ಕೋಳಿಗಳಿಗೆ ಮಳೆಗಾಲದಲ್ಲಿ ಕಾಡುವ ಕೋಳಿ ಹೇನು | ಈ ಸಮಸ್ಯೆ ತಡೆಯಲು ಇಲ್ಲಿದೆ ಸುಲಭ ಪರಿಹಾರ

August 1, 2024
1:20 PM

ಕೇವಲ ಕೃಷಿಯನ್ನು ಮಾತ್ರ ನಂಬದೆ ಅನೇಕ ರೈತರು ಕೋಳಿ ಸಾಕಾಣಿಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.  ಕೃಷಿಯಲ್ಲಿ ಯಾವುದು ಸುಲಭವಲ್ಲ. ಕಾರಣ ನಾವು ಮಾಡುವ ಕೆಲಸದಲ್ಲಿ ನೂರೆಂಟು ವಿಘ್ನಗಳು ಬರುತ್ತವೆ. ಅದೇ ರೀತಿ ಕೋಳಿ ಸಾಕಾಣಿಕೆ ಕೂಡ. ನೋಡುಗರಿಗೆ ಇದು ಸುಲಭದ ಕೆಲಸ ಅನ್ನಿಸಬಹುದು. ಲಾಭ ಜಾಸ್ತಿ ಬರುತ್ತೆ ಎಂದು ಅಂದುಕೊಳ್ಳುತ್ತಾರೆ. ಆದರೆ ಅದರಲ್ಲಿರುವ ಸವಾಲುಗಳು, ಕಷ್ಟಗಳು ಅದರ ಕೆಲಸಕ್ಕೆ ಇಳಿದವರಿಗೆ ಮಾತ್ರ ತಿಳಿಯುತ್ತದೆ.

Advertisement

ಕೋಳಿ ಸಾಕಾಣಿಕೆ ಈಗ ಬಹದೊಡ್ಡ ಉದ್ಯಮವಾಗಿ ಬೆಳೆದಿದೆ. ಆದರೆ ಅದನ್ನು ಸಾಕುವ ಕ್ರಮ, ಅದರ ಆಹಾರ, ಅದಕ್ಕೆ ಬರುವ ರೋಗಗಳ ಬಗ್ಗೆ ತೀವ್ರ ನಿಗ ಇಡಬೇಕಾಗುತ್ತದೆ. ಹೌದು ಈ ಕೋಳಿಗಳಿಗೆ ಅದರಲ್ಲೂ ಈ ಮಳೆಗಾಲದಲ್ಲಿ ಭಯಾನಕವಾಗಿ ಕಾಡುವುದು ಕೋಳಿ ಹೇನು. ಇದನ್ನು ನಿರ್ಮಮೂಲನೇ ಮಾಡಲು ಹರಸಾಹಸವೇ ಪಡಬೇಕಾಗುತ್ತದೆ. ಕೋಳಿ ಹೇನು(chicken Lice) ಮಳೆಗಾಲದಲ್ಲಿ ಮತ್ತು ಅತೀ ಹೆಚ್ಚು ತೇವಾಂಶ ಇರುವ ಗೂಡುಗಳಿದ್ದರೆ ಅದರ ಕಾಟ ಹೆಚ್ಚಿರುತ್ತದೆ. ಅದಕ್ಕೆ ಪರಿಣಾಮಕಾರಿಯಾಗಿ ಔಷಧ ಮಾಡಿದರೆ ಮಾತ್ರ ಅದರಿಂದ ಮುಕ್ತಿ ಸಿಗಬಹುದು. ಇದಕ್ಕೆ ಒಳ್ಳೆಯ ಪರಿಣಾಮಕಾರಿ ಮದ್ದು ಎಂದರೆ ಸೆವಿನ್ ಹೆಸರಿನ ಪೌಡರ್ ಮತ್ತು ಲಿಕ್ವಿಡ್ ಮದ್ದು..

ಇದನ್ನು ಅಂದಾಜು ನೀರಿನಲ್ಲಿ ಮಿಕ್ಸ್ ಮಾಡಿ ರಾತ್ರಿ ವೇಳೆ ಸ್ಪ್ರೇ ಮಾಡಬೇಕು. ಅದು ರಾತ್ರಿ ವೇಳೆಯೇ ಯಾಕೆಂದರೆ ಕೋಳಿಗಳಿಗೆ  ಹಗಲೆಲ್ಲಾ ವಿಪರೀತ ಮೈಕೊಡವಿಕೊಳ್ಳುವ ಅಭ್ಯಾಸ ಇರುತ್ತದೆ. ಆದ್ದರಿಂದ ನೀವು ಸ್ಪ್ರೇ ಮಾಡಿದ ಕೂಡಲೇ ಕೊಡವಿಕೊಳ್ಳುವುದರಿಂದ ಮುದ್ದಿನ ಒಳ್ಳೆಯ ಪರಿಣಾಮ ಬೀರುವುದಿಲ್ಲ.

ಹಾಗಾಗಿ ರಾತ್ರಿ ವೇಳೆಯೇ ಸ್ಪ್ರೇ ಮಾಡಬೇಕು. ಕೋಳಿಗಳ ಮೇಲೆ ಹಾಗೂ ಗೂಡಿನೊಳಗಡೆ ಗೋಡೆಗಳ ಮೇಲೆಯೂ ಸ್ಪ್ರೇ ಮಾಡಬೇಕು. ಸಾಧ್ಯವಾದರೆ ಗೂಡಿನ ಹೊರಗಡೆಯೂ ಬಾಗಿಲಿಗೆ ಮತ್ತು ಸಂದುಗಳಿಗೆ ಸ್ಪ್ರೇ ಮಾಡಬೇಕು. ಇದೇ ರೀತಿಯಲ್ಲಿ ನಿರಂತರ 3 ದಿನ ಒಳ್ಳೆಯ ರೀತಿಯಲ್ಲಿ ಸ್ಪ್ರೇ ಮಾಡಬೇಕು.. ಹೀಗೆ ಮಾಡಿದರೆ ಮಾತ್ರ ನೂರಕ್ಕೆ ನೂರರಷ್ಟು ಫಲಿತಾಂಶ ಸಿಗುತ್ತದೆ..

ಬರಹ :
ಸತೀಶ್‌ ಡಿ ಶೆಟ್ಟಿ
, ಕೋಳಿ ಸಾಕಾಣಿಕೆದಾರರು

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

2026 ರ ವೇಳೆಗೆ ತುಮಕೂರಿಗೆ ಎತ್ತಿನಹೊಳೆ ನೀರು
April 11, 2025
7:00 AM
by: The Rural Mirror ಸುದ್ದಿಜಾಲ
ಕರಾವಳಿ ಸೇರಿದಂತೆ ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆ ಸಂಭವ | ಹವಾಮಾನ ಇಲಾಖೆ ಮುನ್ಸೂಚನೆ
April 11, 2025
6:10 AM
by: The Rural Mirror ಸುದ್ದಿಜಾಲ
ಹಾವೇರಿ ಜಿಲ್ಲೆಯಲ್ಲಿ ಬಾಡಿಗೆ ಕೊಳವೆಬಾವಿಗಳಿಂದ ನೀರು ಪೂರೈಕೆ
April 11, 2025
6:00 AM
by: The Rural Mirror ಸುದ್ದಿಜಾಲ
ಶುಕ್ರ ನೇರ ಸಂಚಾರದ ಪರಿಣಾಮ : ಕೆಲ ರಾಶಿಗಳ ಮೇಲೆ ಪ್ರಭಾವ
April 11, 2025
5:51 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group