#ಚಾತುರ್ಮಾಸ್ಯ | ಸತ್ಕಾರ್ಯಗಳಿಂದ ಜೀವನ ಸಾರ್ಥಕ: ರಾಘವೇಶ್ವರ ಶ್ರೀ

July 6, 2023
9:17 PM

ಭಗವತ್ ಪ್ರೀತಿ, ಲೋಕಪ್ರೀತಿ ಎಲ್ಲಕ್ಕಿಂತ ಹೆಚ್ಚಾಗಿ ಆತ್ಮಕ್ಕೆ ಪ್ರಿಯವಾಗುವ ಸತ್ಕಾರ್ಯಗಳನ್ನು ಮಾಡಿ ಜೀವನ ಸಾರ್ಥಕಪಡಿಸಿಕೊಳ್ಳಬೇಕು ಎಂದು ಹೊಸನಗರ ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ನುಡಿದರು.

Advertisement
Advertisement
Advertisement
Advertisement

ಚಾತುರ್ಮಾಸ್ಯ ಸಂದರ್ಭದಲ್ಲಿ ಶಿಷ್ಯರು ಆಯೋಜಿಸಿದ್ದ ಪರಮಪೂಜ್ಯರ 49ನೇ ವರ್ಧಂತ್ಯುತ್ಸವದಲ್ಲಿ ಆಶೀರ್ವಚನ ನೀಡಿದ ಅವರು, “ಮನುಷ್ಯ ಜನ್ಮ ದೊಡ್ಡದು. ಮನುಷ್ಯ ತನ್ನ ಜೀವನದಲ್ಲಿ ದೇವರೂ ಆಗಬಲ್ಲ; ದಾನವನೂ ಆಗಬಲ್ಲ. ಸತ್ಕಾರ್ಯಗಳ ಮೂಲಕ ಜೀವನವನ್ನು ಮುಕ್ತಿಯ ಪಥವಾಗಿ ಮಾಡಿಕೊಳ್ಳುವ ಆಯ್ಕೆ ನಮಗೆ ಸಿಕ್ಕಿದೆ. ಇದನ್ನು ವ್ಯರ್ಥಪಡಿಸಿಕೊಳ್ಳಬೇಡಿ” ಎಂದು ಸಲಹೆ ಮಾಡಿದರು.

Advertisement

ಆಯಸ್ಸು ಅಮೂಲ್ಯ. ಆಯಸ್ಸೆಂಬ ಸುವರ್ಣದ್ರವವನ್ನು ವ್ಯರ್ಥವಾಗಿ ಚೆಲ್ಲುವುದು ನಮ್ಮ ಮೂರ್ಖತನ. ಸದೃಢವಾಗಿದ್ದಾಗಲೇ ಹೆಚ್ಚು ಹೆಚ್ಚು ಸೇವೆ ಸತ್ಕಾರ್ಯಗಳ ಮೂಲಕ ಪರಮಾತ್ಮನಿಗೆ ಹತ್ತಿರವಾಗುವ ಪ್ರಯತ್ನ ಮಾಡೋಣ ಎಂದರು. ಯೋಗಿ ಯೋಗದಿಂದ ಮುಕ್ತಿ ಸಾಧಿಸಿದರೆ ಯೋಧ ಯುದ್ಧದಿಂದ ಅದನ್ನು ಸಾಧಿಸುತ್ತಾನೆ. ಇಬ್ಬರೂ ಸೇರುವುದು ಒಂದೆಡೆಗೆ. ನಿಸ್ವಾರ್ಥವಾಗಿ ಸೇವೆ ಮಾಡುವ ಎಲ್ಲರೂ ಬ್ರಹ್ಮತ್ವವನ್ನೇ ಪಡೆಯುತ್ತಾರೆ ಎಂದು ವಿಶ್ಲೇಷಿಸಿದರು. ಜೀವನದಲ್ಲಿ ಇನ್ನೊಬ್ಬರಿಗೆ ಒಳ್ಳೆಯದು ಮಾಡಿದರೆ, ಒಳ್ಳೆಯದು ಬಯಸಿದರೆ ನಮಗೂ ಅದೇ ಸಿಗುತ್ತದೆ. ನಾವು ಬಿತ್ತಿದ್ದನ್ನೇ ಫಲವಾಗಿ ಪಡೆಯುತ್ತೇವೆ ಎಂದರು.

ಶ್ರೀಗಳ ವರ್ಧಂತಿ ಉತ್ಸವ ಶುಭಸಂದರ್ಭದಲ್ಲಿ ಶ್ರೀಮಠದ ಶ್ರೀಪರಿವಾರಕ್ಕಾಗಿ ನಿರ್ಮಿಸಲಾಗಿರುವ ಸುಸಜ್ಜಿತ ಭೋಜನಶಾಲೆ ಮತ್ತು ಪಾಕಶಾಲೆಯನ್ನು ಹೊರನಾಡು ಅನ್ನಪೂರ್ಣೇಶ್ವರಿ ಕ್ಷೇತ್ರದ ಧರ್ಮಕರ್ತ ಶ್ರೀ ಭೀಮೇಶ್ವರ ಜೋಶಿ ಲೋಕಾರ್ಪಣೆ ಮಾಡಿದರು. ಅವರ ಕುಟುಂಬದವರಿಂದ ಇದೇ ಸಂದರ್ಭದಲ್ಲಿ ಭಿಕ್ಷಾಸೇವೆಯೂ ನೆರವೇರಿತು.

Advertisement

ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ದೇವವ್ರತ ಶರ್ಮಾ, ಸತ್ಯನಾರಾಯಣ ಶರ್ಮಾ, ಜನಾರ್ದನ ಭಟ್ ಹಾಗೂ ಮಹಾಬಲ ಭಟ್ ಅವರನ್ನು ಸಾಧನ ಸನ್ಮಾನ ನೀಡಿ ಗೌರವಿಸಲಾಯಿತು.

ಶ್ರೀಗಳ ವರ್ಧಂತಿ ಉತ್ಸವ ಅಂಗವಾಗಿ ವೈದಿಕ ಸಮಾವೇಶ ಮತ್ತು ನೂರಾರು ಭಕ್ತರಿಂದ ಶ್ರೀಗಳಿಗೆ ಮಂತ್ರಸಹಿತ ಅರುಣ ಗುರು ನಮಸ್ಕಾರ ಸಮರ್ಪಣೆ ನಡೆಯಿತು. ಹವ್ಯಕ ಮಹಾಮಂಡಲ ಅಧ್ಯಕ್ಷ ಮೋಹನ್ ಭಾಸ್ಕರ ಹೆಗಡೆ ಪ್ರಾಸ್ತಾವಿಕ ಭಾಷಣ ಮಾಡಿದರು. ವರ್ಧಂತಿ ಉತ್ಸವದಂದು ವಿಶೇಷವಾಗಿ ಶ್ರೀಮಾತೆ ಪರಮಪೂಜ್ಯರಿಗೆ ಮಂಗಳಾರತಿ ನೆರವೇರಿಸಿದರು. ಧರ್ಮಭಾರತಿ ಭಾವರಾಮಾಯಣದ 5ನೇ ಕಂತಿನ ಬಿಡುಗಡೆಯನ್ನು ಶ್ರೀ ಭೀಮೇಶ್ವರ ಜೋಶಿ ದಂಪತಿ ನೆರವೇರಿಸಿದರು.

Advertisement

ಹವ್ಯಕ ಮಹಾಮಂಡಲ ಮಾಜಿ ಅಧ್ಯಕ್ಷ ಆರ್.ಎಸ್.ಹೆಗಡೆ ಹರಗಿ, ಗೌರವ ಕಾರ್ಯದರ್ಶಿ ನಾಗರಾಜ ಭಟ್ ಪೆದಮಲೆ, ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ಯು.ಎಸ್.ಗಣಪತಿ ಭಟ್, ಪದಾಧಿಕಾರಿಗಳಾದ ಶ್ರೀಕಾಂತ ಪಂಡಿತ್, ಮಂಜುನಾಥ ಸುವರ್ಣಗದ್ದೆ ಮತ್ತಿತರರು ಉಪಸ್ಥಿತರಿದ್ದರು. ಉಡುಪಿ ನಗರಸಭೆ ಸದಸ್ಯ ಶ್ರೀಶ ಕೊಡವೂರು ಚಾತುರ್ಮಾಸ್ಯ ಸಂದರ್ಭದಲ್ಲಿ ಶ್ರೀಗಳಿಂದ ಅನುಗ್ರಹ ಮಂತ್ರಾಕ್ಷತೆ ಪಡೆದರು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 23-02-2024 | ಇಂದು ಕೂಡಾ ಮೋಡ ಹಾಗೂ ಕೆಲವು ಕಡೆ ತುಂತುರು ಮಳೆ |
February 23, 2025
11:41 AM
by: ಸಾಯಿಶೇಖರ್ ಕರಿಕಳ
ಹವಾಮಾನ ವರದಿ | 21-02-2025 | ಮೋಡದ ವಾತಾವರಣ | ಇಂದೂ ಕೆಲವು ಕಡೆ ಮಳೆ ಸಾಧ್ಯತೆ |
February 21, 2025
10:43 AM
by: ಸಾಯಿಶೇಖರ್ ಕರಿಕಳ
ಈ ಬಾರಿ ವರ್ಷದ ಮೊದಲ ಬೇಸಗೆ ಮಳೆ ಕೊಡಗಿನಲ್ಲಿ..!
February 20, 2025
8:07 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 20-02-2025 | ಅಧಿಕ ತಾಪಮಾನ- ಕೆಲವು ಕಡೆ ತುಂತುರು ಮಳೆ ಸಾಧ್ಯತೆ | ಫೆ.25 ರಿಂದ ಮೋಡ-ಬಿಸಿಲು |
February 20, 2025
11:34 AM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror