ಸಂಘಟನಾ ಚಾತುರ್ಮಾಸ್ಯ | ವಿವಿವಿ ವಿದ್ಯಾರ್ಥಿಗಳಿಗೆ ಸ್ಕೂಲ್‍ಬ್ಯಾಗ್ ವಿತರಣೆ | ಆಚರಣೆಗಳ ಔಚಿತ್ಯ ಅರಿತು ರೂಢಿಸಿಕೊಂಡರೆ ಫಲ ಅನನ್ಯ – ರಾಘವೇಶ್ವರ ಶ್ರೀ |

July 9, 2023
7:25 PM
ಭಾರತೀಯ ಆಚರಣೆಗಳು ಎಂದೂ ಮೂಢನಂಬಿಕೆಗಳಲ್ಲ.ಅದರ ಔಚಿತ್ಯವನ್ನು ಅರ್ಥ ಮಾಡಿಕೊಂಡು ಜೀವನದಲ್ಲಿ ರೂಢಿಸಿಕೊಳ್ಳುವುದು ಅಗತ್ಯ ಎಂದು ಹೊಸನಗರ ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿ ಹೇಳಿದರು.

ಶ್ರೇಷ್ಠ ಸಂಸ್ಕೃತಿಯ ವಾರಸುದಾರರಾಗಿರುವ ನಾವು ಸನಾತನ ಸಂಸ್ಕೃತಿ, ಆಚಾರ ವಿಚಾರಗಳನ್ನು ಉಳಿಸಿ ಬೆಳೆಸುವ ಜತೆಗೆ ಅದರ ಔಚಿತ್ಯವನ್ನು ಅರ್ಥ ಮಾಡಿಕೊಂಡು ಜೀವನದಲ್ಲಿ ರೂಢಿಸಿಕೊಳ್ಳುವುದು ಅಗತ್ಯ ಎಂದು ಹೊಸನಗರ ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರಭಾರತೀಮಹಾಸ್ವಾಮೀಜಿ ಪ್ರತಿಪಾದಿಸಿದರು.

Advertisement
Advertisement

ಸಂಘಟನಾ ಚಾತುರ್ಮಾಸ್ಯದ ಅಂಗವಾಗಿ ಭಾನುವಾರ ಶ್ರೀಸಂದೇಶ ಅನುಗ್ರಹಿಸಿದ ಸ್ವಾಮೀಜಿ, “ನಮ್ಮದಲ್ಲದ, ಅರ್ಥಹೀನ ಆಚರಣೆಗಳು ಬೇಡ. ಈ ಅಂಧಾನುಕರಣೆ ನಿಜವಾದ ಮೂಢನಂಬಿಕೆ. ಅದರ ಬದಲು ನಮ್ಮ ಶ್ರೇಷ್ಠ ಆಚರಣೆಗಳ ಮಹತ್ವವನ್ನು ಅರಿತು ಅಳವಡಿಸಿಕೊಳ್ಳೋಣ” ಎಂದು ಸಲಹೆ ಮಾಡಿದರು.

Advertisement

ಭಾರತೀಯ ಆಚರಣೆಗಳು ಎಂದೂ ಮೂಢನಂಬಿಕೆಗಳಲ್ಲ. ನಮ್ಮಲ್ಲಿ ಅತಿಥಿಗಳು, ಅಪರಿಚಿತರು ಭೇಟಿಯಾದಾಗ ಹಿರಿಯರಾದರೆ ನಮಸ್ಕರಿಸುವುದು, ಕಿರಿಯರಾದರೆ ಆರ್ಶೀದಿಸುವ ಪದ್ಧತಿ ಇದೆ. ಆದರೆ ವಿದೇಶಿಯರಲ್ಲಿ ಹಸ್ತಲಾಘವದ ಸಂಪ್ರದಾಯ ಇದೆ. ಸ್ಪರ್ಶದಿಂದ ಗುಣದೋಷಗಳು ಇನ್ನೊಬ್ಬರಿಗೆ ಹರಿಯುತ್ತವೆ. ಆದ್ದರಿಂದ ಅಪರಿಚಿತರ ಜತೆ ವ್ಯವಹರಿಸುವಾಗ ಎಚ್ಚರ ವಹಿಸಬೇಕು ಎಂದು ಕಿವಿಮಾತು ಹೇಳಿದರು.

ನಮ್ಮ ಗುಣದೋಷಗಳನ್ನು ಹರಿಸುವ ಶಕ್ತಿ ಅಂಗೈಗೆ ಇದೆ. ಆದ್ದರಿಂದ ನಮ್ಮನ್ನು, ನಮ್ಮತನವನ್ನು ಉಳಿಸಿಕೊಳ್ಳುವ ಸಲುವಾಗಿ ನಮ್ಮ ಸಂಪ್ರದಾಯಗಳನ್ನು ಉಳಿಸಿಕೊಳ್ಳಬೇಕು ಎಂಬ ಕಾರಣಕ್ಕೆ ಕೈಕುಲುಕುವ ವ್ಯವಸ್ಥೆ ನಮ್ಮಲ್ಲಿ ಇಲ್ಲ. ಅಂತೆಯೇ ಎಲ್ಲರಿಗೂ ನಮಸ್ಕರಿಸುವುದು ನಮ್ಮ ಸಂಪ್ರದಾಯವಲ್ಲ. ಹಿರಿಯರಿಗೆ ಕಿರಿಯಲು ನಮಸ್ಕರಿಸಬೇಕು. ಹಿರಿಯರು ಕಿರಿಯರಿಗೆ ನಮಸ್ಕರಿಸಿದರೆ ಆಯಸ್ಸಿನ ಹರಣವಾಗುತ್ತದೆ ಎಂದು ವಿವರಿಸಿದರು.

Advertisement

ನಮಸ್ಕಾರಕ್ಕೆ ದೇವರು ಮಾತ್ರ ಅರ್ಹರು. ಆದರೆ ತಂದೆ- ತಾಯಿ ದೇವರ ಜತೆ ಸಂಪರ್ಕ ಸಾಧಿಸಲು ನಮಗೆ ಇರುವ ತಕ್ಷಣದ ಕೊಂಡಿ. ಆ ಅರ್ಥದಲ್ಲಿ ಅವರೂ ದೇವರೇ. ಈ ಕಾರಣಕ್ಕಾಗಿ ತಂದೆ ತಾಯಿಗೆ ನಾವು ನಮಸ್ಕರಿಸುತ್ತೇವೆ. ಅಂತೆಯೇ ಗುರುಗಳು ಕೂಡಾ ದೇವರತ್ತ ನಮ್ಮನ್ನು ಕೊಂಡೊಯ್ಯುವವರು; ನಮಗೆ ಜ್ಞಾನದ ಬೆಳಕು ನೀಡುವವರು ಎಂದರು.

ಸ್ಪರ್ಶ ನಮ್ಮ ಮನಸ್ಸು, ಸ್ವಭಾವದ ಮೇಲೂ ಪರಿಣಾಮ ಬೀರಬಲ್ಲದು. ಉದಾಹರಣೆಗೆ ಭಾರತೀಯ ಸಂಸ್ಕೃತಿಯಲ್ಲಿ ಚಿನ್ನಕ್ಕೆ ವಿಶೇಷ ಮಹತ್ವ ಇದೆ. ಆದರೆ ಇದು ಕೇವಲ ಸೌಂದರ್ಯವರ್ಧಕವಲ್ಲ; ನಮ್ಮ ಅಂತರಂಗ- ಬಹಿರಂಗವನ್ನು ಶುದ್ಧವಾಗಿಸುವ ಶಕ್ತಿ ಹಳದಿ ಲೋಹಕ್ಕಿದೆ. ದೇಹಕ್ಕೆ ಶಕ್ತಿ, ದೇಹಶುದ್ಧಿ, ಆಯಸ್ಸು ವೃದ್ಧಿ, ಶರೀರಕ್ಕೆ ಕಾಂತಿ, ವಾಕ್ ಶುದ್ಧಿ, ಸ್ಮೃತಿ ಸಾಮರ್ಥ್ಯ ಹೆಚ್ಚಳಕ್ಕೂ ಇದು ಕಾರಣವಾಗುತ್ತದೆ ಎಂದು ವಿಶ್ಲೇಷಿಸಿದರು.

Advertisement
ರಾಘವೇಶ್ವರ ಶ್ರೀ

ನಮಸ್ಕಾರ ಎಂದರೆ ಐಕ್ಯ ಸಾಧಿಸುವುದು ಎಂಬ ಅರ್ಥ. ಭಗವಂತನಲ್ಲಿ ನಾವು ಲೀನವಾಗಬೇಕು ಎಂಬ ಭಾವ. ಈ ಕಾರಣಕ್ಕಾಗಿಯೇ ದೇವರ ಸಾನ್ನಿಧ್ಯ ಇರುವ ತುಳಸಿ, ಅಶ್ವತ್ಥ, ಗಂಗೆಯನ್ನು ನಾವು ನಮಿಸುತ್ತೇವೆ. ಕೈಜೋಡಿಸಿ ನಮಸ್ಕರಿಸುವುದು ಪ್ರಕೃತಿ- ಪುರುಷನ ಒಂದಾಗುವಿಕೆಯ ಸಂಕೇತ ಎಂದು ಬಣ್ಣಿಸಿದರು.

ಅಂತೆಯೇ ಹತ್ತಿ, ರೇಷ್ಮೆ ಅಥವಾ ಉಣ್ಣೆಯನ್ನು ಧರಿಸುವುದು ನಮ್ಮ ಪದ್ಧತಿ. ಇದನ್ನು ಬಿಟ್ಟು ಕೃತಕ ಉಡುಪುಗಳನ್ನು ಧರಿಸಿದಾಗ ಅದು ಪಿತ್ತ ವಿಕಾರಕ್ಕೆ ಕಾರಣವಾಗುತ್ತದೆ. ದೇಹ- ಮನಸ್ಸು ಕೆಡುತ್ತದೆ. ಹೂವಿನ ಸ್ಪರ್ಶ ಪಿತ್ತನಾಶಕ ಎಂಬ ಕಾರಣಕ್ಕೆ ಹೂ ಮುಡಿಯುವ ಪದ್ಧತಿ ಬಂದಿದೆ. ತೆಂಗಿನಕಾಯಿಯ ಸ್ಪರ್ಶದಿಂದ ಧಾತುಸಾಮ್ಯತೆ ಸಾಧನೆಯಾಗುತ್ತದೆ. ಗೋವಿನ ಸ್ಪರ್ಶಮಾತ್ರದಿಂದಲೇ ಸತ್ವಗುಣ ಜಾಗೃತಿಯಾಗಿ ದೇಹಶುದ್ಧಿಯಾಗುತ್ತದೆ. ಶುದ್ಧವಾದ ಮುತ್ತು ಧಾರಣೆಯಿಂದ ಸ್ಪರ್ಶದಿಂದ ಬಂದ ದೋಷಗಳು ನಿವಾರಣೆಯಾಗುತ್ತವೆ ಎಂದು ವಿವರಿಸಿದರು.

Advertisement

ವಿವಿವಿ ವಿದ್ಯಾರ್ಥಿಗಳಿಗೆ ಕಳೆದ ಮೂರು ವರ್ಷಗಳಿಂದ ಪ್ರತಿ ವಾರ ಹಣ್ಣು- ತರಕಾರಿ ಒದಗಿಸುತ್ತಾ ಬಂದಿರುವ ಬುತ್ತಿ ಬಳಗದ ವತಿಯಿಂದ ರೈಟ್ ಟೂ ಲೀವ್ ಹಾಗೂ ಕೋಟೆ ಫೌಂಡೇಷನ್ ಸಹಯೋಗದಲ್ಲಿ ಗುರುಕುಲ ವಿದ್ಯಾರ್ಥಿಗಳಿಗೆ ಸ್ಕೂಲ್ ಬ್ಯಾಗ್‍ಗಳನ್ನು ವಿತರಿಸಲಾಯಿತು.ಬುತ್ತಿ ಬಳಗದ ಆರ್.ಸಿ.ಭಾರಧ್ವಜ ಕುಳಮರ್ವ, ರೈಟ್ ಟೂ ಲೀವ್ ಸಂಸ್ಥೆಯ ವ್ಯವಸ್ಥಾಪಕ ವೀರೇಶ್, ಕೋಟೆ ಫೌಂಡೇಷನ್‍ನ ಗಣಪಯ್ಯ ಮತ್ತಿತರರು ವೇದಿಕೆಯಲ್ಲಿದ್ದರು.

ಶಶಿಕಲಾ ಕೂರ್ಸೆಯವರು ಸಾರ್ವಭೌಮ ಗುರುಕುಲದ ಪಿಯು ವಿಭಾಗದ ಪ್ರಾಚಾರ್ಯರಾಗಿ ಶ್ರೀಗಳಿಂದ ನಿಯುಕ್ತಿಪತ್ರ ಪಡೆದರು. ವಿವಿವಿ ಆಡಳಿತಾಧಿಕಾರಿ ಪ್ರಸನ್ನಕುಮಾರ್ ಟಿ.ಜಿ, ಶಿಕ್ಷಣ ಸಂಯೋಜಕಿ ಅಶ್ವಿನಿ ಉಡುಚೆ ಉಪಸ್ಥಿತರಿದ್ದರು.

Advertisement
Advertisement
Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕೋವಿ ಠೇವಣಾತಿ | ಕೃಷಿ ರಕ್ಷಣೆಗಾಗಿ ಕೋವಿ ಹಿಂಪಡೆಯಲು ಆದೇಶ |
April 29, 2024
6:36 PM
by: ದ ರೂರಲ್ ಮಿರರ್.ಕಾಂ
ಕೇಂದ್ರದಿಂದ ರಾಜ್ಯಕ್ಕೆ ಬರ ಪರಿಹಾರ ಬಿಡುಗಡೆ ವಿಚಾರ : ತಜ್ಞರ ವರದಿ ಸಲ್ಲಿಸಲು ಕೇಂದ್ರಕ್ಕೆ ಸುಪ್ರೀಂ ಸೂಚನೆ
April 29, 2024
5:50 PM
by: The Rural Mirror ಸುದ್ದಿಜಾಲ
ನಿಮಗಿದು ಗೊತ್ತೇ? : ಆರೋಗ್ಯಕ್ಕಾಗಿ ಭೂ ವಿದ್ಯುತ್ ಆಯಸ್ಕಾಂತದ ಮಹತ್ವ… : ಅರ್ಥಿಂಗ್/ಗ್ರೌಂಡಿಂಗ್ ಹಾಗೂ ಆರೋಗ್ಯ!
April 29, 2024
3:30 PM
by: The Rural Mirror ಸುದ್ದಿಜಾಲ
ಎರಡನೇ ಹಂತದ ಮತದಾನಕ್ಕೆ ರಾಜ್ಯದಲ್ಲಿ ಭರ್ಜರಿ ತಯಾರಿ : ಭಾರತ ವಿಶ್ವದ ಟಾಪ್ 3 ಸ್ಥಾನಕ್ಕೇರಿಸುವ ಶಕ್ತಿ ನಿಮ್ಮ ಮತಕ್ಕಿದೆ : ಮೋದಿ
April 29, 2024
2:51 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror