ಚಿಕ್ಕಮಗಳೂರು ಕಾಡ್ಗಿಚ್ಚಿನಿಂದ ಕಾಫಿ ತೋಟ, ಅರಣ್ಯ ಪ್ರದೇಶ ನಾಶ | ಡ್ರೋನ್‌ ಮೊರೆ ಹೋಗಿತ್ತಿರುವ ಅರಣ್ಯ ಇಲಾಖೆ |

February 28, 2025
7:34 AM
ಕಳೆದ ಕೆಲವು ದಿನಗಳಲ್ಲಿ ಚಿಕ್ಕಮಗಳೂರು ಜಿಲ್ಲೆಯ ವಿವಿಧ ಕಡೆಗಳಲ್ಲಿ ಅರಣ್ಯದಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದೆ. ಅದರಲ್ಲೂ ಮುಳ್ಳಯ್ಯನಗಿರಿ  ತಪ್ಪಲಿನಲ್ಲಿ ಕಾಣಿಸಿಕೊಳ್ಳುತ್ತಿರುವ ಕಾಡ್ಗಿಚ್ಚಿನಿಂದ ಚಂದ್ರದ್ರೋಣ  ಪರ್ವತಗಳ ಸಾಲಿನ ರಕ್ಷಣೆ ಮಾಡಲು ಅರಣ್ಯ ಇಲಾಖೆ ಡ್ರೋನ್‌ ಮೊರೆ ಹೋಗಿದ್ದಾರೆ. (ಚಿತ್ರ: ಸಾಂದರ್ಭಿಕ)

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಹಾಗು ಕಳಸ ತಾಲೂಕುಗಳಲ್ಲಿ ಉಂಟಾದ ಪ್ರತ್ಯೇಕ ಕಾಡ್ಗಿಚ್ಚು ಪ್ರಕರಣಗಳಲ್ಲಿ 15 ಎಕರೆ ಕಾಫಿ ತೋಟ ಮತ್ತು 25 ಕ್ಕೂ ಹೆಚ್ಚು ಎಕರೆ ಅರಣ್ಯ ಪ್ರದೇಶ ನಾಶವಾಗಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ.………ಮುಂದೆ ಓದಿ……..

Advertisement
Advertisement
Advertisement
Advertisement

ಬಾಳೂರು ಮೀಸಲು ಅರಣ್ಯ ಪ್ರದೇಶದ ದೇವರಮನೆ ಗುಡ್ಡದಲ್ಲಿ ಕಾಡ್ಗಿಚ್ಚು ಉಂಟಾಗಿ 10 ಎಕರೆಕೆಗೆ ಹೆಚ್ಚು ಅರಣ್ಯ ಪ್ರದೇಶ ಸುಟ್ಟು ನಾಶವಾಗಿದೆ. ಕುಂದೂರು ಸಮೀಪದ ಕಣೇಗದ್ದೆ ಗ್ರಾಮದಲ್ಲಿ ಕಾಫಿತೋಟಕ್ಕೆ ಬೆಂಕಿ ಬಿದ್ದು ಸುಮಾರು 15 ಎಕರೆ ಕಾಫಿ ತೋಟ ನಾಶವಾಗಿದೆ. ಮೂಡಿಗೆರೆ ಅಗ್ನಿ ಶಾಮಕದಳ ಸಿಬ್ಬಂದಿ ಭೇಟಿ ನೀಡಿ ಬೆಂಕಿ ನಂದಿಸಿದ್ದಾರೆ. ಕಳಸ ತಾಲೂಕು ಬಲಿಗೆ ಅರಣ್ಯದಲ್ಲಿ ಕಾಡ್ಗಿಚ್ಚು ಉಂಟಾಗಿದ್ದು ಸಾಕಷ್ಟು ಪ್ರಮಾಣದಲ್ಲಿ ಅರಣ್ಯ ನಾಶವಾಗಿದೆ. ಅರಣ್ಯಾಧಿಕಾರಿಗಳಿಂದ ಬೆಂಕಿ ನಂದಿಸುವ ಕಾರ್ಯ ನಡೆಯುತ್ತಿದೆ. ಮಂಗಳವಾರ ಹೊರನಾಡು ಸಮೀಪದ ಮಾವಿನಹೊಳ-ಬಲಿಗೆ ಗುಡ್ಡದಲ್ಲಿ ಕಾಣಿಸಿಕೊಂಡ ಕಾಡ್ಗಿಚ್ಚಿನ ಪರಿಣಾಮ ಹತ್ತಾರು ಎಕ್ರೆ ಅರಣ್ಯ ಬೆಂಕಿಗಾಹುತಿಯಾಗಿತ್ತು.

Advertisement

ಕಳೆದ ಕೆಲವು ದಿನಗಳಲ್ಲಿ ಚಿಕ್ಕಮಗಳೂರು ಜಿಲ್ಲೆಯ ವಿವಿಧ ಕಡೆಗಳಲ್ಲಿ ಅರಣ್ಯದಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದೆ. ಅದರಲ್ಲೂ ಮುಳ್ಳಯ್ಯನಗಿರಿ  ತಪ್ಪಲಿನಲ್ಲಿ ಕಾಣಿಸಿಕೊಳ್ಳುತ್ತಿರುವ ಕಾಡ್ಗಿಚ್ಚಿನಿಂದ ಚಂದ್ರದ್ರೋಣ  ಪರ್ವತಗಳ ಸಾಲಿನ ರಕ್ಷಣೆ ಮಾಡಲು ಅರಣ್ಯ ಇಲಾಖೆ ಡ್ರೋನ್‌ಗಳ ಮೊರೆ ಹೋಗಿದ್ದಾರೆ. ಬೆಂಕಿಯಿಂದ ಕಾಡನ್ನ ರಕ್ಷಿಸಲು ಡ್ರೋನ್ ಕಣ್ಗಾವಲಿಗೆ ಇಲಾಖೆ ಮುಂದಾಗಿದೆ. ಗುಡ್ಡದ ತುದಿಯಲ್ಲಿ ಬೆಂಕಿ ಬಿದ್ದರೆ ನಂದಿಸುವುದು ಕಷ್ಟವಾಗಿರುವುದರಿಂದ ಅಗ್ನಿಶಾಮಕ ವಾಹನ ಹೋಗುವುದು ಕಷ್ಟವಾಗಿದೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಕಾಫಿ ಉತ್ಪಾದನೆಯಲ್ಲಿ ಭಾರತವು  ಏಳನೇ ದೇಶ |
February 28, 2025
7:51 AM
by: The Rural Mirror ಸುದ್ದಿಜಾಲ
ತೊಗರಿ ಖರೀದಿಗೆ ನೋಂದಣಿ ಮಾಡಿಸುವಂತೆ ಕಲಬುರ್ಗಿ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಮನವಿ
February 28, 2025
7:40 AM
by: ದ ರೂರಲ್ ಮಿರರ್.ಕಾಂ
ಕರಾವಳಿ ಜಿಲ್ಲೆಗಳಲ್ಲಿ ಮುಂದಿನ ಎರಡು ದಿನಗಳ ಕಾಲ ತಾಪಮಾನ ಏರಿಕೆ | ಹವಮಾನ ಇಲಾಖೆ ಮುನ್ಸೂಚನೆ
February 27, 2025
9:49 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 27-02-2025 | ಮಳೆಯ ಸಾಧ್ಯತೆ ಕ್ಷೀಣ | ಒಣ ಹವೆ ಮುಂದುವರಿಕೆ | ಕೆಲವು ಕಡೆ ತುಂತುರು ಮಳೆ ನಿರೀಕ್ಷೆ |
February 27, 2025
10:57 AM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror