#ಚಾತುರ್ಮಾಸ್ಯ | ಯೋಗ- ಯೋಗ್ಯತೆಯಿಂದ ವ್ಯಕ್ತಿತ್ವ ಉನ್ನತಿ : ರಾಘವೇಶ್ವರ ಶ್ರೀ

July 15, 2023
9:57 PM
ಗೋಕರ್ಣದ ಅಶೋಕೆಯ ವಿವಿವಿ ಆವರಣದಲ್ಲಿ ಕೈಗೊಂಡಿರುವ ಚಾತುರ್ಮಾಸ್ಯ ವ್ರತಾಚರಣೆಯಲ್ಲಿ ಶನಿವಾರದಂದು ರಾಘವೇಶ್ವರ ಶ್ರೀಗಳು ಸಂದೇಶ ನೀಡಿದರು.
ಯೋಗ್ಯತೆ ಸಾಧನೆಯಿಂದ ಬರುವಂಥದ್ದು; ಯೋಗ್ಯತೆ ಸಂಪಾದಿಸಬೇಕಾದರೆ ಸತತ ಪರಿಶ್ರಮ ಬೇಕು. ಕೇವಲ ಯೋಗ್ಯತೆ ಇದ್ದರೆ ಸಾಲದು, ಇದರ ಜತೆಗೆ ಯೋಗ ಕೂಡಿಬರಲು ಕಾಲವನ್ನು ಕಾಯಬೇಕು. ಆ ತಾಳ್ಮೆ, ಸಂಯಯ, ವಿವೇಕ, ವ್ಯಕ್ತಿಯನ್ನು ಉನ್ನತಿಗೆ ಏರಿಸುತ್ತದೆ ಎಂದು ಹೊಸನಗರ ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರಭಾರತೀಮಹಾಸ್ವಾಮೀಜಿ ನುಡಿದರು.
ಗೋಕರ್ಣದ ಅಶೋಕೆಯ ವಿವಿವಿ ಆವರಣದಲ್ಲಿ ಕೈಗೊಂಡಿರುವ ಚಾತುರ್ಮಾಸ್ಯ ವ್ರತಾಚರಣೆಯಲ್ಲಿ ಶನಿವಾರ ಶ್ರೀಸಂದೇಶ ನೀಡಿದ ಸ್ವಾಮೀಜಿ, “ಯೋಗ- ಯೋಗ್ಯತೆ ಎರಡೂ ಭಿನ್ನ. ಯೋಗ್ಯತೆ ಇಲ್ಲದೆ ಲಭಿಸುವ ಯೋಗ ವಿನಾಶಕ್ಕೆ ಕಾರಣವಾದೀತು. ಯೋಗ್ಯತೆಯ ಅರಿವು ಇರುವವರು ಜೀವನದಲ್ಲಿ ಎಂದಿಗೂ ಎಡವಿ ಬೀಳುವುದಿಲ್ಲ. ಪ್ರತಿಯೊಬ್ಬರ ಯೋಗ್ಯತೆಯೂ ಬೇರೆ ಬೇರೆ ಕ್ಷೇತ್ರದಲ್ಲಿ ಇರುತ್ತದೆ. ಅವರವರ ಯೋಗ್ಯತೆಯನ್ನು ಅವರೇ ಗುರುತಿಸಿಕೊಳ್ಳುವ ವಿವೇಕ ಇರಬೇಕು” ಎಂದು ವಿಶ್ಲೇಷಿಸಿದರು.
ಯೋಗ್ಯತೆ ಇಲ್ಲದೇ ಒತ್ತಾಯಪೂರ್ವಕವಾಗಿ ಪಡೆಯುವ ಪ್ರಯತ್ನ ಮಾಡಿದರೆ ವಿನಾಶಕ್ಕೆ ದಾರಿಯಾಗುತ್ತದೆ ಎನ್ನುವುದಕ್ಕೆ ರಾವಣನೇ ನಿದರ್ಶನ. ನಮ್ಮದಲ್ಲ, ಬೇಡ, ಸಾಕು ಎನ್ನುವ ಮನೋಭಾವವನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಬದುಕು ಸುಂದರವಾಗುತ್ತದೆ. ಈ ಪಾಠ ರಾಮಾಯಣದಲ್ಲಿ ಹೆಜ್ಜೆ ಹೆಜ್ಜೆಗೂ ಸಿಗುತ್ತದೆ ಎಂದು ಹೇಳಿದರು.
ತ್ರೇತಾಯುಗದ ದೃಷ್ಟಾಂತವೊಂದರ ಮೂಲಕ ಯೋಗ- ಯೋಗ್ಯತೆಯ ಮಹತ್ವವನ್ನು ಬಣ್ಣಿಸಿದ ಸ್ವಾಮೀಜಿ, “ದಶರಥ ಸಂತಾನ ಪ್ರಾಪ್ತಿಗಾಗಿ ಅಶ್ವಮೇಧ ಯಾಗ ಕೈಗೊಂಡು ಹೋತೃ, ಅಧ್ವರ್ಯ, ಉದ್ಘಾತ ಮತ್ತು ಬ್ರಹ್ಮನಿಗೆ ನಾಲ್ಕೂ ದಿಕ್ಕುಗಳನ್ನು ದಕ್ಷಿಣೆಯಾಗಿ ನೀಡುತ್ತಾನೆ. ಆದರೆ ರಾಜ ನೀಡಿದ ದಾನವನ್ನು ನಯವಾಗಿ ತಿರಸ್ಕರಿಸಿದ ಮುನಿಗಳು ನಮ್ಮ ಯೋಗ್ಯತೆ ಇರುವುದು ತಪಃಶಕ್ತಿ, ಅಧ್ಯಾಪನ, ಯಜ್ಞ ಯಾಗಾದಿಗಳಲ್ಲೇ ಹೊರತು ರಾಜ್ಯಭಾರದಲ್ಲಲ್ಲ ಎಂದು ಸ್ಪಷ್ಟಪಡಿಸುತ್ತಾರೆ. ಈ ರಾಜ್ಯವನ್ನು ನೀನೇ ಇಟ್ಟುಕೊಂಡು ನಮ್ಮ ಆಶ್ರಮ, ಗುರುಕುಲಕ್ಕಾಗಿ ಕಿಂಚಿತ್ ಮೌಲ್ಯ ನೀಡುವಂತೆ ಕೋರುತ್ತಾರೆ” ಎಂದು ವಿವರಿಸಿದರು.
“ದಶರಥ ಅವರಿಗೆ 10 ಕೋಟಿ ಚಿನ್ನದ ನಾಣ್ಯ, 40 ಕೋಟಿ ಬೆಳ್ಳಿ ನಾಣ್ಯ, 10 ಲಕ್ಷ ಗೋವುಗಳನ್ನು ನೀಡಿದಾಗ ಅವರೆಲ್ಲರೂ ದೇವರ್ಷಿ ವಸಿಷ್ಠರ ಬಳಿ ನೀಡುತ್ತಾರೆ. ಯಾರಿಗೆ ನ್ಯಾಯಬದ್ಧವಾಗಿ ಏನು ಸಲ್ಲಬೇಕೋ ಅದನ್ನು ವಸಿಷ್ಠರು ಹಂಚುತ್ತಾರೆ. ರಾಜ ಇಡೀ ರಾಜ್ಯವನ್ನೇ ದಾನವಾಗಿ ನೀಡಿದರೂ, ತಮಗೆ ಬೇಕಾದ್ದಷ್ಟನ್ನೇ ಸ್ವೀಕರಿಸುವ ಉದಾತ್ತ ಮನೋಭಾವವನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು” ಎಂದು ಕಿವಿಮಾತು ಹೇಳಿದರು.
ಎಲ್ಲವನ್ನೂ ದಾನ ಮಾಡಿದ ದಶರಥನ ಬರಿಗೈ ಕೂಡಾ ಶೋಭಾಯಮಾನವಾಗಿತ್ತು. ದಾನದಿಂದ ಹಸ್ತಕ್ಕೆ ಶೋಭೆಯೇ ಹೊರತು ಬಂಗಾರದ ಆಭರಣಗಳಿಂದ ಅಲ್ಲ. ಇದುವೇ ರಾಮಾಯಣ ನಮಗೆ ಕಲಿಸುವ ಪಾಠ ಎಂದು ಅಭಿಪ್ರಾಯಪಟ್ಟರು.
ಚಾತುರ್ಮಾಸ್ಯ ಸಂದರ್ಭದಲ್ಲಿ ಪ್ರತಿಭಾ ಪುರಸ್ಕಾರ ನೆರವೇರಿಸಲಾಗುತ್ತಿದ್ದು, ಪಿಯುಸಿ ಪರೀಕ್ಷೆ ಮತ್ತು ಬಿಎಸ್ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ದಕ್ಷಿಣ ಕನ್ನಡ ಜಿಲ್ಲೆ ಕಬಕದ ಕ್ಷಿತಿ ಕಶ್ಯಪ್ ಹಾಗೂ ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರದ ಎಚ್.ವಿ.ವಿಶಾಲ್ ಅವರನ್ನು ಶ್ರೀಗಳು ಪುರಸ್ಕರಿಸಿದರು.
 ಯಲ್ಲಾಪುರ ಸಂಕಲ್ಪ ಟ್ರಸ್ಟ್‍ನ ಪ್ರಮೋದ್ ಹೆಗಡೆ, ಭಾರತ ಪರಿಕ್ರಮ ಪಾದಯಾತ್ರೆ ನಡೆಸಿದ ಸೀತಾರಾಮ ಕೆದಿಲಾಯ ಅವರು ಈ ಸಂದರ್ಭದಲ್ಲಿ ಶ್ರೀಗಳಿಂದ ಅನುಗ್ರಹ ಮಂತ್ರಾಕ್ಷತೆ ಪಡೆದರು. ಶ್ರೀಮಠದ ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ.ಹೆಗಡೆ, ಚಾತುರ್ಮಾಸ್ಯ ಸಮಿತಿ ಕಾರ್ಯದರ್ಶಿ ಶ್ರೀಕಾಂತ ಪಂಡಿತ್ ಮತ್ತಿತರರು ಉಪಸ್ಥಿತರಿದ್ದರು. ಸುಬ್ರಾಯ ಅಗ್ನಿಹೋತ್ರಿಗಳು ಕಾರ್ಯಕ್ರಮ ನಿರೂಪಿಸಿದರು.

Advertisement
Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕೋಲಾರದಲ್ಲಿ ಅತೀ ಹೆಚ್ಚು ನಕಲಿ ವೈದ್ಯರು…! | ನಕಲಿ ವೈದ್ಯರ ಕಡಿವಾಣಕ್ಕೆ ಕಟ್ಟುನಿಟ್ಟಿನ ಕ್ರಮ
November 21, 2024
7:36 PM
by: The Rural Mirror ಸುದ್ದಿಜಾಲ
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ  ಮನವಿ
November 21, 2024
7:32 PM
by: The Rural Mirror ಸುದ್ದಿಜಾಲ
ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ದೆಹಲಿಯಲ್ಲಿ ಲಭ್ಯ | 2.5 ಲಕ್ಷ ಲೀಟರ್ ಹಾಲು ದೆಹಲಿಗೆ ಪೂರೈಸಲು ತೀರ್ಮಾನ |
November 21, 2024
7:25 PM
by: ದ ರೂರಲ್ ಮಿರರ್.ಕಾಂ
ಹುಣಸೆ ಹಣ್ಣು ಸಂರಕ್ಷಣೆ, ಮಾರಾಟದ ತರಬೇತಿ ಕಾರ್ಯಾಗಾರ
November 21, 2024
7:09 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror