ಭೂಕಂಪನದಿಂದ ಸುದ್ದಿಯಾದ ಚೆಂಬು ಪ್ರದೇಶದಲ್ಲಿ ಈ ಸ್ಥಿತಿ ಇದೆ….! | ಮೂಲಭೂತ ಆವಶ್ಯಕತೆಗಳ ಕಡೆಗೆ ಗಮನ ಅಗತ್ಯ… !

July 6, 2022
2:27 PM

ಕಳೆದ ಎರಡು ವಾರಗಳಿಂದ ಕೊಡಗು ಜಿಲ್ಲೆಯ ಚೆಂಬು ಭೂಕಂಪನದ ಮೂಲಕ ಗಮನ ಸೆಳೆಯಿತು. ಚೆಂಬು, ಸಂಪಾಜೆ ಸೇರಿದಂತೆ ಆಸುಪಾಸಿನ ಪ್ರದೇಶಗಳು ರಾಜ್ಯಾದ್ಯಂತ ಸುದ್ದಿಯಾಯಿತು. ಆದರೆ ಇಂದಿಗೂ ಆ ಊರಿನ ಕೆಲವು ಕಡೆ ಮೂಲಭೂತ ಸೌಲಭ್ಯಗಳ ಆವಶ್ಯಕತೆ ಇದೆ.  ಚೆಂಬು ಗ್ರಾಮದ ಕಟ್ಟಪಲ್ಲಿ ಎಂಬಲ್ಲಿನ ಹೊಳೆ ದಾಟಲು ಜನರು ಸಂಕಷ್ಟ ಪಡುತ್ತಿದ್ದಾರೆ. ಜೀಪೊಂದು ನೀರು ದಾಟಿ ಹೋಗುವ ಈ ವಿಡಿಯೋ ಈಗ ಗಮನಸೆಳೆದಿದೆ.

Advertisement
Advertisement

Advertisement

ಕೊಡಗು ಜಿಲ್ಲೆಯ ಚೆಂಬು ಹಾಗೂ ಸುಳ್ಯ ತಾಲೂಕಿನ ಸಂಪಾಜೆ ಮೊದಲಾದ ಪ್ರದೇಶಗಳೂ ಭೂಕಂಪನದ ಮೂಲಕ ಸುದ್ದಿಯಾಯಿತು. ಭೂಕಂಪನಕ್ಕೆ ವಿವಿಧ ಕಾರಣಗಳನ್ನು  ಹೇಳಲಾಯಿತು. ಚೆಂಬು, ಸಂಪಾಜೆ ಪ್ರದೇಶದಲ್ಲಿ ಕೃಷಿಯೇ ಪ್ರಮುಖವಾದ ಆದಾಯದ ಮೂಲ. ಆದರೆ ಅಡಿಕೆ ಹಳದಿ ಎಲೆ ರೋಗದ ನಂತರ ಅಡಿಕೆ ಕೃಷಿ ಕಡಿಮೆಯಾಗಿದೆ. ಅದರ ಬದಲಾಗಿ ರಬ್ಬರ್‌ ಕೃಷಿ ವಿಸ್ತಾರವಾಗಿದೆ. ಗುಡ್ಡದಿಂದ ಹಿಡಿದು ತೋಟವದರೆಗೂ ರಬ್ಬರ್‌ ಕೃಷಿ ಇದೆ. ಇಲ್ಲಿನ ಕೃಷಿ ಸಮಸ್ಯೆ , ಕೃಷಿಪಲ್ಲಟದ ಜೊತೆಗೆ ಇಲ್ಲಿ  ಮೂಲಭೂತ ಆವಶ್ಯಕತೆಗಳ ಕೊರತೆ ಜನರನ್ನು ಕಾಡುತ್ತಿದೆ. ಚೆಂಬು ಗ್ರಾಮದ ಕಟ್ಟಪಲ್ಲಿ ಎಂಬಲ್ಲಿ  ಸುಮಾರು 25 ಮನೆಗಳು ಇವೆ. ಇಲ್ಲಿ  ಹರಿಯುವ ಹೊಳೆಯ ಕಾರಣದಿಂದ ಮಳೆಗಾಲ ದಾಟಲು ಸಮಸ್ಯೆಯಾಗುತ್ತದೆ. ಹೊಳೆ ದಾಟಿದ ಮುಂದೆ ಉಂಬಳ್ಳೆ ಎಂಬ ಪ್ರದೇಶ ಇದೆ. ಹಲವಾರು ಸಮಯಗಳಿಂದಲೂ ಇಲ್ಲಿನ ಜನ ಈ ಸಮಸ್ಯೆ ಅನುಭವಿಸುತ್ತಿದ್ದಾರೆ. ಇಲ್ಲಿ ಹೆಚ್ಚು ನೀರು ಹರಿದಾಗ ಯಾವುದೇ ವಾಹನ ದಾಟುವುದಿಲ್ಲ, ಈ ಸಂದರ್ಭ ಸುತ್ತು ಬಳಸಿ ಪರ್ಯಾಯ ದಾರಿ ಬಳಸುತ್ತಾರೆ ಕಟ್ಟಪಲ್ಲಿಯ ಜನರು. ಈ ಪ್ರದೇಶದಲ್ಲಿ  ಮಲೆಕುಡಿಯ ಸಮುದಾಯದ ಕುಟುಂಬಗಳು ಹೆಚ್ಚಿದೆ.

ಭೂಕಂಪನದ ಸುದ್ದಿಯ ಜೊತೆಗೆ ಮೂಲಭೂತ ಸಮಸ್ಯೆಗಳ ಬಗ್ಗೆಯೂ ಈಗ ಜನರು ಮಾತನಾಡುತ್ತಿದ್ದಾರೆ. ಒಂದು ವೇಳೆ ತುರ್ತಾಗಿ ಇಲ್ಲಿಂದ ಸ್ಥಳಾಂತರವಾಗಬೇಕಾಗಿ ಬಂದರೆ ಸಂಪರ್ಕ ಹೇಗೆ ಎನ್ನುವುದು  ಕೂಡಾ ಪ್ರಶ್ನೆಯಾಗಿದೆ ಎಂದು  ಕೇಳುತ್ತಾರೆ ಇಲ್ಲಿನ ಜನರು.ಸದ್ದಿಲ್ಲದೆ ಸುದ್ದಿಯಾದ ಭೂಕಂಪನ ಬಳಿಕ ಚೆಂಬು ಗ್ರಾಮ ಸುದ್ದಿಯಾಗಿದೆ. ಇದೀಗ ಗ್ರಾಮೀಣ ಭಾಗದ ಇಂತಹ ಮೂಲಭೂತ ಸಮಸ್ಯೆಗಳ ಕಡೆಗೂ ಆಡಳಿತ ಗಮನಿಸಬೇಕಿದೆ.

Advertisement

 

 

 

Advertisement

Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಅಪಾರ ಏಕಾದಶಿಯ ನಾಲ್ಕು ಶುಭಯೋಗ | ಐದು ರಾಶಿಯವರಿಗೆ ವಿಷ್ಣುವಿನ ಅನುಗ್ರಹ ಪ್ರಾಪ್ತಿ
May 23, 2025
7:30 AM
by: ದ ರೂರಲ್ ಮಿರರ್.ಕಾಂ
ಸಂಪಾಜೆಯಲ್ಲಿ ಮಹಿಳಾ ಗ್ರಾಮಸಭೆ | ವಿವಿಧ ಮಾಹಿತಿ -ತರಬೇತಿ
May 22, 2025
10:48 PM
by: The Rural Mirror ಸುದ್ದಿಜಾಲ
ಚಿಕ್ಕಮಗಳೂರು ಜಿಲ್ಲೆಯ ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜ ಲಭ್ಯ
May 22, 2025
10:27 PM
by: ದ ರೂರಲ್ ಮಿರರ್.ಕಾಂ
ಬೆಂಗಳೂರಿನಲ್ಲಿ ಕಸ ವಿಲೇವಾರಿಗೆ 4,790 ಕೋಟಿ ಮೊತ್ತದಲ್ಲಿ 33 ಪ್ಯಾಕೇಜ್
May 22, 2025
9:50 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group