ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಜಾರಿಗೆ ತಂದಿದೆ. ಆದರೆ ಈ ಸರ್ಕಾರಗಳು ತಮಗೆ ಆಗುವ ಲಾಭ ನೋಡುತ್ತವೇ ವಿನಃ ಜನರ ಅನುಕೂಲ ನೋಡುವುದು ಬಹಳ ವಿರಳ. ಈ ದಿನಗಳಲ್ಲೂ ಅದೇಷ್ಟೋ ಹಳ್ಳಿಗಳು ಇಂದಿನವರೆಗೂ ಸರ್ಕಾರಿ ಬಸ್ ಕಾಣದೆ ಜೀವನ ನಡೆಸುತ್ತಿವೆ. ಶಾಲೆಗೆ ಹೋಗುವ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವ್ಯವಸ್ಥೆ ಇದೆ. ಆದರೆ ಬಸ್ ವ್ಯವಸ್ಥೆಗಳೇ ಇಲ್ಲ. ಇಂತಹ ಸಮಸ್ಯೆಗಳನ್ನು ನೋಡಿ ಸರ್ಕಾರ ಎಂದೂ ಪರಿಹರಿಸಲು ಮುಂದಾಗುವುದಿಲ್ಲ. ಬಸ್ ಇಲ್ಲದ ಊರುಗಳಿಗೆ ದಿನದಲ್ಲಿ ಕನಿಷ್ಠ ಎರಡು ಬಾರಿಯಾದರು ಬಸ್ ವ್ಯವಸ್ಥೆ ಮಾಡಿದ್ರೆ ಅದೆಷ್ಟೋ ವಿದ್ಯಾರ್ಥಿಗಳು ತಮ್ಮ ಬದುಕು ಕಟ್ಟಿಕೊಳ್ಳುತ್ತಾರೆ. ಕೆಲಸಕ್ಕೆ ಹೊರಗೆ ಹೋಗುವ ಮಂದಿ, ಆಸ್ಪತ್ರೆಗೆ ಓಡಾಡುವ ಹಿರಿ ಜೀವಗಳು, ಗರ್ಭಿಣಿಯರಿಗೆ ಸಹಾಯವಾಗುತ್ತದೆ. ಇದೆಲ್ಲಾ ಬಿಟ್ಟು ಕೇವಲ ತಮ್ಮ ಅಧಿಕಾರದ ಲಾಲಾಸೆಗಾಗಿ ಉಚಿತಗಳನ್ನು ನೀಡಿ ಜನರನ್ನು ಓಲೈಸುತ್ತಿವೆ.
ಸ್ವಾತಂತ್ರ್ಯ ನಂತರ ಈ ಊರಿಗೆ ಮೊದಲ ಬಾರಿಗೆ ಸರ್ಕಾರಿ ಬಸ್ ಬಂದಿದೆ….! ನೀವೆ ಯೋಚಿಸಿ ಅಲ್ಲಿನ ಜನರ ಬದುಕು ಹೇಗಿದ್ದಿರಬಹುದು…? ಸರ್ಕಾರಿ ಬಸ್ ನೋಡಿ ಸಂಭ್ರಮಿಸಿದ ಗ್ರಾಮಸ್ಥರು, ಬಸ್ನ್ನು ಅಲಂಕರಿಸಿ ಪೂಜೆ ಮಾಡಿದ್ದಾರೆ.
ಹೊಯ್ಸಳ ರಾಜವಂಶದ ಮೂಲವಾದ ಹೊಯ್ಸಳಲು ಗ್ರಾಮಕ್ಕೆ ಇದೇ ಮೊದಲ ಬಾರಿಗೆ ಸರ್ಕಾರಿ ಬಸ್ ಆಗಮಿಸಿದೆ. ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಹೊಯ್ಸಳಲು ಗ್ರಾಮಕ್ಕೆ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸರ್ಕಾರಿ ಬಸ್ ಆಗಮಿಸಿರುವುದನ್ನು ಕಂಡು ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೇ, ಸರ್ಕಾರಿ ಬಸ್ ನೋಡಿ ಸಂಭ್ರಮಿಸಿದ ಗ್ರಾಮಸ್ಥರು ಬಸ್ನ್ನು ಅಲಂಕರಿಸಿ ಪೂಜೆ ಮಾಡಿದ್ದಾರೆ.
ದಶಕಗಳಿಂದ ಬಸ್ ಸೌಕರ್ಯಕ್ಕಾಗಿ ಗ್ರಾಮಸ್ಥರು ಸರ್ಕಾರಕ್ಕೆ ಮನವಿ ಮಾಡುತ್ತಲೆ ಬಂದಿದ್ದರು. ಆದರೆ ಬಸ್ ಸೌಲಭ್ಯ ದೊರೆತಿರಲಿಲ್ಲ. ಬಸ್ ಇಲ್ಲದ ಕಾರಣ ಪ್ರತಿನಿತ್ಯ 5 ಕಿ.ಮೀ. ನಡೆದು ಶಾಲಾ ಮಕ್ಕಳು, ಗ್ರಾಮಸ್ಥರು ಮೂಡಿಗೆರೆಗೆ ತೆರಳುತ್ತಿದ್ದರು. ಹೊಯ್ಸಳಲು 200 ಜನರಿರುವ ಮಲೆನಾಡು ಭಾಗದ ಕುಗ್ರಾಮವಾಗಿದೆ.
ಇದೀಗ ಮೂಡಿಗೆರೆ ಕೆ.ಎಸ್.ಆರ್.ಟಿ.ಸಿ. ವಿಭಾಗದಿಂದ ಗ್ರಾಮಕ್ಕೆ ಬಸ್ಸಿನ ವ್ಯವಸ್ಥೆ ಮಾಡಲಾಗಿದ್ದು ಹೊಯ್ಸಳಲು ಗ್ರಾಮಕ್ಕೆ ಮೂಡಿಗೆರೆ ಬಸ್ ನಿಲ್ದಾಣದಿಂದ ಬಸ್ಸುಗಳು ಸಂಚರಿಸಲಿವೆ. ಪ್ರತಿದಿನ ಬೆಳಗ್ಗೆ-ಸಂಜೆ ಹೊಯ್ಸಳಲು ಗ್ರಾಮಕ್ಕೆ ಬಸ್ಸಿನ ವ್ಯವಸ್ಥೆ ಕಲ್ಪಿಸಲಾಗಿದೆ. ಇದು ಗ್ರಾಮಸ್ಥರ ಸಂತಸಕ್ಕೆ ಕಾರಣವಾಗಿದೆ.
ಇದೇ ರೀತಿ ರಾಜ್ಯದಲ್ಲಿ ಅದೆಷ್ಟು ಹಳ್ಳಿಗಳಿವೆಯೋ ಯಾರಿಗೆ ಗೊತ್ತು. ಇನ್ನಾದರು ಈ ಸರ್ಕಾರಗಳು ಇಂತಹ ಹಳ್ಳಿಗಳನ್ನು ಗುರುತಿಸಿ ಬಸ್ ವ್ಯವಸ್ಥೆಯನ್ನು ಕಲ್ಪಿಸಿಕೊಡುವ ಮನಸು ಮಾಡಬೇಕು.ಗ್ರಾಮೀಣ ಜನರ ಬದುಕು ಎತ್ತರಕ್ಕೆ ಏರಬೇಕು.
25.11.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…
ಅಡಿಕೆ ಬೆಳೆಯಲ್ಲಿ ಪೋಷಕಾಂಶಗಳ ನಿರ್ವಹಣೆಯ ಬಗ್ಗೆ ಡಾ.ಭವಿಷ್ಯ ಅವರು ನೀಡಿರುವ ಮಾಹಿತಿ ಇಲ್ಲಿದೆ..(ಸಂಪೂರ್ಣ…
ಅಡಿಕೆ ಎಲೆಚುಕ್ಕಿ ರೋಗ ನಿರ್ವಹಣೆ ಹೇಗೆ..? ಕೃಷಿ ವಿಚಾರಗೋಷ್ಟಿಯಲ್ಲಿ ಮಾತನಾಡಿರುವ ಆಡಿಯೋ ಇಲ್ಲಿದೆ..
ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…