ಮೂಡಿಗೆರೆ ತಾಲೂಕು ವ್ಯಾಪ್ತಿಯ ಚಾರ್ಮಾಡಿ ಘಾಟ್ ಅರಣ್ಯ ಪ್ರದೇಶದಲ್ಲಿ ಭಾರೀ ಬೆಂಕಿ ಅನಾಹುತ ಸಂಭವಿಸಿದೆ. ಆಲೇಖಾನ್ ಹೊರಟ್ಟಿ ಗುಡ್ಡದಲ್ಲಿನ ಕಾಡ್ಗಿಚ್ಚಿಗೆ ಗುಡ್ಡದ ತುದಿಭಾಗ ಭಸ್ಮವಾಗಿದೆ. ಮೂಕ ಪ್ರಾಣಿಗಳು ಬೆಂಕಿಯ ತಾಪಕ್ಕೆ ಬೆಂದು ಹೋಗಿವೆ.
ಚಾರ್ಮಾಡಿ ಘಾಟಿಗೆ ಹೊಂದಿಕೊಂಡಿರುವ ಎತ್ತರ ಪ್ರದೇಶದ ಗುಡ್ಡದಲ್ಲಿ ಹೊತ್ತಿ ಉರಿಯುತ್ತಿದ್ದು ಬೆಂಕಿಯ ಜ್ವಾಲೆ ಎಲ್ಲೆಡೆ ಹರಡುತ್ತಿದೆ. ಕಾಡ್ಗಿಚ್ಚಿನಿಂದ ಉಂಟಾದ ಬೆಂಕಿಯಿಂದಾಗಿ ಅಪಾರ ಪ್ರಮಾಣದ ಅರಣ್ಯ ಬೆಂಕಿಗಾಹುತಿಯಾಗಿದೆ.
ಕಳೆದ 3 ದಿನದಿಂದ ಚಾರ್ಮಾಡಿ ಘಾಟ್ ನಿರಂತರವಾಗಿ ಉರಿಯುತ್ತಿದ್ದು, ಅರಣ್ಯಾಧಿಕಾರಿಗಳು ಎಷ್ಟೇ ಯತ್ನ ನಡೆಸಿದರೂ ಬೆಂಕಿ ನಿಯಂತ್ರಣಕ್ಕೆ ಬರುತ್ತಿಲ್ಲ. ಬೆಂಕಿ ನಂದಿಸಲು ಅಧಿಕಾರಿಗಳಿಗೆ ಸ್ಥಳಿಯರು ಸಾಥ್ ನೀಡಿದ್ದಾರೆ. ಎತ್ತರ ಪ್ರದೇಶವಾದ್ದರಿಂದ ಅಗ್ನಿ ಶಾಮಕ ವಾಹನ ಹೋಗಲು ಕಷ್ಟವಾಗಿದ್ದು ಕಾಡು ಸೊಪ್ಪನ್ನು ಬಳಸಿಯೇ ಬೆಂಕಿ ನಂದಿಸುತ್ತಿದ್ದಾರೆ.
ನಿನ್ನೆಯಷ್ಟೇ ಬೆಂಕಿ ನಂದಿಸಲು ತೆರಳಿದ್ದ ಅರಣ್ಯ ಇಲಾಖೆ ಸಿಬ್ಬಂದಿಯ ಬೈಕ್ಗೆ ಬೆಂಕಿ ಹತ್ತಿಕೊಂಡಿದ್ದು, 3 ಬೈಕ್ ಗಳು ಸುಟ್ಟು ಭಸ್ಮವಾಗಿದೆ. ಗಾಳಿಯಲ್ಲಿ ಬಂದ ಕಿಡಿಯಿಂದ ಬೈಕ್ ಗಳಿಗೆ ಬೆಂಕಿ ಹತ್ತಿಕೊಂಡಿದೆ ಎಂದು ಹೇಳಲಾಗಿದೆ. ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ಚಾರ್ಮಾಡಿ ಘಾಟ್ನಲ್ಲಿ ಸಂಭವಿಸಿರುವ ಈ ದುರಂತ ಜನರನ್ನು ಬೆಚ್ಚಿ ಬೀಳಿಸಿದೆ. ಬೆಂಕಿಯ ಕೆನ್ನಾಲಿಗೆಗೆ ಸಿಕ್ಕಿ ನೂರಾರು ಪ್ರಾಣಿಪಕ್ಷಿಗಳು ಪ್ರಾಣ ಕಳೆದುಕೊಂಡಿವೆ, ಇನ್ನು ಬೆಂಕಿ ಕೆನ್ನಾಲಿಗೆಯಿಂದ ತಾಪ ಹೆಚ್ಚಾಗಿ ಕಾಳಿಂಗ ಸರ್ಪ ನಾಡಿನತ್ತ ಲಗ್ಗೆ ಇಟ್ಟಿವೆ. ಕಾಡಂಚಿನ ಗ್ರಾಮ ತರುವೆಯಲ್ಲಿ ಬೃಹತ್ ಕಾಳಿಂಗ ಸರ್ಪ ಸೆರೆಯಾಗಿದೆ.
ದೈತ್ಯಾಕಾರದ ಕಾಳಿಂಗನನ್ನ ನೋಡಿ ಗ್ರಾಮಸ್ಥರು ಮತ್ತಷ್ಟು ಭಯಭೀತರಾಗಿದ್ದಾರೆ. ಬೃಹತ್ ಕಾಳಿಂಗ ಸರ್ಪವನ್ನು ಸೆರೆ ಹಿಡಿದು ಚಾರ್ಮಾಡಿ ಘಾಟಿಯ ಬೆಂಕಿ ಬೀಳದ ಪ್ರದೇಶಕ್ಕೆ ತಜ್ಞರು ಬಿಟ್ಟಿದ್ದಾರೆ.
ಬಂಗಾಳಕೊಲ್ಲಿಯ ಆಂದ್ರಾ, ಒಡಿಶಾ ಕರಾವಳಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತವು ಆಗಸ್ಟ್ 18,19 ರಂದು…
ಗ್ರಾಮೀಣ ಮಟ್ಟದ ಆರ್ಥಿಕ ಸಹಕಾರ ಸಂಘಗಳ ಪ್ರಮುಖ ಚಟುವಟಿಕೆ ಎಂದರೆ ಸದಸ್ಯರಿಂದ ಠೇವಣಾತಿ…
ಶೀಘ್ರದಲ್ಲೇ ಜಿಲ್ಲಾ ಪಂಚಾಯತ್ ಹಾಗೂ ತಾಲ್ಲೂಕು ಪಂಚಾಯತಿಗಳಿಗೆ ಚುನಾವಣೆ ನಡೆಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ…
ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲ್ಲೂಕಿನ ರೈತರೊಬ್ಬರು ಶೂನ್ಯ ಬಂಡವಾಳದಲ್ಲಿ ಅತ್ಯುತ್ತಮ ಇಳುವರಿ ತೆಗೆಯುವ…
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮ ಪಂಚಾಯತ್ ಆತ್ಮನಿರ್ಭರ ಯೋಜನೆಯಡಿಯಲ್ಲಿ…
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಕಾವೇರಿ ನದಿ ತೀರದಲ್ಲಿ ಅಸ್ತಿ ವಿಸರ್ಜನೆ ಮಾಡಿ ನದಿ…