ಊಟ ಮಾಡದೇ ಇದ್ದರೂ ಪರವಾಗಿಲ್ಲ. ಮೊಬೈಲ್ ಮಾತ್ರ ನೀಡಲೇ ಬೇಡಿ. ಆಶ್ಚರ್ಯ ಆಗಬಹುದು ನಿಮಗೆ. ಹೇಗೆ ಇದೆಲ್ಲಾ ಸಾಧ್ಯವಾ ಎಂದು. ಮೂರು ನಾಲ್ಕು ದಿನಗಳ ಕಾಲ ಮೊಬೈಲ್ ಹಾಳಾಗಿದೆ ಎಂಬ ಸುಳ್ಳಿನ ಪ್ರಾಮಾಣಿಕ ಪ್ರಯೋಗ ನಡೆಸಿ. ಏನಾಗುವುದು? ಊಟ ಮಾಡದೆ ಇರುವರೇ! ಮನಸ್ಸಿದ್ದರೆ ಮಾರ್ಗ.ಧೈರ್ಯ ಮಾಡಿರಿ. ನನ್ನ ಮಾರ್ಗದರ್ಶನದಲ್ಲಿ ಈ ಪ್ರಯೋಗವು ಅತ್ಯಂತ ಯಶಸ್ವಿಯಾಗಿದೆ. ಇದರೊಂದಿಗೆ ಇನ್ನಷ್ಟು ಮಾಹಿತಿ ಇದೆ ಕೇಳಿ.ಮೊಬೈಲ್ ಜೊತೆಗೆ ಊಟ ಮಾಡೋಹೊತ್ತಿಗೆ ಒಂದು ಗಂಟೆಯಂತೆ ದಿನಕ್ಕೆ ನಾಲ್ಕು ಬಾರಿ ಆಹಾರ ಸೇವನೆಗೆ ಎಷ್ಟು ಅವಧಿ ಬಳಕೆಯಾಯ್ತು ಒಂದು ಬಾರಿ ಲೆಕ್ಕಾಚಾರ ಮಾಡಿ.
ಹಾಗಿದ್ದಲ್ಲಿ ಮೊಬೈಲ್ ಮತ್ತು ತಂತ್ರಜ್ಞಾನ ಬಳಸಿಕೊಂಡೇ ದುಡಿಯುವ ಜನರಿಗೆ ಏನೆನ್ನುತ್ತೀರಿ ಎಂಬ ಪ್ರಶ್ನೆ ನಿಮ್ಮಲ್ಲಿರಬಹುದು? ನಾವೀಗ ಹೆಚ್ಚು ಗಮನ ಹರಿಸಬೇಕಿರುವುದು ದುಡಿಯುವ ಮನಸ್ಸುಗಳತ್ತ ಅಲ್ಲ. ಬದಲಾಗಿ ಎಳೆಯ ಕಂದಮ್ಮಗಳ ಹಾಗೂ ಹದಿಹರೆಯದ ವಯಸ್ಸಿನ, ಬೆಳೆಯುವ ಮನಸ್ಸುಗಳ ಕಡೆಗೆ.ಹೈಪರ್ ಆಕ್ಟಿವಿಟಿ, ಅಗ್ರೆಸ್ಸಿವ್ ಬಿಹೇವಿಯರ್, ತಕ್ಷಣದ ಆಕ್ರಮಣಕಾರಿ ವರ್ತನೆ, ಬೇಕೇ ಬೇಕು ಎನ್ನುವ ಛಲ, ಭಾವನಾ ಹೀನ ವ್ಯಕ್ತಿತ್ವ, ಜೀವನ ಮೌಲ್ಯಗಳ ಕೊರತೆ, ಸಂಬಂಧಗಳ ಕಡೆಗಣನೆ, ಜನರ ನಡುವಿನ ಅಂತರ ಹೆಚ್ಚಳ,ವಸ್ತುಗಳನ್ನು ಒಡೆದು ಹಾಳು ಮಾಡುವ, ದೊಡ್ಡ ಧ್ವನಿಯಲ್ಲಿ ಚೀರಾಡುವ ಗುಣ ಹೆಚ್ವಾಗುತ್ತಲೇ ಹೋಗುವುದು.ಕಾರ್ಟೂನ್ ಚಾನಲ್ ಗಳಲ್ಲಿ ಬರುವ ಕಥೆಗಳು ಮಕ್ಕಳಿಗೆ ಏತಕ್ಕಾಗಿ ಇಷ್ಟವಾಗುವುದು? ಪ್ರತಿ ಸೆಕೆಂಡ್ ಗಳಲ್ಲಿಯೂ ಚಿತ್ರಣ ಬದಲಾಗುತ್ತಿರುತ್ತದೆ. ಇದರಿಂದ ಮಗು ಕಣ್ಣು ಮಿಟುಕಿಸದೆಯೇ ಟಿವಿ ಹಾಗೂ ಮೊಬೈಲ್ ನೋಡುತ್ತಿರುವುದು. ಇದರಿಂದ ಮಗು ಹೊರ ಜಗತ್ತಿನಲ್ಲಿ ಬಹು ಬೇಗನೆ ನಿರಾಶೆಗೊಳ್ಳುವುದು.
ನಮ್ಮೆಲ್ಲರ ಹಣೆಯ ಮೇಲ್ಭಾಗದಲ್ಲಿರುವ ಮಿದುಳಿನ ಭಾಗವು ಅತ್ಯಂತ ಪ್ರಮುಖ ಕಾರ್ಯಗಳನ್ನು ಮಾಡುತ್ತವೆ. ಯೋಚನಾ ತರಂಗಗಳು, ನಿರ್ಧಾರ ತೆಗೆದುಕೊಳ್ಳುವ ಶಕ್ತಿ, ಊಹಿಸಿಕೊಳ್ಳುವ ಶಕ್ತಿ, ನೆನಪಿಟ್ಟುಕೊಳ್ಳುವ ಶಕ್ತಿ, ಹೊಸ ರೀತಿಯಲ್ಲಿ ಆಲೋಚಿಸುವ ಶಕ್ತಿ, ಸಾಮಾಜಿಕವಾಗಿ ಬೆರೆಯುವ ಶಕ್ತಿ ಹೀಗೆ ಅನೇಕ ಕಾರ್ಯಗಳಿಗೆ ಸಹಕರಿಸುತ್ತದೆ. ಬೆಳೆಯುವ ಹಂತದಲ್ಲಿ ಸ್ಕ್ರೀನ್ ಟೈಮ್ ಹೆಚ್ಚಾದಂತೆ ಮೆದುಳಿನ ಈ ಎಲ್ಲಾ ಕಾರ್ಯಗಳಲ್ಲಿ ಕೊರತೆ ಕಾಣಿಸಿಕೊಳ್ಳುವುದು.ಹಾಗಾಗಿ ಇಲ್ಲಿ ಮೊಬೈಲನ್ನು ಕಡೆಗಣಿಸುವುದರಿಂದ ಮಗುವಿನ ಮೆದುಳಿನ ಎಲ್ಲಾ ಸಾಮರ್ಥ್ಯಗಳು ವೃದ್ಧಿಸುತ್ತದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ
ಹಾಗಿದ್ದರೆ ಪಾಲಕರು ಏನು ಮಾಡಬಹುದು?ಇಲ್ಲಿ ಗಮನಾರ್ಹವಾದುದು ಏನೆಂದರೆ ಪ್ರತಿಯೊಬ್ಬ ಪಾಲಕನಿಗೂ ತನ್ನ ಮಗು ಖುಷಿಯಾಗಿರಬೇಕು ಎನ್ನುವುದು.ದೈಹಿಕವಾಗಿ ಮತ್ತು ಭಾವನಾತ್ಮವಾಗಿ ದೃಢವಾಗಿಸೋದೆ ಜಾಣತನ ಅಲ್ಲವೇ? ಮಕ್ಕಳ ಇಂದಿನ ಖುಷಿಗಾಗಿ ಅದರ ನಾಳೆಯ ಜೀವನವನ್ನು ಹಾಳುಮಾಡುವ ದುಸ್ಸಾಹಸವನ್ನು ಮಾಡದಿರಿ.ಮಗು ಏನೇ ಕೇಳಿದರೂ, ಎಲ್ಲಾ ಸಮಯದಲ್ಲೂ ‘ ಸರಿ, ಆಯ್ತು’ ಎನ್ನುವ ಉತ್ತರವನ್ನು ಕೊಡಬೇಡಿ. “ಆಗಲ್ಲ” ಎನ್ನುವ ಧೈರ್ಯವೂ ಬರಲಿ. ಮಗುವಿಗೆ ಹಠ ಮಾಡಿ ಕೇಳಿದಂತೆ ಎಲ್ಲವೂ ಸಿಗಲಾರದು ಎನ್ನುವ ಸ್ಥಿತಿ-ಗತಿಯ ಪರಿಚಯ ಮಾಡಿಕೊಡಿ.ಬದಲಾವಣೆ ಮಕ್ಕಳಿಂದ ಪ್ರಾರಂಭವಾಗುವುದು ಸಾಧ್ಯವೇ ಇಲ್ಲ. ಬದಲಾವಣೆ ಹೆತ್ತವರ ಮನಸ್ಸಿನಲ್ಲಿ ಆರಂಭವಾಗಿ ಕಾರ್ಯಗತವಾಗಬೇಕು. ಆಗ ಮಕ್ಕಳಲ್ಲಿಯೂ ಮಹತ್ತರವಾದ ಬದಲಾವಣೆ ಸಾಧ್ಯ.ಡೊಪೊಮಿನ್ (DOPAMINE ) ಕೆಮಿಕಲ್ ಯಾವುದೇ ವಸ್ತು, ವಿಷಯ, ಮೊಬೈಲ್, ವಾಹನಗಳು, ಮಾದಕ ವಸ್ತು, ಹೆಣ್ಣಿನ ಚಟ, ಅಶ್ಲೀಲ ದೃಶ್ಯಗಳತ್ತ ಮನಸ್ಸನ್ನು ಮತ್ತೆ ಮತ್ತೆ ಚಿಂತಿಸುವಂತೆ ಮಾಡುತ್ತದೆ.
ಮಕ್ಕಳು ಯಾವ ಗುಣವನ್ನು ಹೊಂದಬೇಕೆಂದು ಪಾಲಕರು ಆಸೆ ಪಟ್ಟಿರುತ್ತಾರೋ ಅದನ್ನೇ ಪಾಲಕರು ವ್ಯಕ್ತಪಡಿಸಬೇಕು. ಮತ್ತು ಅದರಂತೆಯೇ ನಡೆದುಕೊಳ್ಳತಕ್ಕದ್ದು.ಮಕ್ಕಳನ್ನು ಸಾಮಾಜಿಕವಾಗಿ ಬೆಳೆಸಬೇಕೆಂದರೆ ಹೆತ್ತವರು ಸಾಮಾಜಿಕವಾಗಿ ಹೆಚ್ಚು ಕಾರ್ಯೋನ್ಮುಖರಾಗಬೇಕು. ಹೀಗೆ ನಾನಾ ಕ್ಷೇತ್ರಗಳತ್ತ ನಾವು ಮುಖ ಮಾಡುತ್ತಲೇ ನಮ್ಮ ಮಕ್ಕಳನ್ನು ತೊಡಗಿಸಿಕೊಳ್ಳಬೇಕು.


