಯ ಹತ್ತಾರು ಅಂಬುಲೆನ್ಸ್ ಗಳು ರೋಗಿಗಳನ್ನ ಹೊತ್ತು ಉಡುಪಿ ಹಾಗೂ ಮಂಗಳೂರಿಗೆ ಹೋಗುತ್ತವೆ. ಹಣ್ಣು-ತರಕಾರಿಗಳು ಗಾಡಿಗಳು, ಓದಲು ಸಲುವಾಗಿ ಮಕ್ಕಳು ಕೂಡ ಈ ಮಾರ್ಗವನ್ನೇ ಆಶ್ರಯಿಸಿದ್ದಾರೆ. ಆದರೆ ವರ್ಷದಿಂದ ವರ್ಷಕ್ಕೆ ಚಾರ್ಮಾಡಿ ತನ್ನ ಸಾಮಥ್ರ್ಯವನ್ನು ಕಳೆದುಕೊಳ್ಳುತ್ತಿದೆಯಾ ಎಂಬ ಅನುಮಾನ ದಟ್ಟವಾಗಿ ಕಾಡುತ್ತಿದೆ. 15 ದಿನಗಳ ನಿರಂತರ ಮಳೆಗೆ ಚಾರ್ಮಾಡಿ ಘಾಟಿಯಲ್ಲಿ ಭೂಮಿ ಬಾಯ್ಬಿಟ್ಟಿದ್ದು ತಡೆಗೋಡೆಗಳು ಕೂಡ ಬಿರುಕು ಬಿಟ್ಟಿವೆ. ಇದರಿಂದ ಈ ಮಾರ್ಗದಲ್ಲಿ ಸಂಚಾರ ಮಾಡುವ ಪ್ರಯಾಣಿಕರು ಆತಂಕದಲ್ಲಿ ಪ್ರಯಾಣ ಮಾಡುವಂತಾಗಿದೆ.  2019 ರಲ್ಲಿ ಸುರಿದ ಭಾರೀ ಮಳೆಯಿಂದಾಗಿ ಚಾರ್ಮಾಡಿ ಘಾಟಿಯ ರಸ್ತೆ ಸುಮಾರು 200-300 ಅಡಿ ಆಳಕ್ಕೆ ಕುಸಿದಿತ್ತು. ಅಷ್ಟು ಆಳದಿಂದಲೂ ಕೂಡ ಕಾಂಕ್ರೀಟ್ ವಾಲ್ ನಿರ್ಮಿಸಿ ರಸ್ತೆಗೆ ಬಂದೋಬಸ್ತ್ ಮಾಡಿದ್ದರು. ಆದರೆ ಆ ಕಾಂಕ್ರೀಟ್ ವಾಲ್ ಕೂಡ ಜರುಗಿದ್ದು ರಸ್ತೆ ಕೂಡ ಬಾಯ್ಬಿಟ್ಟಿದೆ. ಇದರಿಂದ ಚಾರ್ಮಾಡಿ ಘಾಟ್ ವರ್ಷದಿಂದ ವರ್ಷಕ್ಕೆ ಕ್ರಮೇಣ ತನ್ನ ಸಾಮರ್ಥ್ಯ ಕಳೆದುಕೊಳ್ಳುತ್ತಿದ್ದ ಎಂಬ ಅನುಮಾನ ಬಲವಾಗಿ ಕಾಡುತ್ತಿದೆ.2019ರಲ್ಲಿ 8 ತಿಂಗಳು ಚಾರ್ಮಾಡಿ ಘಾಟಿಯನ್ನು ಬಂದ್ ಮಾಡಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಮಾಡಿದ್ದ ಕಾಮಗಾರಿ ಕಳಪೆಯೇ ಎಂದು ಸ್ಥಳೀಯರು ಅನುಮಾನಿಸಿದ್ದಾರೆ. ಇದೀಗ ಚಾರ್ಮಾಡಿ ಘಾಟಿಯಲ್ಲಿ ಮೂರ್ನಾಲ್ಕು ಕಡೆ ಭೂಮಿ ಬಾಯ್ಬಿಟ್ಟಿದ್ದು ಸ್ಥಳೀಯರು ಹಾಗೂ ಪ್ರಯಾಣಿಕರು ಈ ಮಾರ್ಗದಲ್ಲಿ 10 ಚಕ್ರದ ಲಾರಿಗಳು, ಅದಕ್ಕಿಂತ ದೊಡ್ಡ ವಾಹನಗಳು ಹಾಗೂ ಭಾರೀ ಗಾತ್ರದ ವಾಹನಗಳಿಗೆ ಸಂಪೂರ್ಣ ಬ್ರೇಕ್ ಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

Advertisement

Source : Locals

Advertisement

 

There is currently uncertainty regarding whether Charmadi Ghat is experiencing a decrease in capacity each year as a result of heavy rainfall. Some of the roads in the Ghati have cracked this time, raising concerns about the ghat’s ability to withstand the weather conditions.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹವಾಮಾನ ವರದಿ | 22.10.2024 | ರಾಜ್ಯದಲ್ಲಿ ಸಾಮಾನ್ಯ ಮಳೆ ಮುಂದುವರಿಕೆ | ಅ.25ರಿಂದ ಮಳೆ ಕಡಿಮೆ ಸಾಧ್ಯತೆ| ಅ.24ರಂದು ಒಡಿಸ್ಸಾ ಪಶ್ಚಿಮ ಬಂಗಾಳ ಕರಾವಳಿಗೆ ಡಾನಾ ಚಂಡಮಾರುತ
October 22, 2024
12:34 PM
by: ಸಾಯಿಶೇಖರ್ ಕರಿಕಳ
ಚಿಕ್ಕಮಗಳೂರಿನಲ್ಲಿ ಭಾರೀ ಮಳೆ | ಪ್ರವಾಸ ಮುಂದೂಡಲು ಜಿಲ್ಲಾಡಳಿತ ಸೂಚನೆ |
October 22, 2024
7:29 AM
by: ದ ರೂರಲ್ ಮಿರರ್.ಕಾಂ
ಬೆಂಗಳೂರಿನಲ್ಲಿ ಮತ್ತೆ ಮಳೆಯ ಅಬ್ಬರ | ಸಿಲಿಕಾನ್‌ ಸಿಟಿಯ ಎಲ್ಲೆಲ್ಲೂ ನೀರು..! | ಇಂದು ಕೂಡಾ ಮಳೆ ಸಾಧ್ಯತೆ |
October 22, 2024
7:13 AM
by: The Rural Mirror ಸುದ್ದಿಜಾಲ
 ಕೋಲಾರದಲ್ಲಿ ಪಶು ಸಂಜೀವಿನಿ ಯೋಜನೆ ಅನುಷ್ಠಾನ | ಪಶು ಸಖಿಯರಿಗೆ ತರಬೇತಿ |
October 22, 2024
6:42 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror