#KSRTC #RuralMirror | ಹೊಯ್ಸಳ ರಾಜವಂಶದ ಹೊಯ್ಸಳಲು ಗ್ರಾಮ | ಸ್ವಾತಂತ್ರ್ಯ ನಂತರ ಇದೇ ಮೊದಲ ಬಾರಿ ಈ ಊರಿಗೆ ಬಂದ ಸರ್ಕಾರಿ ಬಸ್ …. ! |

June 26, 2023
12:23 PM

ನಮ್ಮ ಜಗತ್ತು ಎಷ್ಟು ಮುಂದುವರೆದಿದೆ ಎಂದರೆ ಮಂಗಳ ಅಂಗಳಕ್ಕೆ, ಇತ್ತ ಚಂದ್ರನ ಲೋಕಕ್ಕೆ, ಜನ ಸಾಮಾನ್ಯನೂ ವಿಮಾನದಲ್ಲಿ ಓಡಾಡಬೇಕು ಅನ್ನುವ ಯೋಜನೆಗಳು, ಕೆಲಸಕ್ಕೆ ರೋಬೋಗಳು ಒಂದಾ ಎರಡಾ.. ಇತ್ತೀಚೆಗೆ 1912ರಲ್ಲಿ ಮುಳುಗಿದ್ದ ಟೈಟಾನಿಕ್ ದೈತ್ಯ ಹಡಗು ನೋಡಲು ಸುಮಾರು 3800 ಕಿ ಮೀ ಆಳಕ್ಕೆ ಹೋಗಿ ಅದರ ಅವಶೇಷ ನೋಡಿ ಬರುವ ವ್ಯವಸ್ಥೆ ಕೂಡ ಇದೆ. ಆದರೆ ಇವೆಲ್ಲಾ ಕೇವಲ ಶ್ರೀಮಂತರ ಪಾಲಿಗೆ. ಅದೇ ಬಡವರ ಪಾಲಿಗೆ ಒಂದು ಸರ್ಕಾರಿ ಕೆಂಪು ಬಸ್ ಕೂಡ ಗತಿ ಇಲ್ಲ….!

ಕಾಂಗ್ರೆಸ್‍ ಸರ್ಕಾರ ಅಧಿಕಾರಕ್ಕೆ ಬಂದು ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಜಾರಿಗೆ ತಂದಿದೆ. ಆದರೆ ಈ ಸರ್ಕಾರಗಳು ತಮಗೆ ಆಗುವ ಲಾಭ ನೋಡುತ್ತವೇ ವಿನಃ ಜನರ ಅನುಕೂಲ ನೋಡುವುದು ಬಹಳ ವಿರಳ. ಈ ದಿನಗಳಲ್ಲೂ ಅದೇಷ್ಟೋ ಹಳ್ಳಿಗಳು ಇಂದಿನವರೆಗೂ ಸರ್ಕಾರಿ ಬಸ್ ಕಾಣದೆ ಜೀವನ ನಡೆಸುತ್ತಿವೆ. ಶಾಲೆಗೆ ಹೋಗುವ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವ್ಯವಸ್ಥೆ ಇದೆ. ಆದರೆ ಬಸ್ ವ್ಯವಸ್ಥೆಗಳೇ ಇಲ್ಲ. ಇಂತಹ ಸಮಸ್ಯೆಗಳನ್ನು ನೋಡಿ ಸರ್ಕಾರ ಎಂದೂ ಪರಿಹರಿಸಲು ಮುಂದಾಗುವುದಿಲ್ಲ. ಬಸ್ ಇಲ್ಲದ ಊರುಗಳಿಗೆ ದಿನದಲ್ಲಿ ಕನಿಷ್ಠ ಎರಡು ಬಾರಿಯಾದರು ಬಸ್ ವ್ಯವಸ್ಥೆ ಮಾಡಿದ್ರೆ ಅದೆಷ್ಟೋ ವಿದ್ಯಾರ್ಥಿಗಳು ತಮ್ಮ ಬದುಕು ಕಟ್ಟಿಕೊಳ್ಳುತ್ತಾರೆ. ಕೆಲಸಕ್ಕೆ ಹೊರಗೆ ಹೋಗುವ ಮಂದಿ, ಆಸ್ಪತ್ರೆಗೆ ಓಡಾಡುವ ಹಿರಿ ಜೀವಗಳು, ಗರ್ಭಿಣಿಯರಿಗೆ ಸಹಾಯವಾಗುತ್ತದೆ. ಇದೆಲ್ಲಾ ಬಿಟ್ಟು ಕೇವಲ ತಮ್ಮ ಅಧಿಕಾರದ ಲಾಲಾಸೆಗಾಗಿ ಉಚಿತಗಳನ್ನು ನೀಡಿ ಜನರನ್ನು ಓಲೈಸುತ್ತಿವೆ.

Advertisement

ಸ್ವಾತಂತ್ರ್ಯ ನಂತರ ಈ ಊರಿಗೆ ಮೊದಲ ಬಾರಿಗೆ ಸರ್ಕಾರಿ ಬಸ್ ಬಂದಿದೆ….! ನೀವೆ ಯೋಚಿಸಿ ಅಲ್ಲಿನ ಜನರ ಬದುಕು ಹೇಗಿದ್ದಿರಬಹುದು…? ಸರ್ಕಾರಿ ಬಸ್ ನೋಡಿ ಸಂಭ್ರಮಿಸಿದ ಗ್ರಾಮಸ್ಥರು, ಬಸ್​ನ್ನು ಅಲಂಕರಿಸಿ ಪೂಜೆ ಮಾಡಿದ್ದಾರೆ.

ಹೊಯ್ಸಳ ರಾಜವಂಶದ ಮೂಲವಾದ ಹೊಯ್ಸಳಲು ಗ್ರಾಮಕ್ಕೆ ಇದೇ ಮೊದಲ ಬಾರಿಗೆ ಸರ್ಕಾರಿ ಬಸ್ ಆಗಮಿಸಿದೆ. ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಹೊಯ್ಸಳಲು‌ ಗ್ರಾಮಕ್ಕೆ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸರ್ಕಾರಿ ಬಸ್ ಆಗಮಿಸಿರುವುದನ್ನು ಕಂಡು ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೇ, ಸರ್ಕಾರಿ ಬಸ್ ನೋಡಿ ಸಂಭ್ರಮಿಸಿದ ಗ್ರಾಮಸ್ಥರು ಬಸ್​ನ್ನು ಅಲಂಕರಿಸಿ ಪೂಜೆ ಮಾಡಿದ್ದಾರೆ.

ದಶಕಗಳಿಂದ ಬಸ್ ಸೌಕರ್ಯಕ್ಕಾಗಿ ಗ್ರಾಮಸ್ಥರು ಸರ್ಕಾರಕ್ಕೆ ಮನವಿ ಮಾಡುತ್ತಲೆ ಬಂದಿದ್ದರು. ಆದರೆ ಬಸ್ ಸೌಲಭ್ಯ ದೊರೆತಿರಲಿಲ್ಲ. ಬಸ್ ಇಲ್ಲದ ಕಾರಣ ಪ್ರತಿನಿತ್ಯ 5 ಕಿ.ಮೀ. ನಡೆದು ಶಾಲಾ ಮಕ್ಕಳು, ಗ್ರಾಮಸ್ಥರು ಮೂಡಿಗೆರೆಗೆ ತೆರಳುತ್ತಿದ್ದರು. ಹೊಯ್ಸಳಲು 200 ಜನರಿರುವ ಮಲೆನಾಡು ಭಾಗದ ಕುಗ್ರಾಮವಾಗಿದೆ.

Advertisement

Advertisement

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಒಂದು ವರ್ಷದಲ್ಲಿ 5600 ಕಿ.ಮೀ. ಹೆದ್ದಾರಿ ನಿರ್ಮಾಣ |
April 3, 2025
7:42 AM
by: The Rural Mirror ಸುದ್ದಿಜಾಲ
81 ಕೋಟಿಗೂ ಹೆಚ್ಚು ಜನರಿಗೆ ಉಚಿತ ಆಹಾರ ಧಾನ್ಯ
April 3, 2025
7:32 AM
by: The Rural Mirror ಸುದ್ದಿಜಾಲ
ಮೇಷ ರಾಶಿಯವರಿಗೆ ಬಹಳ ಶುಭ ದಿನ
April 3, 2025
7:05 AM
by: ದ ರೂರಲ್ ಮಿರರ್.ಕಾಂ
ಹೆಚ್ಚುತ್ತಿರುವ ತಾಪಮಾನ | 2030 ರ ವೇಳೆಗೆ ಭಾರತದಲ್ಲಿ ಶೇ.5 ರಷ್ಟು ಉತ್ಪಾದನೆ ಕುಸಿತ
April 2, 2025
11:46 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group